ಲಾಲಬಹಾದ್ದೂರ ಶಾಸ್ತ್ರಿ ಇವರ ಸರಳತನ

೨ ಅಕ್ಟೋಬರ ೨೦೨೫ ರಂದು ಲಾಲಬಹಾದ್ದೂರ ಶಾಸ್ತ್ರಿ ಇವರ ಜಯಂತಿ ಇದೆ. ಅದರ ನಿಮಿತ್ತ …

ಭಾರತದ ಎರಡನೆಯ ಪ್ರಧಾನಮಂತ್ರಿ ಲಾಲಬಹಾದ್ದೂರ ಶಾಸ್ತ್ರಿ ಎಂದರೆ ಸರಳತೆ ಮತ್ತು ಶ್ರೇಷ್ಠತೆಯ ಪ್ರತಿರೂಪವಾಗಿದ್ದರು. ಅವರ ಜೀವನದ ಅನೇಕ ಪ್ರಸಂಗಗಳು ಪ್ರೇರಣಾದಾಯಕವಾಗಿವೆ. ಅವರು ದೇಶದ ಪ್ರಧಾನಿಯಾಗಿರುವ ಸಮಯದ ಒಂದು ಘಟನೆಯಾಗಿದೆ. ಒಂದು ದಿನ ಅವರು ಬಟ್ಟೆಯ ಗಿರಣಿಯನ್ನು ನೋಡಲು ಹೋದರು. ಅವರ ಜೊತೆಗೆ ಗಿರಣಿಯ ಮಾಲೀಕರು, ಮೇಲಧಿಕಾರಿಗಳು ಮತ್ತು ಇತರ ಮಹತ್ವದ ಜನರಿದ್ದರು. ಗಿರಣಿಯನ್ನು ನೋಡಿದ ನಂತರ ಶಾಸ್ತ್ರಿಯವರು ಗಿರಣಿಯ ಗೋದಾಮಿಗೆ ಹೋದಾಗ ಅವರು ಸೀರೆಗಳನ್ನು ತೋರಿಸಲು ಹೇಳಿದರು. ಗಿರಣಿಯ ಮಾಲೀಕರು ಮತ್ತು ಅಧಿಕಾರಿಗಳು ಒಂದಕ್ಕಿಂತ ಒಂದು ಸುಂದರವಾದ ಸೀರೆಗಳನ್ನು ಅವರಿಗೆ ತೋರಿಸಿದರು. ಶಾಸ್ತ್ರಿಯವರು ಸೀರೆಗಳನ್ನು ನೋಡಿ ಹೇಳಿದರು, ‘ಸೀರೆಗಳು ತುಂಬಾ ಸುಂದರವಾಗಿವೆ, ಇವುಗಳ ಬೆಲೆ ಎಷ್ಟು ?’ ಗಿರಣಿಯ ಮಾಲೀಕರು ಹೇಳಿದರು, ‘ಈ ಸೀರೆಗೆ ೮೦೦ ರೂಪಾಯಿ ಇದೆ ಹಾಗೂ ಇನ್ನೊಂದರ ಬೆಲೆ ೧ ಸಾವಿರ ರೂಪಾಯಿಗಳು.’ ಆಗ ಶಾಸ್ತ್ರಿಯವರು ಹೇಳಿದರು, ಇವು ತುಂಬಾ ದುಬಾರಿಯಾಗಿವೆ. ನನಗೆ ಕಡಿಮೆ ಬೆಲೆಯ ಕಡಿಮೆ ಬೆಲೆಯ ಸೀರೆಗಳನ್ನು ತೋರಿಸಿ,’ ಇಲ್ಲಿ ಈ ವಿಷಯವನ್ನು ಗಮನಿಸುವ ಹಾಗಿದೆ, ಅಂದರೆ ಈ ಘಟನೆಯು ೧೯೬೫ ರದ್ದಾಗಿತ್ತು, ಆಗ ೧ ಸಾವಿರ ರೂಪಾಯಿಗಳೆಂದರೆ ದೊಡ್ಡ ಮೊತ್ತವಾಗಿತ್ತು. ಗಿರಣಿಯ ಮಾಲೀಕರು ಬೇರೆ ಸೀರೆಗಳನ್ನು ತೋರಿಸುತ್ತಾ ಹೇಳಿದರು, ಇದನ್ನು ನೋಡಿ. ಈ ಸೀರೆಗೆ ೫೦೦ ರೂಪಾಯಿ ಬೆಲೆಯಿದೆ ಹಾಗೂ ಇದಕ್ಕೆ ೪೦೦ ರೂಪಾಯಿ ಇದೆ.’ ‘ಅರೆ ಬಾಬಾ, ಇವು ಕೂಡ ತುಂಬಾ ದುಬಾರಿಯಾಗಿವೆ. ನನ್ನಂತಹ ಬಡವನು ಖರೀದಿಸುವಂತಹ ಕಡಿಮೆ ಬೆಲೆಯ ಸೀರೆಗಳನ್ನು ತೋರಿಸಿರಿ, ಎಂದು ಶಾಸ್ತ್ರಿಯವರು ಹೇಳಿದರು. ‘ವಾ ಸರಕಾರ್, ತಾವು ನಮ್ಮ ಪ್ರಧಾನಮಂತ್ರಿ ಆಗಿದ್ದೀರಿ. ನಿಮ್ಮನ್ನು ಬಡವರೆಂದು ಹೇಗೆ ಹೇಳಬಹುದು ? ನಾವಂತೂ ಈ ಸೀರೆಗಳನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತಿದ್ದೇವೆ’, ಎಂದು ಗಿರಣಿಯ ಮಾಲೀಕರು ಹೇಳಿದರು. ಆಗ ಶಾಸ್ತ್ರಿಯವರು ಹೇಳಿದರು, ‘ಇಲ್ಲ, ನಾನು ಉಡುಗೊರೆಯನ್ನು ತೆಗೆದುಕೊಳ್ಳುವ ಹಾಗಿಲ್ಲ.’ ಅದಕ್ಕೆ ಆ ಗಿರಣಿಯ ಮಾಲೀಕರು ಹೇಳಿದರು, ನಾವು ನಮ್ಮ ಪ್ರಧಾನಮಂತ್ರಿಗಳಿಗೆ ಉಡುಗೊರೆ ಕೊಡುವುದು ನಮ್ಮ ಅಧಿಕಾರವಾಗಿದೆ. ನಾನು ಪ್ರಧಾನಮಂತ್ರಿಯಾಗಿದ್ದರೂ, ನನ್ನ ವಿಚಾರ ಹೇಗಿದೆಯೆಂದರೆ, ಯಾವ ವಸ್ತುವನ್ನು ನಾನು ಖರೀದಿ ಮಾಡಲು ಸಾಧ್ಯವಿಲ್ಲವೊ, ಆ ವಸ್ತುವನ್ನು ಉಡುಗೊರೆಯಾಗಿ ಸ್ವೀಕರಿಸಿ ಅದನ್ನು ನನ್ನ ಪತ್ನಿಗೆ ಹೇಗೆ ಕೊಡಲಿ. ನಾನು ಪ್ರಧಾನಮಂತ್ರಿ ಆಗಿದ್ದರೂ ಸಿರಿವಂತನಲ್ಲ ! ನೀವು ನನಗೆ ಅಗ್ಗದ ಸೀರೆಗಳನ್ನು ತೋರಿಸಿ. ನಾನು ನನ್ನ ಕ್ಷಮತೆಗನುಸಾರ ಸೀರೆಯನ್ನು ಖರೀದಿಸುವೆನು’, ಎಂದು ಶಾಸ್ತ್ರಿಯವರು ಶಾಂತವಾಗಿ ಹೇಳಿದರು. ಗಿರಣಿ ಮಾಲೀಕರ ಎಲ್ಲ ವಿನಂತಿಗಳು ವ್ಯರ್ಥವಾದವು. ದೇಶದ ಪ್ರಧಾನಮಂತ್ರಿಯವರು ಅಗ್ಗದ ಸೀರೆಗಳನ್ನು ಖರೀದಿಸಿದರು. ಶಾಸ್ತ್ರಿಯವರು ಎಷ್ಟು ಶ್ರೇಷ್ಠರಾಗಿದ್ದರೆಂದರೆ, ಮೋಹ ಅವರನ್ನು ಸ್ಪರ್ಶ ಮಾಡಲು ಸಾಧ್ಯವಿರಲಿಲ್ಲ. (ಇಂದು ಇಂತಹ ಎಷ್ಟು ಜನಪ್ರತಿನಿಧಿಗಳು ಕಾಣಲು ಸಿಗುವರು ? – ಸಂಪಾದಕರು)
(ಆಧಾರ : ಜಾಲತಾಣ)