ಸಪ್ತರ್ಷಿಗಳ ಆಜ್ಞೆಯಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬ್ರಿಟನ್‌ ಪ್ರವಾಸದ ಸಂಕ್ಷಿಪ್ತ ವಾರ್ತೆ !

‘ಸಪ್ತರ್ಷಿಗಳು, ‘೧೧.೫.೨೦೨೩ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ೮೧ ನೇ ಜನ್ಮೋತ್ಸವವನ್ನು ಆಚರಿಸಬೇಕಿದೆ. ಅದಕ್ಕೂ ಮೊದಲು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಗುರುದೇವರು ಹಿಂದೆ ಬ್ರಿಟನ್‌ನಲ್ಲಿ ಎಲ್ಲಿ ನೌಕರಿ ಮಾಡುತ್ತಿದ್ದರೋ ಮತ್ತು ಯಾವ ಸ್ಥಳದಲ್ಲಿ ವಾಸ್ತವ್ಯಕ್ಕಿದ್ದರೋ, ಅಲ್ಲಿಗೆ ಹೋಗಿ ಬರಬೇಕು’, ಎಂದು ಹೇಳಿದ್ದರು. ಅದರಂತೆ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಬ್ರಿಟನ್‌ ಪ್ರವಾಸದ ಬಗ್ಗೆ ಸ್ವಲ್ಪದರಲ್ಲಿ ಮುಂದೆ ವಿವರಿಸಲಾಗಿದೆ. ಈ ಪ್ರವಾಸದಲ್ಲಿ ಅವರ ಜೊತೆಗೆ ಶ್ರೀ. ವಿನಾಯಕ ಶಾನಭಾಗ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೮), ಶ್ರೀ ಸ್ನೇಹಲ ರಾವುತ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೪) ಮತ್ತು ಬ್ರಿಟನ್‌ನ ಸಾಧಕ ಡಾ. ಮಿಲಿಂದ್‌ ಖರೆ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೫) ಇವರು ಸಹ ಇದ್ದರು. ಈ ಪ್ರವಾಸದ ಕೆಲವು ವೈಶಿಷ್ಟ್ಯಪೂರ್ಣ ಅಂಶಗಳನ್ನು ಈ ‘ಸನಾತನ ಪ್ರಭಾತ’ದ ವಿಶೇಷಾಂಕದಲ್ಲಿ ನೀಡುತ್ತಿದ್ದೇವೆ.

೪.೭.೧೯೭೧ ರಿಂದ ೧೧.೬.೧೯೭೮ ಈ ಕಾಲಾವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಬ್ರಿಟನ್‌ನಲ್ಲಿ ವಾಸಿಸುತ್ತಿದ್ದರು. ಸಾಮಾನ್ಯವಾಗಿ ಆಸ್ಪತ್ರೆಯ ಸಂಕೀರ್ಣದಲ್ಲಿ ವಾಸ ಮಾಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೯೭೪ ರಲ್ಲಿ ಶನಿವಾರ-ರವಿವಾರ ಈ ರಜೆಗಳ ದಿನಗಳಂದು ಇರಲು ಬಂಗಲೆಯನ್ನು ಖರೀದಿಸಿದ್ದರು. ಕೆಳಗಿರುವ ಛಾಯಾಚಿತ್ರ ಕ್ರಮಾಂಕ ೧ ರಲ್ಲಿನ ಫಿಯಟ್‌ ಕಾರು ಪ.ಪೂ. ಡಾ. ಆಠವಲೆಯವರದ್ದಾಗಿತ್ತು. ಕೆಳಗೆ ತೋರಿಸಿದ ಛಾಯಾಚಿತ್ರಗಳಲ್ಲಿ ಈ ಬಂಗಲೆಯ ‘ಅ’ ಭಾಗದ ಕೋಣೆಯಲ್ಲಿ ಅವರು ಸ್ವತಃ ವಾಸಿಸುತ್ತಿದ್ದರು ಮತ್ತು ಉಳಿದ ‘ಆ’, ‘ಇ’ ಮುಂತಾದ ೭ ಕೋಣೆಗಳನ್ನು ಅವರು ‘ಬೆಡ್‌ ಯಾಂಡ್‌ ಬ್ರೆಕ್‌ಫಾಸ್ಟ್‌’ (ಮಂಚವಿರುವ ಕೋಣೆಯನ್ನು ಬಾಡಿಗೆಗೆ ಕೊಡುವಾಗ ಬಾಡಿಗೆದಾರರಿಗೆ ಉಚಿತ ಬೆಳಗಿನ ತಿಂಡಿಯನ್ನೂ ನೀಡುವುದು) ಇವುಗಳನ್ನು ತಮ್ಮ ಸ್ವಂತ ವ್ಯವಹಾರದ ಅಂತರ್ಗತ ಬಾಡಿಗೆಗೆ ನೀಡಿದ್ದರು. ಬಾಡಿಗೆದಾರರಿಗೆ ತಿಂಡಿಯನ್ನು ಬೆಳಗ್ಗೆ ೭ ರಿಂದ ೯ ಈ ಸಮಯದಲ್ಲಿ ಕೊಡುತ್ತಿದ್ದರು.

‘ಹೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ, ಯಾವಾಗ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಬ್ರಿಟನ್‌ನಲ್ಲಿ ನೀವು ವಾಸಿಸುತ್ತಿದ್ದ ಸ್ಥಳಕ್ಕೆ ಹೋದರೋ, ಆಗ ‘ಧರ್ಮ ಸಂಸ್ಥಾಪನೆಗೆ ಆವಶ್ಯಕವಾಗಿರುವ ನಾರಾಯಣಿಶಕ್ತಿಯನ್ನು ಭಗವಂತನು ಯಾವ ಸ್ಥಳದಲ್ಲಿ ಇಟ್ಟಿದ್ದನೋ, ಆ ಶಕ್ತಿಯನ್ನು ನೀವು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಒಟ್ಟಿಗೆ ನೀಡಿದಿರಿ ಎಂದು ಅನಿಸಿತು. ಸಪ್ತರ್ಷಿಗಳ ಮಾಧ್ಯಮದಿಂದ ಘಟಿಸಿದ ಈ ವಿಷ್ಣುಲೀಲೆಯು ನಮ್ಮೆಲ್ಲ ಸಾಧಕರಿಗೆ ಅವಿಸ್ಮರಣೀಯವಾಗಿವೆ.

ಶ್ರೀ. ವಿನಾಯಕ ಶಾನಭಾಗ

೧. ಸಪ್ತರ್ಷಿಗಳು ಬ್ರಿಟನ್‌ ಪ್ರವಾಸ ಮಾಡಲು ಹೇಳುವುದು

ಸಪ್ತರ್ಷಿಗಳು ಆಗಸ್ಟ್ ೨೦೨೨ ರಲ್ಲಿ ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ, ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಎಪ್ರಿಲ್‌ ೨೦೨೩ ರಲ್ಲಿನ ಕೊನೆಯ ವಾರದಲ್ಲಿ ಬ್ರಿಟನ್‌ಗೆ ಹೋಗಬೇಕು ಮತ್ತು ಅಲ್ಲಿ ಗುರುದೇವರು ಹಿಂದೆ ವಾಸಿಸುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಬೇಕು. ಗುರುದೇವರು ಸಾಕ್ಷಾತ್‌ ಶ್ರೀವಿಷ್ಣುವಿನ ಅಂಶಾವತಾರ ಆಗಿರುವುದರಿಂದ ಮುಂದಿನ ಕಾರ್ಯಕ್ಕೆ ಆವಶ್ಯಕವಾಗಿರುವ ಶಕ್ತಿಯನ್ನು ಗುರುದೇವರು ಆ ಸ್ಥಳದಲ್ಲಿ ಇಟ್ಟಿರುವುದರಿಂದ ಈಗ ಆ ಶಕ್ತಿಯನ್ನು ಪಡೆಯುವ ಸಮಯ ಬಂದಿದೆ. ಇದಕ್ಕಾಗಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಬ್ರಿಟನ್‌ಗೆ ಹೋಗಿ ಪ್ರಾರ್ಥನೆ ಮಾಡುವುದು ಆವಶ್ಯಕವಾಗಿದೆ’, ಎಂದು ಹೇಳಿದ್ದರು. ಸಪ್ತರ್ಷಿಗಳು ಹೇಳಿದಂತೆ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ೨೬ ರಿಂದ ೩೦.೪.೨೦೨೩, ಹೀಗೆ ೫ ದಿನಗಳ ಬ್ರಿಟನ್‌ ಪ್ರವಾಸ ಮಾಡಿದರು ಮತ್ತು ೧.೫.೨೦೨೩ ರಂದು ಅವರು ಭಾರತಕ್ಕೆ ಹಿಂದಿರುಗಿದರು.

ಲ್ಯಾನಫ್ರೆಚ್ಪಾ ಗ್ರೆಂಜ್‌ ಹಾಸ್ಪಿಟಲ್‌ ಕಟ್ಟಡದೆದುರು ಎಡಬದಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೨. ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹಿಂದೆ ಬ್ರಿಟನ್‌ನಲ್ಲಿರುವಾಗ ‘ಸಮ್ಮೋಹನ ಚಿಕಿತ್ಸೆ’ ಈ ವಿಷಯದಲ್ಲಿ ಸಂಶೋಧನೆ ಮಾಡುವುದು

ಪೃಥ್ವಿಯ ಯಾವ್ಯಾವ ಸ್ಥಳಗಳಲ್ಲಿ ಭಗವಾನ ಶ್ರೀರಾಮ, ಶ್ರೀಕೃಷ್ಣ ಮುಂತಾದ ಅವತಾರಗಳ ಆಗಮನವಾಯಿತೋ, ಆಯಾ ಸ್ಥಳಗಳು ಮುಂದೆ ಭಕ್ತರಿಗಾಗಿ ಪವಿತ್ರ ಸ್ಥಾನಗಳಾದವು. ಭಗವಂತನ ಸ್ಮರಣೆ ಯನ್ನು ಮಾಡಿಕೊಡುವ ಈ ಸ್ಥಳಗಳು ಇಂದು ಭಾರತಭೂಮಿಯ ವೈಶಿಷ್ಟ್ಯವಾಗಿವೆ. ಸದ್ಯದ ಕಲಿಯುಗ ದಲ್ಲಿ ಮಾತ್ರ ಶ್ರೀವಿಷ್ಣು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ರೂಪದಲ್ಲಿ ಭಾರತದಲ್ಲಿ ಜನಿಸಿದ್ದಾನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭಾರತದ ಹೊರಗೆ ಸಾವಿರಾರು ಕಿ.ಮೀ. ದೂರ ಹೋಗಿ ಒಂದು ವಿಶಿಷ್ಟ ವಿಷಯದಲ್ಲಿ ಸಂಶೋಧನೆ ಮಾಡಲು ನಿರ್ಧರಿಸಿದರು. ಗುರುದೇವರ ‘ಸಮ್ಮೋಹನ ಚಿಕಿತ್ಸೆ’ ಈ ಕುರಿತಾದ ಸಂಶೋಧನೆಯಿಂದಾಗಿಯೇ ಇಂದು ಮನುಕುಲದ ಶೀಘ್ರ ಆಧ್ಯಾತ್ಮಿಕ ಪ್ರಗತಿ ಮಾಡಿಕೊಡುವ ‘ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯ ಪ್ರಕ್ರಿಯೆ’ ಲಭಿಸಿದೆ.ಗುರುದೇವರು ಆಯ್ದುಕೊಂಡ ಸ್ಥಾನವೆಂದರೆ, ಯಾವ ಭೂಮಿಯು ಅವತಾರಭೂಮಿಯಾಗಿರುವ ಭಾರತವನ್ನು ಗುಲಾಮರನ್ನಾಗಿಸಿ ಅದನ್ನು ಆಳಿತೋ, ಆ ಬ್ರಿಟನ್‌ ದೇಶ !

‘ಭಗವಂತನ ಸುಪ್ತ ನಾರಾಯಣಿಶಕ್ತಿಯು ಅವನ ಇಚ್ಛೆಯಂತೆ ಅವನ ಸಗುಣ ರೂಪದಲ್ಲಿ ಕಾರ್ಯನಿರತವಾಗಿರುತ್ತದೆ’, ಇದು ಎಷ್ಟು ಸತ್ಯವಾಗಿದೆಯೋ, ಅದೇ ರೀತಿ ಭಗವಂತನ ಸಗುಣ ಉಪಸ್ಥಿತಿಯಿಂದ ಭರಿತಗೊಂಡ ವಸ್ತು ಮತ್ತು ವಾಸ್ತುವಿನಲ್ಲಿಯೂ ಆ ನಾರಾಯಣಿಶಕ್ತಿ ಇರುತ್ತದೆ’, ಎಂಬುದು ಅಷ್ಟೇ ಸತ್ಯವಾಗಿದೆ. ‘ಬ್ರಿಟನ್‌ ಒಂದು ಕಾಲದಲ್ಲಿ ಶ್ರೀವಿಷ್ಣುಸ್ವರೂಪ ಗುರುದೇವರ ಕರ್ಮಭೂಮಿಯೇ ಆಗಿತ್ತು’, ಎಂದೇ ಹೇಳಬಹುದು.

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಸಂಬಂಧಿಸಿದ ಎಲ್ಲ ವಾಸ್ತುಗಳ ದರ್ಶನವಾದುದರಿಂದ ಕೃತಜ್ಞತೆ ವ್ಯಕ್ತಪಡಿಸುವುದು

೨೬.೪.೨೦೨೩ ಈ ದಿನ ಲಂಡನ್‌ ವಿಮಾನನಿಲ್ದಾಣದಲ್ಲಿ ಇಳಿದು ಲಂಡನ್‌ ನಗರದ ಕಡೆಗೆ ಹೋಗುತ್ತಿರುವಾಗ, ಅಲ್ಲಿನ ಹೆಚ್ಚಿನ ವಾಸ್ತುಗಳು ಒಂದೇ ರೀತಿ ಇವೆ, ಎಂಬುದು ಗಮನಕ್ಕೆ ಬಂದಿತು. ‘ಗುರುದೇವರು ಸಂಶೋಧನೆಗಾಗಿ ಬ್ರಿಟನ್‌ ದೇಶವನ್ನು ಆಯ್ದು ಕೊಂಡಿದ್ದರಿಂದ ಪೂರ್ಣ ೫೦ ವರ್ಷಗಳ ನಂತರವೂ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಆಯಾ ವಾಸ್ತುಗಳ ದರ್ಶನವಾಯಿತು’, ಇದಕ್ಕಾಗಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಪ್ರವಾಸದಲ್ಲಿ ಗುರುದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದರು.

೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹಿಂದೆ ವಾಸಿಸುತ್ತಿದ್ದ ಮನೆಯ ದರ್ಶನವನ್ನು ಪಡೆದ ನಂತರ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಭಾವಜಾಗೃತಿಯಾಗುವುದು

ಸಾಮಾನ್ಯವಾಗಿ ಆಸ್ಪತ್ರೆಯ ಸಂಕೀರ್ಣದಲ್ಲಿಯೇ ವಾಸಿಸುತ್ತಿದ್ದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವರ್ಷ ೧೯೭೪ ರಲ್ಲಿ ಶನಿವಾರ-ರವಿವಾರ ಈ ರಜೆಗಳ ದಿನಗಳಂದು ಇರಲು ಮನೆಯನ್ನು ಖರೀದಿಸಿದ್ದರು. ಮುಂದೆ ಅವರು ಆ ಮನೆಯನ್ನು ಮಾರಿದರು. ೨೭.೪.೨೦೨೩ ರಂದು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಈ ಸ್ಥಳಕ್ಕೆ ಹೋದಾಗ ಅವರ ಭಾವಜಾಗೃತಿಯಾಯಿತು ಮತ್ತು ಅವರ ಶರೀರ ರೋಮಾಂಚವಾಯಿತು. ‘ಒಂದು ವಿಶೇಷ ದೈವೀ ಶಕ್ತಿ ಅವರ ಶರೀರದಲ್ಲಿ ಪ್ರವೇಶಿಸುತ್ತಿದೆ’, ಎಂದು ಅವರಿಗೆ ಅನಿಸಿತು.

೫. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೊದಲು ಆರಂಭಿಸಿದ ಅಂಗಡಿಯ ದರ್ಶನ ಪಡೆಯುವುದು ಮತ್ತು ಆ ಸ್ಥಳದಲ್ಲಿ ಪ್ರಾರ್ಥನೆ ಮಾಡುವುದು

೧೯೭೬ ರಿಂದ ೧೯೭೮ ಈ ಕಾಲಾವಧಿಯಲ್ಲಿ ಆಸ್ಪತ್ರೆಯ ನೌಕರಿಯ ಹೆಚ್ಚುವರಿ ಸಮಯದ ಸದುಪಯೋಗವಾಗಲು ಗುರುದೇವರು ‘ಫೈಬರ್‌ ಗ್ಲಾಸ್, ಫರ್ನಿಚರ್‌ (ಪೀಠೋಪಕರಣ ಗಳು)ನ ಅಂಗಡಿಯನ್ನು ಆರಂಭಿಸಿದ್ದರು. ಆ ಅಂಗಡಿಯ ಹೆಸರು, ‘ಗ್ವೆಂಟ್‌ ಫೈಬರ್‌ ಗ್ಲಾಸ್‌ ಸಪ್ಲೈಸ್‌ ಯಾಂಡ್‌ ಫರ್ನಿಚರ್‌’, ಎಂದಾಗಿತ್ತು. ಭಾರತಕ್ಕೆ ಹಿಂದಿರುಗುವ ಮೊದಲು ಅವರು ಅದನ್ನು ಮುಚ್ಚಿದರು. ಆ ಅಂಗಡಿ ಗುರುದೇವರ ಸಂಕೀರ್ಣದಿಂದ ೨ ಕಿ.ಮೀ. ಅಂತರದಲ್ಲಿದೆ. ಅಲ್ಲಿಗೆ ಹೋದಾಗ, ‘ಪ್ರಸ್ತುತ ಹಿಂದೆ ಯಾರ ಅಂಗಡಿಗಳಿದ್ದವೋ, ಅವು ಮುಚ್ಚಲ್ಪಟ್ಟಿವೆ ಎಂದು ಗಮನಕ್ಕೆ ಬಂದಿತು. ಮುಚ್ಚಲ್ಪಟ್ಟ ಅಂಗಡಿಯ ಶಟರ್‌ ಎದುರು ನಿಂತು ಪ್ರಾರ್ಥನೆ ಸಲ್ಲಿಸಿ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಗುರುದೇವರು ನೌಕರಿ ಮಾಡಿದ ಆಸ್ಪತ್ರೆಯ ಭೇಟಿ ಮಾಡಿದರು.

– ಶ್ರೀ. ವಿನಾಯಕ ದಯಾನಂದ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭), ಚೆನ್ನೈ, ತಮಿಳನಾಡು. (೧೭.೫.೨೦೨೩)