ಸಂಪತ್ಕಾಲದಿಂದ ಯುದ್ಧಕಾಲದೆಡೆಗೆ ಸೀಮೋಲ್ಲಂಘನೆ ಮಾಡಿ !

ವಿಜಯದಶಮಿಯ ನಿಮಿತ್ತ ಸಂದೇಶ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ವಿಜಯದಶಮಿಯು ಸೀಮೋಲ್ಲಂಘನೆ ಮಾಡುವ ದಿನವಾಗಿದೆ. ‘ಆಪರೇಷನ್‌ ಸಿಂಧೂರ’ವು ಶತ್ರುವಿನ ಗಡಿಗಳನ್ನು ಸೀಮೋಲ್ಲಂಘನೆ ಮಾಡಿ ‘ಶತ್ರುರಾಷ್ಟ್ರವನ್ನು ಗೆಲ್ಲಲು ಭಾರತೀಯ ಸೇನೆಯು ಸಮರ್ಥ ವಾಗಿದೆ’ ಎಂದು ಸಾಬೀತುಪಡಿಸಿದೆ. ‘ಆಪರೇಷನ್‌ಸಿಂಧೂರ’ದ ಸಮಯದಲ್ಲಿ ಸತತ ೫-೬ ದಿನಗಳ ಕಾಲ ಅನುಭವಿಸಿದ ಯುದ್ಧದ ಪರಿಸ್ಥಿತಿಯನ್ನು ಭಾರತವು ಮುಂಬರುವ ಕೆಲವುವರ್ಷಗಳ ಕಾಲ ನಿರಂತರವಾಗಿ ಅನುಭವಿಸಬೇಕಾಗಬಹುದು. ಇಡೀ ವಿಶ್ವದಲ್ಲಿ ಸದ್ಯ ಯುದ್ಧಜನ್ಯ ಪರಿಸ್ಥಿತಿ ಇದೆ. ಮೂರನೇ ಮಹಾಯುದ್ಧವು ಯಾವುದೇ ಸಮಯದಲ್ಲಿ ಆರಂಭವಾಗಬಹುದು. ಅಮೇರಿಕದ ಸುಂಕ ಸಮರದಿಂದ ಭವಿಷ್ಯದ ಯುದ್ಧದ ಪರಿಸ್ಥಿತಿಯಲ್ಲಿ ಆರ್ಥಿಕ ದಾಳಿಗಳು ನಡೆಯುವಂತಹ ಪರಿಸ್ಥಿತಿಯಿದೆ.ಶಾಂತಿಯ ಸಮಯದಲ್ಲಿ ಜನಸಾಮಾನ್ಯರಿಗೆ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳ ಬಿಸಿ ತಗಲುವ ಪ್ರಮಾಣ ಅತ್ಯಲ್ಪವಿರುತ್ತದೆ.ಆದರೆ, ಮುಂಬರುವ ಯುದ್ಧದ ಸಮಯದಲ್ಲಿ ಮಾತ್ರನಾಗರಿಕರಿಗೆ ಜೀವಹಾನಿ, ಗಾಯಗಳು, ಅಂಗವೈಕಲ್ಯ, ಭಾವನಾತ್ಮಕ ಆಘಾತ (ಉದಾಹರಣೆಗೆ, ಒತ್ತಡ, ಖಿನ್ನತೆ ಇತ್ಯಾದಿ), ಸ್ಥಳಾಂತರ, ನಿರುದ್ಯೋಗ ಮುಂತಾದ ಸಂಕಷ್ಟಗಳನ್ನು ನೇರವಾಗಿ ಎದುರಿಸಬೇಕಾಗುತ್ತದೆ. ಯುದ್ಧದ ಸಮಯದಲ್ಲಿ, ವಿಘಟನಾಕಾರಿ ಮತ್ತು ‘ಅರ್ಬನ್‌ ನಕ್ಸಲ್’ ಶಕ್ತಿಗಳು ದೇಶದೊಳಗೆ ಆಂತರಿಕ ಕಲಹ, ಗೊಂದಲ ಮತ್ತು ವದಂತಿಗಳನ್ನು ಸೃಷ್ಟಿಸಿ ಗಲಭೆಯಂತಹ ಅಂತರ್ಯುದ್ಧವನ್ನು ಉಂಟುಮಾಡಬಹುದು. ವಿಜಯದಶಮಿಯಂದು ಸೀಮೋಲ್ಲಂಘದ ಸಂಪ್ರದಾಯವಿದೆ. ಈ ಬಾರಿಯ ವಿಜಯದಶಮಿಯು ಒಂದು ಸಂಕ್ರಮಣಕಾಲದ್ದಾಗಿದೆ. ಭಾರತವು ಸಂಪತ್ಕಾಲದಿಂದ ಯುದ್ಧಕಾಲದೆಡೆಗೆ ಸಾಗುತ್ತಿದೆ. ಆದ್ದರಿಂದ,  ಯುದ್ಧಕಾಲದೆಡೆಗೆ ಸಾಗಲು ಶಾರೀರಿಕ ಮತ್ತು ಮಾನಸಿಕ ಸೀಮೋಲ್ಲಂಘನೆ ಮಾಡಿರಿ. ಸಂಕ್ಷಿಪ್ತವಾಗಿ, ‘ಶಾಂತಿಯ ಸಮಯದಲ್ಲಿ ಬೆವರು ಸುರಿಸಿದರೆ, ಯುದ್ಧದ ಸಮಯದಲ್ಲಿ ರಕ್ತಪಾತವಾಗುವುದಿಲ್ಲ’ ಎಂಬ ನಿಯಮವನ್ನು ಗಮನದಲ್ಲಿಟ್ಟುಕೊಂಡು, ಕಾಲದ ಸೀಮೋಲ್ಲಂಘನೆ ಮಾಡುವಾಗ ಅದನ್ನು ಎದುರಿಸಲು ಶಾರೀರಿಕ ಮತ್ತು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳಿರಿ. – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ