ನವರಾತ್ರೋತ್ಸವ ! ಆದಿಶಕ್ತಿಯನ್ನು ಆರಾಧಿಸುವ ಈ ೯ ದಿನಗಳು ಹಿಂದೂಗಳಿಗೆ ಧಾರ್ಮಿಕ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುತ್ತವೆ. ಧಾರ್ಮಿಕ ಕಾರಣದಿಂದ ಉತ್ಸಾಹದ ವಾತಾವರಣದಲ್ಲಿ ಯಾವ ರೀತಿ ಧಾರ್ಮಿಕತೆಯ ಪ್ರಸಾರವಾಗುತ್ತದೆಯೋ, ಅದೇ ರೀತಿ ಅಧರ್ಮಿ ಪ್ರವೃತ್ತಿಯವರಿಗೆ ಒಂದು ಅವಕಾಶ ಸಿಗುತ್ತದೆ. ಇದೇ ಸಮಯದಲ್ಲಿ ಅಲ್ಲಲ್ಲಿ ಗರಬಾಗಳನ್ನು ಆಯೋಜಿಸಲಾಗುತ್ತದೆ; ಆದರೆ ಇತ್ತೀಚಿನ ದಿನಗಳಲ್ಲಿ ಗರಬಾ ಅಥವಾ ದಾಂಡಿಯಾ ಕೇವಲ ಒಂದು ಧಾರ್ಮಿಕ ಆಚರಣೆಯಾಗಿ ಉಳಿದಿಲ್ಲ, ಬದಲಾಗಿ ವಿವಿಧ ಘಟನೆಗಳಿಂದಾಗಿ ಇದರ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಿದೆ. ನವರಾತ್ರಿಯ ಕಾಲದಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ತಿಳಿದುಕೊಂಡು ಅವುಗಳನ್ನು ತಡೆಯಲು ಪ್ರಯತ್ನಿಸುವುದು ಕೂಡಾ ಆದಿಶಕ್ತಿಯ ಆರಾಧನೆಯೇ ಆಗಿದೆ.

೧. ಚಲನಚಿತ್ರದ ಹಾಡುಗಳಿಗೆ ನೃತ್ಯ ಮಾಡುವುದೆಂದರೆ ಗರಬಾ ಅಲ್ಲ !
ಇತ್ತೀಚೆಗೆ ನವರಾತ್ರೋತ್ಸವ ಮಂಡಳಿಗಳಿಂದ ಅನೇಕ ಸ್ಥಳಗಳಲ್ಲಿ ಯಾವುದೇ ಆಚರಣೆಗಳಿಲ್ಲದಿದ್ದರೂ, ಗರಬಾ ಮತ್ತು ದಾಂಡಿಯಾಗಳನ್ನು ಆಯೋಜಿಸ ಲಾಗುತ್ತದೆ. ಗರಬಾ ಒಂದು ‘ಇವೆಂಟ್’ (ಕಾರ್ಯಕ್ರಮ) ಆಗಿ ಮಾರ್ಪಟ್ಟಿದ್ದು, ಅದಕ್ಕೆ ೫೦೦ ರೂಪಾಯಿಗಳಿಂದ ಸಾವಿರಾರು ರೂಪಾಯಿಗಳ ವರೆಗಿನ ಟಿಕೆಟ್‌ಗಳನ್ನು ಆಯೋಜಿಸಲಾಗುತ್ತದೆ. ಯುವಕ-ಯುವತಿಯರು ತುಂಡು ಬಟ್ಟೆಗಳನ್ನು ಧರಿಸಿ, ಪರಸ್ಪರ ಸ್ಪರ್ಧಿಸುತ್ತಾ ಮತ್ತು ಮೋಜು ಮಾಡುತ್ತಾ ಚಲನಚಿತ್ರಗಳ ಹಾಡುಗಳಿಗನುಸಾರ ಗರಬಾ ಆಡುತ್ತಾರೆ, ಅದರಲ್ಲಿ ದೇವಿಯ ಬಗ್ಗೆ ಭಾವಭಕ್ತಿ ಇರುವುದಿಲ್ಲ. ಕೆಲವು ಸ್ಥಳಗಳಲ್ಲಿ ಚಲನಚಿತ್ರ ನಟ-ನಟಿಯರು ಗರಬಾದಲ್ಲಿ ಭಾಗವಹಿಸುತ್ತಾರೆ. ಆಗ ಕೇವಲ ಅವರನ್ನು ನೋಡಲು ಜನ ಸೇರುವುದನ್ನು ನಾವು ನೋಡಬಹುದು. ಅತ್ಯುತ್ತಮ ವೇಷಭೂಷಣ, ಆಕರ್ಷಕ ಜೋಡಿ, ‘ದಾಂಡಿಯಾ ಕಿಂಗ್’, ‘ದಾಂಡಿಯಾ ಕ್ವೀನ್’ನಂತಹ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಆದುದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ನವರಾತ್ರಿ ಆಚರಣೆ ಕೇವಲ ಪ್ರದರ್ಶನವಾಗಿ ಮಾರ್ಪಟ್ಟಿದೆ ಮತ್ತು ದುರದೃಷ್ಟವಶಾತ್ ಇದರಲ್ಲಿ ಯಾರಿಗೂ ಏನೂ ಆಕ್ಷೇಪಾರ್ಹ ಅನಿಸುವುದಿಲ್ಲ. ಇದರಿಂದ ದೇವಿಯ ಭಕ್ತಿಗಿಂತ ನಾವು ಕೇವಲ ಮೋಜು ಮಾಡುತ್ತಿದ್ದೇವೆ ಎಂಬ ಅರಿವು ಇರುವುದಿಲ್ಲ.
ನವರಾತ್ರಿಯನ್ನು ಧಾರ್ಮಿಕ ಪದ್ಧತಿಯಲ್ಲಿ ಆಚರಿಸುವಂತೆ ಪ್ರಯತ್ನಿಸಬೇಕು. ಈ ಉತ್ಸವದಲ್ಲಿ ಶಿಸ್ತು, ಸಂಸ್ಕೃತಿ ಮತ್ತು ಪಾವಿತ್ರ್ಯವನ್ನು ಕಾಪಾಡಬೇಕು. ಪ್ರತಿಯೊಬ್ಬ ಹಿಂದೂವು ಈ ಬಗ್ಗೆ ಗಮನಹರಿಸಬೇಕು. ಮಂಟಪಗಳಲ್ಲಿ ಗರಬಾದ ಸಮಯದಲ್ಲಿ ಧಾರ್ಮಿಕ ಹಾಡುಗಳನ್ನು ಹಾಕಬೇಕು. ಇದರಿಂದ ಅನೇಕ ವಿಷಯಗಳನ್ನು ಸಾಧಿಸಬಹುದು.

೨. ತೆರೆದ ಬೆನ್ನಿಗೆ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಧರ್ಮಶಿಕ್ಷಣದ ಕೊರತೆ !
ಕಳೆದ ಕೆಲವು ವರ್ಷಗಳಿಂದ ಆಧುನಿಕತೆಯ ಹೆಸರಿನಲ್ಲಿ ಹಿಂದೂ ಯುವತಿಯರು ಬೆನ್ನಿಗೆ ದೇವಿ ಅಥವಾ ಗರಬಾ ಆಡುವಾಗಿನ ವರ್ಣಚಿತ್ರಗಳನ್ನು ಬಿಡಿಸಿಕೊಂಡು ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ಕಾಣಬಹುದು. ಹಿಂದೂ ಧರ್ಮವು ‘ಸ್ತ್ರೀ’ಯನ್ನು ದೇವಿ ಮತ್ತು ತಾಯಿಯ ರೂಪದಲ್ಲಿ ನೋಡುವ ಸಂಪ್ರದಾಯವನ್ನು ಹೊಂದಿದೆ. ಭಾರತೀಯ ಮಹಿಳೆಯರು ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಇತಿಹಾಸವನ್ನು ಸೃಷ್ಟಿಸಿ ದ್ದಾರೆ. ಅವರು ತಮ್ಮ ಪ್ರಾಣದ ಬಲಿದಾನ ನೀಡಿದರು, ಆದರೆ ತಮ್ಮ ದೇಹವನ್ನು ಅಪವಿತ್ರಗೊಳಿಸಲು ಬಿಡಲಿಲ್ಲ. ಹೀಗಿದ್ದರೂ, ಇಂದು ನಾವು ಏನು ನೋಡುತ್ತಿದ್ದೇವೆ ? ‘ದೇಹವನ್ನು ಪ್ರದರ್ಶಿಸುವುದು’ ಅನೇಕ ಮಹಿಳೆಯರಿಗೆ ಹೆಮ್ಮೆಯ ವಿಷಯ ವಾಗಿದೆ. ಯುವತಿಯರು ತಮ್ಮ ಬೆನ್ನ ಮೇಲೆ ದೇವಿಯ ಚಿತ್ರ, ಗರಬಾ ಆಡುವ ಚಿತ್ರಗಳನ್ನು ಬಿಡಿಸಿಕೊಳ್ಳುತ್ತಿದ್ದಾರೆ. ಈ ವ್ಯವಸಾಯ ಮಾಡುವ ಹೆಚ್ಚಿನ ವರ್ಣಚಿತ್ರಕಾರರು ಮುಸಲ್ಮಾನರು. ‘ಯಾವ ದೇಶದ ಸಾವಿರಾರು ರಜಪೂತ ಸ್ತ್ರೀಯರು ಜೌಹರ್ ಮಾಡಿದರೋ, ಅದೇ ದೇಶದ ಮಹಿಳೆಯರು ಈ ರೀತಿ ಅಂಗಪ್ರದರ್ಶನ ಮಾಡಿ, ಮುಸಲ್ಮಾನರಿಗೆ ತಮ್ಮ ತೆರೆದ ಬೆನ್ನನ್ನು ಗರಬಾದ ಚಿತ್ರಗಳನ್ನು ಬಿಡಿಸಲು ನೀಡುತ್ತಿದ್ದಾರೆ’, ಎಂಬುದನ್ನು ನೋಡಿ ಬಹಳ ದುಃಖವಾಗುತ್ತದೆ. ಹಿಂದೂ ಯುವತಿಯರು, ತಮ್ಮದೇ ಆದ ಹಿಂದೂ ಧರ್ಮದ ರೂಢಿ, ಸಂಪ್ರದಾಯದ ಮೂಲಕ ಧರ್ಮ ಮತ್ತು ಹಿಂದೂಗಳಿಗೆ ಮತಾಂಧರು ಎಷ್ಟು ಹಾನಿ ಮಾಡುತ್ತಿದ್ದಾರೆ ಎಂಬುದನ್ನು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಧರ್ಮಶಿಕ್ಷಣ ಮತ್ತು ಧರ್ಮದ ಇತಿಹಾಸವನ್ನು ಕಲಿಸದಿರುವುದರಿಂದಲೇ ಧಾರ್ಮಿಕ ಉತ್ಸವಗಳಲ್ಲಿ ಇಂತಹ ಅನಾಚಾರಗಳು ಹೆಚ್ಚಾಗಿವೆ.
೩. ಗರಬಾ ಸ್ಥಳಗಳಲ್ಲಿ ಮತಾಂಧರ ಓಡಾಟ
ಕಳೆದ ಹಲವು ವರ್ಷಗಳಿಂದ ‘ನವರಾತ್ರಿಯ ಸಮಯದಲ್ಲಿ ಗರ್ಭನಿರೋಧಕಗಳ ಮಾರಾಟ ಎಷ್ಟು ಹೆಚ್ಚಾಯಿತು’ ಎಂಬುದು ಸಮೀಕ್ಷೆ ಹೇಳುತ್ತದೆ. ಗುಜರಾತನÀಲ್ಲಿ ಗರ್ಭನಿರೋಧಕಗಳ ಮಾರಾಟ ಹೆಚ್ಚಳದ ಪ್ರಮಾಣ ಶೇ. ೫೦ ರ ವರೆಗೆ ತಲುಪಿದೆ. ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ನಡೆಯುವ ಈ ವಿಕೃತ ಘಟನೆಗಳು ಖಂಡಿತವಾಗಿಯೂ ಆಘಾತಕಾರಿಯಾಗಿವೆ. ಇದೇ ವಾತಾವರಣದ ದುರ್ಲಾಭ ಪಡೆದು ಮತಾಂಧ ಯುವಕರೂ ಗರಬಾ ಆಡುವ ನೆಪದಲ್ಲಿ ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಪ್ರವೇಶಿಸುತ್ತಾರೆ. ಹಿಂದೂ ಯುವತಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅವರನ್ನು ಜಿಹಾದಿ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ.
ಈ ಹಿನ್ನೆಲೆಯಲ್ಲಿ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ಪ್ರತಿವರ್ಷ ‘ಗರಬಾ ಕಾರ್ಯಕ್ರಮಗಳಲ್ಲಿ ಕೇವಲ ಹಿಂದೂ ಧರ್ಮೀಯರಿಗೆ ಮಾತ್ರ ಪ್ರವೇಶ ನೀಡಬೇಕು’ ಎಂದು ಆಗ್ರಹಿಸುತ್ತವೆ. ವಾಸ್ತವದಲ್ಲಿ, ಇಂತಹ ಬೇಡಿಕೆ ಇಡುವ ಪರಿಸ್ಥಿತಿ ಬರಲೇಬಾರದು. ಗರಬಾ ಆಯೋಜಕರು ಮತ್ತು ಗರಬಾ ಆಡುವ ಹಿಂದೂಗಳೇ ಮುಸಲ್ಮಾನರ ಪ್ರವೇಶವನ್ನು ನಿರಾಕರಿಸಬೇಕು.
ಹಿಂದೂಗಳ ಮೇಲೆ ಬರುವ ಸಂಕಟಗಳು, ಅವರ ಮೇಲೆ ನಡೆಯುವ ಅನ್ಯಾಯ-ಅತ್ಯಾಚಾರಗಳನ್ನು ತಡೆಗಟ್ಟಲು ಗರಬಾಗಾಗಿ ನೀಡಿದ ಈ ಪರ್ಯಾಯ ಯೋಗ್ಯವೇ ಆಗಿದೆ. ಅದರಿಂದ ‘ಲವ್ ಜಿಹಾದ್’, ಹುಡುಗಿಯರನ್ನು ಚುಡಾಯಿಸುವುದು ಮತ್ತು ಮಾನಭಂಗದಂತಹ ಅನಾಚಾರಗಳನ್ನು ನಿಗ್ರಹಿಸಬಹುದು; ಏಕೆಂದರೆ ಈ ಅನಾಚಾರಗಳು ಹೆಚ್ಚಿನ ಪ್ರಮಾಣದಲ್ಲಿ ಮತಾಂಧರಿಂದಲೇ ನಡೆಯುತ್ತವೆ. ಗರಬಾದಲ್ಲಿ ನೃತ್ಯ ಮಾಡುವ ಹದಿಹರೆಯದ ಹುಡುಗಿಯರು ಅಥವಾ ಯುವತಿಯರ ಮೇಲೆ ಕಾಮಾಂಧರ ದೃಷ್ಟಿ ಇರುತ್ತದೆ ಮತ್ತು ಅವರು ಅರಿವಿಲ್ಲದೆಯೇ ಅವರ ಬಲೆಗೆ ಬೀಳುತ್ತಾರೆ ಹಾಗೂ ಅವರ ಜೀವನ ಹಾಳಾಗುತ್ತದೆ. – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.
೪. ಹಿಂದೂ ಮಹಿಳೆಯರು ಮಹಿಷಾಸುರಮರ್ದಿನಿಯರಾಗಬೇಕು !
ಪ್ರತಿದಿನ ‘ಲವ್ ಜಿಹಾದ್’ನ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅದರಲ್ಲಿ ಹಿಂದೂ ಹೆಣ್ಣು ಮಕ್ಕಳು ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತಿದೆ. ಅದಕ್ಕೆ ಕಡಿವಾಣ ಬೀಳಲೇಬೇಕು. ಒಂದು ವೇಳೆ, ಈಗ ಪ್ರವೇಶ ನಿರಾಕರಿಸಿದರೆಂದು ಮತಾಂಧರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಗರಬಾ ಮಹೋತ್ಸವದ ಹೊರಭಾಗದಲ್ಲಿ ವಸ್ತುಗಳು ಅಥವಾ ಆಹಾರ ಪದಾರ್ಥಗಳ ಅಂಗಡಿಗಳನ್ನು ಹಾಕಿ, ಅದರ ಮೂಲಕ ತಮ್ಮ ಗುಪ್ತ ಉದ್ದೇಶವನ್ನು ಸಾಧಿಸಲು ಖಂಡಿತವಾಗಿಯೂ ಪ್ರಯತ್ನಿಸುತ್ತಾರೆ ! ಇದನ್ನು ಗಮನದಲ್ಲಿಟ್ಟುಕೊಂಡು, ಗರಬಾದ ಸ್ಥಳದಲ್ಲಿ ಮಾತ್ರವಲ್ಲ, ಗರಬಾದ ಸುತ್ತಮುತ್ತಲೂ ಮತಾಂಧರಿಗೆ ತಿರುಗಾಡಲು ಬಿಡಬಾರದು. ಹಿಂದೂ ಹೆಣ್ಣು ಮಕ್ಕಳು ಮತ್ತು ಯುವತಿಯರೂ ಮತಾಂಧರ ಆಮಿಷಗಳಿಗೆ ಬಲಿಯಾಗದೆ, ಸಮಯ ಬಂದರೆ ಕಾಳಿ, ದುರ್ಗಾ ಅಥವಾ ಚಂಡಿಯ ರೂಪ ವನ್ನು ತಾಳಬೇಕು. ದೇವಿಯ ಜಾಗರಣೆ ಮತ್ತು ಅವಳ ಆರಾಧನೆ ಮಾಡಿ ನಾವು ದೇವಿಯಂತೆ ಸಾಮರ್ಥ್ಯಶಾಲಿಯಾಗೋಣ, ಎಂದು ನವರಾತ್ರಿಯ ಸಮಯದಲ್ಲಿ ಪ್ರತಿಯೊಬ್ಬ ಹಿಂದೂ ಯುವತಿ ಮತ್ತು ಮಹಿಳೆಯರು ಸಂಕಲ್ಪವನ್ನು ಮಾಡಬೇಕು. ಪ್ರತಿಯೊಬ್ಬ ಹಿಂದೂ ಮಹಿಳೆ ಕಾಮಾಂಧ ಮತಾಂಧರ ಸಂದರ್ಭದಲ್ಲಿ ಮಹಿಷಾಸುರಮರ್ದಿನಿಯಾದರೆ, ‘ಲವ್ ಜಿಹಾದ್’ ಎಂಬ ರಾಕ್ಷಸನನ್ನು ಅವಳು ನಾಶಮಾಡಬಹುದು, ಎಂಬುದನ್ನು ಗಮನದಲ್ಲಿಡಿ. ಹಿಂದೂ ಮಹಿಳೆಯರು ಮತಾಂಧರ ಹಿಡಿತಕ್ಕೆ ಸಿಲುಕದಂತೆ ಪ್ರತಿಯೊಬ್ಬ ಮಹಿಳೆ ಇದನ್ನು ಕೇವಲ ೯ ದಿನಗಳಲ್ಲ, ವರ್ಷವಿಡೀ ಈ ವಿಷಯದಲ್ಲಿ ಜಾಗರೂಕರಾಗಿರಬೇಕು.
ನವರಾತ್ರಿ ಹಬ್ಬದ ಸಮಯದಲ್ಲಿ ‘ಗರಬಾ’ ದೇವಿಯ ಪೂಜೆಯೇ ಆಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಪಾವಿತ್ರ್ಯವನ್ನು ರಕ್ಷಿಸೋಣ. ಒಮ್ಮೆ ಅದರ ವಾಣಿಜ್ಯೀಕರಣ ವನ್ನು ನಿಲ್ಲಿಸಿದರೆ, ಅದರ ಮೂಲಕ ಜಿಹಾದಿ ಚಟುವಟಿಕೆಗಳನ್ನು ನಡೆಸುವ ಮತಾಂಧರಿಗೂ ತಾನಾಗಿಯೇ ಕಡಿವಾಣ ಬೀಳುತ್ತದೆ !
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳ ಸಂಘಟನೆ ಅಗತ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ