
೧. ‘ಹೇ ಆರ್ಯರೇ, ಹೇ ಹಿಂದೂಗಳೇ ! ನೀವು ವಿಶ್ವದ ಶ್ರೇಷ್ಠ, ಅತ್ಯಂತ ಪ್ರಾಚೀನ ಧರ್ಮದವರು ಎಂಬುದನ್ನು ಮರೆಯಬೇಡಿ. ಈ ಧರ್ಮವು ಮೊದಲು ‘ಬದುಕು ಮತ್ತು ಬದುಕಲು ಬಿಡು’ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ನೀಡಿತು.ಸಮಾನತೆ, ಮಾನವೀಯತೆ, ಸಹಬಾಳ್ವೆಯಂತಹ ಮೌಲ್ಯಭರಿತ ಉನ್ನತ ಆದರ್ಶಗಳನ್ನು ನೀಡಿತು. ಇಂದು ಜಗತ್ತಿನಲ್ಲಿ ಕಂಡುಬರುವ ಮಾನವೀಯತೆಯ ಮೂಲ ಆಧಾರವೇ ‘ಹಿಂದೂಗಳ ವೇದಗಳಿಂದ ಪಡೆದ ಜ್ಞಾನ’ ಮತ್ತು ಅದು ಹಿಂದೂಗಳ ಏಕತೆಯ ಮುಖ್ಯ ಆಧಾರವೂ ಆಗಿದೆ.
೨. ಹಿಂದೂಗಳು ತಮ್ಮ ಧರ್ಮ, ಸಂಸ್ಕೃತಿ ಮತ್ತು ದೇಶದ ರಕ್ಷಣೆ ಮತ್ತು ಸಂವರ್ಧನೆ ಮಾಡಬೇಕಾದರೆ, ಪ್ರತಿಯೊಬ್ಬ ಹಿಂದೂವೂ ಧರ್ಮರಕ್ಷಣೆಯ ವ್ರತ ತೊಟ್ಟು ಧರ್ಮರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಬೇಕು; ಏಕೆಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಧರ್ಮರಕ್ಷಣೆಯ ಜವಾಬ್ದಾರಿಯು ಪ್ರತಿಯೊಬ್ಬ ಹಿಂದೂವಿನ ಮೇಲಿದೆ. ನಮ್ಮ ಅಸ್ತಿತ್ವಕ್ಕಾಗಿ ನಾವೇ ಹೋರಾಡಬೇಕು. ನಮ್ಮ ಪೂರ್ವಜರು ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಹೋರಾಡಿ ನಮ್ಮನ್ನು ಉಳಿಸಿದ್ದಾರೆ. ಸಂಪ್ರದಾಯ, ರಾಷ್ಟ್ರಭಾಷೆ, ಮಾತೃ ಭಾಷೆ, ಜಾತಿ, ಉಪಜಾತಿ, ಕ್ಷೇತ್ರ, ಪ್ರಾಂತ್ಯದ ಭೇದಗಳನ್ನು ಮರೆತು ಧರ್ಮರಕ್ಷಣೆಯ ಸಂಕಲ್ಪ ಮಾಡಿ ರಚನಾತ್ಮಕ ಕಾರ್ಯಕ್ಕಾಗಿ ಸಮರ್ಪಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಒಗ್ಗಟ್ಟಿನ ಭಾವನೆ ಹೆಚ್ಚುತ್ತದೆ, ರಾಷ್ಟ್ರಭಕ್ತಿ ಜಾಗೃತವಾಗುತ್ತದೆ ಮತ್ತು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆ ಸುರಕ್ಷಿತವಾಗಿರುತ್ತದೆ.
೩. ‘ಸ್ವಾರ್ಥ, ಸ್ಥಾನ, ಮಾನ-ಸನ್ಮಾನದ ಪ್ರಲೋಭನೆ ಮತ್ತು ಆರ್ಥಿಕ ಲಾಭಗಳನ್ನು ತ್ಯಾಗ ಮಾಡಿ, ಭಾರತದಲ್ಲಿ ಸಮಾನತಾವಾದಿ ಮತ್ತು ಮಾನವತಾವಾದಿ ಹಿಂದೂ ರಾಜ್ಯವನ್ನು ಸ್ಥಾಪಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ! ಭಾರತದಲ್ಲಿ ‘ಹಿಂದೂ ರಾಜ್ಯ’ ಸ್ಥಾಪನೆಗಾಗಿ ಈಗಿನಿಂದಲೇ ಪ್ರಯತ್ನಿಸದಿದ್ದರೆ, ನಂತರ ‘ಹಿಂದೂ ರಾಜ್ಯ’ ಸ್ಥಾಪನೆಯಾಗುವುದು ಅತ್ಯಂತ ಕಷ್ಟವಾಗುತ್ತದೆ.’
(ಆಧಾರ : ‘ಸಾವರ್ಕರ್ ಟೈಮ್ಸ್’)
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !
ನಾಭಿ ಸಮತೋಲನಕ್ಕಾಗಿ ಉಪಯುಕ್ತ ಕೆಲವು ಯೋಗಾಸನಗಳು !