೧. ಭಾರತದ ಇತಿಹಾಸ ಸೀಮೋಲ್ಲಂಘನದ ಇತಿಹಾಸವಾಗಿದೆ !

‘ಪಾಶ್ಚಾತ್ಯ ದೇಶಗಳ ಸೀಮೋಲ್ಲಂಘನವನ್ನು ನೋಡಿದರೆ, ಅವರು ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಂಡಿರುವುದು ಗಮನಕ್ಕೆಬರುತ್ತದೆ. ಇದರ ವಿರುದ್ಧ, ಭಾರತದ ಮೇಲೆ ಆಕ್ರಮಣಗಳಾಗಿದ್ದರೂ,ಪ್ರತಿಯೊಂದು ಆಕ್ರಮಣವನ್ನೂ ಎದುರಿಸಿ ವಿಜಯ ಸಾಧಿಸಲಾಗಿದೆ.ನಮ್ಮ ಪೂರ್ವಜರು ದಸರಾದ ಮಹತ್ವವನ್ನು ಅರಿತುಕೊಂಡರು, ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದರು, ಅವುಗಳನ್ನು ಝಳಪಿಸಿದರು ಮತ್ತು ಅವುಗಳನ್ನು ವಿಜೃಂಭಿಸಿದರು; ಆದ್ದರಿಂದ ಭಾರತದ ಇತಿಹಾಸವು ಹೊರಗಿನವರಿಂದಾದ ದಾಳಿಗಳ ಇತಿಹಾಸವಲ್ಲ, ಬದಲಿಗೆ ನಮ್ಮದು ವಿಜಯದ ಇತಿಹಾಸವಾಗಿದೆ. ಭಾರತದ ಇತಿಹಾಸವು ಸೀಮೋಲ್ಲಂಘನೆಯ ಇತಿಹಾಸವಾಗಿದೆ. ವಿಶೇಷವಾಗಿ, ನಮ್ಮ ಸೀಮೋಲ್ಲಂಘನವು ರಾಜ್ಯವನ್ನು ಆಳಲು ಆಗಿರಲಿಲ್ಲ, ಬದಲಿಗೆ ಅದು ಜ್ಞಾನದಾಯಕವಾಗಿತ್ತು.
೨. ಸೀಮೋಲ್ಲಂಘನದ ಅವಶ್ಯಕತೆ !

ದಸರಾ ಹಬ್ಬವು ಶಸ್ತ್ರಗಳ ಪೂಜೆ, ಶೌರ್ಯವನ್ನು ಪ್ರದರ್ಶಿಸುವುದು ಮತ್ತು ಸೀಮೋಲ್ಲಂಘನೆಯ ಹಬ್ಬವಾಗಿದೆ. ಬಹಳ ಹಿಂದಿನಿಂದಲೂ ಭಾರತೀಯರು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ವೇದಗಳ ಕಾಲದಿಂದ ಅಥವಾ ಬಹುಶಃ ಅದಕ್ಕಿಂತಲೂ ಮೊದಲಿನಿಂದಲೂ ! ‘ಕೃಣ್ವಂತೋ ವಿಶ್ವಮಾರ್ಯಮ್’ ಅಂದರೆ ‘ವಿಶ್ವವನ್ನು ಸುಸಂಸ್ಕೃತಗೊಳಿಸು’ ಎಂದು ಋಗ್ವೇದ ಹೇಳಿದೆ. ವಿಶ್ವದ ಎಲ್ಲರನ್ನೂ ಶೀಲವಂತರು,ದಯಾವಂತರು, ಚಾರಿತ್ರ್ಯವಂತರು, ಶ್ರೇಷ್ಠರನ್ನಾಗಿ ಮಾಡಬೇಕಾದರೆ, ಅದಕ್ಕಾಗಿ ಸೀಮೋಲ್ಲಂಘನ ಮಾಡುವುದು ಅವಶ್ಯಕವಾಗಿತ್ತು. ಜನಸಾಮಾನ್ಯರು ವ್ಯಾಪಾರಿಗಳಾಗಿರಲಿ, ಶ್ರಮಿಕರಾಗಿರಲಿ, ವಿಜ್ಞಾನಿಗಳಾಗಿರಲಿ ಅಥವಾ ಗಣಿತಜ್ಞರಾಗಿರಲಿ, ಅವರು ಎಲ್ಲೆಲ್ಲಿ ಹೋದರೋ, ಅಲ್ಲೆಲ್ಲಾ ಭಾರತದಿಂದ ತೆಗೆದುಕೊಂಡು ಹೋದ ಜ್ಞಾನ, ವಿಜ್ಞಾನ, ಕಥೆಗಳು, ರಾಮಾಯಣ, ಮಹಾಭಾರತ, ಶೂನ್ಯ ಇತ್ಯಾದಿಗಳ ರೂಪದಲ್ಲಿನ ಬಂಗಾರ ವನ್ನು ಹಂಚಿದರು; ಆದರೆ ಈ ಇತಿಹಾಸ ನಮಗೆ ತಿಳಿದಿಲ್ಲ.
೩. ಶೌರ್ಯವನ್ನು ಪ್ರದರ್ಶಿಸುವ ಸಂಪ್ರದಾಯ !
ಭಾರತದ ಮೇಲೆ ದಾಳಿಗಳು ನಡೆದಿದ್ದು ನಿಜ; ಆದರೆ ಪ್ರತಿಯೊಂದು ದಾಳಿಯನ್ನೂ ಎದುರಿಸಿ ವಿಜಯ ಸಾಧಿಸಲಾಗಿದೆ. ವೈದಿಕ ರಾಜ ಸುದಾಸನು ಮಧ್ಯ ಏಷ್ಯಾದಿಂದ ದಾಳಿ ಮಾಡಿದ ೧೦ ರಾಜರನ್ನು ಸೋಲಿಸಿದನು. ನಂತರ ರಾಜಾಪುರು ಅಲೆಕ್ಸಾಂಡರನನ್ನು ಗ್ರೀಸ್‌ಗೆ ವಾಪಸು ಕಳಿಸಿದನು. ವಿಕ್ರಮಾದಿತ್ಯ ಮತ್ತು ಗೌತಮಿಪುತ್ರ ಸಾತಕರ್ಣಿ ಸೇರಿ ಶಕರನ್ನು ಸೋಲಿಸಿದರು. ಸ್ಕಂದಗುಪ್ತ, ನರಸಿಂಹಗುಪ್ತ ಮತ್ತು ಯಶೋಧರ್ಮ ಮುಂತಾದ ರಾಜರು ಹೂಣರನ್ನು ಹಿಮ್ಮೆಟ್ಟಿಸಿದರು. ಮರಾಠರು ಮತ್ತು ನಂತರ ಸಿಖ್ಖರು ಮೊಘಲ್ ಸಾಮ್ರಾಜ್ಯವನ್ನು ಕೊನೆಗೊಳಿಸಿದರು. ಕೊನೆಯಲ್ಲಿ ಯೂರೋಪಿಯನ್ ಶಕ್ತಿಗಳನ್ನೂ ನಾವು ಹಿಮ್ಮೆಟ್ಟಿಸಿದೆವು. ಪ್ರತಿ ಬಾರಿಯೂ ಆಯಾ ಪೀಳಿಗೆಯು ಶಸ್ತ್ರಾಸ್ತ್ರಗಳನ್ನು ಮಸೆಯಿತು, ಹೋರಾಡಿತು; ಆದ್ದರಿಂದ ಭಾರತದಲ್ಲಿ ಇಂದಿಗೂ ಸಾವಿರಾರು ವರ್ಷಗಳಷ್ಟು ಹಳೆಯ ಸಂಪ್ರದಾಯಗಳು ಮತ್ತು ಪದ್ಧತಿಗಳು ಮುಂದುವರಿದಿವೆ. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿ ಪೀಳಿಗೆಗೆ ಶೌರ್ಯವನ್ನು ಪ್ರದರ್ಶಿಸಬೇಕಾಗುತ್ತದೆ. ‘ದಸರಾ’ ಹಬ್ಬವು ಇದನ್ನೇ ನೆನಪಿಸುತ್ತದೆ. ಪ್ರತಿ ವರ್ಷ ಶಸ್ತ್ರಪೂಜೆ ಮಾಡುವುದು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸುವ ಸಂಪ್ರದಾಯ ಇದೇ ಕಾರಣಕ್ಕಾಗಿ ಇದೆ.
ಇಂದಿಗೂ ಅನೇಕ ಭಾರತೀಯರು ಶಿಕ್ಷಣಕ್ಕಾಗಿ ಅಥವಾ ನೌಕರಿಗಾಗಿ ವಿದೇಶಗಳಿಗೆ ಹೋಗುತ್ತಾರೆ, ಹಾಗೆಯೇ ಸೀಮೋಲ್ಲಂಘನ ಮಾಡುತ್ತಾರೆ. ಅವರು ಭಾರತದ ಉಜ್ವಲ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯ ಔದಾರ್ಯ ಮತ್ತು ಸರ್ವವ್ಯಾಪಿ ತತ್ತ್ವಶಾಸ್ತ್ರ ಕಲಿಯಬೇಕು. ಆ ಸುವರ್ಣಪುಟಗಳನ್ನು ತಮ್ಮೊಂದಿಗೆ ಕೊಂಡೊಯ್ದು ಗರ್ವದಿಂದ ಮತ್ತು ಮುಕ್ತ ಮನಸ್ಸಿನಿಂದ ಹಂಚಬೇಕು !’ (ಆಧಾರ: ಸಾಪ್ತಾಹಿಕ ‘ವಿವೇಕ’)
ದಸರಾದಂದು ಹಲಗೆಯ (ಪಾಟಿಯ) ಮೇಲೆ ಸರಸ್ವತಿಯ ಚಿತ್ರವನ್ನು ಏಕೆ ಬಿಡಿಸುತ್ತಾರೆ
ಗರಬಾ ಇದು ಸಂಗೀತರಾತ್ರಿಯಲ್ಲ !
ನವರಾತ್ರಿಯ ಸಮಯದಲ್ಲಿ ಬಿಡಿಸಬೇಕಾದ ರಂಗೋಲಿಗಳು
ಧರ್ಮದ ವಿಜಯಕ್ಕಾಗಿ ‘ಹಿಂದೂ ರಾಜ್ಯ’ ಸ್ಥಾಪನೆಯ ಗುರಿಯೊಂದಿಗೆ ಕಾರ್ಯೋನ್ಮುಖರಾಗಿ !
ಮಂಗಳೂರು ದಸರಾ
ಸಂಪತ್ಕಾಲದಿಂದ ಯುದ್ಧಕಾಲದೆಡೆಗೆ ಸೀಮೋಲ್ಲಂಘನೆ ಮಾಡಿ !