ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನಂತರ ಡೊನಾಲ್ಡ್ ಟ್ರಂಪ್ ಅವರ ಬೇಜವಾಬ್ದಾರಿತನ ಹೇಳಿಕೆ !

ವಾಷಿಂಗ್ಟನ – ಭಾರತವು ಆಮದು ಸುಂಕವನ್ನು ಕಡಿಮೆ ಮಾಡುವುದಾಗಿ ಭರವಸೆ ನೀಡಿತ್ತು; ಆದರೆ ಈಗ ವಿಳಂಬವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಮತ್ತು ರಕ್ಷಣಾ ಸಾಧನಗಳನ್ನು ಖರೀದಿಸಿದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿ ಭಾರತಕ್ಕೆ ಮರಳಿದ ನಂತರ, ಅಮೆರಿಕ ನಾಯಕರ ಪ್ರತಿಕ್ರಿಯೆಗಳು ಒಂದರ ನಂತರ ಒಂದು ಬರುತ್ತಿವೆ. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜಂಟಿ ಫೋಟೋಗಳು ಪ್ರಸಾರವಾದ ನಂತರ ಅಮೆರಿಕದಲ್ಲಿ ಆತಂಕ ಹೆಚ್ಚಾಗಿದೆ. ತಜ್ಞರ ಪ್ರಕಾರ, ಭಾರತವು ಈ ವೇದಿಕೆಯ ಮೂಲಕ ಅಮೆರಿಕಕ್ಕೆ “ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ” ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ, ಎಂದು ಹೇಳಿದ್ದಾರೆ.
ಟ್ರಂಪ್ ಅವರ ಹಠಾತ್ ಧೋರಣೆ ಚೀನಾಕ್ಕೆ ಲಾಭ !
ಟ್ರಂಪ್ ಅವರ ಈ ಮನಸ್ಸೋ ಇಚ್ಛೆ ವರ್ತನೆಗೆ ಅಮೆರಿಕದಲ್ಲೇ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಟ್ರಂಪ್ ಅವರ ಆಮದು ಸುಂಕ ಹೆಚ್ಚಳದ ನೀತಿಯನ್ನು ‘ವಿನಾಶಕಾರಿ’ ಎಂದು ಕರೆದಿದ್ದಾರೆ. ಈ ನೀತಿಯಿಂದ ಭಾರತವನ್ನು ರಷ್ಯಾದಿಂದ ದೂರವಿಡುವ ಪ್ರಯತ್ನ ವಿಫಲವಾಗಿದೆ ಮತ್ತು ಚೀನಾ ಜಾಗತಿಕ ಮಟ್ಟದಲ್ಲಿ ಮತ್ತೆ ಬಲಗೊಳ್ಳಲು ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ಟ್ರಂಪ್ ತಮ್ಮ ಕುಟುಂಬದ ಪಾಕಿಸ್ತಾನದ ವ್ಯಾಪಾರ ಹಿತಾಸಕ್ತಿಗಳಿಗಾಗಿ ಭಾರತದೊಂದಿಗಿನ ಸಂಬಂಧವನ್ನು ಬಲಿ ಕೊಟ್ಟರು ! – ಜೇಕ್ ಸುಲ್ಲಿವಾನ್![]() ಅಮೆರಿಕದ ಮಾಜಿ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ನೇರವಾಗಿ ಆರೋಪಿಸುತ್ತಾ, ಟ್ರಂಪ್ ತಮ್ಮ ಕುಟುಂಬದ ಪಾಕಿಸ್ತಾನದ ವ್ಯಾಪಾರ ಹಿತಾಸಕ್ತಿಗಳಿಗಾಗಿ ಭಾರತದೊಂದಿಗಿನ ಸಂಬಂಧವನ್ನು ಬಲಿ ಕೊಟ್ಟರು ಎಂದು ಹೇಳಿದ್ದಾರೆ. ಟ್ರಂಪ್ ಕುಟುಂಬವು ಪಾಕಿಸ್ತಾನದಲ್ಲಿ ಒಂದು ವ್ಯವಹಾರದಲ್ಲಿ ಸಹಭಾಗಿತ್ವದಲ್ಲಿದೆ. ಟ್ರಂಪ್ ಅವರ ಹಠಾತ್ ಧೋರಣೆಯಿಂದ ಭಾರತ ಅಮೆರಿಕದಿಂದ ದೂರ ಸರಿಯುತ್ತಿದೆ. ಈಗ ಅಮೆರಿಕ ಭಾರತದ ವಿಶ್ವಾಸಾರ್ಹ ಪಾಲುದಾರನಾಗಿ ಉಳಿದಿಲ್ಲ. |

ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು