ಭಾರತ ಬಾಂಗ್ಲಾದೇಶದ ಹಿಂದೂಗಳನ್ನು ಯಾವಾಗ ರಕ್ಷಿಸುತ್ತದೆ ?

ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್‌.ಐ.’ ಬಾಂಗ್ಲಾದೇಶದ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿದೆ. ಅದಕ್ಕಾಗಿ ಅದು ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕರನ್ನು ಬಳಸುತ್ತಿದೆ ಎಂದು ಬಾಂಗ್ಲಾದೇಶದ ಖ್ಯಾತ ಪತ್ರಕರ್ತ ಸಲಾಹುದ್ದೀನ್‌ ಶೋಯೆಬ್‌ ಚೌಧರಿ ಬಹಿರಂಗಪಡಿಸಿದ್ದಾರೆ.

೨. ಸಮಾನ ನಾಗರಿಕ ಸಂಹಿತೆಯ ಅಗತ್ಯವನ್ನು ತಿಳಿಯಿರಿ !

೧೫ ವರ್ಷಕ್ಕಿಂತ ಮೇಲ್ಪಟ್ಟ ಮುಸಲ್ಮಾನ ಹೆಣ್ಣುಮಗಳು ಮುಸಲ್ಮಾನ ವೈಯಕ್ತಿಕ ಕಾನೂನಿನ ಪ್ರಕಾರ ತನ್ನ ಇಷ್ಟದ ವ್ಯಕ್ತಿಯನ್ನು ಮದುವೆಯಾಗಲು ಅರ್ಹಳು ಎಂದು ೨೦೨೨ ರಲ್ಲಿ ಪಂಜಾಬ್‌ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ ನೀಡಿದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ.

೩. ಶಾಲೆಯಲ್ಲಿಯೂ ಅಸುರಕ್ಷಿತ ಹಿಂದೂ ವಿದ್ಯಾರ್ಥಿಗಳು !

ಕರ್ಣಾವತಿ (ಗುಜರಾತ್‌)ಯ ‘ಸೆವೆಂತ್‌ ಡೇ ಸ್ಕೂಲ್‌’ನಲ್ಲಿ, ೧೦ ನೇ ತರಗತಿಯ ನಯನ ಸಂತಾಜಿ ಎಂಬ ಹಿಂದೂ ವಿದ್ಯಾರ್ಥಿಯನ್ನು ೮ ನೇ ತರಗತಿಯ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದರಿಂದ ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ನಾಗರಿಕರು ಶಾಲೆಯನ್ನು ಧ್ವಂಸಗೊಳಿಸಿದ್ದಾರೆ.

೪. ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿ !

ಮಹಾರಾಷ್ಟ್ರದ ಮೀನುಗಾರಿಕಾ ಸಚಿವ ನಿತೇಶ ರಾಣೆ ಅವರು ವರಾಹ ಜಯಂತಿ ಆಚರಿಸುವಂತೆ ಕರೆ ನೀಡಿದಾಗ, ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಪಕ್ಷದ ನಾಯಕಿ ಸುಷ್ಮಾ ಅಂಧಾರೆ ಮತ್ತು
ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ (ಅಜಿತ ಪವಾರ್) ಶಾಸಕ ಅಮೋಲ್‌ಮಿಟಕರಿ ಟೀಕಿಸಿ, ವರಾಹ ಅವತಾರವನ್ನು ಅವಮಾನಿಸಿದ್ದಾರೆ.

೫. ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆಯೇ ಆಗಲಿ !

ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ನಕಲಿ ಆಧಾರ ಕಾರ್ಡ್‌ಗಳನ್ನು ತಯಾರಿಸಿ ಸಹಾಯ ಮಾಡುತ್ತಿದ್ದ ತಂಡವನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

೬. ಇಂತಹವರು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಿ !

‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ ಸಂಸ್ಥೆಯ ವರದಿಯ ಪ್ರಕಾರ, ದೇಶದ ೩೦ ಮುಖ್ಯಮಂತ್ರಿಗಳಲ್ಲಿ ೧೨, ಅಂದರೆ ಶೇ. ೪೦ ಮುಖ್ಯಮಂತ್ರಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ ೧೦ ಮುಖ್ಯಮಂತ್ರಿಗಳ ಮೇಲೆ ಕೊಲೆ ಯತ್ನ, ಅಪಹರಣ ಮತ್ತು ಲಂಚಗುಳಿತನದಂತಹ ಗಂಭೀರ ಅಪರಾಧಗಳು ದಾಖಲಾಗಿವೆ.