
೧೧ ಆಗಸ್ಟ್ ನಂದು ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಎಲ್ಲಾ ಬೀದಿ ನಾಯಿಗಳನ್ನು ಸಂಗ್ರಹಿಸಿ, ಅವುಗಳಿಗೆ ೬ ರಿಂದ ೮ ವಾರಗಳಲ್ಲಿ ಆಶ್ರಯ ನೀಡಿ, ಅವುಗಳನ್ನು ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬರಲು ಬಿಡಬಾರದೆಂದು ಆದೇಶ ಹೊರಡಿಸಿದೆ. ಬೀದಿ ನಾಯಿಗಳು ಚಿಕ್ಕ ಮಕ್ಕಳ ಮೇಲೆ ದೊಡ್ಡ ಸಂಖ್ಯೆಯಲ್ಲಿ ದಾಳಿ ಮಾಡುವ ಬಗ್ಗೆ ‘ಸುಮೋಟೋ’ (ನ್ಯಾಯಾಲಯವೇ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು) ಮೂಲಕ ಈ ಆದೇಶ ನೀಡಲಾಗಿದೆ. ಈ ಆದೇಶವನ್ನು ನೀಡುವಾಗ, ಬೀದಿ ನಾಯಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಸ್ಥಳೀಯ ಅಧಿಕಾರಿಗಳನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಇದಕ್ಕೆ ಜವಾಬ್ದಾರಿ ಇರುವ ಅಧಿಕಾರಿಗಳು ಮುಂದಿನ ವಿಚಾರಣೆಯ ಸಮಯದಲ್ಲಿ ನೇರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಆದೇಶಿಸಿತು. ಎರಡನೆಯದಾಗಿ, ೨೪ ಗಂಟೆಗಳೊಳಗೆ ನಾಯಿಗಳನ್ನು ಸಾಮೂಹಿಕವಾಗಿ ಹಿಡಿಯುವಂತೆ ಆದೇಶ ನೀಡಿತು. ನಾಯಿಗಳ ಸಂತಾನಹರಣ ಮತ್ತು ಆ ಸಂಬಂಧಿತ ನಿಯಮಗಳನ್ನು ಪಾಲಿಸುವಂತೆ ಸಹ ಅದು ಹೇಳಿತು. ಸ್ವಾತಂತ್ರ್ಯದ ೭೮ ವರ್ಷಗಳ ನಂತರ ದೇಶದ ನಾಗರಿಕರಿಗೆ ತಮ್ಮ ಪ್ರಾಣಕ್ಕೆ ಅಪಾಯ ತಂದೊಡ್ಡುವ ಪ್ರಾಣಿಗಳಿಂದ ಸ್ವಲ್ಪಮಟ್ಟಿಗಾದರೂ ರಕ್ಷಣೆ ದೊರೆಯುವ ಆಶಯ ಮೂಡಿತು. ಭಾರತದಲ್ಲಿ ೬ ಕೋಟಿಗೂ ಹೆಚ್ಚು ಬೀದಿ ನಾಯಿಗಳಿವೆ. ಭಾರತದಲ್ಲಿ ಪ್ರತಿ ವರ್ಷ ೩೦ ರಿಂದ ೩೫ ಲಕ್ಷ ಜನರಿಗೆ ಬೀದಿ ನಾಯಿಗಳು ಕಚ್ಚುತ್ತವೆ. ಅಂದರೆ, ಪ್ರತಿದಿನ ೧೦ ಸಾವಿರ ಘಟನೆಗಳು ಸಂಭವಿಸುತ್ತವೆ. ವರ್ಷದಲ್ಲಿ ೫ ಸಾವಿರ ಸಾವುಗಳು ಕೇವಲ ‘ರೇಬೀಸ್’ನಿಂದ (ನಾಯಿ ಕಚ್ಚುವುದರಿಂದ ಬರುವ ರೋಗ, ಇದರಲ್ಲಿ ವ್ಯಕ್ತಿ ಸಾಯಬಹುದು) ಆಗುತ್ತವೆ. ಇಲ್ಲಿಯವರೆಗೆ, ಬೀದಿ ನಾಯಿಗಳಿಂದ ಜನರ ಮೇಲಾದ ಅನೇಕ ದಾಳಿಗಳು ಮತ್ತು ಅದರಲ್ಲಿ ಸಂಭವಿಸಿದ ಸಾವುಗಳ ದೊಡ್ಡ ಅಂಕಿಅಂಶಗಳು ಪ್ರಕಟವಾಗಿವೆ. ಈ ಸಂಬಂಧ ಅನೇಕ ಸುದ್ದಿಗಳು ಪ್ರಕಟವಾಗಿವೆ. ದೆಹಲಿಯಲ್ಲಿ ಈ ವರ್ಷ ಇಲ್ಲಿಯವರೆಗೆ ೩೫ ಸಾವಿರಕ್ಕೂ ಹೆಚ್ಚು ಪ್ರಾಣಿಗಳ ಕಚ್ಚುವಿಕೆಯ ಘಟನೆಗಳು ಸಂಭವಿಸಿವೆ ಮತ್ತು ೪೯ ಜನರಿಗೆ ‘ರೇಬೀಸ್’ ಬಂದಿದೆ. ಸ್ಥಳೀಯ ಸ್ವಾಯತ್ತ ಸಂಸ್ಥೆಗಳು ಈ ಹಿನ್ನೆಲೆಯಲ್ಲಿ ಕೆಲವು ಕ್ರಮಗಳನ್ನೂ ಕೈಗೊಳ್ಳುತ್ತವೆ; ಆದರೆ ಸಮಸ್ಯೆಯ ಭಯಾನಕತೆಯನ್ನು ಗಮನಿಸಿದಾಗ ಅವು ಎಷ್ಟು ಸೀಮಿತವಾಗಿವೆ ಎಂದು ತಿಳಿಯುತ್ತದೆ. ಆದ್ದರಿಂದ, ನ್ಯಾಯಾಲಯದ ಈ ಆದೇಶದ ನಂತರ ನಾಯಿಗಳ ದಾಳಿಯಿಂದ ಬಲಿಯಾದ ಸಂತ್ರಸ್ತರು ಮತ್ತು ಅದರಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರ ಸಂಬಂಧಿಕರಿಗೆ ಸಮಾಧಾನವಾಗಿರಬಹುದು ಎಂಬುದರಲ್ಲಿ ಸಂಶಯವಿಲ್ಲ; ಆದರೆ ನ್ಯಾಯಾಲಯದ ಈ ಆದೇಶದ ಮೇಲೆ ಕ್ರಮ ಕೈಗೊಳ್ಳುತ್ತಿರುವವರ ಮೇಲೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಕಪಟ ಪ್ರಾಣಿಪ್ರೇಮಿಗಳು ನೇರವಾಗಿ ದಾಳಿ ಮಾಡಿದ್ದಾರೆ. ‘ನಾಯಿಗಳ ಮೇಲಿನ ಪ್ರೀತಿಯಿಂದ ಅವರು ಸಹ ಹಿಂಸಾತ್ಮಕ ನಾಯಿಗಳಂತೆ ವರ್ತಿಸಲು ಪ್ರಾರಂಭಿಸಿದರು’ ಎಂದು ಯಾರಿಗಾದರೂ ಅನಿಸಿದರೆ ಬೇಸರಪಡಬಾರದು. ಈ ಸಮಯದಲ್ಲಿ, ಪ್ರಾಣಿಪ್ರೇಮಿ ನ್ಯಾಯವಾದಿಗಳು ‘ಆಶ್ರಯ ಮತ್ತು ಸಂತಾನಹರಣ ಎರಡರ ಬಗ್ಗೆಯೂ ಮಹಾನಗರ ಪಾಲಿಕೆಗಳು ಇಷ್ಟು ವರ್ಷ ಏನು ಮಾಡಿದ್ದವು ?’ ಎಂಬ ಪ್ರಮುಖ ಪ್ರಶ್ನೆಯನ್ನು ಕೇಳಿದರು. ಬೀದಿ ನಾಯಿಗಳ ಪರವಾಗಿದ್ದ ಅರ್ಜಿಗಳಲ್ಲಿ ಒಂದರ ನ್ಯಾಯವಾದಿಗಳು ಕಾಂಗ್ರೆಸ್ ನಾಯಕ ಮತ್ತು ನ್ಯಾಯವಾದಿಯಾದ ಕಪಿಲ್ ಸಿಬ್ಬಲ್ ಆಗಿದ್ದರು. ಇದರಿಂದ ಬೀದಿ ನಾಯಿಗಳ ಬಗ್ಗೆ ಯಾರಿಗೆ ಕಾಳಜಿಯಿದೆ ಮತ್ತು ಯಾರು ಮಾನವ ವಿರೋಧಿಗಳು ಎಂಬುದು ತಿಳಿಯುತ್ತದೆ.

ಭಯೋತ್ಪಾದನೆ ಸೇರಿದಂತೆ ಯಾವುದೇ ಸಮಸ್ಯೆಯು ಹೆಚ್ಚಾದಾಗ, ನಮ್ಮಲ್ಲಿ ಸಮರೋಪಾದಿಯಲ್ಲಿ ಜನಜಾಗೃತಿ ಮತ್ತು ಅದರ ವಿರುದ್ಧ ಪ್ರಯತ್ನಗಳು ಪ್ರಾರಂಭವಾಗುತ್ತವೆ; ಆದರೆ ಸಂಭವನೀಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆ ಚಿಕ್ಕದಿದ್ದಾಗಲೇ ಅದಕ್ಕೆ ಪರಿಹಾರ ಕಂಡುಕೊಂಡರೆ ಅದು ಹೆಚ್ಚಾಗುವುದಿಲ್ಲ. ನಾಯಿ ಕಚ್ಚುವಿಕೆಯ ಪ್ರಮಾಣವು ಭಯಾನಕ ಸ್ಥಿತಿಯಲ್ಲಿ ಹೆಚ್ಚಾದ ನಂತರವೇ ಆಡಳಿತ ಮತ್ತು ನ್ಯಾಯವ್ಯವಸ್ಥೆಗೆ ಈ ಸಮಸ್ಯೆಯ ಗಂಭೀರತೆಯು ಅರ್ಥವಾಯಿತು; ಆದರೆ ಪ್ರಾಣಿಪ್ರೇಮಿಗಳಿಗೆ ಇನ್ನೂ ಅದು ಅರ್ಥವಾಗಿಲ್ಲ. ಮುಂಬೈನಲ್ಲಿ ಮಹಾನಗರ ಪಾಲಿಕೆಯು ಯೋಜನಾಬದ್ಧವಾಗಿ ಕಾರ್ಯಕ್ರಮವನ್ನು ಜಾರಿಗೆ ತಂದ ಕಾರಣ, ಬೀದಿ ನಾಯಿಗಳ ಸಂಖ್ಯೆಯು ನಾಲ್ಕೂವರೆ ಸಾವಿರ ಕಡಿಮೆಯಾಗಿದೆ. ಗೋವಾದಲ್ಲಿಯೂ ಶೇ. ೭೦ ರಷ್ಟು ಲಸಿಕೀಕರಣ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ನಗರದಲ್ಲಿಯೂ ಸರಕಾರದ ಯೋಜನೆಯಿಂದ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಿದೆ. ಕರ್ನಾಟಕದ ಜನತಾ ದಳ (ಜಾತ್ಯತೀತ) ಪಕ್ಷದ ನಾಯಕ ಮತ್ತು ವಿಧಾನ ಪರಿಷತ್ ಶಾಸಕ ಎಸ್. ಎಲ್. ಭೋಜೆಗೌಡರು ೨,೮೦೦ ಬೀದಿ ನಾಯಿಗಳನ್ನು ಕೊಂದ ರಹಸ್ಯವನ್ನು ಬಹಿರಂಗಪಡಿಸಿದರು. ಈ ಸಂದರ್ಭದಲ್ಲಿ ಅವರು, ಶ್ರೀಮಂತರ ಮಕ್ಕಳು ವಾಹನಗಳಲ್ಲಿ ಪ್ರಯಾಣಿಸುತ್ತಾರೆ. ಬಡ ಮಕ್ಕಳು ನಡೆದುಕೊಂಡು ಶಾಲೆಗೆ ಹೋಗುವಾಗ ನಾಯಿಗಳು ಅವರ ಮೇಲೆ ದಾಳಿ ಮಾಡುತ್ತವೆ ಎಂದರು. ಸರ್ವೋಚ್ಚ ನ್ಯಾಯಾಲಯದ ಈ ಆದೇಶದಿಂದ ದೆಹಲಿಯ ಬೀದಿ ನಾಯಿಗಳ ಸಮಸ್ಯೆಯನ್ನು ಖಂಡಿತಾ ನಿಧಾನವಾಗಿ ನಿಯಂತ್ರಿಸಬಹುದು; ಆದರೆ ಅದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಈಗ ಇದನ್ನು ವಿರೋಧಿಸುವ ಮಾನವ ಪ್ರಾಣಿಗಳ ಬಗ್ಗೆಯೂ ಕೆಲವು ಆದೇಶಗಳನ್ನು ಹೊರಡಿಸುವುದು ಆವಶ್ಯಕವಾಗಿದೆ ಎಂದು ತಿಳಿಯುತ್ತದೆ.
ಪ್ರಾಣಿಪ್ರೇಮಿಗಳೋ ಅಥವಾ ಮಾನವದ್ವೇಷಿಗಳೋ ?
ದೆಹಲಿಯಲ್ಲಿ ಪ್ರಾಣಿಗಳಿಗಾಗಿ ಕೆಲಸ ಮಾಡುವ ೧೦ ದೊಡ್ಡ ಸಂಘಟನೆಗಳಿವೆ ಹಾಗೂ ವಿವಿಧ ಪ್ರಾಣಿಗಳ ಸಂತಾನಹರಣ ಮಾಡುವ ೨೦ ಕೇಂದ್ರಗಳೂ ಇವೆ. ಇವುಗಳಲ್ಲಿ ಯಾವ ಸಂಘಟನೆಯು ಬೀದಿ ನಾಯಿಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವವರ ಮೇಲೆ ಹಲ್ಲೆ ಮಾಡಿದೆ ಅಥವಾ ಈ ಎಲ್ಲಾ ಪ್ರಾಣಿಪ್ರೇಮಿಗಳು ಅದರ ಹೊರತಾದವರೇ ? ಎಂಬುದನ್ನು ನೋಡಬೇಕು. ಗಲಾಟೆ ಮಾಡುವ ಬಹುತೇಕ ಎಲ್ಲ ಪರಿಸರವಾದಿಗಳು ಸಾಮ್ಯವಾದಿಗಳು ಅಥವಾ ಪ್ರಗತಿಪರರಾಗಿ ಹೊರಹೊಮ್ಮುವಂತೆ, ಪ್ರಾಣಿಪ್ರೇಮದ ಹೆಸರಿನಲ್ಲಿ ಪ್ರಾಣಿಗಳ ಮೇಲೆ ಅನ್ಯಾಯವಾಗಿದೆ ಎಂದು ಗೋಳಾಡುವ ಇವರೂ ಸಾಮ್ಯವಾದಿಗಳು, ಅಂದರೆ ಹಿಂದೂ ವಿರೋಧಿಗಳು ಎಂಬುದೇ ಪ್ರಮುಖವಾಗಿ ಮುಂದೆ ಬರುತ್ತದೆ. ಅಂದರೆ, ನಾಯಿಗಳು ಚಿಕ್ಕ ಮಕ್ಕಳನ್ನು ಎಳೆದೊಯ್ದು ಕೊಂದರೆ, ರೇಬೀಸ್‌ನಿಂದ ಜನರು ಸತ್ತರೆ, ನಾಯಿ ಕಚ್ಚಿ ಜನರು ಭೀಕರ ಯಾತನೆ ಅನುಭವಿಸಿದರೆ, ಇದು ವಿಶೇಷವೇನಲ್ಲ; ಆದರೆ ‘ಬೀದಿ ನಾಯಿಗಳನ್ನು ರಕ್ಷಿಸಬೇಕು’ ಎಂಬುದೇ ಅವರ ಪ್ರಕಾರ ದಯೆ ತೋರಿಸುವುದು, ಎಂಬ ಅವರ ಅಪೇಕ್ಷೆಯಿದೆ. ಈ ದೇಶದ ಒಬ್ಬ ದೊಡ್ಡ ನಾಯಕ ಹೇಳುತ್ತಿದ್ದರು, ‘ಹಿಂದೂ ಮಹಿಳೆಯರ ಮೇಲೆ ಮತಾಂಧರು ಅತ್ಯಾಚಾರ ಮಾಡಿದರೂ, ಅವರು ಅದರ ವಿರುದ್ಧ ಧ್ವನಿ ಎತ್ತಬಾರದು. ಯಾರಾದರೂ ಒಂದು ಕೆನ್ನೆಗೆ ಹೊಡೆದರೆ, ನಾವು ಇನ್ನೊಂದು ಕೆನ್ನೆಯನ್ನು ಮುಂದೆ ಮಾಡಬೇಕು. ಎಲ್ಲವನ್ನೂ ಸಹಿಸಬೇಕು.’ ಈ ಬೋಧನೆಯಂತೆಯೇ ಜನರ ಮೇಲೆ ದಾಳಿ ಮಾಡುವ ನಾಯಿಗಳನ್ನು ಹಿಡಿಯುವವರ ಮೇಲೆ ದಾಳಿ ಮಾಡುವ ಕಪಟ ಜನರ ಪ್ರಾಣಿಪ್ರೇಮವಲ್ಲವೇ ? ಪ್ರಾಣಿಪ್ರೇಮದ ಹೆಸರಿನಲ್ಲಿ ಸಮಾಜಹಿತ, ನಾಗರಿಕರ ಸುರಕ್ಷತೆಯನ್ನು ನೇರವಾಗಿ ನಿರ್ಲಕ್ಷಿಸುವುದು ಯಾವ ಸಿದ್ಧಾಂತಕ್ಕೆ ಸರಿಹೊಂದುತ್ತದೆ ? ಇದು ಬಹಿರಂಗ ಸಮಾಜದ್ರೋಹವಲ್ಲವೇ ? ಮಾನವತಾವಾದಿಗಳು ಈ ಪ್ರಾಣಿಪ್ರೇಮಿಗಳ ಬಗ್ಗೆ ಏಕೆ ಏನನ್ನೂ ಮಾತನಾಡುವುದಿಲ್ಲ ?
ಇಲ್ಲಿನ ನ್ಯಾಯಾಂಗ ವ್ಯವಸ್ಥೆ, ಆಡಳಿತವು ಜನಹಿತಕ್ಕಾಗಿ ಏನನ್ನಾದರೂ ಮಾಡಲಿ, ಅದರ ವಿರುದ್ಧ ಏನಾದರೂ ಮಾಡುವ ಒಂದು ಸಮಾಜವಿರೋಧಿ ವರ್ಗ ಇಲ್ಲಿ ಅಸ್ತಿತ್ವದಲ್ಲಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸುವವರ ಮೇಲೆ ದಾಳಿ ಮಾಡುವುದು ಎಂದರೆ ನ್ಯಾಯವ್ಯವಸ್ಥೆಯ ವಿರುದ್ಧ ಹೋಗುವುದು ಎಂದು ಈ ದಾಳಿಕೋರರಿಗೆ ತಿಳಿಯದೆ ಇರಲಿಲ್ಲ; ಆದರೆ ನ್ಯಾಯಾಲಯದ ಆದೇಶದ ವಿರುದ್ಧ ಬಹಿರಂಗವಾಗಿ ವರ್ತಿಸುವ ಧೈರ್ಯ ಅವರಲ್ಲಿದೆ ಎಂಬುದೇ ನಿಜವಾದ ಗಂಭೀರ ವಿಷಯವಾಗಿದೆ. ಈ ಪ್ರಾಣಿಪ್ರೇಮಿಗಳು ಗೋಮಾಂಸ ಭಕ್ಷಕರ ಬಗ್ಗೆ ಒಂದು ಮಾತನ್ನೂ ಸಹ ಆಡುವುದಿಲ್ಲ, ಗೋಕಳ್ಳರಿಂದ ನಡೆಯುವ ಕ್ರೌರ್ಯದ ಬಗ್ಗೆ ಪ್ರಾಣಿಪ್ರೇಮಿಗಳು ಎಂದು ಆಂದೋಲನಗಳನ್ನು ಮಾಡಿದ್ದನ್ನು ಎಂದಾದರೂ ಕೇಳಿದ್ದೀರಾ ? ಆದರೆ ನ್ಯಾಯವ್ಯವಸ್ಥೆಯ ವಿರುದ್ಧ ಆಂದೋಲನ ಮಾಡಲು ಮಾತ್ರ ಇವರು ಧೈರ್ಯ ಮಾಡುತ್ತಾರೆ. ಕಪಟ ಪ್ರಾಣಿಪ್ರೇಮಿಗಳು ಬಯಸಿದಂತೆ ಅಲ್ಲ, ಸಮಾಜದ ಹಿತಕ್ಕಾಗಿಯೇ ಕಾನೂನು ನಡೆಯುತ್ತದೆ ಎಂಬುದನ್ನು ಅವರಿಗೆ ಅರ್ಥಮಾಡಿಸಲು, ಅವರ ಪ್ರೀತಿಯ ಶ್ವಾನಗಳೊಂದಿಗೆ ಅವರನ್ನು ಸಹ ಅವರ ವಾಹನದಲ್ಲಿ ಕೂಡಿಹಾಕಿ ಸಮಾಜದಿಂದ ದೂರ ಕೊಂಡೊಯ್ಯಬೇಕು !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !