ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರು
|
|
|
ಪುಣೆ, ಆಗಸ್ಟ್ ೨೩ (ವಾರ್ತೆ) – ಸನಾತನ ಸಂಸ್ಥೆಯ ಸಾಧಕರಾದ ಶ್ರೀ. ರವೀಂದ್ರ ಗೊಂದಳೆಕರ್ (೮೦ ವರ್ಷ) ಅವರು ಸನಾತನ ಸಂಸ್ಥೆಯ ೧೩೪ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರೇ, ಸಾಧಕಿ ಶ್ರೀಮತಿ ವರ್ಷಾ ಭಿಡೆ (೭೩ ವರ್ಷ) ಅವರು ಸನಾತನ ಸಂಸ್ಥೆಯ ೧೩೫ನೇ ವ್ಯಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು ಎಂದು ಪುಣೆಯಲ್ಲಿ ನಡೆದ ಆನಂದಮಯ ಸಮಾರಂಭವೊಂದರಲ್ಲಿ ಘೋಷಿಸಲಾಯಿತು. ಇದೇ ಸಮಯದಲ್ಲಿ, ಹಿಂದುತ್ವನಿಷ್ಠ ಡಾ. ನೀಲೇಶ ಲೋಣಕರ್ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಕೂಡ ಘೋಷಿಸಲಾಯಿತು. ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಸ್ವಾತಿ ಖಾಡ್ಯೆ ಅವರು ಪುಣೆಯ ಸಾತಾರಾ ರಸ್ತೆಯಲ್ಲಿ ನಡೆದ ಅನೌಪಚಾರಿಕ ಸಮಾರಂಭದಲ್ಲಿ ಈ ಆನಂದ ವಾರ್ತೆಯನ್ನು ಎಲ್ಲರಿಗೂ ನೀಡಿದರು.

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂತ ಪೂ. (ಸೌ.) ಮನೀಷಾ ಪಾಠಕ್ ಹಾಗೂ ಪೂ. ರವೀಂದ್ರ ಗೊಂದಳೆಕರ್, ಪೂ. ಶ್ರೀಮತಿ ವರ್ಷಾ ಭಿಡೆ ಮತ್ತು ಡಾ. ನೀಲೇಶ ಲೋಣಕರ್ ಅವರ ಕುಟುಂಬ ಸದಸ್ಯರು ಹಾಗೂ ಕೆಲವು ಸಾಧಕರು ಉಪಸ್ಥಿತರಿದ್ದರು. ಈ ಆನಂದ ವಾರ್ತೆ ತಿಳಿದ ನಂತರ ಎಲ್ಲ ಸಾಧಕರಿಗೂ ಭಾವಜಾಗೃತಿ ಉಂಟಾಯಿತು. ಈ ಸಮಾರಂಭದ ಮೂಲಕ ಗಣೇಶನು ಗಣೇಶ ಚತುರ್ಥಿಯ ಕೃಪೆಯನ್ನೇ ನೀಡಿದ್ದಾನೆ ಎಂದು ಎಲ್ಲ ಸಾಧಕರು ಅನುಭವಿಸಿದರು.


ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !