
ಒಂದು ಕುಟುಂಬ ಇನ್ನೊಂದು ಕುಟುಂಬದ ಮನೆಗೆ ಹೋಗಿ ಎರಡು ದಿನ ಉಳಿದು, ಒಬ್ಬರಿಗೊಬ್ಬರ ಸುಖ-ದುಃಖಗಳಲ್ಲಿ ಭಾಗಿಯಾಗುವುದು ಈಗ ಅಪರೂಪವಾಗಿದೆ. ಈಗ ಯಾರಾದರೂ ಅತಿಥಿಯಾಗಿ ಬಂದು ಎರಡು ದಿನ ಉಳಿದುಕೊಳ್ಳುವ ದೃಶ್ಯವೂ ಕಾಣಿಸುವುದಿಲ್ಲ; ಏಕೆಂದರೆ ಮನೆಯಲ್ಲಿ ಅವರೊಂದಿಗೆ ಮಾತನಾಡಲು, ಅವರ ಆತಿಥ್ಯ ಮಾಡಲು ಯಾರಿಗೂ ಸಮಯವಿರುವುದಿಲ್ಲ. ಕುಟುಂಬಗಳು ಚಿಕ್ಕದಾಗಿವೆ. ಸಂಬಂಧಗಳು ಕೇವಲ ಮುರಿದುಬಿದ್ದಿಲ್ಲ, ಬದಲಿಗೆ ಕಣ್ಮರೆಯಾಗುತ್ತಿವೆ. ಹಿಂದೆ, ಅವಿಭಕ್ತ ಕುಟುಂಬಗಳಲ್ಲಿ ಮನೆ ಜನರಿಂದ ತುಂಬಿರುತ್ತಿತ್ತು. ಅತಿಥಿಗಳು ಬಂದರೆ, ೩-೪ ದಿನ ಅವರು ಸಂತೋಷದಿಂದ ಉಳಿದುಕೊಳ್ಳುತ್ತಿದ್ದರು, ಅವರೊಂದಿಗೆ ಮಾತುಕತೆ ನಡೆಯುತ್ತಿತ್ತು. ಹೋಗುವ ನೆಂಟರನ್ನು ಬಸ್ ನಿಲ್ದಾಣಕ್ಕೆ ಬಿಡಲು ಹೋಗುತ್ತಿದ್ದರು. ನೆಂಟರು ಹೋಗುವಾಗ ಕೈ ಮೇಲೆ ಮಾಡಿದರೆ ಸಾಕು ಕಣ್ಣುಗಳು ತುಂಬಿಬರುತ್ತಿದ್ದವು.

ಈಗ ಪ್ರತಿಯೊಂದು ಮನೆಯಲ್ಲಿ ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ. ಇವರಿಗೆ ಅಣ್ಣ-ತಂಗಿ ಇಲ್ಲದಿರುವುದರಿಂದ ಚಿಕ್ಕಪ್ಪ-ಚಿಕ್ಕಮ್ಮನೆಂದು ಯಾರನ್ನು ಕರೆಯಬೇಕು ? ತಾಯಿಗಿಂತ ಚಿಕ್ಕಮ್ಮನ ಪ್ರೀತಿ ಮತ್ತು ತಂದೆಗಿಂತ ಚಿಕ್ಕಪ್ಪನ ಪ್ರೀತಿ ವಿಭಿನ್ನವಾಗಿರುತ್ತದೆ. ಮಕ್ಕಳು ಒಬ್ಬಂಟಿಯಾಗುತ್ತಿ ದ್ದಾರೆ. ಮನೆಯಲ್ಲಿ ಅಜ್ಜಿ-ಅಜ್ಜ ಇರುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಮೊಮ್ಮಗನ ಮೊದಲನೇ ಸ್ನೇಹಿತ ಅಜ್ಜನಾದರೆ, ಅಜ್ಜಿಯು ಮೊಮ್ಮಗಳಿಗೆ ಮೊದಲನೇ ಸ್ನೇಹಿತೆಯಾಗಿರುತ್ತಾಳೆ. ಅವರಲ್ಲಿನ ಪ್ರಶ್ನೆಗಳಿಂದಲೇ ಆ ಬಾಲಕರ ಜೀವನ ರೂಪಗೊಳ್ಳುತ್ತಿತ್ತು. ನಿಜವಾದ ಸಂಸ್ಕಾರಗಳು ಅದೃಷ್ಟವಂತ ಮಕ್ಕಳಿಗೆ ದೊರೆಯುತ್ತಿದ್ದವು. ‘ಮೊಮ್ಮಗಳು ಅಜ್ಜಿಯ ಕೈ ಹಿಡಿದು ದೇವಸ್ಥಾನಕ್ಕೆ ಹೋಗುತ್ತಿದ್ದಳು ಮತ್ತು ಮನಸ್ಸಿನ ಮೇಲೆ ಆಧ್ಯಾತ್ಮಿಕ ಸಂಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದಳು, ಮೊಮ್ಮಗನು ಅಜ್ಜನೊಂದಿಗೆ ತೋಟದಲ್ಲಿ ಸುತ್ತಾಡುತ್ತ ಚಿಟ್ಟೆಗಳ ಹಿಂದೆ ಓಡುವ ಆನಂದವನ್ನು ಮನಸಾರೆ ಅನುಭವಿಸುತ್ತಿದ್ದನು’, ಈ ದೃಶ್ಯವು ಈಗ ಕಾಣಿಸುವುದಿಲ್ಲ. ಹಿಂದಿನ ಜನರು ಶಿಕ್ಷಣ ಪಡೆಯದಿದ್ದರೂ; ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗುತ್ತಿದ್ದರು. ಹೊಲದಲ್ಲಿ ಬೆಳೆದ ಧಾನ್ಯವನ್ನು ಮೊದಲು ನೌಕರಿ ಮಾಡುವ ಸಹೋದರನಿಗೆ ನಗರಕ್ಕೆ ಕಳುಹಿಸಲಾಗುತ್ತಿತ್ತು ಮತ್ತು ಅವನು ಹೊಲದಲ್ಲಿ ಬಾವಿಯನ್ನು ತೋಡಿಸಿ ಅದರ ಮೇಲೆ ಪಂಪ್‌ನ್ನು ಕೂರಿಸಿ ಕೊಡುವುದು, ನೀರಿನ ಪೈಪ್‌ಲೈನ್ ಹಾಕಿಸುವುದು, ಹೊಲದಲ್ಲಿ ದುಡಿಯುವ ಸಹೋದರನ ಮಕ್ಕಳ ಶಿಕ್ಷಣ ಮತ್ತು ಹೆಣ್ಣುಮಕ್ಕಳ ಮದುವೆಗೆ ಸಹಾಯ ಮಾಡುವಂತಹ ಜವಾಬ್ದಾರಿಯನ್ನು ಆನಂದದಿಂದ ನಿರ್ವಹಿಸಿ ಒಬ್ಬರಿಗೊಬ್ಬರು ಸುಖವನ್ನು ಹಂಚಿಕೊಳ್ಳುತ್ತಿದ್ದರು. ಈಗಿನ ಜನರಲ್ಲಿ ಭಾವನೆಯೇ ಇರುವುದಿಲ್ಲ. ಸಹೋದರರ ನಡುವೆ ಬಾಂಧವ್ಯ ಇಲ್ಲ.
ಭೂಮಿ ಮತ್ತು ಮನೆಯ ಪಾಲುದಾರಿಕೆಯಿಂದ ಜಗಳಗಳು ಆರಂಭ ವಾಗುತ್ತಿವೆ. ಪ್ರೀತಿ ಬತ್ತಿಹೋಗಿದೆ. ತ್ಯಾಗದ ಭಾವನೆ ಮಾಯವಾಗಿದೆ. ಪ್ರತಿಯೊಬ್ಬರೂ ಸ್ವಾರ್ಥತನದಿಂದ ಕುರುಡಾಗಿದ್ದಾರೆ. ಹಣವನ್ನು ಗಳಿಸುವ ದುರಾಸೆಯಿಂದ ಸಂಬಂಧಗಳು ದೂರವಾಗುತ್ತಿವೆ. ಹಣವನ್ನು ಗಳಿಸಬೇಕು; ಆದರೆ ಅದನ್ನು ಸಂಬಂಧಿಕರ ಅಗತ್ಯಕ್ಕನುಸಾರ ಉಪಯೋಗಿಸಬೇಕು. ಪ್ರೀತಿಯಿಂದ ಮಾತನಾಡಿ ಸಂಬಂಧವನ್ನು ಉಳಿಸಿಕೊಳ್ಳದಿದ್ದರೆ ನಾವು ಮನುಷ್ಯರೆಂದು ಬದುಕಲು ಅರ್ಹರಾಗಿದ್ದೇವೆಯೇ ? ಸಂಬಂಧಿಕರಲ್ಲಿನ ಪ್ರೀತಿ ಮತ್ತು ವಾತ್ಸಲ್ಯ ಉಳಿಸಿಕೊಳ್ಳಬೇಕು. ಪರಸ್ಪರರ ಸುಖ-ದುಃಖದಲ್ಲಿ ಭಾಗವಹಿಸುವುದೂ ಈಗ ಮೇಲ್ನೋಟಕ್ಕೆ ಆಗಿದೆ. ಸ್ಮಶಾನದಲ್ಲಿ ಶವಸಂಸ್ಕಾರ ನಡೆಯುತ್ತಿರುವಾಗಲೂ ಸಂಬಂದಿಕರು ಮತ್ತು ಸ್ನೇಹಿತರು ಸಂಚಾರವಾಣಿಯನ್ನು ನೋಡುವುದರಲ್ಲಿ ನಿರತರಾಗಿರುತ್ತಾರೆ. ಕಲಿಯುಗದ ಪ್ರಭಾವದಿಂದ ಕಾಣುತ್ತಿರುವ ಈ ಚಿತ್ರಣವನ್ನು ನಾವೇ ದೂರಗೊಳಿಸಬೇಕು !
– ಶ್ರೀ. ಅಶೋಕ ಲಿಮಕರ, ಸನಾತನ ಆಶ್ರಮ, ದೇವದ, ಪನವೇಲ್.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು