
ನೈಜೀರಿಯಾ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿನ ದೇಶವಾಗಿದೆ. ಈಗ ನೈಜೀರಿಯಾದಲ್ಲಿ ಅನೇಕ ಸಂಘರ್ಷಗಳು ನಡೆಯುತ್ತಿವೆ, ಅವುಗಳಲ್ಲಿ ಧಾರ್ಮಿಕ, ಜನಾಂಗೀಯ ಮತ್ತು ಭೂಮಿಗೆ ಸಂಬಂಧಿಸಿದ ಸಂಘರ್ಷಗಳು ಸೇರಿವೆ. ‘ಬೊಕೊ ಹರಾಮ್’ನಂತಹ ಭಯೋತ್ಪಾದಕ ಗುಂಪುಗಳಿಂದಾಗುವ ದಾಳಿಗಳು ಮತ್ತು ಫುಲಾನಿ ಕುರುಬರು (ಮುಸಲ್ಮಾನರು) ಹಾಗೂ ಹೌಸಾ ರೈತರ (ಕ್ರೈಸ್ತರು) ನಡುವಿನ ವಿವಾದಗಳು ಪ್ರಮುಖವಾಗಿವೆ. ಇದರ ಜೊತೆಗೆ, ರಾಜಕೀಯ ಅಸ್ಥಿರತೆ ಮತ್ತು ಸಂಪನ್ಮೂಲಗಳಿಗಾಗಿ ನಡೆಯುವ ಸಂಘರ್ಷಗಳಿಂದಾಗಿ ದೇಶದಲ್ಲಿ ಸಾಮಾಜಿಕ ಮತ್ತು ರಾಜಕೀಯ ಅಶಾಂತಿ ಹೆಚ್ಚಾಗಿದೆ. ನೈಜೀರಿಯಾದಲ್ಲಿನ ಧಾರ್ಮಿಕ ಸಂಘರ್ಷವು ಒಂದು ಅತ್ಯಂತ ಜಟಿಲ ಮತ್ತು ದೀರ್ಘಕಾಲೀನ ವಿಷಯವಾಗಿದೆ. ಇದು ಕೇವಲ ‘ಬೊಕೊ ಹರಾಮ್’ ಭಯೋತ್ಪಾದಕ ಸಂಘಟನೆಗಷ್ಟೇ ಸೀಮಿತವಾಗಿಲ್ಲ, ಜೊತೆಗೆ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿನ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಉದ್ವಿಗ್ನತೆಗಳ ಸಂಕೇತವಾಗಿದೆ.

ಮೇಲಿನ ಪಟ್ಟಿ ಅತ್ಯಲ್ಪವಾಗಿದೆ. ೧೯೬೦ ರ ದಶಕದಿಂದಲೂ ಅಲ್ಲಿ ಅನೇಕ ಗುಂಪುಗಳ ನಡುವೆ ಮೇಲಿಂದ ಮೇಲೆ ಹಿಂಸಾತ್ಮಕ ಸಂಘರ್ಷಗಳು ನಡೆದಿವೆ. ಅದರಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ.

೧. ನೈಜೀರಿಯಾದ ಧಾರ್ಮಿಕ ರಚನೆ
ಉತ್ತರ ನೈಜೀರಿಯಾವು ಮುಖ್ಯ ವಾಗಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾಗಿದೆ. ಇಲ್ಲಿ ಶರಿಯತ್ ಕಾನೂನು ಜಾರಿಯಲ್ಲಿದೆ. ದಕ್ಷಿಣ ನೈಜೀರಿಯಾ ಕ್ರೈಸ್ತ ಬಹುಸಂಖ್ಯಾತ ಪ್ರದೇಶವಾಗಿದೆ. ನೈಜೀರಿಯಾದ ಮಧ್ಯಭಾಗವು ಎರಡೂ ಧರ್ಮಗಳ ಗುಂಪುಗಳ ಸಾಮಾನ್ಯ ಭಾಗವಾಗಿದೆ; ಆದರೆ ಇದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ನಿರಂತರವಾಗಿ ಸಂಘರ್ಷಗಳು ನಡೆಯುತ್ತವೆ, ಅಂದರೆ ಇಲ್ಲಿ ಮುಸಲ್ಮಾನರು ಮತ್ತು ಕ್ರೈಸ್ತರು ಸಮಬಲರಾಗಿರುವುದರಿಂದ ಅವರ ನಡುವೆ ಪದೇ ಪದೇ ಹಿಂಸಾತ್ಮಕ ಸಂಘರ್ಷಗಳು ನಡೆಯುತ್ತವೆ. ಮುಸಲ್ಮಾನ ಮತ್ತು ಕ್ರೈಸ್ತ ಸಮುದಾಯಗಳು ಪರಸ್ಪರ ದಾಳಿಗಳನ್ನು ನಡೆಸಿದ ನಂತರ, ಅವರ ಇತರ ಗುಂಪುಗಳು ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತವೆ. ಇದರಿಂದ ಹಿಂಸಾತ್ಮಕ ಘಟನೆಗಳು ಸರಪಳಿಯಂತೆ ಮುಂದುವರಿಯುತ್ತವೆ.
೨. ಧಾರ್ಮಿಕ ಸಂಘರ್ಷದ ಪ್ರಮುಖ ಪ್ರಕಾರಗಳು
ಅ. ‘ಬೊಕೊ ಹರಾಮ್’ನ ಇಸ್ಲಾಮಿಕ್ ಭಯೋತ್ಪಾದನೆ : ‘ಬೊಕೊ ಹರಾಮ್’ ಎಂಬ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯು ಮುಖ್ಯವಾಗಿ ಕ್ರೈಸ್ತರ ಮೇಲೆ ದಾಳಿ ಮಾಡುತ್ತದೆ. ಇದರಲ್ಲಿ ಚರ್ಚ್‌ಗಳನ್ನು ಸುಡುವುದು, ಕ್ರೈಸ್ತ ವಿದ್ಯಾರ್ಥಿನಿಯರ ಅಪಹರಣ ಮತ್ತು ಬಲವಂತದ ಮತಾಂತರ ಸೇರಿವೆ. ಮುಖ್ಯ ವಾಗಿ, ಕ್ರೈಸ್ತರು ಮತ್ತು ಕ್ರೈಸ್ತ ಶಾಲೆಗಳ ಮೇಲೆ ಗುಂಡಿನ ದಾಳಿ ನಡೆಸಿ ಅನೇಕರನ್ನು ಕೊಲ್ಲಲಾಗುತ್ತದೆ. ಕೆಲವೆಡೆ ಮುಸಲ್ಮಾನ ವಿರೋಧಿಗಳನ್ನೂ ಗುರಿಪಡಿಸಲಾಗುತ್ತದೆ; ಏಕೆಂದರೆ ‘ಬೊಕೊ ಹರಾಮ್’ ಅವರನ್ನು ‘ಅಯೋಗ್ಯರು’ ಎಂದು ಭಾವಿಸುತ್ತದೆ.
ಆ. ಫುಲಾನಿ ಗೊಲ್ಲರ ವಸತಿ ಮತ್ತು ರೈತರ ಸಂಘರ್ಷ : ಪ್ರಮುಖ ವಾಗಿ ಫುಲಾನಿ ಮುಸಲ್ಮಾನ ಗೊಲ್ಲ/ಕುರುಬ ಸಮುದಾಯ ಮತ್ತು ಕ್ರೈಸ್ತ ರೈತರ ನಡುವೆ ಸಂಘರ್ಷಗಳಾಗುತ್ತವೆ. ಈ ಸಂಘರ್ಷಗಳು ಧಾರ್ಮಿಕವಾಗಿ ಕಾಣಿಸಿದರೂ, ಅವುಗಳ ಹಿಂದೆ ಭೂ ಮಾಲೀಕತ್ವ, ಜಲಮೂಲಗಳು ಮತ್ತು ವಲಸೆಯ ವಿವಾದಗಳಿರುತ್ತವೆ ಅನೇಕ ವರ್ಷಗಳಿಂದ ಭೂವಿವಾದಗಳಿಂದ ದೊಡ್ಡಪ್ರಮಾಣದಲ್ಲಿ ಹಿಂಸಾಚಾರ ಮತ್ತು ಜೀವಹಾನಿ ಸಂಭವಿಸಿದೆ. ೨೦೦೯ ರಿಂದ ೨೦೨೪ ರ ವರೆಗೆ ೯೦ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ೩೦ ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿ ದ್ದಾರೆ. ಈ ಅಂಕಿಅಂಶಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.
೩. ರಾಜಕೀಯ ಮತ್ತು ಧಾರ್ಮಿಕ ರಾಜಕಾರಣ
ಅನೇಕ ಬಾರಿ ರಾಜಕೀಯ ಅಧಿಕಾರವನ್ನು ಪಡೆಯಲು ಅಥವಾ ಉಳಿಸಿಕೊಳ್ಳಲು ಧರ್ಮವನ್ನು ಬಳಸಲಾಗುತ್ತದೆ ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಪ್ರಚೋದಿಸುವುದನ್ನು ಒಂದು ರಣತಂತ್ರವೆಂದು ಬಳಸಲಾಗುತ್ತದೆ. ನೈಜೀರಿಯಾದಲ್ಲಿನ ಧಾರ್ಮಿಕ ಸಂಘರ್ಷಗಳು ಕೇವಲ ನಂಬಿಕೆ ಅಥವಾ ಧರ್ಮದ ಭೇದಭಾವದಿಂದ ಮಾತ್ರ ಆಗುವುದಿಲ್ಲ. ಅಧಿಕಾರಕ್ಕಾಗಿ ಹೋರಾಟ, ಸಾಮಾಜಿಕ ಅನ್ಯಾಯ, ಭೂಮಿ ಹಂಚಿಕೆ ಮತ್ತು ಸಾಂಸ್ಕೃತಿಕ ವೈವಿಧ್ಯ ಮುಂತಾದ ಅನೇಕ ಅಂಶಗಳು ಅದರಲ್ಲಿ ಸೇರಿದೆ.
೪. ಸಂಘರ್ಷದ ಕಾರಣಗಳು
ಅ. ನೈಜೀರಿಯಾ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಸಂಪನ್ಮೂಲಗಳ ಮೇಲೆ ನಿಯಂತ್ರಣ ಪಡೆಯಲು ಮತ್ತು ಅವುಗಳ ಬಳಕೆಯ ಬಗ್ಗೆ ಸಂಘರ್ಷಗಳು ನಡೆಯುತ್ತವೆ.
ಆ. ನೈಜೀರಿಯಾದಲ್ಲಿ ರಾಜಕೀಯ ಅಸ್ಥಿರತೆಯಿದ್ದು ಸಾಮಾಜಿಕ ಮತ್ತು ಆರ್ಥಿಕ ತೊಂದರೆಗಳು ಹೆಚ್ಚಾಗಿದ್ದು, ಅದರ ಪರಿಣಾಮದಿಂದ ಸಂಘರ್ಷಗಳು ಹೆಚ್ಚಾಗಿವೆ.
ಇ. ಬಡತನ ಮತ್ತು ನಿರುದ್ಯೋಗದಿಂದಾಗಿ ಯುವಕರಲ್ಲಿ ಅಸಮಾಧಾನ ಹೆಚ್ಚಾಗಿದ್ದು ಅವರು ಸಂಘರ್ಷದ ಹಾದಿ ಹಿಡಿದಿದ್ದಾರೆ.
ಈ. ಸಂಘರ್ಷದಿಂದಾಗಿ ನೈಜೀರಿಯಾದಲ್ಲಿ ಸಾಮಾಜಿಕ ಮತ್ತು ರಾಜಕೀಯ ಅಸ್ಥಿರತೆ ಹೆಚ್ಚಾಗಿದೆ.
ಉ. ಸಂಘರ್ಷದಿಂದ ದೇಶದ ಆರ್ಥಿಕತೆಗೆ ಭಾರಿ ಹಾನಿಯಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಯ ಘಟನೆಗಳು ನಡೆದಿವೆ. ತಾತ್ಪರ್ಯವೆಂದರೆ, ನೈಜೀರಿಯಾದಲ್ಲಿ ಅನೇಕ ಸಣ್ಣ-ದೊಡ್ಡ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದರೂ, ಪ್ರಮುಖವಾಗಿ ಮುಸಲ್ಮಾನ ಫುಲಾನಿ ಕುರುಬರ ಗುಂಪುಗಳು ಮತ್ತು ಕ್ರೈಸ್ತ ರೈತರ ನಡುವೆ ದಾಳಿಗಳು ನಡೆಯುತ್ತಿವೆ. ಮುಸಲ್ಮಾನರ ಮೇಲೆ ದಾಳಿಗಳಾದಾಗ ಹೋರಾಡಲು ಕೆಲವು ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಂಡಿರುವುದರಿಂದ ಕ್ರೈಸ್ತರು ಅಲ್ಲಿ ಸೋಲನ್ನು ಅನುಭವಿಸುತ್ತಿದ್ದಾರೆ. ಕ್ರೈಸ್ತ ರೈತರೂ ಶಸ್ತ್ರಸಜ್ಜಿತರಾಗಿ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದರೂ, ಕುರುಬರ ಗುಂಪುಗಳು ಸಂಚಾರಿಗಳಾಗಿರುವುದರಿಂದ, ಅವರು ಯಾವಾಗ ಯಾವ ಗ್ರಾಮದ ಮೇಲೆ ದಾಳಿ ಮಾಡುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ, ಅಂದರೆ ಸಂಘರ್ಷಕ್ಕೆ ಭೂಮಿಯ ಮಾಲೀಕತ್ವ, ಕೃಷಿ ಮಾಲೀಕತ್ವದಂತಹ ವಿವಿಧ ಕಾರಣಗಳಿದ್ದರೂ, ಈಗ ಸಂಘರ್ಷವು ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡಿದ್ದು, ಇದು ಎರಡು ಧರ್ಮಗಳ ನಡುವಿನ ಸಂಘರ್ಷವಾಗಿದೆ. ಇದೇ ಕಾರಣಕ್ಕಾಗಿ, ನೈಜೀರಿಯಾದ ನಾಗರಿಕರನ್ನು ಕ್ರೂರವಾಗಿ ಕೊಲ್ಲುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನು ನೋಡಬಹುದು.
೫. ಪರಿಹಾರೋಪಾಯಗಳು ಮತ್ತು ಅಡೆತಡೆಗಳು
ಸರಕಾರಿ ವ್ಯವಸ್ಥೆಗಳಲ್ಲಿನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ನ್ಯಾಯ ಪಡೆಯುವುದು ಕಷ್ಟವಾಗುತ್ತದೆ. ಸಮಾಜದ ಧಾರ್ಮಿಕ ಮುಖಂಡರು ಮತ್ತು ಸ್ವಯಂಸೇವಾ ಸಂಸ್ಥೆಗಳು ಸಂಘರ್ಷ ಗಳನ್ನು ನಿವಾರಿಸುವ ಕೆಲಸವನ್ನು ಮಾಡುತ್ತಿದ್ದರೂ, ಬಡತನ, ನಿರುದ್ಯೋಗ ಮತ್ತು ಅನಕ್ಷರತೆ ಇವು ಸಂಘರ್ಷಗಳ ಮೂಲದಲ್ಲಿವೆ. ಇದಕ್ಕಾಗಿ ವಿವಿಧ ಗುಂಪುಗಳ ನಡುವೆ ಸಂವಾದ ಮತ್ತು ಸಮಾಲೋಚನಾ ಪ್ರಕ್ರಿಯೆಗಳನ್ನು ನಡೆಸುವುದು ಆವಶ್ಯಕವಾಗಿದೆ. ಭದ್ರತಾ ಪಡೆಗಳನ್ನು ಬಲಪಡಿಸುವುದು ಮತ್ತು ಭಯೋತ್ಪಾದನೆ ಯನ್ನು ಎದುರಿಸಲು ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ.
೬. ‘ಬೊಕೊ ಹರಾಮ್’ದ ಹಿಂಸಾಚಾರದ ಸ್ವರೂಪ
ಅ. ‘ಬೊಕೊ ಹರಾಮ್’ ನೈಜೀರಿಯಾ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ (ಉದಾಹರಣೆಗೆ ಚಾಡ್, ನೈಜರ್ ಮತ್ತು ಕ್ಯಾಮೆರೂನ್) ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರವನ್ನು ನಡೆಸಿದೆ.
ಆ. ‘ಬೊಕೊ ಹರಾಮ್’ ಇಲ್ಲಿಯವರೆಗೆ ಸಾವಿರಾರು ಕ್ರೈಸ್ತರನ್ನು ಕೊಂದುಹಾಕಿದೆ, ಇದರಲ್ಲಿ ಸಾಮಾನ್ಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಅವರು ಅನೇಕ ಗ್ರಾಮಗಳ ಮೇಲೆ ದಾಳಿ ಮಾಡಿ ಜನರನ್ನು ಕೊಂದಿದ್ದಾರೆ, ಮನೆಗಳು ಮತ್ತು ಪೂಜಾ ಸ್ಥಳಗಳಿಗೆ ಬೆಂಕಿ ಹಚ್ಚಿದ್ದಾರೆ.
ಇ. ಅಪಹರಿಸಿದ ಮಹಿಳೆಯರು ಮತ್ತು ಹುಡುಗಿಯರನ್ನು ಗುಲಾಮರೆಂದು ಅಥವಾ ಆತ್ಮಹತ್ಯಾ ದಾಳಿಗಳಿಗಾಗಿ ಬಳಸಲಾಗುತ್ತದೆ.
ಈ. ‘ಬೊಕೊ ಹರಾಮ್’ದ ಒಂದು ಗುಂಪು ಆತ್ಮಹತ್ಯಾ ದಾಳಿಗಳನ್ನು ನಡೆಸುತ್ತದೆ, ಇದರಲ್ಲಿ ಸಣ್ಣ ಮಕ್ಕಳೂ ಇರುತ್ತಾರೆ.
ಉ. ಭದ್ರತಾ ಪಡೆಗಳು ಮತ್ತು ಪೊಲೀಸ್ ಠಾಣೆಗಳ ಮೇಲೆ ‘ಬೊಕೊ ಹರಾಮ್’ ನಿಂದ ಮಾರಣಾಂತಿಕ ದಾಳಿಗಳನ್ನು ನಡೆಸಲಾಗುತ್ತದೆ.
೭. ‘ಬೊಕೊ ಹರಾಮ್’ನ ದಾಳಿಗಳ ಪರಿಣಾಮ
ಈ ಸಂಘಟನೆಯ ದಾಳಿಗಳಿಂದ ಇಲ್ಲಿಯವರೆಗೆ ೩೫ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ೨೦ ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ನಿರಾಶ್ರಿತರಾಗಿದ್ದಾರೆ. ಇದರಿಂದ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಿಂಸಾಚಾರಕ್ಕೆ ಒಳಗಾದ ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಗಂಭೀರ ಮಾನಸಿಕ ಪರಿಣಾಮಗಳು ಆಗುತ್ತವೆ. ನಿರಂತರ ಭಯ, ಕೆಟ್ಟ ಕನಸುಗಳು, ಹಸಿವಿನ ಕೊರತೆ ಮತ್ತು ಅಧ್ಯಯನದಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗದಿರುವುದು ಇವುಗಳಂತಹ ಸಮಸ್ಯೆ ಗಳು ಅವರನ್ನು ಕಾಡುತ್ತವೆ. ಕೆಲವು ಮಕ್ಕಳಲ್ಲಿ ಆತ್ಮಹತ್ಯೆಯ ವಿಚಾರಗಳೂ ಕಂಡುಬಂದಿವೆ. ಶಾಲೆಗಳ ಮೇಲೆ ದಾಳಿ ಮಾಡಿದ್ದರಿಂದ ಮಕ್ಕಳ ಶಿಕ್ಷಣದಲ್ಲಿ ದೊಡ್ಡ ಅಡಚಣೆ ಉಂಟಾಗಿದೆ.
‘ಬೊಕೊ ಹರಾಮ್’ನ ದಾಳಿಗಳಿಂದ ಈ ಪ್ರದೇಶದ ಅಭಿವೃದ್ಧಿ ಕುಂಠಿತವಾಗಿದೆ. ನಿರಂತರ ಭಯೋತ್ಪಾದನೆಯಿಂದ ಕೃಷಿ, ವ್ಯಾಪಾರ ಮತ್ತು ಇತರ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ‘ಬೊಕೊ ಹರಾಮ್’ದಿಂದಾಗಿ ನೈಜೀರಿಯಾ ಮತ್ತು ನೆರೆಯ ದೇಶಗಳಲ್ಲಿ ದೊಡ್ಡ ಅಸುರಕ್ಷಿತತೆ ಮತ್ತು ರಾಜಕೀಯ ಅಸ್ಥಿರತೆ ಸೃಷ್ಟಿಯಾಗಿದೆ. ‘ಬೊಕೊ ಹರಾಮ್’ನ ಹಿಂಸಾಚಾರವು ಕೇವಲ ಸ್ಥಳೀಯ ಸಮಸ್ಯೆಯಾಗಿರದೇ ಇತರ ಭಯೋತ್ಪಾದಕ ಸಂಘಟನೆಗಳಂತೆ ಇದು ಒಂದು ಜಾಗತಿಕ ಕಾಳಜಿಯ ವಿಷಯ ವಾಗಿದೆ; ಏಕೆಂದರೆ ಇದು ಮಾನವೀಯ ಬಿಕ್ಕಟ್ಟು ಮತ್ತು ಪ್ರಾದೇಶಿಕ ಅಶಾಂತಿಯನ್ನು ಹೆಚ್ಚಿಸುತ್ತದೆ. ‘ಬೊಕೊ ಹರಾಮ್’ವನ್ನು ನಿಯಂತ್ರಿಸಲು ನೈಜೀರಿಯನ್ ಸೇನೆ ಮತ್ತು ಇತರ ಪ್ರಾದೇಶಿಕ ದೇಶಗಳ ಸೇನೆಗಳು ಪ್ರಯತ್ನಿಸುತ್ತಿವೆ; ಆದರೆ ಈ ಗುಂಪು ಇಂದಿಗೂ ಈ ಪ್ರದೇಶಕ್ಕೆ ಒಂದು ಗಂಭೀರ ಅಪಾಯವಾಗಿದೆ.
‘ಬೊಕೊ ಹರಾಮ್’ನ ಮಾಹಿತಿ
‘ಬೊಕೊ ಹರಾಮ್’ ನೈಜೀರಿಯಾದ ಒಂದು ಇಸ್ಲಾಮಿಕ್ ಭಯೋತ್ಪಾದಕ ಗುಂಪಾಗಿದ್ದು, ನೈಜೀರಿಯಾದಲ್ಲಿ ಇಸ್ಲಾಮಿಕ್ ಶರಿಯತ್ ಕಾನೂನನ್ನು ಜಾರಿಗೊಳಿಸುವುದು ಇದರ ಉದ್ದೇಶ ವಾಗಿದೆ. ಈ ಗುಂಪು ಕಳೆದ ೨ ದಶಕಗಳಲ್ಲಿ ಸಾವಿರಾರು ಜನರ ಪ್ರಾಣ ತೆಗೆದಿದೆ ಮತ್ತು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ‘ಬೊಕೊ ಹರಾಮ್’ಅನ್ನು ೨೦೦೨ ರಲ್ಲಿ ಮಹಮ್ಮದ್ ಯೂಸುಫ್‌ನು ಸ್ಥಾಪಿಸಿದನು. ಈ ಸಂಘಟನೆಯ ಉದ್ದೇಶ ಪಾಶ್ಚಿಮಾತ್ಯ ಶಿಕ್ಷಣ ಮತ್ತು ಸಂಸ್ಕೃತಿಯನ್ನು ವಿರೋಧಿಸುವುದು. (‘ಬೊಕೊ ಹರಾಮ್’ ಎಂದರೆ ಪಾಶ್ಚಿಮಾತ್ಯ ಶಿಕ್ಷಣ ನಿಷಿದ್ಧವಾಗಿದೆ.)
ಮುಸಲ್ಮಾನರು ಮತ್ತು ಕ್ರೈಸ್ತರ ನಡುವಿನ ಹಿಂಸಾತ್ಮಕ ಸಂಘರ್ಷವು ೨೦೦೯ ರಲ್ಲಿ ಪೊಲೀಸರು ಮಹಮ್ಮದ್ ಯೂಸುಫ್‌ನನ್ನು ಕೊಂದ ನಂತರ ಪ್ರಾರಂಭವಾಯಿತು. ಆಗ ‘ಬೊಕೊ ಹರಾಮ್’ ಗುಂಪು ಹೆಚ್ಚು ಹಿಂಸಾತ್ಮಕವಾಯಿತು. ಯೂಸುಫ್‌ನ ಮರಣದ ನಂತರ ಅಬೂಬಕರ್ ಶೆಕೌ ‘ಬೊಕೊ ಹರಾಮ್’ದ ನಾಯಕತ್ವವನ್ನು ವಹಿಸಿಕೊಂಡನು. ೨೦೧೪ ರಲ್ಲಿ, ಈ ಸಂಘಟನೆಯು ಚಿಬೋಕ್‌ನಲ್ಲಿ ೨೭೬ ಕ್ರೈಸ್ತ ಶಾಲೆಯ ಹುಡುಗಿಯರನ್ನು ಅಪಹರಿಸಿತು. ಆದುದರಿಂದ ಆ ಬಗ್ಗೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಯಿತು. ಆಗ ಈ ಸಂಘಟನೆಯ ಹೆಸರು ಜಾಗತಿಕ ಮಟ್ಟದಲ್ಲಿ ಬೆಳಕಿಗೆ ಬಂದಿತು. ನೈಜೀರಿಯಾದಲ್ಲಿ ‘ಬೊಕೊ ಹರಾಮ್’ ಮತ್ತು ‘ಐ.ಎಸ್‌ಡಬ್ಲ್ಯು.ಎ.ಪಿ.’ (ಇಸ್ಲಾಮಿಕ್ ಸ್ಟೇಟ್ ವೆಸ್ಟ್ ಆಫ್ರಿಕಾ ಪ್ರೊವಿನ್ಸ್) ಎಂಬ ೨ ಭಯೋತ್ಪಾದಕ ಸಂಘಟನೆಗಳ ನಡುವೆಯೂ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷವು ಪ್ರಾಂತ್ಯ, ಭೂಪ್ರದೇಶಗಳ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತದೆ. ನೈಜೀರಿಯಾ ಸರಕಾರ ಮತ್ತು ಅಂತಾರಾಷ್ಟ್ರೀಯ ಸೇನಾಪಡೆಗಳು ಅನೇಕ ಬಾರಿ ಕಾರ್ಯಾಚರಣೆಗಳನ್ನು ನಡೆಸಿವೆ; ಆದರೆ ಎರಡೂ ಗುಂಪುಗಳು ಇನ್ನೂ ಸಕ್ರಿಯವಾಗಿವೆ.
ಶ್ರೀ ಗುರುಚರಣಾರ್ಪಣಮಸ್ತು
– ಶ್ರೀ ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೧೩.೭.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು