
೧. ಅಥರ್ವಶೀರ್ಷದ ಪಠಣದಿಂದ ಬುದ್ಧಿ ಮತ್ತು ಮನಸ್ಸು ಸ್ಥಿರವಾಗುತ್ತವೆ !
‘ಥರ್ವ’ ಅಂದರೆ ಅಲುಗಾಡುವ ಮತ್ತು ಅಥರ್ವ ಅಂದರೆ ‘ಅಲುಗಾಡದಿರುವ’ | ಸರಳ ಭಾಷೆಯಲ್ಲಿ ಹೇಳುವುದಾದರೆ ಅಥರ್ವಶೀರ್ಷವೆಂದರೆ ಸ್ಥಿರಬುದ್ಧಿ ಯಿರುವ ಮಸ್ತಕ ! ಅಥರ್ವಶೀರ್ಷ ವನ್ನು ಪಠಿಸಿದರೆ ಬುದ್ಧಿ ಮತ್ತು ಮನಸ್ಸು ಸ್ಥಿರವಾಗುತ್ತವೆ, ಎಂದು ಗಣೇಶನ ಆರಾಧಕರ ಶ್ರದ್ಧೆಯಾಗಿದೆ. ಸ್ಥಿರ ಮತ್ತು ದೃಢನಿಶ್ಚಯ ಬುದ್ಧಿಯಿಂದ ಮಾಡಿದ ಕೆಲಸ ಯಶಸ್ವಿಯಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ, ವ್ಯಕ್ತಿಯು ನಮ್ರನಾಗುತ್ತಾನೆ. ಅವನು ಅಡಚಣೆಗಳಲ್ಲಿಯೂ ಅವಕಾಶವನ್ನು ಕಂಡುಕೊಳ್ಳುತ್ತಾನೆ, ಎಂದು ಗಣೇಶನ ಆರಾಧಕರ ಶ್ರದ್ಧೆ ಇದೆ. ಜೀವನದಲ್ಲಿ ಯಶಸ್ವಿಯಾಗುವ ವ್ಯಕ್ತಿಗಳು ಯಾವಾಗಲೂ ಅಡಚಣೆಗಳಲ್ಲಿ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಜೀವನದಲ್ಲಿ ಯಾವಾಗಲೂ ವಿಫಲರಾಗುವ ವ್ಯಕ್ತಿಗಳು ಅವಕಾಶವಿದ್ದಾಗಲೂ ಅಡಚಣೆ ಯನ್ನು ಹೇಳುತ್ತಾರೆ.
೨. ಮನಸ್ಸು ಗಟ್ಟಿಯಾಗಿ ಸಂಕಟಗಳು ಬಂದರೂ ನಾವು ಅವುಗಳನ್ನು ಎದುರಿಸಬಹುದು !
ಅಥರ್ವಶೀರ್ಷದ ಪಠಣದಿಂದ ಮನಸ್ಸು ಏಕಾಗ್ರ ವಾಗುತ್ತದೆ. ಮನಸ್ಸಿನ ಶಕ್ತಿ ಹೆಚ್ಚಾಗುವುದು ನಮ್ಮ ಕೈಯಲ್ಲಿಯೇ ಇರುತ್ತದೆ. ಮನುಷ್ಯನ ಮನಸ್ಸು ವಿಚಿತ್ರವಾಗಿರುತ್ತದೆ. ದೇಹ ದೊಂದಿಗೆ ಮನಸ್ಸು ಬಲಿಷ್ಠವಾಗಿದ್ದರೆ, ನಾವು ಕಷ್ಟಗಳನ್ನು ಎದುರಿಸಬಹುದು. ಮನಸ್ಸು ಸ್ಥಿರವಾಗಿದ್ದರೆ ನಾವು ಅದನ್ನು ವರ್ತಮಾನಕಾಲದಲ್ಲಿಟ್ಟು ಕೆಲಸ ಮಾಡಬಹುದು. ಹೆಚ್ಚಿನ ಜನರ ಮನಸ್ಸು ವರ್ತಮಾನಕಾಲದಲ್ಲಿ ಇರುವುದಿಲ್ಲ. ದೇಹವು ವರ್ತಮಾನಕಾಲದಲ್ಲಿದ್ದರೂ, ಮನಸ್ಸು ಮಾತ್ರ ಭೂತಕಾಲದಲ್ಲಿ ಅಥವಾ ಭವಿಷ್ಯತ್ಕಾಲದಲ್ಲಿರುತ್ತದೆ. ಮನಸ್ಸು ಭೂತಕಾಲದಲ್ಲಿದ್ದರೆ, ದುಃಖದ ಘಟನೆಗಳು ನೆನಪಾ ಗುತ್ತವೆ ಮತ್ತು ಮನಸ್ಸು ಭವಿಷ್ಯತ್ಕಾಲದಲ್ಲಿದ್ದರೆ, ಚಿಂತೆಗಳು ಪೀಡಿಸುತ್ತವೆ. ಆದ್ದರಿಂದ ಬುದ್ಧಿ ಮತ್ತು ಮನಸ್ಸು ಸ್ಥಿರವಾಗಿರಬೇಕು. ಇದು ಅಥರ್ವಶೀರ್ಷದ ಪಠಣದಿಂದ ಸಾಧ್ಯವಾಗುತ್ತದೆ.
೩. ಅಥರ್ವಶೀರ್ಷದಲ್ಲಿರುವ ಗಣೇಶನೆಂದರೆ ಈ ಜಗತ್ತಿನ ನಿಸರ್ಗವೇ ಆಗಿದೆ !
ಅಥರ್ವಶೀರ್ಷದ ಪಠಣವನ್ನು ಒಂದು ಬಾರಿ, ೧೧ ಬಾರಿ, ೨೧ ಬಾರಿ ಅಥವಾ ೧ ಸಾವಿರ ಬಾರಿ ಮಾಡಲಾಗುತ್ತದೆ. ಒಮ್ಮೆಯಾದರೂ ಈ ಅನುಭವವನ್ನು ಪಡೆಯಿರಿ. ನೀವು ಭಕ್ತರಾಗಿದ್ದರೆ, ನಾನು ಹೇಳುವುದು ನಿಮಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಒಂದು ವೇಳೆ ನೀವು ಭಕ್ತರಲ್ಲದಿದ್ದರೆ ಮತ್ತು ಪ್ರತಿಯೊಂದು ವಿಷಯ ವೈಜ್ಞಾನಿಕ ದೃಷ್ಟಿಯಿಂದ ನೋಡುತ್ತಿದ್ದರೂ, ಅಥರ್ವಶೀರ್ಷವು ಖಂಡಿತವಾಗಿ ಇಷ್ಟವಾಗುವುದು; ಏಕೆಂದರೆ ಅದರಲ್ಲಿರುವ ಗಣೇಶನೆಂದರೆ ಈ ಜಗತ್ತಿನಲ್ಲಿನ ನಿಸರ್ಗವೇ ಆಗಿದೆ ! ‘ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಶಕ್ತಿಗಳೇ ಆಗಿವೆ’, ಎಂದು ಹೇಳಲಾಗಿದೆ. ‘ಈ ಪ್ರಕೃತಿ ಎಂದರೆ ಈಶ್ವರ’ ಎಂದು ಹೇಳಿದರೆ ನಿಮ್ಮ ವೈಜ್ಞಾನಿಕ ದೃಷ್ಟಿಕೋನಕ್ಕೆ ಅರ್ಥವಾಗುವುದು. ‘ಈ ಪ್ರಕೃತಿಯನ್ನು ನಾವು ರಕ್ಷಿಸಿದರೆ ಪ್ರಕೃತಿಯೂ ನಮ್ಮನ್ನು ರಕ್ಷಿಸುವುದು.
– ಶ್ರೀ. ಅನಿಲ ಅಚ್ಯುತ ಕಾಳೆ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?