ಶ್ರೀ ಗಣೇಶನ ೧೨ ಪ್ರಸಿದ್ಧ ಹೆಸರುಗಳ ವೈಶಿಷ್ಟ್ಯಗಳು !

‘ಸುಮುಖಶ್ರ್ಚೇಕದಂತಶ್ರ್ಚಯ ಕಪಿಲೋ ಗಜಕರ್ಣಕಃ | ಲಂಬೋದರಶ್ರ್ಚ ವಿಕಟೋ ವಿಘ್ನನಾಶೋ ಗಣಧಿಪಃ ||
ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನಃ | ದ್ವಾದಶೈತಾನಿ ನಾಮಾನಿ ಯ ಪಠೇಚ್ಛ್ಣುಯಾದಪಿ ||’
ಈ ಶ್ಲೋಕದಲ್ಲಿ ಶ್ರೀ ಗಣೇಶನ ೧೨ ಹೆಸರುಗಳು ಪ್ರಸಿದ್ಧವಾಗಿದ್ದು ಅದರಿಂದ ಶ್ರೀ ಗಣಪತಿಯ ವ್ಯಕ್ತಿತ್ವವು ಸ್ಪಷ್ಟವಾಗುತ್ತದೆ, ಅದನ್ನು ಇಲ್ಲಿ ಕೊಡಲಾಗಿದೆ.

೧. ಸುಮುಖ : ಈ ಹೆಸರಿನಲ್ಲಿ ಅವನ ಮುಖ ಸೌಂದರ್ಯದಿಂದ ಕೂಡಿದ್ದೂ ಅವನು ಎಲ್ಲ ಇಂದ್ರಿಯಗಳಲ್ಲಿ ಮುಖ್ಯನಾಗಿದ್ದಾನೆ.
೨. ಏಕದಂತ : ಏಕತ್ವವನ್ನು ತೋರಿಸುವವನು, ಭೇದಭಾವವಿಲ್ಲದವನು.
೩. ಕಪಿಲ : ‘ಕಪಿ’ ಅಂದರೆ ವಾನರರೂಪ. ಚಂಚಲ ಮನಸ್ಸಿನ ಮೇಲೆ ನಿಯಂತ್ರಣವನ್ನಿಡುವವನು.
೪. ಗಜಕರ್ಣ : ಗುಪ್ತವಾದ ವಿಷಯಗಳನ್ನೂ ತಿಳಿದುಕೊಳ್ಳುವವನು.
೫. ಲಂಬೋದರ : ತನ್ನ ಹೊಟ್ಟೆಯಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳುವವನು.
೬. ವಿಕಟ : ಶಕ್ತಿ, ಬುದ್ಧಿ ಮತ್ತು ಗುಣಗಳಿಂದ ಪ್ರಚಂಡವಾಗಿರುವವನು, ಅವನ ಮುಂದೆ ಎಲ್ಲರೂ ನತಮಸ್ತಕರಾಗುತ್ತಾರೆ.
೭. ವಿಘ್ನವಿನಾಶಕ : ಭಕ್ತರ ಸಂಕಟಗಳನ್ನು ನಾಶ ಮಾಡುವವನು.
೮. ವಿನಾಯಕ : ಯೋಗ್ಯ ನಾಯಕ. ಮುಂದಾಳತ್ವ ವಹಿಸುವವನು.
೯. ಧೂಮಕೇತು : ಎಲ್ಲಾ ಭ್ರಮೆ, ಕಲ್ಪನೆ ಮತ್ತು ಸಂಶಯ ನಾಶಕ.
೧೦. ಗಣಾಧ್ಯಕ್ಷ : ಎಲ್ಲ ಇಂದ್ರಿಯ ಮತ್ತು ದೇವರಲ್ಲಿ ಮುಖ್ಯನಾಗಿರುವವನು.
೧೧. ಭಾಲಚಂದ್ರ : ಮಸ್ತಕದಲ್ಲಿ ಚಂದ್ರನನ್ನು ಧರಿಸುವವನು, ಅಂದರೇ ಅವನ ಮಸ್ತಕವು ಶಾಂತ ಮತ್ತು ತಂಪಾಗಿರುವವನು.
೧೨. ಗಜಾನನ : ಅವನ ಮಸ್ತಕವು ಆನೆಯದ್ದಾಗಿದೆ, ಅಂದರೆ ಆನೆಯಂತೆ ಶಾಂತ, ಸೂಕ್ಷ್ಮ ಮತ್ತು ದೂರದೃಷ್ಟಿ ಇರುವವನು.

(ಕೃಪೆ : ‘ಹರಿ-ವಿಜಯ’, ದೀಪೋತ್ಸವ ೨೦೦೮)