
‘ಧರ್ಮಶಾಸ್ತ್ರದಲ್ಲಿ ಚಿನ್ನ, ಬೆಳ್ಳಿ ಅಥವಾ ಮಣ್ಣಿನಿಂದಲೇ ವಿಗ್ರಹವನ್ನು ತಯಾರಿಸಬೇಕು’, ಎಂದು ಸ್ಪಷ್ಟವಾಗಿ ಹೇಳಲಾಗಿರುವುದರಿಂದ ಇದರ ಹೊರತು ಇತರ ವಸ್ತುಗಳಿಂದ ಮೂರ್ತಿಯನ್ನು ಸಿದ್ಧಪಡಿಸುವುದು ಶಾಸ್ತ್ರಕ್ಕನುಸಾರ ಅಯೋಗ್ಯವಾಗಿದೆ. ಇಲ್ಲಿ ‘ವ್ಯಾವಹಾರಿಕವಾಗಿ ಮಣ್ಣಿನಿಂದ ಮೂರ್ತಿ ತಯಾರಿಸುವ ಒಂದೇ ಪರ್ಯಾಯ ನೀಡಲಾಗಿದೆ’, ಎಂಬುದು ಸ್ಪಷ್ಟವಾಗಿದೆ. ‘ಧರ್ಮಸಿಂಧು’ ಎಂಬ ಗ್ರಂಥದಲ್ಲಿಯೂ ‘ವಿನಾಯಕನ ವ್ರತಕ್ಕಾಗಿ ಮೃಣಮಯಿ ಅಂದರೆ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು’, ಎಂದು ಹೇಳಲಾಗಿದೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ಶ್ರೀ ಗಣೇಶಮೂರ್ತಿಯು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ಮಾಡಲ್ಪಟ್ಟಿರಬೇಕು. ಅದಕ್ಕೆ ನೈಸರ್ಗಿಕ ಬಣ್ಣಗಳನ್ನು ಹಚ್ಚಬೇಕು. ಇದರಿಂದ ಶ್ರೀ ಗಣೇಶನ ಸ್ಪಂದನಗಳು ಮೂರ್ತಿಯ ಕಡೆಗೆ ಆಕರ್ಷಿತಗೊಳ್ಳುತ್ತವೆ ಮತ್ತು ಮಾಲಿನ್ಯವೂ ಆಗುವುದಿಲ್ಲ. ಶ್ರೀ ಗಣೇಶಚತುರ್ಥಿಯಂದು ಗಣೇಶನನ್ನು ಪೂಜಿಸಲು ತರುವ ಮೂರ್ತಿಯು ಒಂದರಿಂದ ಒಂದೂವರೆ ಅಡಿ ಎತ್ತರವಿರಬೇಕು, ಅದು ಮಣೆಯ ಮೇಲೆ ಕುಳಿತ ಭಂಗಿಯಲ್ಲಿರಬೇಕು. ಮೂರ್ತಿಯ ಸೊಂಡಿಲು ಎಡಬದಿಯಲ್ಲಿರಬೇಕು.
(ದೈನಿಕ ‘ಸನಾತನ ಪ್ರಭಾತ’)
ಆಲದ ಮರದ ಮಹಾತ್ಮೆ
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ