
೧. ದೇವತೆಗಳು ಯುದ್ಧಗಳ ಸಮಯದಲ್ಲಿ ಶ್ರೀ ಗಣೇಶನನ್ನು ಪೂಜಿಸಿ ತಮ್ಮ ಕಾರ್ಯಗಳನ್ನು ಸಾಧಿಸುವುದು; ಆದರೆ ಶ್ರೀ ಗಣೇಶನು ಯಾರನ್ನು ಸ್ತುತಿಸಿದ ಉದಾಹರಣೆಗಳು ಇಲ್ಲದಿರುವುದು ‘ಸರ್ವ ಶೃತಿ, ಸ್ಮೃತಿ, ಪುರಾಣಗಳು ಮುಂತಾದವುಗಳ ಅಧ್ಯಯನ ಮಾಡಿದಾಗ ಕಂಡುಬಂದಿರುವುದೇನೆಂದರೆ, ಬ್ರಹ್ಮ, ವಿಷ್ಣು, ಮಹೇಶ, ದೇವಿ ಮುಂತಾದ ಅನೇಕ ದೇವದೇವತೆಗಳು ತಮ್ಮ ಮೇಲಿನ ಕಠಿಣ ಯುದ್ಧಗಳ ಸಮಯದಲ್ಲಿ ಶ್ರೀ ಗಣೇಶನನ್ನು ಪೂಜಿಸಿ ಅವನನ್ನು ಸ್ತುತಿಸಿ ಕಾರ್ಯಸಿದ್ಧಿಗೆ ಕೊಂಡೊಯ್ದಿದ್ದಾರೆ; ಆದರೆ ಶ್ರೀ ಗಣೇಶನು ಯಾರ ಸ್ತುತಿ ಅಥವಾ ಆರಾಧನೆ ಮಾಡಿದ ಉದಾಹರಣೆಗಳು ಕಂಡುಬರುವುದಿಲ್ಲ; ಅಂದರೆ ‘ಶ್ರೀ ಗಣೇಶ ದೇವರು ಸರ್ವಶ್ರೇಷ್ಠನಾಗಿದ್ದಾನೆ’, ಎಂದು ನಂಬಲಾಗುತ್ತದೆ.
೨. ಯಾವುದೇ ದೇವಸ್ವರೂಪ ವರ್ಣನೆಗಳಲ್ಲಿನ ‘ವಾಚ್ಯ’ ಈ ಭಾಗವು ಸೀಮಿತವಾಗಿದ್ದೂ ‘ಲಕ್ಷ್ಯ’ ಈ ಭಾಗವು ವ್ಯಾಪಕ, ಅನಂತ ಮತ್ತು ತ್ರಿಕಾಲಬಾಧಿತವಾಗಿರುವುದು ಪ್ರತಿಯೊಬ್ಬ ದೇವಸ್ವರೂಪ ವರ್ಣನೆಯ ಎರಡು ಭಾಗ ಗಳಿರುತ್ತವೆ, ಮೊದಲನೇ ಭಾಗ ‘ವಾಚ್ಯ’ ಮತ್ತು ಎರಡನೇ ಭಾಗ ‘ಲಕ್ಷ್ಯ’ ! ಇವುಗಳಲ್ಲಿನ ‘ವಾಚ್ಯ’ ಈ ಭಾಗವು ಸೀಮಿತವಾಗಿರುತ್ತದೆ ಮತ್ತು ಲಕ್ಷ್ಯ ಈ ಭಾಗವು ವಿಶಾಲ, ಅನಂತ ಮತ್ತು ತ್ರಿಕಾಲಬಾಧಿತ ವಾಗಿರುತ್ತದೆ. ಇದನ್ನು ಅರಿತುಕೊಂಡೇ ಜ್ಞಾನಿಗಳು ಸಗುಣ ಸಾಕಾರ ರೂಪದಲ್ಲಿ ಆಯಾ ದೇವತೆಗಳ ಉಪಾಸನೆ ಮಾಡುತ್ತಾರೆ.
೩. ಉಪನಿಷತ್ತುಗಳಲ್ಲಿ ‘ಲಕ್ಷ್ಯ’ ಭಾಗದಲ್ಲಿ ನಿರ್ಗುಣ ನಿರಾಕಾರ ಶ್ರೀ ಗಣೇಶನನ್ನು ವರ್ಣಿಸಲಾಗಿದೆ. ಓಂ ನಮಸ್ತೆ ಗಣಪತಯೇ ತ್ವಮೇವ ಪ್ರತ್ಯಕ್ಷನ್ ತತ್ತ್ವಮಸಿ | ತ್ವಂ ಸಾಕ್ಷಾದಾತ್ಮಾ ಸಿ ನಿತ್ಯಮ್ || – ಶ್ರೀ ಗಣಪತಿ ಅಥರ್ವಶೀರ್ಷ, ಶ್ಲೋಕ ೧
ಅರ್ಥ : (ಮಂಗಲಾರ್ಥ ಓಂಕಾರದಿಂದ ಆರಂಭಿಸಲಾಗಿದೆ.) ಹೇ ಗಣಪತಿ (ಗಣಗಳ ಸ್ವಾಮಿ), ನಿನಗೆ ನನ್ನ ನಮಸ್ಕಾರಗಳು. (‘ತತ್ ತ್ವಮ್ ಅಸಿ’ ಈ ಮಹಾವಾಕ್ಯದಲ್ಲಿನ (‘ತತ್’ ಈ ಶಬ್ದದಿಂದ ಸೂಚಿಸಲಾದ ಬ್ರಹ್ಮನು ನಿಜವಾಗಿಯೂ ನೀನೇ ಆಗಿರುವೆ. ನೀನೇ ಎಲ್ಲ ಪ್ರಾಣಿಮಾತ್ರಗಳಲ್ಲಿನ ನಿತ್ಯ, ಅವಿನಾಶಿಯಾಗಿರುವ ಆತ್ಮ (ಆತ್ಮತತ್ತ್ವ)ವಾಗಿರುವೆ.
ತ್ವಂ ಸಚ್ಚಿದಾನಂದದ್ವಿತಿಯೋ ಸಿ |
ತತ್ವಮ್ ಜ್ಞಾನಮಯ ವಿಜ್ಞಾನಮಯೋ ಸಿ || – ಶ್ರೀ ಗಣಪತಿ ಅಥರ್ವಶೀರ್ಷ, ಶ್ಲೋಕ ೪
ಅರ್ಥ : ನೀನು ಏಕಮೇವಾದ್ವಿತೀಯ ಸಚ್ಚಿದಾನಂದರೂಪ ವಾಗಿರುವೆ. ಜ್ಞಾನ (ಬ್ರಹ್ಮದ ಜ್ಞಾನ) ಮತ್ತು ವಿಜ್ಞಾನ (ಐಹಿಕ ಜಗತ್ತಿನ ಜ್ಞಾನ) ನೀನೇ ಆಗಿರುವೆ. (ನೀನು ಸ್ಥೂಲ-ಸೂಕ್ಷ್ಮವಾಗಿರುವ ಎಲ್ಲ ವಿಷಯಗಳಲ್ಲಿ ವ್ಯಾಪಿಸಿರುವೆ.)’
– ಆಚಾರ್ಯ ವಸಂತ ಗೋಡಬೋಲೆ (ಆಧಾರ : ಮಾಸಿಕ ‘ಧನುರ್ಧಾರಿ’, ಸೆಪ್ಟೆಂಬರ್ ೨೦೧೦)
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?