ಸ್ವದೇಶಿಯ ಕರೆ ಮತ್ತು ಸವಾಲು !

ಪ್ರಧಾನಿ ನರೇಂದ್ರ ಮೋದಿ

ಅಮೆರಿಕಾದ ಅಧ್ಯಕ್ಷ ಟ್ರಂಪ್‌ ಅವರು ಭಾರತದ ಮೇಲೆ ಶೇ. ೫೦ ರಷ್ಟು ಆಮದು ಸುಂಕ ವಿಧಿಸುವ ಮತ್ತು ರಷ್ಯಾದೊಂದಿಗೆ ವ್ಯಾಪಾರವನ್ನು ನಿಲ್ಲಿಸುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಭಾರತದಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದು ಎಲ್ಲರ ಗಮನಕ್ಕೆ ಬಂದಿತ್ತು. ಪ್ರಧಾನಿ ಮೋದಿ ಯಾವಾಗಲೂ ‘ಕೆಲವು ಸಮಯ ಕಾದು, ನಂತರ ದಿಢೀರ್‌ ನಿರ್ಧಾರ ತೆಗೆದುಕೊಂಡು ಎಲ್ಲರನ್ನೂ ಅಚ್ಚರಿಗೊಳಿಸುವ ಅಥವಾ ನಿರುತ್ತರಗೊಳಿಸುವ, ಒಂದು ರೀತಿಯ ಆಘಾತತಂತ್ರವನ್ನು ಅನುಸರಿಸುತ್ತಾರೆ. ಟ್ರಂಪ್‌ ಅವರು ಅಮೆರಿಕವನ್ನು ‘ಸರ್ವೋಚ್ಚ’ ಮಾಡುವ ಹುರುಪನ್ನು ಮುಂದುವರಿಸಿದ್ದರಿಂದ, ಈಗ ಮೋದಿಯವರು ಹೇಗೆ ಆಘಾತ ನೀಡಲಿದ್ದಾರೆ ? ಎಂಬ ಕುತೂಹಲ ಹೆಚ್ಚಾಗುತ್ತಿರುವಾಗ, ಪ್ರಧಾನಿ ಮೋದಿ ‘ಸ್ವದೇಶಿ’ಯ ಘೋಷಣೆ ಮಾಡಿದ್ದಾರೆ. ವಾಸ್ತವವಾಗಿ, ಕನಸನ್ನು ನನಸು ಮಾಡಲು ವಸ್ತುನಿಷ್ಠ ಆರ್ಥಿಕ ಸಮೃದ್ಧಿ, ಮಾನವ ಸಂಪನ್ಮೂಲ, ಬುದ್ಧಿವಂತಿಕೆ, ನಿರ್ವಹಣೆ ಮತ್ತು ವ್ಯಾಪಾರದ ದೂರದೃಷ್ಟಿ ಸೇರಿದಂತೆ ಎಲ್ಲವೂ ಅಗತ್ಯವಿದೆ. ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ಮತ್ತು ಮನಮೋಹನ್‌ಸಿಂಗ್‌ ಹಣಕಾಸು ಸಚಿವರಾಗಿದ್ದಾಗ ಭಾರತದ ಆರ್ಥಿಕ ಸ್ಥಿತಿ ಹದಗೆಟ್ಟಾಗ, ‘ರೂಪಾಯಿಯ ಮೌಲ್ಯವನ್ನು ಕಡಿಮೆ ಮಾಡುವುದು’ ಎಂಬ ಪರಿಹಾರವನ್ನು ಕಂಡುಕೊಳ್ಳಲಾಯಿತು.

ವಿರೋಧ ಪಕ್ಷಗಳು ಇದಕ್ಕೆ ಆಕ್ಷೇಪಿಸಬಾರದು ಎಂಬ ಕಾರಣಕ್ಕೆ, ಆಗಿನ ಭಾಜಪದ ಹಿರಿಯ ವಿರೋಧ ಪಕ್ಷದ ನಾಯಕ ಅಟಲ್‌ಬಿಹಾರಿ ವಾಜಪೇಯಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮನವಿ ಮಾಡಲಾಯಿತು. ಯಾವಾಗಲೂ ದೇಶಹಿತಕ್ಕೆ ಆದ್ಯತೆ ನೀಡುತ್ತಿದ್ದರೂ, ಅತೀ ಸೂಕ್ಷ್ಮ ಸಂವೇದನಾಶೀಲರಾಗಿದ್ದ ವಾಜಪೇಯಿ ಅವರು ಇದನ್ನು ಒಪ್ಪಿಕೊಂಡರು. ಅಮೆರಿಕಾದ ಭಾರತದ ಮೇಲಿನ ನಿರ್ಬಂಧಗಳ ನೀತಿಯ ಬಗ್ಗೆ ಸಂತೋಷಪಟ್ಟು, ದೇಶ ಮತ್ತು ಭಾಜಪವನ್ನು ಯಾವಾಗಲೂ ವಿರೋಧಿಸುವ ರಾಹುಲ್‌ ಗಾಂಧಿಯಂತಹವರು ಅವರ ಮಟ್ಟಕ್ಕೆ ಎಂದಿಗೂ ಬರಲಾರರು. ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್‌ ದೇಶವನ್ನು ಯಾವ ಹೊಂಡಕ್ಕೆ ತಳ್ಳಿದೆಯೋ, ಅಲ್ಲಿಂದ ದೇಶವನ್ನು ಹೊರತೆಗೆಯಲು ಮತ್ತು ಅದೇ ಸಮಯದಲ್ಲಿ ಹೊಸ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಸರÀಕಾರವು ದೊಡ್ಡ ಕಸರತ್ತು ನಡೆಸಬೇಕಾಗಿದೆ. ‘ಸ್ವದೇಶಿ’ಯ ಘೋಷಣೆಯು ಈ ಬಿಕ್ಕಟ್ಟನ್ನು ಎದುರಿಸಲು ಸಹಾಯ ಮಾಡಬಹುದು.

ಯಾರಿಗೆ ಏನು ಬೇಕೋ, ಅದೇ ಸಿಗುತ್ತದೆ !

‘ಅಮೆರಿಕಾವನ್ನು ಮತ್ತೆ ಸಮೃದ್ಧಗೊಳಿಸು’ ಎಂಬ ಘೋಷಣೆಗೆ ‘ಭಾರತವನ್ನು ಮತ್ತೆ ಸಮೃದ್ಧಗೊಳಿಸು’ ಎಂಬ ಘೋಷಣೆಯನ್ನು ಸೇರಿಸಿದರೆ ಆರ್ಥಿಕತೆ ಹೆಚ್ಚು ಬಲಗೊಳ್ಳುತ್ತದೆ ಎಂಬ ಅರ್ಥದಲ್ಲಿ ಪ್ರಧಾನಿ ಒಂದು ಭಾಷಣದಲ್ಲಿ ಹೇಳಿದ್ದರು; ಆದರೆ, ‘ಯಾವಾಗ ಏನನ್ನು ಹೇಳುತ್ತಾರೆ ?’ ಎಂದು ಊಹಿಸಲಾಗದ ಟ್ರಂಪ್‌ನಂತಹ ವಿಕೃತ ಆಡಳಿತಗಾರನ ಮೇಲೆ ಅವಲಂಬಿತವಾಗಿರುವಷ್ಟು ದಡ್ಡ ದೇಶವಲ್ಲ ಭಾರತ. ಆದ್ದರಿಂದ, ಮೋದಿ ಅವರು ಅನೇಕ ಕಾರಣಗಳಿಗಾಗಿ ‘ಸ್ವದೇಶಿ’ಯ ಘೋಷಣೆ ಮಾಡಿದ್ದಾರೆ. ಇದು ಭಾರತಕ್ಕೆ ಅವಶ್ಯಕವೂ ಹೌದು ಮತ್ತು ಯಾರಿಗೆ ಸರಿಯಾದ ಸಂದೇಶ ಕೊಡಬೇಕೋ ಅವರಿಗೆ ಸರಿಯಾದ ಸಂದೇಶ ನೀಡುತ್ತದೆ. ಅಮೆರಿಕಾ ತನ್ನನ್ನು ತಾನು ಸಮೃದ್ಧಗೊಳಿಸಲು ವಿದೇಶಿಯರನ್ನು ಕೂಪಕ್ಕೆ ತಳ್ಳುವ ನೀತಿಯನ್ನು ಅನುಸರಿಸುತ್ತಿದೆ, ಭಾರತದ ಮೇಲೆ ಅನೇಕ ನಿರ್ಬಂಧಗಳನ್ನು ಹೇರುತ್ತಿದೆ. ಇದಕ್ಕೆ ಇದು ಒಂದು ಪ್ರತಿಕ್ರಿಯೆ ಎಂದು ಹೇಳಿದರೂ, ದೇಶಕ್ಕೆ ಅದರಿಂದ ಲಾಭವಾಗುವ ಸಾಧ್ಯತೆಗಳೇ ಹೆಚ್ಚು ಇದೆ. ಒಂದು, ಭಾರತದಲ್ಲಿ ಸ್ವದೇಶಿ ಘೋಷಣೆಯು ಸ್ವಾತಂತ್ರ್ಯಪೂರ್ವದಿಂದಲೂ ಇದೆ. ನಡುವಿನ ಅವಧಿಯಲ್ಲಿಯೂ ದೇಶಭಕ್ತ ಸಂಘಟನೆಗಳು ಇದನ್ನು ಮುಂದುವರೆಸಿದ್ದವು. ಆದ್ದರಿಂದ, ಈಗಲೂ ಅದರ ಪುನರುಚ್ಚಾರಕ್ಕೆ ಜನರಿಂದ ಪ್ರತಿಕ್ರಿಯೆ ಸಿಗಬಹುದು. ಆದರೆ, ಅಮೆರಿಕಾಕ್ಕೆ ಇದು ಭಾರತಕ್ಕಿಂತ ಹೆಚ್ಚು ಕಷ್ಟಕರವಾಗಬಹುದು. ‘ಭಾರತೀಯ ಮೂಲದ ಆಧುನಿಕ ವೈದ್ಯರು ಅಮೆರಿಕದಿಂದ ಹಿಂದಕ್ಕೆ ಬಂದರೆ, ಅಮೆರಿಕದ ಆರೋಗ್ಯ ವ್ಯವಸ್ಥೆಯೇ ಶಿಥಿಲವಾಗುತ್ತದೆ’ ಎಂದು ಹೇಳಲಾಗುತ್ತಿದೆ. ಬೌದ್ಧಿಕ ಕೆಲಸಗಳನ್ನು ಭಾರತದಂತಹ ದೇಶಗಳಲ್ಲಿನ ಸಂಸ್ಥೆಗಳಿಂದ ಕಡಿಮೆ ಬೆಲೆಗೆ ಮಾಡಿಸಿಕೊಳ್ಳುವ ಹಿಂದೆ

ಅಮೆರಿಕದ ಸ್ವಾರ್ಥವೇ ಇದೆಯಲ್ಲವೇ !

ಪ್ರತಿ ದೇಶವು ತನ್ನ ಒಳಿತನ್ನು ನೋಡಿಕೊಳ್ಳುತ್ತದೆ, ಹಾಗೆಯೇ ಭಾರತವೂ ಈಗ ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದೆ; ಆದರೆ, ಹಾಗೆ ಮಾಡುವಾಗ ಇತರ ದೇಶಗಳೊಂದಿಗಿನ ಹಿತಾಸಕ್ತಿಗಳನ್ನು ಕಾಪಾಡುವುದು ಒಂದು ದೊಡ್ಡ ಕಸರತ್ತಾಗಿದೆ. ಭಾರತ ಅದನ್ನೂ ಮಾಡುತ್ತಿದೆ. ಯಾವುದೇ ದೇಶದೊಂದಿಗೆ ಆಮದು-ರಫ್ತು ಪರಸ್ಪರ ಅವಲಂಬಿತವಾಗಿರಬೇಕು. ‘ಅಮೆರಿಕಾÀ ಭಾರತವನ್ನು ಮಾರುಕಟ್ಟೆಯಾಗಿ ನೋಡುತ್ತಿರುವಾಗ, ಅದು ಭಾರತದಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂಬ ಅರಿವು ಅದಕ್ಕಿಲ್ಲ ಎಂದು ಹೇಳಲಾಗುವುದಿಲ್ಲ; ಆದರೆ, ಪ್ರಾಬಲ್ಯ ರಕ್ತಗತವಾಗಿರುವ ಅಮೆರಿಕಾಕ್ಕೆ ಅದನ್ನು ಆಗಾಗ್ಗೆ ನೆನಪಿಸಿಕೊಡಬೇಕಾಗುತ್ತದೆ ಮತ್ತು ಮೋದಿ ಸರÀಕಾರ ಮತ್ತು ವಿದೇಶಾಂಗ ಸಚಿವರು ಅದನ್ನು ಆಗಾಗ್ಗೆ ಮಾಡುತ್ತಿರುತ್ತಾರೆ. ‘ಸ್ವದೇಶಿ’ ಅಭಿಯಾನವು ಅದರ ಒಂದು ಭಾಗವಾಗಿದೆ. ‘ಎಫ್‌-೩೫’ ಯುದ್ಧ ವಿಮಾನಗಳನ್ನು ಆಮದು ಪಟ್ಟಿಯಿಂದ ಕೈಬಿಡುವ ನಿರ್ಧಾರವನ್ನು ತೆಗೆದುಕೊಂಡು ಭಾರತ ಈಗ ಕೃತಿಯ ಮೂಲಕ ಅಮೆರಿಕಾಕ್ಕೆ ಉತ್ತರ ನೀಡಿದೆ.

ಸ್ವದೇಶಿಯ ಸವಾಲು ಮತ್ತು ದೊಡ್ಡ ಪ್ರಶ್ನೆಗಳು !

ದಿವಂಗತ ಡಾ.ರಾಜೀವ ದೀಕ್ಷಿತ

ಸ್ವದೇಶಿ ಪ್ರಚಾರವನ್ನು ಭಾರತದಲ್ಲಿ ದಿವಂಗತ ಡಾ.ರಾಜೀವ ದೀಕ್ಷಿತರು ೧೯೯೦ ರಲ್ಲಿ ಪ್ರಾರಂಭಿಸಿದರು. ದೇಶಭಕ್ತ ಭಾರತೀಯರಿಗೆ ಅವರ ಮಾತುಗಳು ಯೋಗ್ಯವೆನಿಸಿದವು. ಭಾರತದ ಸಣ್ಣ ಕೈಗಾರಿಕೆಗಳನ್ನು ಮೂಲೆಗೊತ್ತಿ, ದೊಡ್ಡ ಅಂತಾರಾಷ್ಟ್ರೀಯ ಸಂಸ್ಥೆಗಳು ಹೇಗೆ ಲಾಭ ಗಳಿಸುತ್ತಿವೆ ಮತ್ತು ಬಡ ದೇಶಗಳನ್ನು ನಾಶಪಡಿಸುತ್ತಿವೆ ಎಂಬ ಷಡ್ಯಂತ್ರವನ್ನು ಅವರು ಬಯಲಿಗೆಳೆದಿದ್ದರಿಂದಲೇ ಅವರ ಅಂತ್ಯವಾಯಿತು ಎನ್ನಲಾಗುತ್ತದೆ. ಪತಂಜಲಿಯಂತಹ ಅನೇಕ ಉದ್ಯಮಗಳು ವಿದೇಶಿ ಉತ್ಪನ್ನಗಳಿಗೆ ತೀವ್ರ ಪೈಪೋಟಿ ನೀಡಿದ್ದರೂ, ವೇಫರ್ಸ್‌ಗಳಿಂದ ಬಾಳೆಹಣ್ಣುಗಳವರೆಗೆ ಮತ್ತು ಕೋಲ್ಡ್ ಡ್ರಿಂಕ್ಸ್‌ಗಳಿಂದ ಬಟ್ಟೆಗಳವರೆಗೆ ಮಾರುಕಟ್ಟೆಯಲ್ಲಿ ವಿದೇಶಿ ಸಂಸ್ಥೆಗಳ ಪ್ರಾಬಲ್ಯವಿದೆ. ದೇಶದ ಎಲ್ಲಾ ರಸ್ತೆ ಸಾರಿಗೆಯನ್ನು ಅವಲಂಬಿಸಿರುವ ಕಚ್ಚಾ ತೈಲದಲ್ಲಿ ಶೇ. ೮೫ ರಷ್ಟು ತೈಲವನ್ನು ನಾವು ಆಮದು ಮಾಡಿಕೊಳ್ಳುತ್ತೇವೆ. ಇತ್ತೀಚೆಗೆ ‘ನಾಯರಾ’ ಎಂಬ ಸಂಸ್ಥೆಯ ಉದಾಹರಣೆಯಿಂದ ಭಾರತವು ದೊಡ್ಡ ಪಾಠ ಕಲಿತಿದೆ. ಟ್ರಂಪ್‌ ನೇರವಾಗಿ ಮೈಕ್ರೋಸಾಫ್ಟ್‌ಗೆ ಆದೇಶ ನೀಡಿ ‘ನಾಯರಾ’ ಸಂಸ್ಥೆಯ ಸಹಾಯವನ್ನು ನಿಲ್ಲಿಸಿದರು. ಅವರು ಇತರ ಸಂಸ್ಥೆಗಳ ವಿಷಯದಲ್ಲಿಯೂ ಹೀಗೆ ಮಾಡಬಹುದು. ಗಣಕ ತಂತ್ರಜ್ಞಾನದ ವಿಷಯದಲ್ಲಿ ಚೀನಾದಂತೆ ಭಾರತ ಇನ್ನೂ ಸ್ವಾವಲಂಬಿಯಾಗಿಲ್ಲ. ಮೊಬೈಲ್‌ ಫೋನ್‌ಗಳ ಮುಖ್ಯ ಭಾಗಗಳಾದ ‘ಪ್ರೊಸೆಸರ್‌’, ‘ಡಿಸ್ಪ್ಲೇ’, ಹಾಗೆಯೇ ‘ಮದರ್‌-ಬೋರ್ಡ್‌’, ‘ಹಾರ್ಡ್‌ಡಿಸ್ಕ್‌’ಗಳನ್ನು ನಾವು ತೈವಾನ್, ಚೀನಾ, ದಕ್ಷಿಣಕೊರಿಯಾ, ಅಮೆರಿಕಾದಿಂದ ಖರೀದಿಸುತ್ತೇವೆ. ಮೊಬೈಲ್‌ ಫೋನ್‌ಗಳು, ಕಾರುಗಳು, ಕಂಪ್ಯೂಟರ್‌ಗಳು, ಟೆಲಿವಿಷನ್‌ ಸೆಟ್‌ಗಳು ಇತ್ಯಾದಿಗಳಲ್ಲಿ ಬಳಸುವ ‘ಎಲೆಕ್ಟ್ರಾನಿಕ್‌ ಚಿಪ್’ (ಸೆಮಿಕಂಡಕ್ಟರ್) ಸಹ ನಾವು ಇದೇ ದೇಶಗಳಿಂದ ತೆಗೆದುಕೊಳ್ಳುತ್ತೇವೆ. ವಾಯುಸಾರಿಗೆ ಮತ್ತು ಬಾಹ್ಯಾಕಾಶ ಕ್ಷೇತ್ರ, ಹಾಗೆಯೇ ರಕ್ಷಣಾ ಕ್ಷೇತ್ರ ಈ ಪ್ರಮುಖ ಕ್ಷೇತ್ರಗಳಲ್ಲಿ ನಾವು ಯುರೋಪ್, ಅಮೆರಿಕಾ, ರಷ್ಯಾ, ಇಸ್ರೇಲ್‌ಗಳನ್ನು ಅವಲಂಬಿಸಿದ್ದೇವೆ. ಮೊಬೈಲ್‌ ಫೋನ್‌ಗಳು, ಎಲೆಕ್ಟ್ರಿಕ್‌ ವಾಹನಗಳು, ಲ್ಯಾಪ್‌ಟಾಪ್‌ಗಳು ಇತ್ಯಾದಿಗಳಲ್ಲಿ ಬಳಸುವ ಅಯಾನ್‌ ಬ್ಯಾಟರಿಗಳು, ಹಾಗೆಯೇ ಲಿಥಿಯಂ ನಮಗೆ ವಿದೇಶದಿಂದಲೇ ಬರಬೇಕು; ಏಕೆಂದರೆ ಅದು ಭಾರತದಲ್ಲಿ ಲಭ್ಯವಿಲ್ಲ. ಸರÀಕಾರವು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುತ್ತಿರುವ ಸೌರಶಕ್ತಿಗೆ ಅಗತ್ಯವಾದ ಸೋಲಾರ್‌ ಸೆಲ್‌ಗಳು, ಹಾಗೆಯೇ ಭಾರತ ಔಷಧಗಳನ್ನು ತಯಾರಿಸುವ ಅತಿದೊಡ್ಡ ಕೇಂದ್ರವಾಗಿದ್ದರೂ, ಅದಕ್ಕೆ ಬೇಕಾದ ಕೆಲವು ಪ್ರಮುಖ ಘಟಕಗಳನ್ನು ಶತ್ರು ದೇಶವಾದ ಚೀನಾದಿಂದಲೇ ತೆಗೆದುಕೊಳ್ಳಬೇಕಾಗುತ್ತದೆ. ಮೇಲಿನ ಕ್ಷೇತ್ರಗಳಲ್ಲಿ ಸ್ವಾವಲಂಬಿ ಯಾಗಲು ಭಾರತ ಕಠಿಣ ಪ್ರಯತ್ನ ಮಾಡುತ್ತಿದೆ; ಆದರೆ ಸಂಪೂರ್ಣ ಸ್ವಾವಲಂಬಿಯಾಗಲು ಆರಂಭಿಕ ಹಂತದಲ್ಲಿ ವಿದೇಶಿ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕಾಗುತ್ತದೆ.

ಕಷ್ಟ…ಆದರೆ ಅಸಾಧ್ಯವಲ್ಲ !

ವಿದೇಶಿ ಆಮದುಗಳಿಲ್ಲದೆ ಭಾರತ ನಡೆಯಲಾರದು ಎಂದು ಮೋದಿಯವರಿಗೆ ಗೊತ್ತಿಲ್ಲ ಎಂದು ಅವರ ಟೀಕಾಕಾರರು ಭಾವಿಸಿದ್ದರೆ, ಅದು ಹಾಸ್ಯಾಸ್ಪದ. ನಾಳೆ ಸೂರ್ಯ ಹುಟ್ಟಿದ ತಕ್ಷಣ ಭಾರತ ಸಂಪೂರ್ಣ ಸ್ವದೇಶಿಯಾಗುವುದಿಲ್ಲ ಮತ್ತು ಯಾರೂ ಅದನ್ನು ನಿರೀಕ್ಷಿಸುವುದಿಲ್ಲ. ಭಾರತದಲ್ಲಿ ಹೇರಳ ಸಂಪತ್ತು ಇದ್ದಾಗಲೂ ಭಾರತವು ಇತರ ದೇಶಗಳೊಂದಿಗೆ ವ್ಯಾಪಾರ ಮಾಡುತ್ತಿತ್ತು. ಆಗಲೂ ಸ್ವಲ್ಪ ವಿದೇಶಿ ಸರಕುಗಳು ಭಾರತಕ್ಕೆ ಬರುತ್ತಿದ್ದವು; ಆದರೆ ಭಾರತದ ಪ್ರಾಬಲ್ಯ ಸ್ಥಿರವಾಗಿತ್ತು, ಅದು ಆದರ್ಶ ಸ್ಥಿತಿ. ಅದನ್ನು ಸಾಧಿಸಲು, ಸ್ವದೇಶಿಯ ಘೋಷಣೆಯು ಭಾರತವನ್ನು ಸ್ವಾವಲಂಬಿಯಾಗಲು ಪ್ರೋತ್ಸಾಹಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು !