
ನಮ್ಮ ಋಷಿಮುನಿಗಳು ವೇದ-ಪುರಾಣಗಳಲ್ಲಿನ ಶ್ಲೋಕಗಳಲ್ಲಿ ವಾಸ್ತುಶಾಸ್ತ್ರದ ಮಹಾತ್ಮೆಯನ್ನು ಬರೆದಿಟ್ಟಿದ್ದಾರೆ. ವಾಸ್ತುಕಲೆಯು ಎಲ್ಲ ಕಲೆಗಳ ಹೇಗೆ ಜನ್ಮಸ್ಥಾನವಾಗಿದೆ ? ಒಳ್ಳೆಯ ವಾಸ್ತುವಿನಲ್ಲಿ ಪ್ರವೇಶಿಸಿದ ನಂತರ ನಮಗೆ ಏಕೆ ಪ್ರಸನ್ನವೆನಿಸುತ್ತದೆ ? ವಾಸ್ತುಶಾಸ್ತ್ರಕ್ಕನುಸಾರ ಕಟ್ಟಿದ ದೇವಸ್ಥಾನ ಗಳಲ್ಲಿನ ಶಾಂತ ವಾತಾವರಣದಲ್ಲಿ ನಮ್ಮ ಮನಸ್ಸು ಏಕೆ ಪ್ರಸನ್ನಗೊಳ್ಳುತ್ತದೆ ? ಎಂಬುದರ ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.

೧. ವಾಸ್ತುಕಲೆಯು ಎಲ್ಲ ಕಲೆಗಳ ಜನನಿಯಾಗಿದ್ದು ಒಳ್ಳೆಯ ವಾಸ್ತು ಅಲ್ಲಿ ಇರುವವರೊಂದಿಗೆ ಸಜೀವವಾಗಿ ತನ್ನ ಭಾಷೆಯಲ್ಲಿ ಮಾತನಾಡುತ್ತದೆ
ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತು-ಶಿಲ್ಪಕಾರರಾದ ಶ್ರೀ. ಬಾಳಕೃಷ್ಣ ದೋಶಿ ಇವರು, ”ಒಳ್ಳೆಯ ವಾಸ್ತು ಸಜೀವವಾಗಿದ್ದು ಅದು ಅದರಲ್ಲಿರುವವರೊಂದಿಗೆ ಮತ್ತು ಸುತ್ತಮುತ್ತಲಿನ ವಾತಾವರಣದೊಂದಿಗೆ ತನ್ನದೇ ಆದ ಭಾಷೆಯಲ್ಲಿ ಮಾತನಾಡುತ್ತಿರುತ್ತದೆ” ಎಂದು ಹೇಳಿದ್ದಾರೆ. ಸಂಗೀತದಲ್ಲಿನ ಸ್ತಬ್ಧತೆ ಮತ್ತು ತೃಪ್ತಿಯನ್ನು ವಾಸ್ತುಕಲೆಯ ಪ್ರಕಾಶ, ಆಕಾಶ ಮತ್ತು ತಾಳ ಇವುಗಳನ್ನು ಸಂಯೋಜಿಸುವ ಪ್ರಯತ್ನವು ಸವಾಯಿ ಗಂಧರ್ವರ ಹೆಸರಿನಲ್ಲಿ ನಿರ್ಮಿಸಲಾದ ವಾಸ್ತುರಚನೆಯಲ್ಲಿ ನೋಡಲು ಸಿಗುತ್ತದೆ. ವಾಸ್ತುಶಿಲ್ಪವು ಎಲ್ಲ ಕಲೆಗಳ ಜನನಿ ಯಾಗಿದ್ದು ಇತರ ಕಲೆಗಳಿಗಿಂತ ಶಾಶ್ವತವಾಗಿ (ಚಿರಂತನ) ಉಳಿಯುತ್ತದೆ. ಅದು ಅಚಲವಾಗಿದ್ದರೂ, ಎಲ್ಲೆಡೆ ಸಂಚರಿಸುವ ವಾಸ್ತುವಿನ ಅಸ್ತಿತ್ವವು ಅದರ ಮೂಲಕ ವ್ಯವಹರಿಸುವಾಗ ಮನಸ್ಸನ್ನು ಮುಟ್ಟುತ್ತದೆ. ಇದರ ಜೀವಂತ ನಿದರ್ಶನವನ್ನು ಇತಿಹಾಸ ಮತ್ತು ಹಳೆಯ ಕಟ್ಟಡಗಳು ನಿರಂತರವಾಗಿ ನೀಡುತ್ತಿವೆ. ಇದೇ ಅರ್ಥದಲ್ಲಿ, ಉತ್ತಮ ವಾಸ್ತುಶಿಲ್ಪವು ಜೀವಂತವಾಗಿ, ಅನೇಕ ತಲೆಮಾರುಗಳ ವರೆಗೆ ಆತ್ಮೀಯತೆಯನ್ನು ಹೆಚ್ಚಿಸುತ್ತದೆ.
೨. ಸವಾಯಿ ಗಂಧರ್ವರ ವಾಸ್ತುವನ್ನು ನೋಡುವಾಗ ಶ್ರೀ ಗಣೇಶನ ಭಾಸವಾಗುವುದು ಮತ್ತು ಸುತ್ತಮುತ್ತಲಿನ ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಿ ವಾಸ್ತುವನ್ನು ನಿರ್ಮಿಸಿರುವುದರಿಂದ ಬರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಸ್ವರಗಳು ಮೂಡುವುದು
ಸವಾಯಿ ಗಂಧರ್ವರ ವಾಸ್ತುವಿಗಾಗಿಯೂ ಮೇಲಿನ ತತ್ತ್ವವನ್ನೇ ಬಳಸಿದ್ದೂ ಆ ಸ್ಮಾರಕವೂ ಭೀಮಸೇನಜಿ ಇವರಂತೆಯೇ ನನ್ನ ಕನಸೂ ಆಗಿತ್ತು. (ಸವಾಯಿ ಗಂಧರ್ವರು ಪಂಡಿತ ಭೀಮಸೇನ ಜೋಶಿಯವರ ಗುರುಗಳಾಗಿದ್ದರು.) ಈ ವಾಸ್ತುವಿನಿಂದ ಪುಣೆ ಮತ್ತು ಭಾರತೀಯ ಸಂಗೀತದ ಬಗೆಗಿನ ನನ್ನ ಸಂಕಲ್ಪನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಾಗಿದೆ. ಸುತ್ತಮುತ್ತಲಿನ ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವ ಮೂಲಕ ಅಲ್ಲಿನ ಕುಳಿತುಕೊಳ್ಳುವ ಜಾಗ, ನಿವಾಸಸ್ಥಳಗಳು ಮತ್ತು ಅಧ್ಯಾಪನ ಕೊಠಡಿಗಳಿಂದ ಒಳಗೆ ಬರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಸ್ವರಗಳು ಮೂಡುತ್ತವೆ. ನೈಸರ್ಗಿಕ ಬೆಳಕಿನ ಬಳಕೆ ಮತ್ತು ಆಕಾಶದ ವಿಸ್ತಾರ ಕಲೆಗೆ ಖಂಡಿತವಾಗಿಯೂ ಪೂರಕವಾಗಿದೆ. ಈ ವಾಸ್ತುವಿನ ಕಡೆಗೆ ವಿಹಂಗಮ ಸ್ಥಿತಿಯಿಂದ ನೋಡುವಾಗ ಎಲ್ಲ ಕಲೆಗಳ ಆರಂಭವೆಂದು ಪರಿಗಣಿಸುವ ‘ಶ್ರೀ ಗಣೇಶ’ನ ಅರಿವು ಆಗದೇ ಇರಲಾರದು. ಪರಿಸರದ ಸಮತೋಲನ, ಬೆಳಕು, ನೀರು ಮತ್ತು ಇತರ ನೈಸರ್ಗಿಕ ಶಕ್ತಿಯ ಅಗತ್ಯವಿದ್ದಷ್ಟೇ ಬಳಕೆ ಮತ್ತು ಮರುಬಳಕೆಯು ನಮ್ಮ ವಾಸ್ತುವಿನಲ್ಲಿ ಪ್ರತಿಬಿಂಬಿಸುವಂತಿರಬೇಕು.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು