
೧. ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನನ್ದವಿಗ್ರಹಃ |
ಅನಾದಿರಾದಿರ್ಗೋವಿನ್ದಃ ಸರ್ವಕಾರಣ ಕಾರಣಮ್ || – ಬ್ರಹ್ಮಸಂಹಿತಾ, ಶ್ಲೋಕ ೧
ಅರ್ಥ : ಶ್ರೀಕೃಷ್ಣನು ಪರಮ ಈಶ್ವರನಿದ್ದಾನೆ. ಅವನು ಸಚ್ಚಿದಾನಂದ ಸ್ವರೂಪನಿದ್ದಾನೆ. ಆ ಗೋವಿಂದನ ಮೊದಲು ಏನೂ ಇರಲಿಲ್ಲ. ಅವನೇ ಎಲ್ಲದರ ಆದಿಯಾಗಿದ್ದು ಎಲ್ಲ ಕಾರಣಗಳ ಕಾರಣನಾಗಿದ್ದಾನೆ.
೨. ವಶಿ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ |
– ಶ್ವೇತಾಶ್ವತರೋಪನಿಷದ್, ಅಧ್ಯಾಯ ೩, ಶ್ಲೋಕ ೧೮
ಅರ್ಥ : ಸ್ಥಾವರ, ಜಂಗಮ ಹೀಗೆ ಎಲ್ಲ ಜನರು ಅವನ ಸ್ವಾಧೀನದಲ್ಲಿದ್ದಾರೆ.
ಸರ್ವಸ್ಯ ವಶೀ ಸರ್ವಸ್ಯೇಶಾನಃ ಸರ್ವಸ್ಯಾಧಿಪತಿಃ |
– ಬೃಹದಾರಣ್ಯಕೋಪನಿಷದ್, ಅಧ್ಯಾಯ ೪.೪.೨೨
ಅರ್ಥ : ಅವನು ಎಲ್ಲರನ್ನು ನಿಯಂತ್ರಣದಲ್ಲಿಡುವನು, ಎಲ್ಲರ ಈಶ್ವರ ಮತ್ತು ಅಧಿಪತಿಯಾಗಿದ್ದಾನೆ.
ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪದಿಂದ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನು ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಿದೆ. ಆದುದರಿಂದ ಕೇವಲ ಶ್ರೀಕೃಷ್ಣನೇ ಪರಮ ದೇವನಾಗಿದ್ದಾನೆ. ಅವನ ಮಧುರತೆಯ ಆಸ್ವಾದನೆ ತೆಗೆದುಕೊಂಡು ಅವನ ಪೂಜೆ ಮತ್ತು ಭಜನೆ ಮಾಡಬೇಕು.’
– (ಪರಾತ್ಪರ ಗುರು) ಪಾಂಡೆ ಮಹಾರಾಜರು (೩೦.೧೧.೨೦೧೪)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು