ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ ಅವರಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ ಪಕ್ಷಕ್ಕೆ ಪ್ರಶ್ನೆ

ನವದೆಹಲಿ – ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ನೇಹವಿಲ್ಲದಿದ್ದರೂ, ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಮಾಡಿಕೊಳ್ಳುವ ಅಗತ್ಯವೇನಿತ್ತು? ಎಂದು ಕೇಳೀದಾಗ, ಇದನ್ನು ಶಾಂತಿಯ ಬೆಲೆ ಎಂದು ಹೇಳಲಾಯಿತು; ಆದರೆ ಇದು ಓಲೈಸುವಿಕೆಯ ಬೆಲೆಯಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಪಂಜಾಬ್, ರಾಜಸ್ಥಾನ, ಹರಿಯಾಣ ರಾಜ್ಯಗಳ ರೈತರ ಬಗ್ಗೆ ಕಾಳಜಿ ಇರಲಿಲ್ಲ, ಬದಲಿಗೆ ಪಾಕಿಸ್ತಾನದ ಪಂಜಾಬಿನ ರೈತರ ಬಗ್ಗೆ ಕಾಳಜಿ ಇತ್ತು. ಪಾಕಿಸ್ತಾನ ಸಂಪೂರ್ಣವಾಗಿ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಸಿಂಧೂ ಜಲ ಹಂಚಿಕೆ ಒಪ್ಪಂದ ರದ್ದು ಪಡಿಸಿರುವುದು ಮುಂದುವರಿಯುವುದು. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ ಅವರು ರಾಜ್ಯಸಭೆಯಲ್ಲಿ ‘ಆಪರೇಷನ್ ಸಿಂದೂರ್’ ಕುರಿತ ಚರ್ಚೆಯಲ್ಲಿ ಪಾಕಿಸ್ತಾನಕ್ಕೆ ಖಂಡತುಂಡಾಗಿ ಸಂದೇಶ ನೀಡಿದರು.
Speaking in Rajya Sabha during special discussion on India’s strong, successful and decisive #OperationSindoor.
— Dr. S. Jaishankar (@DrSJaishankar) July 30, 2025
ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ ಅವರು ಮಂಡಿಸಿದ ಅಂಶಗಳು
1. ಭಾರತ ಹಲವು ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ನಾವು ಏನು ಹೇಳುತ್ತೇವೆಯೋ, ಅದನ್ನೇ ಮಾಡಿ ತೋರಿಸುತ್ತೇವೆ. ಹಿಂದೆ ದೊಡ್ಡ ಭಯೋತ್ಪಾದಕ ದಾಳಿಗಳು ಸಂಭವಿಸಿದಾಗ, ಅವುಗಳ ಮೇಲೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿರಲಿಲ್ಲ; ಆದರೆ ಕಳೆದ ದಶಕದಲ್ಲಿ ನಾವು ಭಯೋತ್ಪಾದನೆಯ ವಿರುದ್ಧ ‘ಶೂನ್ಯ ಸಹಿಷ್ಣುತೆ ನೀತಿ’ಯನ್ನು ಅಳವಡಿಸಿಕೊಂಡಿದ್ದೇವೆ, ಇದರಿಂದ ಈ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿವೆ. ಇಂದು ಭಯೋತ್ಪಾದಕರಿಗೆ ಸಿಗುತ್ತಿದ್ದ ಹಣಕಾಸಿನ ನೆರವು ಕೂಡ ನಿಂತುಹೋಗಿದೆ.
💥 Jaishankar Slams Congress in Rajya Sabha!
🗣️ “Why sign the Indus Waters Treaty when there was no friendship with Pakistan?”
💧 “Blood & water can’t flow together.”
📌 Pakistan exists because of Congress and for 78 years, it’s been India’s headache.
⚡ Public expects this… pic.twitter.com/UPMFaVnpUg
— Sanatan Prabhat (@SanatanPrabhat) July 30, 2025
2. ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಲ್ಲ, ಪಾಕಿಸ್ತಾನವಿದೆ; ಆದರೆ, ಹೀಗಿದ್ದರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಖ್ಯಸ್ಥರು ಭಾರತದ ಪರ ನಿಂತರು. ರಷ್ಯಾವೂ ಸೇರಿದಂತೆ ಹಲವು ದೇಶಗಳು ಭಾರತದ ಕ್ರಮಕ್ಕೆ ಬಹಿರಂಗವಾಗಿ ಬೆಂಬಲ ನೀಡಿದವು, ಇದರಿಂದ ನಮ್ಮ ರಾಜತಾಂತ್ರಿಕ ಕುಶಾಗ್ರಮತಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ನಾವು ಪಾಕಿಸ್ತಾನಿ ನಾಗರಿಕರ ವೀಸಾಗಳನ್ನು (ಒಂದು ದೇಶಕ್ಕೆ ಪ್ರವೇಶಿಸಲು, ದೇಶವನ್ನು ತೊರೆಯಲು ಅಥವಾ ದೇಶದ ಮೂಲಕ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ದಾಖಲೆ ಅಥವಾ ಮುದ್ರೆ) ರದ್ದುಗೊಳಿಸಿದೆವು. ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಿದೆವು. ಭಾರತ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ಇಡೀ ಜಗತ್ತು ನೋಡಿದೆ. ನಾವು ಪಾಕಿಸ್ತಾನದ ನೈಜ ಮುಖವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆವು. ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಘಟನೆಯ ಕುರಿತು ಮೌನವಾಗಿದ್ದವರು ಇಂದು ನಮಗೆ ಏನು ಮಾಡಬೇಕು ಎಂದು ಕಲಿಸುತ್ತಿದ್ದಾರೆ.
3. ಕಳೆದ ದಶಕದಲ್ಲಿ ನಾವು ಭಯೋತ್ಪಾದನೆಯ ವಿಷಯವನ್ನು ಜಾಗತಿಕ ಮಟ್ಟಕ್ಕೆ ತರಲು ಯಶಸ್ವಿಯಾಗಿದ್ದೇವೆ. 26 ವರ್ಷಗಳಿಂದ ಭಾರತಕ್ಕೆ ಬೇಕಾಗಿದ್ದ ತಹವ್ವುರ್ ರಾಣಾನನ್ನು ಸರಕಾರ ಭಾರತಕ್ಕೆ ಕರೆತರಲು ಸಾಧ್ಯವಾಯಿತು ಮತ್ತು ಈಗ ಅವನ ವಿರುದ್ಧ ಇಲ್ಲಿ ವಿಚಾರಣೆಗಳು ನಡೆಯುತ್ತಿವೆ.
ಟ್ರಂಪ್ ಮತ್ತು ಮೋದಿ ನಡುವೆ ಒಂದು ದೂರವಾಣಿ ಕರೆ ಕೂಡ ಆಗಿಲ್ಲ!ಜೈಶಂಕರ ಮಾತು ಮುಂದುವರೆಸಿ, “ಜಗತ್ತಿನ ಯಾವುದೇ ನಾಯಕ ಭಾರತಕ್ಕೆ ‘ಆಪರೇಷನ್ ಸಿಂದೂರ್’ ಅನ್ನು ನಿಲ್ಲಿಸುವಂತೆ ಹೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ನಡುವೆ ಯಾವುದೇ ಚರ್ಚೆ ನಡೆದಿಲ್ಲ. ಅಮೆರಿಕ, ಸೌದಿ ಅರೇಬಿಯ ಸೇರಿದಂತೆ ಹಲವು ದೇಶಗಳೊಂದಿಗೆ ನಾವು ಚರ್ಚೆ ನಡೆಸಿದ್ದೇವೆ, ಎಲ್ಲಾ ದೂರವಾಣಿ ಕರೆಗಳ ದಾಖಲೆಗಳಿವೆ. ಅದು ನನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿಯೂ ಇದೆ. ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸಲು ಬಯಸಿದರೆ, ನಮ್ಮ ಸೇನಾಧಿಕಾರಿಗಳ ಮೂಲಕ ವಿನಂತಿಸಬೇಕು ಎಂದು ನಾವು ಎಲ್ಲರಿಗೂ ಹೇಳಿದ್ದೇವೆ. ಏಪ್ರಿಲ್ 12 ರಿಂದ ಜೂನ್ 22 ರ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಒಂದು ದೂರವಾಣಿ ಕರೆ ಕೂಡ ಆಗಿಲ್ಲ”, ಎಂದು ಹೇಳಿದರು. |
ಸಂಪಾದಕೀಯ ನಿಲುವುಕಾಂಗ್ರೆಸ್ ಪಕ್ಷವನ್ನು ಎಷ್ಟೇ ಪ್ರಶ್ನಿಸಿದರೂ ಅದು ಕಡಿಮೆಯೇ. ಕಾಂಗ್ರೆಸ್ ನಿಂದಲೇ ಪಾಕಿಸ್ತಾನದ ನಿರ್ಮಾಣವಾಯಿತು ಮತ್ತು ಕಳೆದ 78 ವರ್ಷಗಳಿಂದ ಅದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಿನ ಸರಕಾರ ಕಾಂಗ್ರೆಸ್ಸಿನ ಈ ಪಾಪವನ್ನು ಶಾಶ್ವತವಾಗಿ ಕೊನೆಗೊಳಿಸಬೇಕು ಎಂಬುದು ಜನರ ನಿರೀಕ್ಷೆಯಾಗಿದೆ. |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ