ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧಕರ ಆಧ್ಯಾತ್ಮಿಕ ಪ್ರಗತಿ ಆಗದಿರುವ ಹಿಂದಿನ ಮುಖ್ಯ ಕಾರಣಗಳ ಬಗ್ಗೆ ಸನಾತನದ ಸಂತರಾದ ಪೂ. ಅಶೋಕ ಪಾತ್ರೀಕರ ಇವರು ಮಾಡಿದ ವಿಶ್ಲೇಷಣೆ ಮತ್ತು ಪರಿಹಾರೋಪಾಯ !

ಮುಂಬರುವ ಆಪತ್ಕಾಲದಲ್ಲಿ ರಕ್ಷಣೆಯಾಗಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಸಾಧನೆಯ ಮಹತ್ವ !

ಪೂ. ಅಶೋಕ ಪಾತ್ರೀಕರ

‘ಸಾಧಕರೇ, ಬದುಕುಳಿಯಬೇಕಾದರೆ ಸಾಧನೆ ಮಾಡಿರಿ ! ‘ಸಾಧನೆ ಮಾಡುವುದು’ ಇದು ಅರ್ಧಕಾಲೀನ ಉದ್ಯೋಗ (ಪಾರ್ಟಟೈಮ್‌ ಜಾಬ್‌)ವಲ್ಲ; ಅದು ಪೂರ್ಣಕಾಲೀನ ಉದ್ಯೋಗ (ಫುಲ್‌ಟೈಮ್‌ ಜಾಬ್) ಆಗಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ‘ಸಂಘಟನಾತ್ಮಕ ರಚನೆ’ ಎಂಬ ಪ್ರಕ್ರಿಯೆಯ ಮೂಲಕ ‘ಸಾಧಕರಲ್ಲಿ ಎಷ್ಟು ಕ್ಷಮತೆ ಇದೆ’, ಎಂಬುದನ್ನು ತೋರಿಸಿಕೊಟ್ಟರು. ಅವರ ಕೃಪೆಯಿಂದ ಸಾಧಕರಿಗೆ ವಿವಿಧ ಸೇವೆಗಳ ಜವಾಬ್ದಾರಿ ನೀಡಲಾಯಿತು ಮತ್ತು ಅವರು ಅದನ್ನು ನಿಭಾಯಿಸುತ್ತಿದ್ದಾರೆ. ಆದರೂ, ಸಾಧಕರಿಂದ ನಿರೀಕ್ಷಿತ ವೇಗದಲ್ಲಿ ಪ್ರಯತ್ನಗಳು ನಡೆಯುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಮುಂದಿನ ಅಂಶಗಳ ಆಧಾರದಿಂದ ಸಾಧಕರು ಈ ಕುರಿತು ಚಿಂತನೆ ಮಾಡಬಹುದು.

೧. ಸಾಧನೆಯ ಬಗ್ಗೆ ಸಾಧಕರ ಅಯೋಗ್ಯ ಮಾನಸಿಕತೆ

೧ ಅ. ಆಧ್ಯಾತ್ಮಿಕ ಪ್ರಗತಿ ಆಗುತ್ತಿಲ್ಲ ಎಂದು ‘ಶ್ರಮಪಟ್ಟು ಸೇವೆ ಮಾಡುವ ಬದಲು ಎಷ್ಟಾಗುತ್ತದೆ ಅಷ್ಟೇ ವ್ಯಷ್ಟಿ ಮತ್ತು ಸಮಷ್ಟಿ ಸೇವೆ ಮಾಡಬೇಕು’, ಎಂಬ ವಿಚಾರ ಸಾಧಕರಲ್ಲಿರುವುದು : ಸನಾತನ ಸಂಸ್ಥೆಯಲ್ಲಿ ಬಹಳಷ್ಟು ಸಾಧಕರು ಕಳೆದ ಅನೇಕ ವರ್ಷ ಗಳಿಂದ ತನು, ಮನ, ಧನ ಮತ್ತು ಬುದ್ಧಿಯನ್ನು ಗುರುಗಳ ಚರಣಗಳಲ್ಲಿ ಅರ್ಪಿಸಿ, ಹಾಗೆಯೇ ಶ್ರಮಪಟ್ಟು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಪೂರ್ಣವೇಳೆ ಸಾಧನೆ ಮಾಡದಿರುವ ಅನೇಕ ಸಾಧಕರೂ ಶ್ರಮಪಟ್ಟು ಸೇವೆಯನ್ನು ಮಾಡುತ್ತಾರೆ, ಆದರೂ ಕೆಲವೇ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಿದೆ. ಆದ್ದರಿಂದ ‘ಇಷ್ಟೊಂದು ಸಾಧನೆ ಮತ್ತು ಸೇವೆಯನ್ನು ಮಾಡುತ್ತಿದ್ದರೂ ನಮ್ಮ ಪ್ರಗತಿ ಆಗದಿದ್ದರೆ, ಶ್ರಮಪಟ್ಟು ಏಕೆ ಸೇವೆ ಮಾಡಬೇಕು ? ಅದಕ್ಕಿಂತ ಎಷ್ಟಾಗುತ್ತದೆ ಅಷ್ಟು ವ್ಯಷ್ಟಿ ಮತ್ತು ಸಮಷ್ಟಿ ಸೇವೆ ಹಾಗೂ ಸ್ವಲ್ಪಮಟ್ಟಿಗೆ ಸಾಧನೆ ಮಾಡುತ್ತಿರೋಣ’, ಎಂದು ಸಾಧಕರು ವಿಚಾರ ಮಾಡುತ್ತಾರೆ.

೧ ಆ. ಸಾಧಕರಿಗೆ ‘ವ್ಯಷ್ಟಿ ಸಾಧನೆಗಿಂತ ಸಾಧ್ಯವಾದಷ್ಟು ಸಮಷ್ಟಿ ಸೇವೆಯನ್ನು ಮಾಡೋಣ’, ಎಂದು ಅನಿಸುತ್ತದೆ; ಏಕೆಂದರೆ ಅವರ ಮನಸ್ಸಿನಲ್ಲಿ ವ್ಯಷ್ಟಿ ಸಾಧನೆಯಲ್ಲಾಗುವ ಸಂಘರ್ಷವನ್ನು ಸಹಿಸುವ ಸಿದ್ಧತೆ ಇರುವುದಿಲ್ಲ.

೨. ಸಾಧಕರ ಆಧ್ಯಾತ್ಮಿಕ ಪ್ರಗತಿ ಆಗದಿರುವ ಹಿಂದಿನ ಕಾರಣಗಳು

ಅ. ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಲು ಕೇವಲ ‘ಸಾಧಕರ ಸಾಧನೆಯ ಕಾಲಾವಧಿ ಮತ್ತು ಅವರು ಮಾಡಿದ ಸಮಷ್ಟಿ ಸಾಧನೆ’ ಇಷ್ಟೇ ಅಂಶಗಳು ಮಾತ್ರ ಕಾರಣವಲ್ಲ; ಸಾಧಕರು ಸಮಷ್ಟಿ ಸಾಧನೆಯೊಂದಿಗೆ ವ್ಯಷ್ಟಿ ಸಾಧನೆಯನ್ನೂ ಸಾತತ್ಯದಿಂದ ಮಾಡಬೇಕಿರುತ್ತದೆ.
ಆ. ಸಾಧಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಬೇಕು ಮತ್ತು ‘ಸ್ವಭಾವ ದೋಷ ಮತ್ತು ಅಹಂ ಕಡಿಮೆಯಾಗುತ್ತದೆಯೇ ಅಥವಾ ಇಲ್ಲ’, ಎಂಬುದರ ಅಧ್ಯಯನವನ್ನೂ ಮಾಡಬೇಕು.
ಇ. ಸಾಧನೆಯ ಪ್ರಯತ್ನಗಳಿಗೆ ಭಾವನಿರ್ಮಿತಿಯನ್ನು ಜೋಡಿಸಿ ಕೃತಜ್ಞತೆ ಮತ್ತು ಶರಣಾಗತಭಾವವನ್ನು ಹೆಚ್ಚಿಸುವುದಕ್ಕೆ ಗಮನ ಕೊಡಬೇಕು.
ಈ. ಸಾಧಕರಿಗೆ ಸಾಧನೆಯಲ್ಲಿ ಬರುವ ಮೊದಲು ‘ನಾವು ಎಷ್ಟು ಪಾಪಗಳನ್ನು ಮಾಡಿದ್ದೇವೆ ? ಎಷ್ಟು ಜನರ ಮನಸ್ಸನ್ನು ನೋಯಿಸಿದ್ದೇವೆ ? ಎಷ್ಟು ಕೊಡ-ಕೊಳ್ಳುವ ಲೆಕ್ಕ ನಿರ್ಮಾಣ ವಾಗಿದೆ ?’ ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಆ ಪಾಪ ಮತ್ತು ಕೊಡ-ಕೊಳ್ಳುವ ಲೆಕ್ಕವು ಪೂರ್ಣಗೊಳಿಸುವುದರಲ್ಲಿ ಸಾಧಕರ ಸಾಧನೆ ಖರ್ಚಾಗುತ್ತದೆ.
ಉ. ಸಾಧಕರಿಗೆ ‘ತಮ್ಮ ಈ ಜನ್ಮದ ಪ್ರಾರಬ್ಧ ಮತ್ತು ತಮ್ಮ ಪೂರ್ವಜನ್ಮದ ಸಾಧನೆ ಎಷ್ಟಿದೆ’, ಎಂಬುದೂ ಗೊತ್ತಿರುವುದಿಲ್ಲ. ಆದ್ದರಿಂದ ತೀವ್ರ ಪ್ರಾರಬ್ಧವನ್ನು ಅಲ್ಪ ಮಾಡುವುದರಲ್ಲಿ ಸಾಧನೆ ಖರ್ಚಾಗುತ್ತದೆ ಮತ್ತು ಅದಕ್ಕಾಗಿ ಅನೇಕ ವರ್ಷಗಳೂ ಬೇಕಾಗುತ್ತವೆ.
ಊ. ‘ಹಿಂದಿನ ಜನ್ಮಗಳಿಂದ ನಮಗೆ ಪೂರ್ವಜರ ಮತ್ತು ಅನಿಷ್ಟ ಶಕ್ತಿಗಳ ತೊಂದರೆ, ಅಂದರೇ ಆಧ್ಯಾತ್ಮಿಕ ತೊಂದರೆ ಎಷ್ಟಿತ್ತು ?’, ಎಂಬುದು ಸಾಧಕರಿಗೆ ಗೊತ್ತಿರುವುದಿಲ್ಲ. ಅನಿಷ್ಟ ಶಕ್ತಿಗಳೊಂದಿಗೆ ಹೋರಾಡುವುದರಲ್ಲಿ ಸಾಧಕರ ಈ ಜನ್ಮದ ಸಾಧನೆ ವೆಚ್ಚವಾಗುತ್ತದೆ.
ಎ. ಸಾಧಕರು ‘ನಾನು ಮಾಡುತ್ತಿರುವ ಸಾಧನೆ ಯೋಗ್ಯವೇ ಆಗಿದೆ’, ಎಂಬ ತೀರ್ಮಾನವನ್ನು ಸ್ವತಃ ತೆಗೆದುಕೊಂಡು ಜವಾಬ್ದಾರ ಸಾಧಕರ ಮಾರ್ಗದರ್ಶನದತ್ತ ನಿರ್ಲಕ್ಷ್ಯ ಮಾಡುತ್ತಾರೆ. ‘ಜವಾಬ್ದಾರ ಸಾಧಕರಲ್ಲಿ ಅಡಚಣೆಗಳನ್ನು ಕೇಳುವುದು ಬೇಡ, ನಾವೇ ನಮ್ಮ ಮನಸ್ಸಿನಂತೆ ಸಾಧನೆ ಮಾಡುತ್ತಿರಬೇಕು’, ಈ ರೀತಿ ಸಾಧಕರ ಅಯೋಗ್ಯ ಮಾನಸಿಕತೆ ಇರುತ್ತದೆ.

೩. ಸಾಧನೆಯ ಬಗೆಗಿನ ಅಯೋಗ್ಯ ವಿಚಾರಪ್ರಕ್ರಿಯೆಯ ಮೇಲೆ ಪರಿಹಾರೋಪಾಯ

೩ ಅ. ‘ಗುರುಕೃಪಾಯೋಗಾನುಸಾರ ಸಾಧನೆ’ ಮಾಡಲು ಸಿಗುವುದು, ಇದು ಬಹುದೊಡ್ಡ ಗುರುಕೃಪೆಯಾಗಿದೆ; ಅದಕ್ಕಾಗಿ ಸಾಧಕರು ಕೃತಜ್ಞತೆಯಿಂದಿರಬೇಕು ! : ಸಾಧಕರಿಗೆ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಛತ್ರದಲ್ಲಿ ಸಾಧನೆ ಮಾಡುವ ಅವಕಾಶ ಸಿಕ್ಕಿದೆ. ‘ಗುರುದೇವರು ‘ಗುರುಕೃಪಾಯೋಗಕ್ಕನುಸಾರ ಸಾಧನೆ’ ಮಾಡಲು ೧೦೦ ಕೋಟಿ ಹಿಂದೂಗಳಲ್ಲಿ ನಮ್ಮನ್ನು ಆರಿಸಿದ್ದಾರೆ’, ಇದು ಗುರುಗಳು ಸನಾತನದ ಪ್ರತಿಯೊಬ್ಬ ಸಾಧಕನಿಗೆ ಮಾಡಿರುವ ಅಪಾರ ಕೃಪೆಯಾಗಿದೆ. ಸನಾತನ ಸಂಸ್ಥೆಯು ಹೇಳುತ್ತಿರುವ ಸಾಧನೆಯು ಸ್ವಲ್ಪ ಕಠಿಣ ಎನಿಸುತ್ತಿದ್ದರೂ, ಈ ಸಾಧನೆಯ ಮಾರ್ಗವು ಪರಿಪೂರ್ಣ ಮತ್ತು ಮೋಕ್ಷಪ್ರಾಪ್ತಿಯದ್ದಾಗಿದೆ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರ ಅನೇಕ ಜನ್ಮಗಳ ಪ್ರಾರಬ್ಧವನ್ನು ಕಡಿಮೆ ಮಾಡಿದ್ದಾರೆ’, ಅದಕ್ಕಾಗಿ ಸಾಧಕರು ಕೃತಜ್ಞತೆಯಿಂದಿರಬೇಕು.

೩ ಆ. ಪರಾತ್ಪರ ಗುರು ಡಾಕ್ಟರರು ಇತರ ಗುರುಗಳಂತೆ ಸಾಧಕರ ಕಠಿಣ ಪರೀಕ್ಷೆ ತೆಗೆದುಕೊಳ್ಳದಿರುವುದು : ಪುರಾಣಗಳಲ್ಲಿನ ಕಥೆ ಗಳಲ್ಲಿ ಹೇಳಿದಂತೆ ಪರಾತ್ಪರ ಗುರು ಡಾಕ್ಟರರು ಎಂದಿಗೂ ಸಾಧಕರ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ಪ.ಪೂ. ಭಕ್ತರಾಜ ಮಹಾರಾಜರ ಗುರುಗಳು ಪ.ಪೂ. ಬಾಬಾರವರ ಪರೀಕ್ಷೆ ತೆಗೆದುಕೊಂಡ ಹಾಗೆ ಅಥವಾ ಪ.ಪೂ. ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾಕ್ಟರರ ಪರೀಕ್ಷೆಯನ್ನು ತೆಗೆದುಕೊಂಡ ಹಾಗೆ ಪರಾತ್ಪರ ಗುರು ಡಾಕ್ಟರರು ಸಾಧಕರ ಕಠಿಣ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ‘ಸಾಧನೆಗೆ ಬಂದ ನಂತರ ಗುರುದೇವರು ನಮ್ಮನ್ನು ಎಷ್ಟೊಂದು ಕಠಿಣ ಪ್ರಸಂಗಗಳಲ್ಲಿ ರಕ್ಷಣೆ ಮಾಡಿದ್ದಾರೆ’, ಎಂಬುದು ನಿತ್ಯ ಸ್ಮರಿಸಬೇಕು.

೩ ಇ. ಗುರುಗಳ ಆಜ್ಞೆ ಪಾಲಿಸಿ ಸಾಧನೆಯನ್ನು ಹೆಚ್ಚಿಸಬೇಕು ! : ಗುರುಗಳ ಆಜ್ಞಾಪಾಲನೆಯನ್ನು ಮಾಡಿ ಅವರು ಹೇಳಿದಂತೆ ತನು, ಮನ, ಧನ ಮತ್ತು ಬುದ್ಧಿಯನ್ನು ಅರ್ಪಿಸುತ್ತ ಸೇವೆ ಮತ್ತು ಸಾಧನೆಯನ್ನು ಮಾಡಬೇಕು ಮತ್ತು ತನ್ನ ಸಾಧನೆಯು ದಿನೇದಿನೇ ವೃದ್ಧಿಯಾಗುತ್ತಿದೆಯೇ ? ಎಂದು ಗಮನಿಸಬೇಕು.

೪. ಸಾಧಕರು ಅಂತರ್ಮುಖವಾಗಿ ಮುಂದಿನ ವಿಷಯಗಳ ಕಡೆಗೆ ಗಮನ ಕೊಡಬೇಕು !

ಅ. ‘ಪ್ರತಿಯೊಂದು ಕ್ಷಣ ನನ್ನ ಸಾಧನೆ ಆಗುತ್ತಿದೆಯೇ ?
ಆ. ಸಾಧನೆಯಲ್ಲಿ ಹಾನಿಕರವಾದಂತಹ ಭ್ರಷ್ಟಾಚಾರದಂತಹ ಅಯೋಗ್ಯ ಕೃತಿಯು ನನ್ನಿಂದ ಆಗುತ್ತಿಲ್ಲವಲ್ಲ ?
ಇ. ಕುಟುಂಬದಲ್ಲಿ ಸಾಧನೆ ಮಾಡದ ಅಥವಾ ಮಾಡುವ ವ್ಯಕ್ತಿಗಳೊಂದಿಗೆ ಸಾಧಕತ್ವದಿಂದ ಇರಲು ಸಾಧ್ಯವಾಗುತ್ತಿದೆಯೇ ?
ಈ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ, ಹಾಗೆಯೇ ಗುಣಸಂವರ್ಧನೆ ಮತ್ತು ಭಾವಜಾಗೃತಿ ಈ ವಿಷಯಗಳ ಗಾಂಭೀರ್ಯ ನನ್ನಲ್ಲಿ ಮೂಡಿದೆಯೇ ?’
ಸಾಧಕರು ತಮಗೆ ಹೀಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಅಂತರ್ಮುಖರಾಗಲು ಪ್ರಯತ್ನಿಸಬೇಕು. ಮನಸ್ಸಿನಲ್ಲಿ ಆಧ್ಯಾತ್ಮಿಕ ಪ್ರಗತಿಯ ವಿಚಾರವನ್ನು ಮಾಡದೇ ‘ಗುರ್ವಾಜ್ಞಪಾಲನೆ ಮಾಡುತ್ತಿದ್ದರೆ ಗುರುದೇವರು ಮುಂದಿನ ಮಾರ್ಗವನ್ನು ತೋರಿಸುವವರಿದ್ದಾರೆ’, ಎಂಬ ಶ್ರದ್ಧೆಯನ್ನು ಮನಸ್ಸಿನಲ್ಲಿ ಬಿಂಬಿಸಬೇಕು !
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಈ ಶಬ್ದಪುಷ್ಪಗಳನ್ನು ಅವರ ಚರಣಗಳಲ್ಲಿ ಕೃತಜ್ಞತಾಭಾವದಿಂದ ಅರ್ಪಿಸುತ್ತೇನೆ.’

– ಪೂ. ಅಶೋಕ ಪಾತ್ರೀಕರ (ಸನಾತನದ ೪೨ ನೇ ಸಂತರು, ವಯಸ್ಸು ೭೫ ವರ್ಷ) (೨೪.೬.೨೦೨೫)