
ದೇವಶಯನಿ (ಆಷಾಢ) ಏಕಾದಶಿಯಿಂದ ದೇವೋತ್ಥಾನ (ಕಾರ್ತಿಕ) ಏಕಾದಶಿಯವರೆಗೆ ಚಾತುರ್ಮಾಸವಿದೆ. ಇದು ಆಧ್ಯಾತ್ಮಿಕ ಸಂಪತ್ತನ್ನು ತುಂಬಿಕೊಳ್ಳುವ ಸಮಯವಾಗಿದೆ. ಮಳೆಗಾಲದಲ್ಲಿ ಹೆಚ್ಚು ಹಸಿವಾಗುವುದಿಲ್ಲ; ಹಾಗಾಗಿ ಉಪವಾಸ ಅಥವಾ ಒಪ್ಪತ್ತು ಊಟ ಮಾಡಲಾಗುತ್ತದೆ. ಜೀವಶಕ್ತಿ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ವ್ಯಯವಾಗದಿದ್ದರೆ, ಅದು ಶೇಖರಗೊಳ್ಳುತ್ತದೆ. ಶ್ರಾವಣ ಮಾಸದಲ್ಲಿ ಅನುಷ್ಠಾನ ಇತ್ಯಾದಿಗಳನ್ನು ಮಾಡಲು ಋಷಿಗಳು ಹೇಳಿದ್ದಾರೆ. ಈ ದಿನಗಳಲ್ಲಿ ನಾವು ದೇವರ ಮೇಲಿನ ನಮ್ಮ ನಿಷ್ಠೆಯನ್ನು ಹೆಚ್ಚಿಸಿಕೊಳ್ಳಬೇಕು. ಒಂದು ವಾರ, ೨ ವಾರ, ೪ ವಾರಗಳ ನಿಯಮ ಮಾಡಿಕೊಂಡು ಇಂದ್ರಿಯಗಳ ಲಾಲನೆ-ಪಾಲನೆಯಲ್ಲಿ ಮುಳುಗದೆ, ಜೀವನವನ್ನು ಸರಳವಾಗಿಟ್ಟುಕೊಂಡು ನಮ್ಮ ಸುಖಸ್ವರೂಪವಾದ ಅಂತರ್ಮುಖಿ ಆತ್ಮ-ಪರಮಾತ್ಮನಲ್ಲಿ ಬರುವ ಅಭ್ಯಾಸ ಮಾಡಿರಿ. ಜ್ಞಾನವನ್ನು ಕೇಳುವುದರಿಂದ ಮೋಕ್ಷ ಸಿಗುವುದಿಲ್ಲ, ಬದಲಿಗೆ ಅದನ್ನು ಕೇಳಿದ ನಂತರ ಅದರಲ್ಲಿ ಸ್ಥಿತನಾಗುವುದರಿಂದ (ಆಚರಣೆ ಮಾಡುವುದರಿಂದ) ಮುಕ್ತಿಯ ಅನುಭವ ಬರುತ್ತದೆ. ಕೇಳಿದ ಜ್ಞಾನವನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಂಡರೆ, ಪರಮಪದದ ಪ್ರಾಪ್ತಿಯ ಲಾಭವಾಗಬೇಕು, ಅದರಿಂದ ನೀವು ವಂಚಿತರಾಗುತ್ತೀರಿ.
ಸಾಧನೆಗೆ ಅಮೃತತುಲ್ಯವಾದ ಚಾತುರ್ಮಾಸ ಕಾಲ !
ಶಾಸ್ತ್ರ ಹೇಳುತ್ತದೆ, ನಾವು ವೇದಗಳ ಜ್ಞಾನವನ್ನು ಎಷ್ಟು ಶ್ರವಣ ಮಾಡಿದ್ದೇವೋ, ಅದರ ೧೦ ಪಟ್ಟು ಮನನ ಮಾಡಬೇಕು. ೧೦ ಪಟ್ಟು ಎಂದರೆ, ಶ್ರವಣದ ೧೦೦ ಪಟ್ಟು ನಿದಿಧ್ಯಾಸನ ಮಾಡಬೇಕು. ಮನನ ಮಾಡುವುದರ ಫಲವೇನು ? ಆತ್ಮದ ಬಗ್ಗೆ ಮತ್ತು ತನ್ನ ಸ್ವರೂಪದ ಬಗ್ಗೆ ಇದ್ದ ಸಂಶಯಗಳು ಸ್ವಲ್ಪ ಸ್ವಲ್ಪವಾಗಿ ತನ್ನಿಂದ ತಾನೇ ನಿವೃತ್ತಿಯಾಗುತ್ತವೆ. ನಿದಿಧ್ಯಾಸನ ಮಾಡುವುದರ ಫಲವೇನು ? ಆನಂದ ಸಿಗುತ್ತದೆ. ಸಾಧನೆಗೆ ಅಮೃತತುಲ್ಯವಾದ ಈ ಚಾತುರ್ಮಾಸ ಕಾಲದ ಲಾಭವನ್ನು ಪಡೆದು ಪರಮಾತ್ಮ ಪ್ರಾಪ್ತಿಯ ಹಾದಿಯಲ್ಲಿ ಶೀಘ್ರವಾಗಿ ಮುನ್ನಡೆಯಿರಿ !
(ಕೃಪೆ : ‘ಋಷಿಪ್ರಸಾದ’, ೧೦ ಜುಲೈಯಿಂದ ೫ ನವೆಂಬರ್ ೨೦೨೩)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !