ಇಸ್ರೇಲ್‌ ಮತ್ತು ಇರಾನ್‌ ಯುದ್ಧದಿಂದ ಭಾರತ ಕಲಿಯಬೇಕಾದ ಪಾಠ

ಇರಾನ್‌-ಇಸ್ರೇಲ್‌ ಯುದ್ಧದಲ್ಲಾದ ಹಾನಿ

ಇಸ್ರೇಲ್‌ ಮತ್ತು ಇರಾನ್‌ ಇವುಗಳ ನಡುವೆ ಇತ್ತೀಚೆಗೆ ನಡೆದ ಸಂಘರ್ಷದಿಂದ, ವಿಶೇಷವಾಗಿ ಇಸ್ರೇಲ್‌ನ ‘ಆಪರೇಷನ್‌ ರೈಸಿಂಗ್‌ ಲಾಯನ್‌’ನಿಂದ, ಭಾರತಕ್ಕೆ ಧೋರಣಾತ್ಮಕ ಕಾರ್ಯತಂತ್ರ, ಸೇನಾ ಕಾರ್ಯಾಚರಣೆ ಮತ್ತು ಆರ್ಥಿಕ ಕ್ಷೇತ್ರ ಗಳಲ್ಲಿ ಅನೇಕ ಪ್ರಮುಖ ಪಾಠಗಳು ದೊರೆಯುತ್ತವೆ.

ಭಾರತಕ್ಕೆ ಧೋರಣಾತ್ಮಕ ಪಾಠಗಳು

೧. ಸಕ್ರಿಯ ಗುಪ್ತಚರ ಮತ್ತು ರಹಸ್ಯ ಕಾರ್ಯಾಚರಣೆಗಳ ಅವಶ್ಯಕತೆ

ಅ. ಪಾಠ : ಇರಾನ್‌ನ ಪ್ರತಿದಾಳಿಯ ಸಾಮರ್ಥ್ಯವನ್ನು ಕುಗ್ಗಿಸಲು ಇಸ್ರೇಲ್‌ ಆಳವಾದ ಗುಪ್ತಚರ ಮಾಹಿತಿ ಮತ್ತು ಇರಾನ್‌ನಲ್ಲಿ ರಹಸ್ಯ ವಿಧ್ವಂಸಕ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಬಳಸಿದೆ. ಅದು ವಾಯುರಕ್ಷಣಾ ವ್ಯವಸ್ಥೆ, ‘ಬ್ಯಾಲೆಸ್ಟಿಕ್’ (ಅಂತರಖಂಡದ) ಕ್ಷಿಪಣಿಗಳ ಉಡಾವಣೆ ಮತ್ತು ‘ಕಮಾಂಡ್‌ ಅಂಡ್‌ ಕಂಟ್ರೋಲ್’ (ನಿರ್ದೇಶನ ಮತ್ತು ನಿಯಂತ್ರಣ ಕೊಠಡಿ) ರಚನೆಗಳನ್ನು ಗುರಿಯಾಗಿಸಿಕೊಂಡಿತು.

ಆ. ಭಾರತಕ್ಕೆ ಪಾಠ : ಭಾರತವು ಸಹ ಶತ್ರು ರಾಷ್ಟ್ರಗಳಲ್ಲಿ ಮಾನವ ಗುಪ್ತಚರ (ಊಊಒಈಓಖಿ) ಕ್ಷಮತೆಯನ್ನು ವಿಕಾಸಗೊಳಿಸುವುದು ಆವಶ್ಯಕವಾಗಿದೆ. ಗುಪ್ತ ಕಾರ್ಯಾಚರಣೆಗಳಿಗಾಗಿ ವಿಶೇಷ ಪಡೆಗಳನ್ನು ಸಿದ್ಧಪಡಿಸಿ, ಅವುಗಳನ್ನು ಗುಪ್ತಚರ ಸಂಸ್ಥೆಗೆ ಜೋಡಿಸು ವುದು ಅವಶ್ಯಕವಾಗಿದೆ. ಸಣ್ಣ, ಸ್ಫೋಟಕ ಡ್ರೋನ್‌ಗಳಂತಹ ತಂತ್ರಜ್ಞಾನವನ್ನು ಬಳಸಿ ಪೂರ್ವಭಾವಿ ದಾಳಿಗಳನ್ನು ನಡೆಸಿ ದಾರಿ ತಪ್ಪಿಸುವತ್ತ ಗಮನ ಹರಿಸಬೇಕು.

೨. ನಾಯಕತ್ವದ ಸ್ಥಾನಗಳ ಮೇಲೆ ಗುರಿ-ಕೇಂದ್ರಿತ ದಾಳಿಗಳು

ಅ. ಪಾಠ : ಇಸ್ರೇಲ್‌ ಇರಾನಿನ ‘ಇಸ್ಲಾಮಿಕ್‌ ರೆವಲ್ಯೂಷನ್‌ ಗಾರ್ಡ್ ಕಾರ್ಪ್‌’ (ಐ.ಆರ್‌.ಜಿ.ಸಿ.) ನ ವಾಯುಪಡೆಯ ಬಂಕರ್‌ಗಳ ಮೇಲೆ ದಾಳಿ ಮಾಡಿ ಕೆಲವು ಹಿರಿಯ ಕಮಾಂಡರಗಳನ್ನು ಕೊಂದಿತು. ಇದರಿಂದ ಇರಾನ್‌ನ ಪ್ರತಿದಾಳಿಯಲ್ಲಿ ಗೊಂದಲ ಉಂಟಾಯಿತು.

ಆ. ಭಾರತಕ್ಕೆ ಪಾಠ : ಸಂಘμರ್Àದ ಸಂದರ್ಭದಲ್ಲಿ ಶತ್ರುವಿನ ನಾಯಕತ್ವ, ‘ಕಮಾಂಡ್‌ ಎಂಡ್‌ ಕಂಟ್ರೋಲ್’ ಕೇಂದ್ರಗಳ ಮೇಲೆ ನಿಖರ ದಾಳಿಗಳನ್ನು ನಡೆಸಿ ಅವರ ಪ್ರತೀಕಾರ ಶಕ್ತಿಯನ್ನು ಕುಗ್ಗಿಸುವುದು ಮಹತ್ವದ್ದಾಗಿರುತ್ತದೆ. ಭಾರತವು ಇಂತಹ ನಿಖರ ಸಾಮರ್ಥ್ಯವನ್ನು ವಿಕಾಸಗೊಳಿಸುವುದು ಮಹತ್ವದ್ದಾಗಿದೆ.

೩. ಶತ್ರುವಿನ ವಾಯುರಕ್ಷಣೆಯ ನಾಶ

ಅ. ಪಾಠ : ಇಸ್ರೇಲ್‌ ಇರಾನ್‌ನ ವಾಯುರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿ ಅದರ ಮೇಲೆ ಪ್ರಾಬಲ್ಯವನ್ನು ಗಳಿಸಿತು.

ಆ. ಭಾರತಕ್ಕೆ ಪಾಠ : ಯಾವುದೇ ಕಾರ್ಯಾಚರಣೆಗೆ ಶತ್ರುವಿನ ವಾಯುರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸುವುದು ಆವಶ್ಯಕ. ಭಾರತವು ಎಲೆಕ್ಟ್ರಾನಿಕ್‌ ಯುದ್ಧ, ಎಂಟಿ-ರೇಡಿಯೇಶನ್‌ (ವಿರೋಧಿ ವಿಕಿರಣಗಳು) ಕ್ಷಿಪಣಿಗಳು, ಡ್ರೋನ್‌ಗಳನ್ನು ಬಳಸಿಕೊಂಡು ತನ್ನ ಸಾಮರ್ಥ್ಯವನ್ನು ಬಲಪಡಿಸುವುದು ಆವಶ್ಯಕ.

೪. ಬಹುಆಯಾಮದ ಮತ್ತು ವಿಷಮ ಯುದ್ಧ ತಂತ್ರ

ಅ. ಪಾಠ : ಇಸ್ರೇಲ್‌ ಪಾರಂಪರಿಕ ವೈಮಾನಿಕದಾಳಿಗಳು, ವಿಶೇಷ ಪಡೆಗಳ ಕಾರ್ಯಾಚರಣೆಗಳು ಮತ್ತು ಶತ್ರು ಪ್ರದೇಶದಲ್ಲಿ ಗುಪ್ತ ಡ್ರೋನ್‌ ‘ಬೇಸ್’ (ನೆಲೆ) ಗಳನ್ನು ಬಳಸಿದೆ. ನಾಗರಿಕರ ವಾಹನಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಡ್ರೋನ್‌ಗಳನ್ನು ತಂದು ದಾಳಿಗಳನ್ನು ನಡೆಸಿತು.
ಆ. ಭಾರತಕ್ಕೆ ಪಾಠ : ಭಾರತವು ಭೂ, ಜಲ, ಆಕಾಶ, ಅಂತರಿಕ್ಷ, ಸೈಬರ್‌ – ಈ ಎಲ್ಲಾ ಕ್ಷೇತ್ರಗಳಲ್ಲಿ ಸಾಮರ್ಥ್ಯವನ್ನು ವಿಕಾಸಗೊಳಿಸಬೇಕು. ವಿಷಮ ಯುದ್ಧತಂತ್ರ, ಅಪಾಯದ ಸೃಷ್ಟಿ, ತಾಂತ್ರಿಕ ವಂಚನೆ ಇವುಗಳ ಬಳಕೆಯು ಅತ್ಯಗತ್ಯವಾಗಿದೆ.

೫. ತಾಂತ್ರಿಕ ಪ್ರಗತಿ ಮತ್ತು ಸ್ವದೇಶಿ ಉತ್ಪಾದನೆ

ಅ. ಪಾಠ : ಇಸ್ರೇಲ್‌ನ ತಂತ್ರಜ್ಞಾನದಿಂದಲೇ ಈ ಸಂಕೀರ್ಣ ಕಾರ್ಯಾಚರಣೆ ಯಶಸ್ವಿಯಾಯಿತು.
ಆ. ಭಾರತಕ್ಕೆ ಪಾಠ : ‘ಆತ್ಮನಿರ್ಭರ ಭಾರತ’ ಕಾರ್ಯಕ್ರಮದ ಅಡಿಯಲ್ಲಿ ಸ್ವದೇಶಿ ರಕ್ಷಣಾ ಸಂಶೋಧನೆ ಮತ್ತು ತಂತ್ರಜ್ಞಾನದ ವಿಕಾಸ, ಕೃತಕ ಬುದ್ಧಿಮತ್ತೆ (ಎ.ಐ.) ಆಧಾರಿತ ಗುಪ್ತಚರ ಮತ್ತು ಕಣ್ಗಾವಲು ವ್ಯವಸ್ಥೆಗಳು, ಡ್ರೋನ್‌ಗಳು, ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳು ಹಾಗೂ ಸೈಬರ್‌ ಯುದ್ಧತಂತ್ರದ ಮೇಲೆ ಹೆಚ್ಚು ಗಮನ ಹರಿಸಬೇಕು.

೬. ಪರಮಾಣು ನಿರ್ಬಂಧ ಮತ್ತು ಸಂಘರ್ಷ ವ್ಯವಸ್ಥಾಪನೆ

ಅ. ಪಾಠ : ಇಸ್ರೇಲ್‌ ‘ಪ್ರಿ-ಎಂಪ್ಟಿವ್‌ ಸ್ಟ್ರೈಕ್‌ ಮಾಡಿದುದರಿಂದ (ಇನ್ನೊಂದು ದೇಶದಿಂದ ಆಕ್ರಮಣದ ಸಾಧ್ಯತೆಯಿದ್ದಾಗ ಅದಕ್ಕೂ ಮೊದಲೇ ದೇಶವು ಸ್ವತಃ ಆಕ್ರಮಣ ಮಾಡುವುದು) ಇರಾನ್‌ನಿಂದಾಗುವ ದೊಡ್ಡ ಪರಮಾಣು ದಾಳಿಯನ್ನು ತಪ್ಪಿಸಿತು.
ಆ. ಭಾರತಕ್ಕೆ ಪಾಠ : ‘ಮೊದಲು ಬಳಸದಿರುವುದು’ ಮತ್ತು ‘ವಿಶ್ವಾಸಾರ್ಹ ಕನಿಷ್ಠ ಪ್ರತಿಬಂಧಕ’ ನೀತಿಗಳು ಮುಖ್ಯ. ಭಾರತವು ಪರಮಾಣು ನೀತಿ ಮತ್ತು ಸಂಘರ್ಷ ನಿರ್ವಹಣಾ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವುದು ಅವಶ್ಯಕವಾಗಿದೆ. ‘ಬೃಹತ್‌ ಪ್ರತಿದಾಳಿ’ ನೀತಿಯನ್ನು ಸಹ ಮರುಪರಿಶೀಲಿಸುವುದು ಮುಖ್ಯ.

ಭಾರತಕ್ಕೆ ಆರ್ಥಿಕ ಮತ್ತು ಭೂ-ರಾಜಕೀಯ ಪಾಠಗಳು

೧. ಇಂಧನ ಸುರಕ್ಷತೆಯ ಅವಶ್ಯಕತೆ

ಅ. ಪಾಠ : ಸಂಘರ್ಷದಿಂದ ತೈಲ ಬೆಲೆ ಏರಿತು. ಭಾರತವು ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿಸಿದೆ.
ಆ. ಪಾಠ : ತೈಲ ಮೂಲಗಳ ವಿಕೇಂದ್ರೀಕರಣ, ಸಂರಕ್ಷಿತ ದಾಸ್ತಾನು ಮತ್ತು ಪರ್ಯಾಯ ಮಾರ್ಗಗಳ ವಿಕಾಸ ಮಹತ್ವದ್ದಾಗಿದೆ. ‘ಭಾರತ ಮಧ್ಯಪ್ರಾಚ್ಯ ಯುರೋಪ್‌ ಆರ್ಥಿಕ ಕಾರಿಡಾರ್’ (ಐ.ಎಮ್‌.ಇ.ಸಿ.) ಯೋಜನೆಯ ಕಾರ್ಯಸಾಧ್ಯತೆಯ ಮೇಲೆ ಇದು ಪರಿಣಾಮ ಬೀರುತ್ತದೆ.

೨. ವ್ಯಾಪಾರ ಮತ್ತು ಪೂರೈಕೆ ಸರಣಿಯ ಬಲವರ್ಧನೆ

ಅ. ಪಾಠ : ‘ಹಾರ್ಮುಜ’ ಮತ್ತು ‘ರೆಡ್‌ ಸೀ’ಯಂತಹ ಪ್ರದೇಶಗಳಲ್ಲಿ ಸಂಘರ್ಷದಿಂದ ಜಾಗತಿಕ ವ್ಯಾಪಾರಕ್ಕೆ ಅಡಚಣೆ ಅಗಬಹುದು.
ಆ. ಪಾಠ : ಪರ್ಯಾಯ ಹಡಗು ಮಾರ್ಗಗಳು, ನೌಕಾಪಡೆಯ ಸಕ್ಷಮ ಉಪಸ್ಥಿತಿ ಮತ್ತು ಸುರಕ್ಷಿತ ವ್ಯಾಪಾರ ಸಮುದ್ರ ಮಾರ್ಗಗಳ ಆವಶ್ಯಕತೆ ಇದೆ.

೩. ವಿದೇಶಗಳಲ್ಲಿನ ಭಾರತೀಯರ ಸುರಕ್ಷತೆ

ಅ. ಪಾಠ : ಬಿಕ್ಕಟ್ಟಿನಲ್ಲಿ ವಿದೇಶಗಳಲ್ಲಿನ ಭಾರತೀಯರ ಸ್ಥಳಾಂತರವು
ಮಹತ್ವದ್ದಾಗಿದೆ.
ಆ. ಪಾಠ : ಮಧ್ಯಪ್ರಾಚ್ಯದಲ್ಲಿರುವ ಭಾರತೀಯರಿಗೆ ತಕ್ಷಣದ ಸ್ಥಳಾಂತರ ಯೋಜನೆ, ಸಂವಹನ ವ್ಯವಸ್ಥೆ ಮತ್ತು ‘ಲಾಜಿಸ್ಟಿಕ್’ (ಸರಬರಾಜು) ಸಿದ್ಧತೆ ಮಹತ್ವದ್ದಾಗಿದೆ !

೪. ರಾಜತಾಂತ್ರಿಕತೆಯ ಸಮತೋಲನ

ಅ. ಪಾಠ : ಭಾರತಕ್ಕೆ ಇರಾನ (ಚಾಬಹಾರ್‌ ಬಂದರು) ಮತ್ತು ಇಸ್ರೇಲ್‌ (ರಕ್ಷಣೆ, ಪಶ್ಚಿಮ ಏμಯ್Á ಕ್ವಾಡ್‌ ಮತ್ತು ‘ಐ.ಎಮ್‌.ಇ.ಸಿ.’) ಎರಡೂ ರಾಷ್ಟ್ರಗಳೊಂದಿಗೆ ಸಂಬಂಧಗಳಿವೆ.
ಅ. ಪಾಠ : ಭಾರತವು ಮಧ್ಯಸ್ಥಿಕೆ ವಹಿಸುವ ಬಗ್ಗೆ ವಿಚಾರ ಮಾಡಬೇಕು. ಸಂಘμರ್Àವನ್ನು ಕಡಿಮೆ ಮಾಡಲು ರಾಜತಂತ್ರ ಮತ್ತು ಸಮತೋಲಿತ ಪಾತ್ರವನ್ನು ವಹಿಸುವುದು ಅವಶ್ಯಕವಾಗಿದೆ.
ತೀರ್ಮಾನ

ಆಪರೇಷನ್ ರೈಸಿಂಗ್‌ ಲಾಯನ್’ ಭಾರತಕ್ಕೆ ಮಹತ್ವದ್ದಾಗಿದೆ. ಇದು ಬಹುಆಯಾಮದ ರಕ್ಷಣಾ ನೀತಿಯ ಅಂದರೆ, ಸುಧಾರಿತ ಗುಪ್ತಚರ, ನಿಖರ ದಾಳಿಗಳು, ಬಹು-ಪದರು ಯುದ್ಧತಂತ್ರ, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸ್ಥಿರತೆಯ ಆರ್ಥಿಕ-ರಾಜಕೀಯ ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವ ರಾಜತಾಂತ್ರಿಕತೆಯ ಆವಶ್ಯಕತೆಯನ್ನು ಒತ್ತಿ ಹೇಳುತ್ತದೆ.

– ಬ್ರಿಗೇಡಿಯರ್‌ ಹೇಮಂತ ಮಹಾಜನ (ನಿವೃತ್ತ), ಪುಣೆ. (೧೪.೬.೨೦೨೫)