‘ಹಿಸ್‌ ಸ್ಟೋರಿ ಆಫ್‌ ಇತಿಹಾಸ್’ : ಸಾಮ್ಯವಾದಿಗಳ ಷಡ್ಯಂತ್ರವನ್ನು ತೆರೆದಿಡುವ ಚಲನಚಿತ್ರ !

ಶುಕ್ರವಾರ ಮೇ ೩೦ ರಂದು ‘ಹಿಸ್‌ ಸ್ಟೋರಿ ಆಫ್‌ ಇತಿಹಾಸ್’ ಎಂಬ ವಿಭಿನ್ನ ಹೆಸರಿನ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಭಾರತದ ಇತಿಹಾಸದಲ್ಲಿ ಯಾವಾಗ ಯಾರೆಲ್ಲ ಹಾಗೂ ಹೇಗೆ ಹಸ್ತಕ್ಷೇಪ ಮಾಡಿದರು, ಎಂಬುದರ ಪೂರ್ಣ ಒಳಸಂಚಿನ ವಿಷಯದ ಚಲನಚಿತ್ರ ಇದಾಗಿದೆ. ವಾಸ್ತವಿಕತೆಯನ್ನು ನೋಡುವಾಗ ಇದೊಂದು ವಿಡಿಯೋದ ವಿಷಯವೆಂದು ತಿಳಿಯಲಾಗುತ್ತದೆ; ಆದರೆ ದೊಡ್ಡ ಸಂಖ್ಯೆಯಲ್ಲಿನ ವೀಕ್ಷಕರಿಗೆ ತಲುಪಿಸುವ ಉದ್ದೇಶದಿಂದ ‘ವಾಕ್ಸಿನ್‌ ವಾರ್‌’ನ ಹಾಗೆಯೆ ಇದನ್ನು ಕೂಡ ಚಲನಚಿತ್ರದ ಸ್ವರೂಪದಲ್ಲಿ ತಯಾರಿಸಲಾಯಿತು. ಆಂಗ್ಲರು ಮತ್ತು ಅವರು ಹೋದನಂತರ ೧೨೫ ವರ್ಷ ಆಂಗ್ಲರೇ ಆಗಿರುವ ನೆಹರು ಮತ್ತು ಅವರ ಗ್ಯಾಂಗ್ಸ್ಟರ್‌ಗಳಂತಹ ಮೌಲಾನಾ ಆಝಾದ್‌ ಹಾಗೂ ಸಾಮ್ಯವಾದಿ ವಿಚಾರಶೈಲಿಯ ಇತಿಹಾಸಕಾರರು ಭಾರತದ ಇತಿಹಾಸದಲ್ಲಿ ಗಂಭೀರವಾಗಿ ಹಸ್ತಕ್ಷೇಪ ಮಾಡಿ ಭೂತಕಾಲವನ್ನು ವಿಕೃತಗೊಳಿಸಿದರು, ಇದು ‘ಹಿಸ್‌ ಸ್ಟೋರಿ ಆಫ್‌ ಇತಿಹಾಸ್’ ಈ ಚಲನಚಿತ್ರದ ಸಂಕಲ್ಪನೆಯಾಗಿದೆ.

೧. ಭೌತಶಾಸ್ತ್ರದ ಪ್ರಾಧ್ಯಾಪಕನಿಂದ ಇತಿಹಾಸವನ್ನು ಸುಧಾರಣೆ ಮಾಡುವ ಪ್ರಯತ್ನ

ಭೌತಶಾಸ್ತ್ರದ ಪ್ರಾಧ್ಯಾಪಕನಿಗೆ ಒಮ್ಮೆ ತನ್ನ ೧೦-೧೨ ವರ್ಷದ ಮಗಳು ಶಾಲೆಯಲ್ಲಿ ಕಲಿಯುತ್ತಿರುವ ಇತಿಹಾಸದ ಪಠ್ಯಪುಸ್ತಕದಲ್ಲಿ ಸತ್ಯಾಂಶ ಕಡಿಮೆಯಿದ್ದು ತಲೆಬುಡ ಇಲ್ಲದ ಮಾಹಿತಿಯೇ ಹೆಚ್ಚು ಪ್ರಮಾಣದಲ್ಲಿದೆ ಎಂಬುದು ಅರಿವಾಗುತ್ತದೆ. ಆಮೇಲೆ ಅವನ ಅಭಿಯಾನ ಆರಂಭವಾಗುತ್ತದೆ-ಭಾರತದ ನಿಜವಾದ ಇತಿಹಾಸ ಬೆಳಕಿಗೆ ಬರಬೇಕು ಹಾಗೂ ಸುಳ್ಳು ಇತಿಹಾಸವನ್ನು ಪಠ್ಯಪುಸ್ತಕದಿಂದ ತೆಗೆಯಬೇಕು ! ಸುಬೋಧ ಭಾವೆ ಚಲನಚಿತ್ರದ ನಾಯಕ ಆಗಿದ್ದು ಅವರು ಮರಾಠಿ ಚಲನಚಿತ್ರ ಮತ್ತು ನಾಟಕಗಳಿಗಾಗಿ ಪ್ರಖ್ಯಾತರಾಗಿದ್ದಾರೆ. ಅವರು ಒಳ್ಳೆಯ ಕಲಾವಿದರಾಗಿದ್ದಾರೆ. ಮೃಣಾಲ ಸೇನ್, ಶ್ಯಾಮ ಬೆನೆಗಲ್‌ ಮತ್ತು ಮಣಿ ಕೌಲ್‌ ಇವರಂತಹ ನಿರ್ಮಾಪಕರು ೭೦ ನೇ ದಶಕದಲ್ಲಿ ಯಾವ ರೀತಿ ಸಾಮ್ಯವಾದಿ ವಿಚಾರದ ಚಲನಚಿತ್ರ ತಯಾರಿಸುತ್ತಿದ್ದರೊ, ಹಾಗೆಯೇ ಪ್ರಸ್ತುತ ಕಾಲದ ಸಾಮ್ಯವಾದಿಗಳ ಕರಾಮತ್ತನ್ನು ಬಯಲಿಗೆಳೆಯುವ ಕತೆಯಿರುವ ಈ ಚಲನಚಿತ್ರವನ್ನು ನೋಡಲು ಚಲನಚಿತ್ರಗೃಹಗಳಿಗೆ ಹೋಗುವ ಮಾನಸಿಕತೆ ಬೇಕು. ಹೊನೋಲುಲು ಅಥವಾ ಟಿಂಬಕಟೂವಿನ ಚಲನಚಿತ್ರ ಮಹೋತ್ಸವದಲ್ಲಿ ಇರಾನಿಯನ್, ಫ್ರೆಂಚ್, ಕೊರಿಯನ್‌ ಅಥವಾ ಇನ್ನಿತರ ಯಾವುದೇ ವಿಚಿತ್ರ ಭಾಷೆಯಲ್ಲಿನ ಚಲನಚಿತ್ರಗಳನ್ನು ಹೊಗಳುವಾಗ ಆಯಾಸಪಡದÀ ಆಂಗ್ಲ ಭಾಷೆಯ ಜಾತ್ಯತೀತ (ಸೆಕ್ಯುಲರ್) ಚಲನಚಿತ್ರಗಳ ಸಮೀಕ್ಷಕರು ತಪ್ಪದೇ ಈ ಚಲನಚಿತ್ರವನ್ನು ನೋಡÀಬೇಕು ಹಾಗೂ ಜೊತೆಗೆ ಒಂದು ಡಜನ್‌ ‘ಬರ್ನಾಲ್‌ ಟ್ಯೂಬ್’ ಕೂಡ ಒಯ್ಯಬೇಕು.

೨. ವಿಕೃತ ಸಮೀಕ್ಷಕ ದೃಷ್ಟಿಯನ್ನು ತ್ಯಜಿಸಬೇಕು !

ಇದು ತುಂಬಾ ಕ್ಲಿಷ್ಟ ಹಾಗೂ ಕಠಿಣ ವಿಷಯದ ಚಲನಚಿತ್ರ ವಾಗಿದೆ. ಕಡಿಮೆ ಖರ್ಚಿನಲ್ಲಿ ತಯಾರಿಸಿರುವುದರಿಂದ ಹೆಚ್ಚು ಪ್ರಮಾಣದಲ್ಲಿ ಅದರ ಪ್ರಚಾರವಾಗಿಲ್ಲ. ಅತೀ ಕಡಿಮೆ ಚಲನಚಿತ್ರಗೃಹಗಳಲ್ಲಿ ಇದರ ಪ್ರದರ್ಶನವಾಗುತ್ತಿದೆ. ನನ್ನ ಮನೆಗೆ ಸಮೀಪವಿರುವ ಚಲನಚಿತ್ರಗೃಹದಲ್ಲಿ ಮೊದಲ ರಾತ್ರಿ ೧೧ ಗಂಟೆಗೆ ಇದರ ಮೊದಲ ಆಟ ಪ್ರದರ್ಶನವಾಗಿತ್ತು. ಆದ್ದರಿಂದ ನಾನು ನೇರವಾಗಿ ‘ಮರೀನ್‌ ಲೈನ್ಸ್‌’ಗೆ ಹೋಗಿ ೨ ಗಂಟೆ ೧೦ ನಿಮಿಷಗಳ ಮೊದಲ ದಿನದ ಮೊದಲ ಪ್ರದರ್ಶನವನ್ನು ನೋಡಿದೆ. ತುಂಬಾ ಸಮಾಧಾನವಾಯಿತು. ೨೦೧೪ ರಿಂದ ಭಾರತ ‘ರಾಷ್ಟ್ರ’ವೆಂದು ಬದಲಾಗುತ್ತಿದೆ. ಭಾರತದಲ್ಲಿನ ಚಲನಚಿತ್ರಗಳೂ ಬದಲಾಗುತ್ತಿವೆ, ‘ಕಾಶ್ಮೀರ ಫೈಲ್ಸ್‌’ನಿಂದ ಅದರ ಆರಂಭವಾಗಿದೆ. ನೀವು ತಿಳಿದಂತೆ ಭಾರತದಲ್ಲಿ ‘ವ್ಯಾಕ್ಸಿನ್‌ ವಾರ್‌’, ‘ಆರ್ಟಿಕಲ್‌ ೩೭೦’, ‘ಸಾಬರ್‌ಮತಿ ಎಕ್ಸ್‌ಪ್ರೆಸ್‌’, ‘ರಾಕೆಟ್ರಿ’ ಅಥವಾ ‘ಕೇರಳ ಸ್ಟೋರಿ’ಯಂತಹ ಚಲನಚಿತ್ರಗಳು ತಯಾರಾಗುತ್ತವೆ ! ಇದು ಕೇವಲ ಆರಂಭವಾಗಿದೆ. ಭವಿಷ್ಯದಲ್ಲಿ ಇಂತಹ ಅನೇಕ ತೇಜಸ್ವಿ ವಿಷಯಗಳ ಕುರಿತು ಚಲನಚಿತ್ರಗಳು ತಯಾರಾಗುವವು. ಹೊಸಯುಗದ ಪ್ರತಿಭಾವಂತ ನಿರ್ಮಾಪಕರು ತಮ್ಮ ಪ್ರತಿಭೆಯನ್ನು ಗುರುತಿಸಬೇಕೆಂದು, ಸಾಮ್ಯವಾದದ ಕಡೆಗೆ ಹೋಗದೆ ಯೋಗ್ಯ ದಿಕ್ಕಿನಲ್ಲಿ ಮುಂದುವರಿಯುವರು. ಅವರಿಗೆ ಸಾಕಷ್ಟು ಹಣ ಹಾಗೂ ಯೋಗ್ಯವಾದ ಪ್ರದರ್ಶನವೂ ಸಿಗುವುದು; ಏಕೆಂದರೆ ಇಂತಹ ಚಲನಚಿತ್ರಗಳನ್ನು ‘ಸೂಪರ್‌ ಹಿಟ್’ ಮಾಡುವ ವೀಕ್ಷಕರು ಕೂಡ ತಯಾರಾಗಿರಬಹುದು; ಮುಂದಿನ ದಶಕದಲ್ಲಿ ಇಂತಹ ಅನೇಕ ಚಲನಚಿತ್ರಗಳು ತಯಾರಾಗಲಿಕ್ಕಿವೆ; ಆದರೆ ಇಂತಹ ಚಲನಚಿತ್ರಗಳನ್ನು ಇಂದು ಚಲನಚಿತ್ರಗೃಹಗಳಿಗೆ ಹೋಗಿ ವೀಕ್ಷಿಸಬೇಕು. ‘ಈ ಚಲನಚಿತ್ರದಲ್ಲಿ ಇಂತಹ ಕೊರತೆಯಿದೆ’, ಅಂತಹ ಕೊರತೆಯಿದೆ’, ಎನ್ನುವ ವಿಕೃತ ಸಮೀಕ್ಷೆ ಮಾಡದೆ ಅದರಿಂದ ಆನಂದ ಪಡೆಯಬೇಕು. ಇಂತಹ ಕಠಿಣ ವಿಷಯದ ಕುರಿತು ಯಾರಿಗಾದರೂ ಚಲನಚಿತ್ರ ಮಾಡುವ ಇಚ್ಛೆ ಆಯಿತು. ಅವರÀÄ ಕೆಲವು ಕೋಟಿ ರೂಪಾಯಿಗಳನ್ನು ಸುರಿದು ಅಪಾಯವನ್ನು ಎದುರಿಸಿ ಹಗಲಿರುಳು ಶ್ರಮಿಸಿ ಚಲನಚಿತ್ರವನ್ನು ತಯಾರಿಸಿದರÀÄ, ಪ್ರದರ್ಶನವೂ ಆಯಿತು; ಏಕೆಂದರೆ ೨೦೧೪ ರ ಮೊದಲು ಇದು ಅಸಾಧ್ಯವಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ‘ಹಿಸ್‌ ಸ್ಟೋರಿ ಆಫ್‌ ಇತಿಹಾಸ್’ ಚಲನಚಿತ್ರವು ಸತ್ಯ ಘಟನೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಚಲನಚಿತ್ರದ ನಿರ್ಮಾಪಕ-ಲೇಖಕ-ನಿರ್ದೇಶಕ ಮನಪ್ರೀತ ಸಿಂಹ ಧಾಮಿ ಇವರ ಜೀವನದಲ್ಲಿ ಹೀಗೆ ಘಟಿಸಿರಬಹುದೇ, ಎಂಬುದು ಗೊತ್ತಿಲ್ಲ; ಆದರೆ ಈ ಚಲನಚಿತ್ರದ ಒಬ್ಬ ವೀಕ್ಷಕನ ಜೀವನದಲ್ಲಿ ಹೀಗೆ ಘಟಿಸಿರುವುದಂತೂ ನಿಜ.

೩. ಇತಿಹಾಸದ ವಿಕೃತಿಯ ಸ್ವಾನುಭವ

ನಾನು ಕೆಲವು ವರ್ಷ ಅಹಮದಾಬಾದ್‌ನಲ್ಲಿ (ಇಂದಿನ ಕರ್ಣಾವತಿಯಲ್ಲಿ) ಪತ್ರಕರ್ತನಾಗಿದ್ದೆನು. ೨೦೦೨ ರ ಗೋಧ್ರಾ ಹತ್ಯಾಕಾಂಡವಾಗಿ ೧-೨ ವರ್ಷವಾಗಿರಬಹುದು. ನನ್ನ ಮಕ್ಕಳು ರಜೆಯಲ್ಲಿ ನನ್ನನ್ನು ಭೇಟಿಯಾಗಲು ಬರುತ್ತಿದ್ದರು. ಒಂದು ಸಾಯಂಕಾಲ ನಾವು ಮೇಲ್ಛಾವಣಿಯಲ್ಲಿ (ಟೆರೇಸ್‌ನಲ್ಲಿ) ಸುತ್ತಾಡುವಾಗ ಯುವಾವಸ್ಥೆಗೆ ಕಾಲಿಟ್ಟ ನನ್ನ ಹಿರಿಯ ಮಗ ಪರೀಕ್ಷೆಯ ಸಿದ್ಧತೆಗೆ ಸಂಬಂಧಿಸಿ ನನಗೆ ಪ್ರಶ್ನೆ ಕೇಳಿದನು, ಅದು ಇತಿಹಾಸಕ್ಕೆ ಸಂಬಂಧಿಸಿತ್ತು. ನಾನು ಉತ್ತರ ನೀಡಿದಾಗ ಅವನು ಹೇಳಿದನು, ”ಆದರೆ ನಮ್ಮ ಪಠ್ಯಪುಸ್ತಕದಲ್ಲಿ ಅದರ ವಿರುದ್ಧವಿದೆ.” ನಾನು ಹೇಳಿದೆ, ಪರೀಕ್ಷೆಯಲ್ಲಿ ಕೇಳಿದ್ದರೆ ಪಠ್ಯಪುಸ್ತಕದಲ್ಲಿ ಬರೆದಿರುವುದನ್ನೇ ಬರೆಯಬೇಕು, ಇಲ್ಲದಿದ್ದರೆ ಫಲಿತಾಂಶ ಸರಿ ಬರುವುದಿಲ್ಲ. ಆದರೆ ಇತಿಹಾಸದ ವಾಸ್ತವಿಕತೆಯನ್ನು ನಾನು ನಿನಗೆ ಹೇಳಿದ್ದೇನೆ. ಅದರ ಮೇಲೆ ವಿಶ್ವಾಸವಿಡು. ‘ಹಾಗೇಕೆ ?’ ಎನ್ನುವ ಅವನ ಪ್ರಶ್ನೆಗೆ ನನ್ನಲ್ಲಿ ಉತ್ತರವಿತ್ತು; ಆದರೆ ಆ ಉತ್ತರವನ್ನು ತಿಳಿದುಕೊಳ್ಳುವಷ್ಟು ಅವನಿಗೆ ವಯಸ್ಸಾಗಿರಲಿಲ್ಲ; ಏಕೆಂದರೆ ತಿಸ್ತಾ ಸೆಟಲವಾಡ ಮತ್ತು ಕಪಿಲ ಸಿಬ್ಬಲರಂತಹ ವಿಕೃತ ಸಾಮ್ಯವಾದಿ ಮಾನಸಿಕತೆಯ ಬಗ್ಗೆ ಅವನಿಗೆ ತಿಳಿದಿರಲಿಲ್ಲ. ಸುಷ್ಮಾ ಸ್ವರಾಜ ಇವರು ಲೋಕಸಭೆಯಲ್ಲಿ ಹೇಳಿದ್ದರು ಏನೆಂದರೆ, ೨೦೦೪ ರಲ್ಲಿ ವಾಜಪೇಯಿ ಸರಕಾರದ ಅವಧಿ ಮುಗಿದ ನಂತರ ಬಂದಿರುವ ಸೋನಿಯಾ ಸರಕಾರ (ಈ ಶಬ್ದಗಳು ನನ್ನದಾಗಿವೆ, ಸುಷ್ಮಾರವರದ್ದಲ್ಲ) ದಲ್ಲಿ ಶಿಕ್ಷಣಸಚಿವ ಕಪಿಲ ಸಿಬ್ಬಲ ಇದ್ದರು. (ಆಗ ಶಿಕ್ಷಣಸಚಿವರಿಗೆ ‘ಹ್ಯೂಮನ್‌ ರಿಸೋರ್ಸ್ ಮಿನಿಸ್ಟರ್’ ಅಂದರೆ ‘ಮಾನವ ಸಂಪನ್ಮೂಲ ಸಚಿವ’, ಎಂಬ ಹೆಸರನ್ನು ನೀಡಿದ್ದರು) ಕಪಿಲ ಸಿಬ್ಬಲರು ದೇಶದಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಪ್ರಮುಖ ಸಂಸ್ಥೆ ‘ಎನ್‌.ಸಿ.ಇ.ಆರ್‌.ಟಿ.’ (ನ್ಯಾಶನಲ್‌ ಕೌನ್ಸಿಲ್‌ ಆಫ್‌ ಎಜ್ಯುಕೇಶನ್‌ ರಿಸರ್ಚ್ ಎಂಡ್‌ ಟ್ರೈನಿಂಗ್) ಯಲ್ಲಿ ತಿಸ್ತಾ ಸೆಟಲ್‌ವಾಡ ಇವರನ್ನು ನೇಮಿಸಿದ್ದರು.

೪. ಇತಿಹಾಸದ ಪುಸ್ತಕಗಳಲ್ಲಿ ತುರುಕಿದ ವಿಷವನ್ನು ದೂರಗೊಳಿಸಲು ಪ್ರಯತ್ನಿಸುವ ‘ಎನ್‌.ಸಿ.ಇ.ಆರ್‌.ಟಿ.’ಯ ಅಂದಿನ ಅಧ್ಯಕ್ಷ ಜೆ.ಎಸ್. ರಾಜಪೂತ !

ಎನ್‌.ಸಿ.ಇ.ಆರ್‌.ಟಿ.’ಯ ಮಾಜಿ ಅಧ್ಯಕ್ಷ ಜೆ.ಎಸ್. ರಾಜಪೂತರು ವಾಜಪೇಯಿ ಸರಕಾರದ ಅವಧಿಯಲ್ಲಿ ಎನ್‌.ಸಿ. ಇ.ಆರ್‌.ಟಿ.’ಯ ಅಧ್ಯಕ್ಷ ಸ್ಥಾನದಲ್ಲಿದ್ದರು. ಸೋನಿಯಾ ಗಾಂಧಿ ಸರಕಾರಕ್ಕೆ ಅಧಿಕಾರ ಸಿಕ್ಕಿದ ತಕ್ಷಣ ಅವರನ್ನು ಕೆಳಗಿಳಿಸಿದರು. ಮೋದಿ ಯುಗದಲ್ಲಿ ಅಂದರೆ ೨೦೧೫ ರಲ್ಲಿ ಜಗಮೋಹನ ಸಿಂಹ ರಾಜಪೂತ ಇವರನ್ನು ‘ಪದ್ಮಶ್ರೀ’ ಪುರಸ್ಕಾರದಿಂದ ಸನ್ಮಾನಿಸಲಾಯಿತು. ರಾಜಪೂತ ಇವರ ಅಧಿಕಾರಾವಧಿಯಲ್ಲಿ ನನಗೆ ಅವರ ಪರಿಚಯವಿತ್ತು. ಆಗ ಮುರಳಿ ಮನೋಹರ ಜೋಶಿ ಶಿಕ್ಷಣ ಸಚಿವರಾಗಿದ್ದರು. ಸಾಮ್ಯವಾದಿಗಳು ಇತಿಹಾಸದಲ್ಲಿ ತುರುಕಿಸಿದ ಅನೇಕ ಹೊಲಸನ್ನು ರಾಜಪೂತರು ಅಳಿಸಿ ಹಾಕಿದರು, ಅವರ ವಿರುದ್ಧ ಸರ್ವೋಚ್ಚ ನ್ಯಾಯಾಲಯ ದಲ್ಲಿ ಖಟ್ಲೆ ದಾಖಲಿಸಲಾಗಿತ್ತು. ರಾಜಪೂತರು ಭಾರತದ ಇತಿಹಾಸದಿಂದ ತೆಗೆದ ವಿಷಯಗಳು ಯಾವುವು ? ಎಂಬುದರ ಪುಸ್ತಕ ಸಹ ಪ್ರಕಾಶನವಾಗಿದೆ. ಇಲ್ಲಿ ಎದುರಿನವರು ಖಟ್ಲೆಯನ್ನು ಗೆದ್ದುಕೊಂಡರು (ಅದು ಸ್ವಾಭಾವಿಕವಾಗಿತ್ತು, ಆ ಕಾಲದಲ್ಲಿ ಭಯೋತ್ಪಾದಕರಿಗೆ ‘ಸಹಾಯ’ ಮಾಡಲು ಅವರ ವಕೀಲರ ಆದೇಶದ ಮೇರೆಗೆ ಸರ್ವೋಚ್ಚ ನ್ಯಾಯಾಲಯವನ್ನು ರಾತ್ರಿ ೨ ಗಂಟೆಗೆ ತೆರೆಯಲಾಗುತ್ತಿತ್ತು.) ಪಠ್ಯಪುಸ್ತಕಗಳಲ್ಲಿ ತುರುಕಿಸಿದ ‘ವಿಷ’ ವನ್ನು ದೂರಗೊಳಿಸಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ಆದರೆ ವಾಸ್ತವ ಹೇಗಿತ್ತೆಂದರೆ ವಾಜಪೇಯಿ ಸರಕಾರವು ಮುರಳಿ ಮನೋಹರ ಜೋಶಿ ಹಾಗೂ ಜೆ.ಎಸ್. ರಾಜಪೂತರ ತಜ್ಞರ ತಂಡದೊಂದಿಗೆ ಭಾರತದ ಇತಿಹಾಸದಲ್ಲಿ ಎಡಪಂಥೀಯರು ತುರುಕಿಸಿದ ವಿಷವನ್ನು ದೂರಗೊಳಿಸಲು ಪ್ರಯತ್ನಿಸಿತ್ತು.

೫. ಭಾರತದ ಇತಿಹಾಸ ವಿದೇಶಿಯರ ದೃಷ್ಟಿಕೋನದಲ್ಲಿ ಬೇಡ !

ಭಾರತದ ಇತಿಹಾಸವನ್ನು ಭಾರತದ ದೃಷ್ಟಿಕೋನದಲ್ಲಿ ಬರೆಯಬೇಕು, ವಿದೇಶಿಯರ ದೃಷ್ಟಿಕೋನದಿಂದಲ್ಲ. ಜಪಾನಿನ ವಿದ್ಯಾಪೀಠದಲ್ಲಿ ಕಲಿಸಲ್ಪಡುವ ಹಿರೋಶಿಮಾ-ನಾಗಾಸಾಕಿಯಲ್ಲಿನ ಅಣುಬಾಂಬ್‌ನ ಇತಿಹಾಸದಲ್ಲಿ ಜಪಾನನ್ನು ಪೀಡಿತ ಎಂದು ತಿಳಿಯಲಾಗುವುದು; ಆದರೆ ಅಮೇರಿಕಾದ ವಿದ್ಯಾಪೀಠದ ಇತಿಹಾಸದಲ್ಲಿ ಅಮೇರಿಕಾವನ್ನು ಪೀಡಿತ ಎಂದು ಬಣ್ಣಿಸಲಾಗುವುದು ಹಾಗೂ ಬರೆಯಲಾಗುವುದು ಏಕೆಂದರೆ, ನಮ್ಮ(ಅಮೇರಿಕಾ) ಪರ್ಲ್ ಹಾರ್ಬರ್‌ನ ಮೇಲೆ ಜಪಾನ್‌ನ ಆಕ್ರಮಣದಿಂದಾದ ವಿನಾಶದ ಸೇಡು ತೀರಿಸಲು ನಾವು ಅಣುಬಾಂಬ್‌ ಎಸೆದೆವು.

ಕೊಲ್ಲಿ ರಾಷ್ಟ್ರಗಳನ್ನು ಅಮೇರಿಕಾ-ಯುರೋಪ್‌ ಇವು ‘ಮಿಡ್ಲ್ ಈಸ್ಟ್ ಕಂಟ್ರೀಸ್’ ಎಂದು ಗುರುತಿಸುತ್ತವೆ; ಏಕೆಂದರೆ ನಕಾಶೆಯಲ್ಲಿ ಆ ದೇಶಗಳು ಅಮೇರಿಕಾ-ಯುರೋಪ್‌ನ ಪೂರ್ವದಿಕ್ಕಿಗೆ ಹೋಗುವಾಗ ನಡುವೆ ಬರುತ್ತವೆ. ನಾವು ಕುರುಡರ ಹಾಗೆ ಸೌದಿ ಅರೇಬಿಯಾ, ಕುವೈತ್, ಓಮನ್, ಇತ್ಯಾದಿಗಳನ್ನು ‘ಮಿಡ್ಲ್ ಈಸ್ಟ್ ಕಂಟ್ರೀಸ್’ ಎನ್ನಬಾರದು. ನಮಗೆ ಭಾರತದಿಂದ ಪಶ್ಚಿಮ ದಿಕ್ಕಿಗೆ ಯುರೋಪ್‌-ಅಮೇರಿಕಾಗೆ ಹೋಗುವಾಗ ನಡುವೆ ಈ ದೇಶಗಳು ಬರುತ್ತವೆ. ಆದ್ದರಿಂದ ನಾವು ಅವುಗಳನ್ನು ‘ಮಿಡ್ಲ್ ವೆಸ್ಟ್ ಕಂಟ್ರೀಸ್’ ಎಂದು ಗುರುತಿಸಬೇಕು. ಪಾಶ್ಚಾತ್ಯ ಇತಿಹಾಸಕಾರರು ಮತ್ತು ಅವರನ್ನು ಹಿಂಬಾಲಿಸುವ ಭಾರತದಲ್ಲಿನ ಸಾಮ್ಯವಾದಿ ಇತಿಹಾಸಕಾರರು ಬರೆದಿರುವುದನ್ನು ಹಾಗೆಯೆ ಸ್ವೀಕರಿಸುವ ಮಾನಸಿಕತೆ !

೬. ಭಾರತದಲ್ಲಿನ ಒಂದೆರಡು ಘಟನೆಗಳನ್ನು ಪರಂಪರೆಯೆಂದು ನಿರ್ಧರಿಸುವ ಆಂಗ್ಲರು ಮತ್ತು ‘ಭಾರತೀಯರಿಗೆ ಭಾರತದ ಬಗ್ಗೆ ಅಭಿಮಾನವೆನಿಸಬಾರದೆಂದು’ ಪ್ರಯತ್ನಿಸುವ ಸಾಮ್ಯವಾದಿ ಇತಿಹಾಸಕಾರರು

ಸತಿ ಪದ್ಧತಿ ಅಥವಾ ಹಸುಳೆಗೆ ಹಾಲು ಕುಡಿಸಿ ಕೊಲ್ಲುವ ಪರಂಪರೆ ನಮ್ಮಲ್ಲಿ ಇರಲೇ ಇಲ್ಲ. ಇಂತಹ ಒಂದೆರಡು ಪ್ರಸಂಗಗಳು ಘಟಿಸಿರಬಹುದು, ಅವುಗಳಿಗೆ ಆಂಗ್ಲರು ‘ಪರಂಪರೆ’ ಎಂದು ನಾಮಕರಣ ಮಾಡಿದರು. ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ೭೫ ಹತ್ಯೆಗಳಾದವು, ೨ ಸಾವಿರದ ೭೮ ಕಿಸೆಗಳ್ಳತನದ ಪ್ರಕರಣಗಳಾದವು, ೨೩ ಬಲಾತ್ಕಾರದ ಅಪರಾಧಗಳು ದಾಖಲಾದವು. ಈ ಇತಿಹಾಸಕಾರರು ಇಂಗ್ಲೆಂಡನ್ನು ಕೊಲೆಗಾರರ, ಕಿಸೆಗಳ್ಳರ, ಬಲಾತ್ಕಾರಿಗಳ ದೇಶವೆಂದು ಹೇಳುವರೇನು ? ಭಾರತದಲ್ಲಿ ಆಗಿರುವ ಕೇವಲ ೧-೨ ಪ್ರಸಂಗಗಳಿವೆ, ಅವುಗಳು ಯಾವುದೇ ಪರಂಪರೆಯ ಭಾಗಗಳಲ್ಲ. ಭಾರತೀಯರನ್ನು ಮೊಘಲರು ನೂರಾರು ಶತಕ ಭಾರತವನ್ನು ಆಳಿದರು, ಎಂದು ಕಲಿಸಲಾಯಿತು. ವಾಸ್ತವದಲ್ಲಿ, ಮೊಘಲರು ಒಂದು ಸೆಕೆಂಡ್‌ ಕೂಡ ಭಾರತವನ್ನು ಆಳಲಿಲ್ಲ. ಮೊಘಲರ ಪ್ರಭುತ್ವ ಭಾರತದ ಶೇ. ೩೦ ರಿಂದ ೩೫ ರಷ್ಟು ಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಆಂಗ್ಲರು ಬಂದಾಗ ಅವರು ಮೊಘÀಲರನ್ನು ಸೋಲಿಸಿದ್ದಲ್ಲ, ಮರಾಠರನ್ನು ಸೋಲಿಸಿ ಅಧಿಕಾರವನ್ನು ವಶಪಡಿಸಿಕೊಂಡಿದ್ದರು.

ಭಾರತದ ಇತಿಹಾಸವನ್ನು ವಿಕೃತಗೊಳಿಸುವ ಕಾರಣವೇನು ?

ಆಂಗ್ಲರು ಮತ್ತು ಸಾಮ್ಯವಾದಿ ಇತಿಹಾಸಕಾರರ ಏಕೈಕ ಉದ್ದೇಶವೇನಿತ್ತು ? ಅಂದರೆ ನಮಗೆ ನಮ್ಮ ದೇಶದ ಬಗ್ಗೆ ಅಭಿಮಾನವೆನಿಸಬಾರದು. ನಾವು ವಿದೇಶಿಯರಿಗೆ ಅಡಿಯಾಳಾಗಿರ ಬೇಕು ಹಾಗೂ ವಿದೇಶಿಯರು ಅದರಿಂದ ಲಾಭ ಗಳಿಸಬೇಕು. ಯಾವಾಗ ನಾವು ಭಾರತದ ಕುರಿತಾದ ಅವಮಾನಾಸ್ಪದ ವಿಷಯಗಳ ಬಗ್ಗೆ ಧ್ವನಿಯೆತ್ತುತ್ತೇವೆಯೊ, ಆಗ ಅವರು ನಮ್ಮನ್ನು ಅವಿದ್ಯಾವಂತರೆಂದು ಹೀಯಾಳಿಸುತ್ತಾರೆ. ತಮ್ಮ ಮನಸ್ಸಿಗೆ ಬಂದಂತೆ ಮನುಸ್ಮೃತಿ, ವೇದ-ಉಪನಿಷತ್ತುಗಳು, ರಾಮಾಯಣ-ಮಹಾಭಾರತಗಳನ್ನು ಅನುವಾದಿಸಿ ಅವರು ಜಗತ್ತಿನಲ್ಲಿ ನಮ್ಮ ವಿಷಯದಲ್ಲಿ ಅಪಪ್ರಚಾರ ಮಾಡಿದರು. ಅವರ ಅಲ್ಪಜ್ಞಾನದಿಂದ ಹಾಗೂ ಅನುಭವದ ಕೊರತೆಯಿಂದ ಜಗತ್ತಿನಲ್ಲಿ ಯಾವ ವಿಷಯಗಳ ಸಮಾವೇಶವಿಲ್ಲವೊ, ಆ ವಿಷಯಗಳನ್ನು ಅವರು ಅವರಿಗೆ ಅನುಕೂಲವೆನಿಸುವ ಭಾಷೆಯಲ್ಲಿ ವ್ಯಕ್ತಪಡಿಸಿದರು. ನಮಗೆ ರೊಟ್ಟಿ, ತಂದೂರಿ ರೊಟ್ಟಿ, ನಾನ್, ಥೇಪ್ಲಾ, ಪುರಿ, ಫರಸೀ ಪುರೀ ಇತ್ಯಾದಿ ಒಂದು ಡಜನ್‌ ಖಾದ್ಯಪದಾರ್ಥಗಳಿವೆ. ಅವರು ಇವೆಲ್ಲವನ್ನೂ ಒಂದೇ ರೀತಿಯಲ್ಲಿ ನೋಡುತ್ತಾರೆ. ಇವುಗಳಿಗೆಲ್ಲ ‘ಇಂಡಿಯನ್‌ ಬ್ರೆಡ್’ ಎನ್ನುತ್ತಾರೆ !

– ಸೌರಭ ಶಾಹ, ‘ಗುಡ್‌ ಮಾರ್ನಿಂಗ್‌’, ನ್ಯೂಸ್‌ಪ್ರೇಮಿ ಡಾಟ್‌ ಕಾಮ್‌ (೩೧.೫.೨೦೨೫)