
ಜೆರುಸಲೆಮ (ಇಸ್ರೇಲ್) – ದಕ್ಷಿಣ ಸಿರಿಯಾದ ಸ್ವೈದಾ ನಗರದಲ್ಲಿ ಶಿಯಾ ಡ್ರೂಜ್ ಮತ್ತು ಸುನ್ನಿ ಬೆದೂಯಿನ್ ಎಂಬ ಎರಡು ಸಮುದಾಯಗಳ ನಡುವೆ ಕಳೆದ ನಾಲ್ಕು ದಿನಗಳಿಂದ ಸಂಘರ್ಷ ನಡೆಯುತ್ತಿತ್ತು. ಬೆದೂಯಿನ್ ಗಳ ಪರವಾಗಿ ಸಿರಿಯಾದ ಸೇನೆ ನಿಂತಿದ್ದರಿಂದ ನೆರೆಯ ಇಸ್ರೇಲ್ ಯುದ್ಧಕ್ಕೆ ಧುಮುಕಿ, ಸಿರಿಯಾದ ಪ್ರದೇಶಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಆಕ್ರಮಣಗಳನ್ನು ಮಾಡಿತು. ಈ ಆಕ್ರಮಣಗಳಿಂದ ಸಿರಿಯಾ ಜರ್ಜರಿತವಾದ ನಂತರ, ಅದರ ಅಧಿಕೃತ ಸುದ್ದಿ ಸಂಸ್ಥೆಯು ಡ್ರೂಜ್ ಬಾಹುಳ್ಯದ ಸ್ವೈದಾ ನಗರದಲ್ಲಿ ಕದನ ವಿರಾಮ ಘೋಷಿಸಲಾಗಿದೆ, ಎಂದು ಹೇಳಿಕೊಂಡಿದೆ.
ಇಸ್ರೇಲ್ ಸಿರಿಯಾವನ್ನು ಹೀಗೆ ಜರ್ಜರಿತಗೊಳಿಸಿದೆ!
1. ಎರಡೂ ಸಮುದಾಯಗಳ ನಡುವಿನ ಘರ್ಷಣೆಗಳಲ್ಲಿ ಡ್ರೂಜ್ ಸಮುದಾಯದ 300 ನಾಗರಿಕರು ಸಾವನ್ನಪ್ಪಿದ್ದರು. ಇದರಿಂದ ಇಸ್ರೇಲ್ ಈ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿತು.
2. ಇಸ್ರೇಲ್ ನೇರವಾಗಿ ರಾಜಧಾನಿ ಡಮಾಸ್ಕಸ್ ಮೇಲೆ ದಾಳಿ ಮಾಡಿತು.
3. ಸೇನಾ ಪ್ರಧಾನ ಕಚೇರಿ, ರಕ್ಷಣಾ ಸಚಿವಾಲಯ ಸೇರಿದಂತೆ ಸಿರಿಯಾದ ಹಲವು ನಗರಗಳಲ್ಲಿ ಸುಮಾರು 160 ಸ್ಥಳಗಳನ್ನು ಗುರಿಯಾಗಿಸಲಾಯಿತು. ಅವರ ಅನೇಕ ಟ್ಯಾಂಕ್‌ಗಳನ್ನು ನಾಶಪಡಿಸಲಾಯಿತು.
4. ಜನರಲ್ ಸ್ಟಾಫ್ ಕಮಾಂಡ ಭವನ ಮತ್ತು ಸಿರಿಯಾದ ರಾಷ್ಟ್ರಪತಿ ಭವನದ ಬಳಿಯೂ ಇಸ್ರೇಲ್ ದಾಳಿ ಮಾಡಿತು; ಏಕೆಂದರೆ ಸ್ವೈದಾ ಪ್ರಾಂತ್ಯಕ್ಕೆ ಸೇನೆಯನ್ನು ಕಳುಹಿಸುವ ಆದೇಶವನ್ನು ಇಲ್ಲಿಂದಲೇ ನೀಡಲಾಗುತ್ತಿತ್ತು.
ಸಿರಿಯಾದ ಸಂಘರ್ಷದಲ್ಲಿ ಇಸ್ರೇಲ್ ಮಧ್ಯಪ್ರವೇಶಿಸಲು ಇದೇ ಕಾರಣ!
ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, “ಇಸ್ರೇಲ್‌ನ ಗೋಲನ್ ಹೈಟ್ಸ್‌ನಲ್ಲಿರುವ ಡ್ರೂಜ್ ಸಮುದಾಯದವರು ಸಿರಿಯಾದ ಡ್ರೂಜ್ ಜನರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಅವರ ರಕ್ಷಣೆಗಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ” ಎಂದು ಹೇಳಿದ್ದರು. ಮತ್ತೊಂದೆಡೆ, ಸಿರಿಯಾವು ಈ ಹಿಂಸಾಚಾರವು ಎರಡು ಸಮುದಾಯಗಳ ನಡುವಿನದ್ದಲ್ಲ, ಬದಲಿಗೆ ಸರಕಾರ ಮತ್ತು ಅಪರಾಧಿಗಳ ನಡುವಿನ ಹೋರಾಟ ಎಂದು ಹೇಳುತ್ತದೆ. ಸರಕಾರವು ಡ್ರೂಜ್ ಸಮುದಾಯವನ್ನು ಅಪರಾಧಿಗಳು ಎಂದು ಪರಿಗಣಿಸುತ್ತದೆ.
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ