
ಕಳೆದ ಕೆಲವು ವರ್ಷಗಳಿಂದ ನಮಗೆ ‘ಲಿವ್ ಇನ್’ ರಿಲೇಶನ್‌ಶಿಪ್’ (ವಿವಾಹವಾಗದೆಯೆ ಒಟ್ಟಿಗೆ ಇರುವುದು), ‘ಗ್ರೇ ಡಿವೋರ್ಸ್’ (೫೦ ವರ್ಷ ವಯಸ್ಸಿನ ನಂತರ ವಿಚ್ಛೇದನ ಪಡೆಯುವುದು) ಇಂತಹ ಅನೇಕ ವಿಷಯಗಳು ಕಿವಿಗೆ ಬಿದ್ದಿರುವುದು ಮಾತ್ರವಲ್ಲ, ಈ ಪಾಶ್ಚಾತ್ಯ ವಿಕೃತಿಗನುಸಾರ ಕೃತಿ ಮಾಡುವ ಸಾಕಷ್ಟು ಜೋಡಿಗಳು ಭಾರತದಲ್ಲಿ ಕಾಣಿಸುತ್ತಿವೆ. ಅದರಲ್ಲಿನ ‘ಲಿವ್ ಇನ್’ ಇದೊಂದು ಸಾಮಾನ್ಯ ವಿಷಯ ಆಗಿ ಹೋಗಿದೆ.
ಈಗ ಇದಕ್ಕೆ ಇನ್ನೊಂದು ವಿಷಯ ಸೇರಿಕೊಂಡಿದೆ, ಅದೇ ‘ಲ್ಯಟ್’ ಅಂದರೆ ಲಿವಿಂಗ್ ಅಪಾರ್ಟ್ ಟುಗೆದರ್’, ಅಂದರೆ ಒಟ್ಟಿಗೆ ಇದ್ದು ಕೂಡ ಬೇರೆಯಾಗಿರುವುದು. ವಿವಾಹದ ಮೊದಲು ‘ಡೇಟಿಂಗ್’ ಮಾಡುವುದು (ಪರಸ್ಪರ ಭೇಟಿಯಾಗುವುದು), ‘ಲಿವ್ ಇನ್ ರಿಲೇಶನ್‌ಶಿಪ್’, ‘ಬೆಂಚಿಂಗ್’ (ವ್ಯಕ್ತಿಯೊಂದಿಗೆ ಸಂಪೂರ್ಣ ಹೊಂದಾಣಿಕೆ ಮಾಡಿಕೊಳ್ಳದಿರುವುದು, ಆದರೆ ಪಾಲುದಾರ ಎಂದು ಉಳಿಸಿಕೊಳ್ಳುವುದು.) ಮತ್ತು ಈಗ ಈ ಮುಂದಿನ ಹೊಸ ರೂಢಿ (ಟ್ರೆಂಡ್) ಅಂದರೆ ‘ಲಿವಿಂಗ್ ಅಪಾರ್ಟ್ ಟುಗೆದರ್’ ! ಇದರಲ್ಲಿ ವಿವಾಹಿತ ದಂಪತಿಗಳು ಪತಿ-ಪತ್ನಿ ಆಗಿದ್ದರೂ ಬೇರೆ ಬೇರೆ ಮನೆಯಲ್ಲಿರುತ್ತಾರೆ; ಆದರೆ ಅವರು ಪದೇ ಪದೇ ಪರಸ್ಪರ ಭೇಟಿಯಾಗುತ್ತಾರೆ. ಕೆಲವು ಗಂಟೆ ಅಥವಾ ದಿನಗಳು ಒಟ್ಟಿಗಿರುತ್ತಾರೆ. ಅವರ ಅವಶ್ಯಕತೆಗನುಸಾರ ಒಟ್ಟಿಗಿರುವುದು ಹಾಗೂ ನಂತರ ಬೇರೆ ಇರುವುದು. ಕೆಲವರು ಒಂದೇ ಮನೆಯಲ್ಲಿರುತ್ತಾರೆ; ಆದರೆ ಬೇರೆಯೆ ಇರುತ್ತಾರೆ. ಅವರಿಗೆ ಬೇರೆ ಬೇರೆ ಕೋಣೆಯಲ್ಲಿ ಅಥವಾ ಬೇರೆಯೆ ಮಾಳಿಗೆಯಲ್ಲಿರಲು ಇಷ್ಟವಾಗುತ್ತದೆ. ಈಗ ಈ ಹೊಸ ರೂಢಿ ಯುವಕರಿಗೆ ಏಕೆ ಇಷ್ಟವಾಗುತ್ತದೆ ? ಇದರಲ್ಲಿ ಅವರಿಗೆ ಸ್ವಾತಂತ್ರ್ಯ ಸಿಗುತ್ತದೆ, ಅವರ ಖಾಸಗಿ ಜೀವನವನ್ನು ಕಾಯ್ದುಕೊಳ್ಳಲಾಗುತ್ತದೆ. ತನ್ನ ಇಚ್ಚೆಗನುಸಾರ ವರ್ತಿಸಲು ಸಾಧ್ಯವಾಗುತ್ತದೆ ಎಂಬುದು ನಿಜ. ಅಂದರೆ ವಿವಾಹದ ಮೊದಲು ಹೊರಗೆ ಭೇಟಿಯಾಗುವುದು, ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇರುವುದು, ಬೆಂಚಿಂಗ್‌ನಲ್ಲಿರುವುದು ಹಾಗೂ ಈಗ ‘ಲ್ಯಟ್’ ನಲ್ಲಿರುವುದು ! ಇವೆಲ್ಲವೂ ಭಾರತೀಯ ಸಂಸ್ಕೃತಿಯ ನೈತಿಕತೆಯ ಯಾವುದೇ ಪರಿಭಾಷೆಗೆ ನಿಲುಕದ ವಿಷಯಗಳಾಗಿವೆ. ಸ್ವಾತಂತ್ರ್ಯದ ನೆಪದಲ್ಲಿ ಇಂತಹ ವಿಚಿತ್ರ ಹೆಸರುಗಳನ್ನಿಟ್ಟು ನಡೆಯುತ್ತಿರುವ ಸ್ವೇಚ್ಛಾಚಾರವು ಸಂಬಂಧದಲ್ಲಿನ ವಿಶ್ವಾಸ, ಮನುಷ್ಯರಲ್ಲಿನ ವಿಶ್ವಾಸ ಸಂಪೂರ್ಣ ಕಳೆದುಕೊಳ್ಳುತ್ತದೆ. ಇದು ಸಂಸ್ಕಾರವುಳ್ಳ ಹಾಗೂ ಸಂಸ್ಕೃತಿಯುಕ್ತ ಮಾನವನ ಹಾಗಲ್ಲ, ಕಾಡುಪ್ರಾಣಿಗಳ ಹಾಗೆ ಅನಿಯಂತ್ರಿತ ಜೀವನವಾಗಿದೆ ಎಂಬುದು ಯಾರಿಗೂ ಏಕೆ ಅರಿವಾಗುವುದಿಲ್ಲ ? ಸ್ವಾತಂತ್ರ್ಯದ ಹೆಸರಿನಲ್ಲಿ ಯುವಕರಲ್ಲಿ ಈ ಹೊಸ ರೂಢಿ ನಿರ್ಮಾಣ ವಾಗುತ್ತಿದೆ. ಸುತ್ತಮುತ್ತಲಿನ ವ್ಯಕ್ತಿಗಳು ಹಾಗೂ ಚಲನಚಿತ್ರ ಕಲಾವಿದರು ಕೂಡ ಇದಕ್ಕೆ ಕಾರಣರಾಗಿದ್ದಾರೆ.
ಖಾಸಗಿ ಜೀವನ, ವ್ಯಕ್ತಿಸ್ವಾತಂತ್ರ್ಯ, ಬಂಧನಗಳು ಮತ್ತು ಮಿತಿ ಇವು ಭಾರತೀಯ ಸಂಸ್ಕೃತಿಯ ನಿಯಮಗಳಾಗಿವೆ. ವಿವಾಹ ಅಥವಾ ಕುಟುಂಬ ವ್ಯವಸ್ಥೆಯಿಂದ ಎಷ್ಟೇ ಬಂಧನವೆನಿಸಿದರೂ, ಅದರಿಂದ ಎಲ್ಲ ಹಂತಗಳಲ್ಲಿ ವ್ಯಕ್ತಿಯ ರಕ್ಷಣೆಯಾಗುತ್ತದೆ, ಸಮಾಜದಲ್ಲಿ ನೈತಿಕತೆ ಹಾಗೂ ಮೌಲ್ಯವನ್ನು ಕಾಪಾಡಲಾಗುತ್ತದೆ. ವ್ಯಕ್ತಿಯಲ್ಲಿ ತನ್ನಷ್ಟಕ್ಕೆ ತಾಳ್ಮೆ ನಿರ್ಮಾಣವಾಗುತ್ತದೆ. ಈ ಪದ್ಧತಿಯಿಂದ ರಾಷ್ಟ್ರದ ಮುಂದಿನ ಪೀಳಿಗೆ ಸಿದ್ಧವಾಗುತ್ತದೆ. ಇವೆಲ್ಲದರ ಪರಿಣಾಮದಿಂದ ಒಂದು ಸಮೃದ್ಧ ಸಂಸ್ಕೃತಿ ವಿಕಾಸ ಹೊಂದುತ್ತದೆ, ಮಿತಿಮೀರಿದ ಸ್ವಾತಂತ್ರ್ಯವು ಸುಖಕರ ವಾಗಿರದೆ, ಇದು ಅಂತಿಮವಾಗಿ ದುಃಖದಾಯಕವಾಗಿದೆ. ಒಂದು ವೇಳೆ ನಮ್ಮ ಪದ್ಧತಿಯಲ್ಲಿ ಕೆಲವು ಅಡಚಣೆಗಳು ಬರಲೂ ಬಹುದು; ಆದ್ದರಿಂದ ಈ ಮೇಲಿನ ಪಾಶ್ಚಾತ್ಯ ಪದ್ಧತಿಗಳನ್ನು ಅಂಗೀಕರಿಸುವುದು ಅದರ ಪರ್ಯಾಯವಲ್ಲ. ಕುಟುಂಬ ಹಾಗೂ ವಿವಾಹ ಪದ್ಧತಿಯಿಂದ ಅನೇಕ ಲಾಭಗಳಿರುವುದರಿಂದ ಎಲ್ಲರೂ ಒಟ್ಟಾಗಿ ಈ ಪದ್ಧತಿ ಮತ್ತು ಸಂಬಂಧವನ್ನು ಉಳಿಸಿ ಕೊಳ್ಳಲು ಪ್ರಯತ್ನಿಸಬೇಕು !
– ಸೌ. ಗೌರಿ ವೈಭವ ಆಫಳೆ ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು