
೮. ಪ.ಪೂ. ಭಕ್ತರಾಜ ಮಹಾರಾಜರು ‘ಗುರು’ಗಳಾಗಿ ಸಿಕ್ಕರು
೮ ಅ. ಪ.ಪೂ. ತರಾಣೆಕರ ಮಹಾರಾಜರ ದರ್ಶನದ ನಂತರ ಪ.ಪೂ. ಭಕ್ತರಾಜ ಮಹಾರಾಜರು ಎಲ್ಲರನ್ನು ಪ.ಪೂ. ಧಾಂಡೇಶಾಸ್ತ್ರಿಗಳ ಬಳಿಗೆ ಕರೆದುಕೊಂಡು ಹೋದರು ಮತ್ತು ಪ.ಪೂ. ಬಾಬಾರವರನ್ನು ನೋಡಿ ಪ.ಪೂ. ಧಾಂಡೇಶಾಸ್ತ್ರಿಗಳಿಗೆ ಬಹಳ ಆನಂದವಾಗಿ ಅವರು ನರ್ತಿಸತೊಡಗಿದರು : ಮಧ್ಯಾಹ್ನ ನಾವು ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾರವರ) ಆಶ್ರಮಕ್ಕೆ ಹೋದೆವು. ಆಗ ಅವರು ತಯಾರಾಗಿ ನಮ್ಮ ದಾರಿ ಕಾಯುತ್ತಾ ಕುಳಿತಿದ್ದರು. ಅವರು ನಮಗೆ, ”ನಮಗೆ ಒಂದೆರಡು ಕಡೆ ಹೋಗಬೇಕಾಗಿದೆ” ಎಂದರು. ನಾವು ಅವರೊಂದಿಗೆ ಮೊದಲು ಪ.ಪೂ. ತರಾಣೇಕರ ಮಹಾರಾಜರ ಬಳಿಗೆ ಹೋದೆವು. ಅವರಿಗೆ ನಮ್ಮನ್ನು ಪರಿಚಯಿಸಲಾಯಿತು. ಅವರಿಗೆ ನಮಸ್ಕರಿಸಿ ಮತ್ತೆ ಪ.ಪೂ. ಧಾಂಡೇಶಾಸ್ತ್ರಿಗಳ ಬಳಿಗೆ ಹೋಗಲು ಹೊರಟೆವು. ಅವರ ಮನೆಯ ಹತ್ತಿರ ತಲುಪಿದಾಗ, ಪ.ಪೂ. ಶಾಸ್ತ್ರಿಬುವಾ ಅವರು ತಮ್ಮ ಒಬ್ಬ ಶಿμಯ್Àನ ಕೈ ಹಿಡಿದು ಎದುರಿನಿಂದ ಬರುತ್ತಿರುವುದು ಕಂಡಿತು. ಹತ್ತಿರ ಬಂದು ಪ.ಪೂ. ಭಕ್ತರಾಜ ಮಹಾರಾಜರನ್ನು ನೋಡಿದಾಗ ಶಿμಯ್Àನ ಕೈಯಲ್ಲಿ ಕೈಹಾಕಿ ಅವರು ಪ.ಪೂ. ಭಕ್ತರಾಜ ಮಹಾರಾಜರ ಸುತ್ತಲೂ ಫೇರ್ ಹಿಡಿದು ನೃತ್ಯ ಮಾಡಲು ಪ್ರಾರಂಭಿಸಿದರು ಮತ್ತು ನೃತ್ಯ ಮಾಡುವಾಗ ‘ಭಕ್ತರಾಜ ಗುರು ನನ್ನ ತಾಯಿ, ನನಗೆ ಚರಣಗಳಲ್ಲಿ ನೀಡಿ ಆಶ್ರಯ’ ಎಂಬ ಮರಾಠಿ ಭಾಷೆಯ ಹಾಡನ್ನು ಹೇಳುತ್ತಲೇ ಇದ್ದರು. ನಾವು ಮುಂದೆ ಪಡೆಯುವ ಗುರುಮಂತ್ರಕ್ಕೆ ಇದು ಹಿನ್ನೆಲೆಯಾಗಿತ್ತು.
೮ ಆ. ಪ.ಪೂ. ಧಾಂಡೇಶಾಸ್ತ್ರಿಗಳು ಬಾಳೆಹಣ್ಣು ಸುಲಿದು ಹಣ್ಣನ್ನು ಸೌ. ಕರಂದಿಕರರಿಗೆ ನೀಡಿದರು ಮತ್ತು ಸಿಪ್ಪೆಯನ್ನು ಪ.ಪೂ. ಭಕ್ತರಾಜ ಮಹಾರಾಜರಿಗೆ ನೀಡಿದಾಗ ಅವರು ಆ ಸಿಪ್ಪೆಯನ್ನು ತಿಂದರು : ನಂತರ ನಾವೆಲ್ಲರೂ ಪ.ಪೂ. ಧಾಂಡೇಶಾಸ್ತ್ರಿಗಳ ಮೊದಲ ಮಹಡಿಯ ಮನೆಗೆ ಹೋದೆವು. ಹೋಗುವಾಗ ನಾವು ಪ್ರಸಾದವೆಂದು ಬಾಳೆಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದೆವು. ಅವುಗಳನ್ನು ಅವರಿಗೆ ಅರ್ಪಿಸಿದೆವು. ಆಗ ಅವರು ಒಂದು ಬಾಳೆಹಣ್ಣನ್ನು ಕೈಯಲ್ಲಿ ತೆಗೆದುಕೊಂಡರು, ಅದನ್ನು ಸುಲಿದು ಹಣ್ಣನ್ನು ಸೌ. ಕರಂದಿಕರರಿಗೆ ನೀಡಿದರು ಮತ್ತು ಸಿಪ್ಪೆಯನ್ನು ಪ.ಪೂ. ಭಕ್ತರಾಜ ಮಹಾರಾಜರಿಗೆ ನೀಡಿದರು. ಪ.ಪೂ. ಭಕ್ತರಾಜ ಮಹಾರಾಜರು ಅದನ್ನು ನಿರ್ವಿಕಾರವಾಗಿ ತಿಂದರು. ನಾವೆಲ್ಲಾ ನೋಡುತ್ತಲೇ ನಿಂತುಬಿಟ್ಟೆವು.

೮ ಇ. ಪ.ಪೂ. ಕರಂದಿಕರರು ವಿನಂತಿಸಿದಾಗ ಪ.ಪೂ. ಭಕ್ತರಾಜ ಮಹಾರಾಜರು ೨೪.೭.೧೯೮೭ ರಂದು ರಾಮನಾಮ ಜಪವನ್ನು ‘ಗುರುಮಂತ್ರ’ವನ್ನಾಗಿ ನೀಡಿದರು : ನಂತರ ಪ.ಪೂ. ಕರಂದಿಕರ ಅವರು, ”ಈ ಮೂವರನ್ನು (ನಾನು, ಡಾಕ್ಟರ ಮತ್ತು ಶ್ರೀ. ವಿವೇಕ ವಾರಂಗ ಅವರನ್ನು) ನಿಮ್ಮ ಪಾದಕ್ಕೆ ಬೀಳಲು ಕರೆದುಕೊಂಡು ಬಂದಿದ್ದೇವೆ. ಅವರನ್ನು ಸ್ವೀಕರಿಸಿ” ಎಂದರು. ಆಗ ಪ.ಪೂ. ಬಾಬಾ ಲಜ್ಜೆಯ ಅಭಿನಯ ಮಾಡಿ ‘ನಾನೆಲ್ಲಿ, ನಾನೆಲ್ಲಿ’ ಎಂದು ಹೀಗೆಯೇ ಏನೋ ಹೇಳಿದರು. ಆಗ ಪ.ಪೂ. ಧಾಂಡೇಶಾಸ್ತ್ರಿ ರಾಮನಾಮ ಜಪ ಮಾಡುತ್ತಿದ್ದರು. ಪ.ಪೂ. ಅಣ್ಣಾ ಕರಂದಿಕರ ಅವರು, ”ಅವರನ್ನು ಸ್ವೀಕರಿಸಿ !” ಎಂದರು. ಆಗ ಪ.ಪೂ. ಭಕ್ತರಾಜ ಮಹಾರಾಜರು ನಕ್ಕರು ಮತ್ತು ನಗುತ್ತಾ, ”ಧಾಂಡೇಶಾಸ್ತ್ರಿಗಳು ಹೇಳುವ ಜಪವನ್ನೇ ಎಲ್ಲರಿಗೂ ಕೊಡುತ್ತೇನೆ” ಎಂದರು. ನಂತರ ನಾವು ಒಬ್ಬೊಬ್ಬರಾಗಿ ಮುಂದೆ ಹೋದೆವು. ಮೊದಲು ಶ್ರೀ. ವಿವೇಕ ವಾರಂಗ, ನಂತರ ನಾನು, ನಂತರ ಡಾ. ಆಠವಲೆ ! ನಮ್ಮ ಮೂವರಿಗೂ ಅವರು ರಾಮನಾಮ ಜಪ ಮಾಡಲು ಹೇಳಿದರು. ಪ.ಪೂ. ಬಾಬಾ ನಾವು ನೀಡಿದ ದಕ್ಷಿಣೆಯನ್ನು ಪಕ್ಕಕ್ಕೆ ಇಟ್ಟಿದ್ದರು. ಪ.ಪೂ. ಧಾಂಡೇಶಾಸ್ತ್ರಿಗಳು, ”ನಿಮಗೆ ಬೇಡವಾದರೆ, ನಾನು ತೆಗೆದುಕೊಳ್ಳುತ್ತೇನೆ” ಎಂದು ಹೇಳಿ ಆ ದಕ್ಷಿಣೆಯನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡರು. ನಂತರ ಹೊರಡುವಾಗ ಅವರು ಆ ದಕ್ಷಿಣೆಯನ್ನು ಮತ್ತೆ ಪ.ಪೂ. ಭಕ್ತರಾಜ ಮಹಾರಾಜರ ಜೇಬಿಗೆ ಹಾಕಿದರು. ಹೀಗೆ ೨೪.೭.೧೯೮೭ ರಂದು ನಮಗೆ ಗುರುಮಂತ್ರ ದೊರೆಯಿತು.
೮ ಈ. ಪ.ಪೂ. ಭಕ್ತರಾಜ ಮಹಾರಾಜರ ಆಶ್ರಮದಲ್ಲಿ ಭೋಜನ ಮಾಡಿ ಮರುದಿನ ಮರಳಿ ಪ್ರಯಾಣ ಪ್ರಾರಂಭಿಸಿದೆವು : ಮರುದಿನ ಪ.ಪೂ. ಭಕ್ತರಾಜ ಮಹಾರಾಜರು ನಮ್ಮನ್ನು ಮತ್ತೆ ಆಶ್ರಮಕ್ಕೆ ಕರೆದರು. ಊಟ ನೀಡಿದರು. ನಾವು ರಾತ್ರಿ ವಿಶ್ರಾಂತಿಗೃಹಕ್ಕೆ ಬಂದು ಸಾಮಾನುಗಳನ್ನು ಕಟ್ಟಿದೆವು. ಮರುದಿನ ಮರಳಿ ಪ್ರಯಾಣ ಪ್ರಾರಂಭವಾಯಿತು. ನಾಸಿಕ ತಲುಪುವμಟ್Àರಲ್ಲಿ ರಾತ್ರಿಯಾಗಿದ್ದರಿಂದ ವಿಶ್ರಾಂತಿಗೃಹದಲ್ಲಿ ತಂಗಿದೆವು. ಬೆಳಗ್ಗೆ ಎದ್ದು ತ್ರ್ಯಂಬಕೇಶ್ವರಕ್ಕೆ ದರ್ಶನಕ್ಕಾಗಿ ಹೋದೆವು ಮತ್ತು ಅಲ್ಲಿಂದ ಜವ್ಹಾರ ಮಾರ್ಗವಾಗಿ ಪ.ಪೂ. ಕರಂದಿಕರರು ಡಹಾಣಕ್ಕೆ ಹೋದರು. ನಾವು ಮುಂಬಯಿಗೆ ಹಿಂತಿರುಗಿದೆವು.
೯. ಪ.ಪೂ. ಭಕ್ತರಾಜ ಮಹಾರಾಜರ ಸಹವಾಸ
೯ ಅ. ಪ.ಪೂ. ಬಾಬಾರವರು ಮನಸ್ಸಿನಲ್ಲಿನ ಪ್ರಶ್ನೆಗಳನ್ನು ಗುರುತಿಸಿ ಉತ್ತರ ನೀಡುವುದು
೯ ಅ ೧. ಪ.ಪೂ. ಅಣ್ಣಾ ಅವರು ಪ.ಪೂ. ಬಾಬಾ ಪುಣೆಗೆ ಬಂದಿದ್ದಾರೆಂದು ತಿಳಿಸಿದರು ಮತ್ತು ಅವರು ಹೇಳಿದಂತೆ ಪುಣೆಗೆ ಹೋದೆವು : ಹಿಂತಿರುಗಿ ಬಂದ ನಂತರ ಡಾಕ್ಟರರ ‘ಅಧ್ಯಯನ ವರ್ಗ, ಉಪನ್ಯಾಸಗಳು ಮತ್ತು ರೋಗಿಗಳನ್ನು ನೋಡುವುದು’ ಈ ಸಾಮಾನ್ಯ ಕಾರ್ಯಕ್ರಮಗಳು ಮುಂದುವರಿದವು. ಕಾರ್ಯವು ನಿಧಾನವಾಗಿ ಹೆಚ್ಚಾಗುತ್ತಿತ್ತು. ಡಾಕ್ಟರ್ ಇತರ ನಗರಗಳಿಗೂ ಪ್ರವಚನ ನೀಡಲು ಹೋಗುತ್ತಿದ್ದರು. ಒಂದೂವರೆ ತಿಂಗಳ ನಂತರ ಪ.ಪೂ. ಕರಂದಿಕರರು ಪುಣೆಗೆ ರೋಗಿಗಳನ್ನು ನೋಡಲು ಹೋದಾಗ ಅವರಿಗೆ ಪ.ಪೂ. ಭಕ್ತರಾಜ ಮಹಾರಾಜರು ಪುಣೆಗೆ ಬಂದಿದ್ದಾರೆಂದು ತಿಳಿಯಿತು. ಅವರು ನಮ್ಮನ್ನು ಪುಣೆಗೆ ಬರಲು ಹೇಳಿದರು. ನಮ್ಮನ್ನು ಕರೆದುಕೊಂಡು ಅವರು ಪ.ಪೂ. ಬಾಬಾರವರನ್ನು ಭೇಟಿಯಾಗಲು ಹೋದರು. ಅಲ್ಲಿ ಬೇರೆ ಸಾಕμÀಟ್Ä ಜನರೂ ಇದ್ದರು. ನಾವು ಹೊಸಬರಾಗಿದ್ದೆವು. ನಾವು ಹಿಂದೆ ಗೋಡೆಗೆ ಒರಗಿಕೊಂಡು ಕುಳಿತೆವು. ಎದುರಿಗೆ ಪ.ಪೂ. ಬಾಬಾ ಹಾಸಿಗೆಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಪಕ್ಕದಲ್ಲಿ ಪ.ಪೂ. ಕರಂದಿಕರ ಮತ್ತು ಸೌ. ಕರಂದಿಕರರು ಕುರ್ಚಿಯಲ್ಲಿ ಕುಳಿತಿದ್ದರು.
೯ ಅ ೨. ಪ.ಪೂ. ಬಾಬಾರವರನ್ನು ನೋಡುತ್ತಿರುವಾಗ ‘ನಮ್ಮ ನಿಜವಾದ ಗುರು ಯಾರು ?’ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತು ಮತ್ತು ತಕ್ಷಣವೇ ಪ.ಪೂ. ಬಾಬಾರವರು ನೀಡಿದ ಉತ್ತರವನ್ನು ಕೇಳಿ ಅವರ ಅಗಾಧ ಶಕ್ತಿಯ ಪರಿಕಲ್ಪನೆ ಮೂಡಿತು : ಅವರನ್ನು ನೋಡುತ್ತಿರುವಾಗಲೇ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು, ‘ನಮ್ಮ ನಿಜವಾದ ಗುರು ಯಾರು ? ಪ.ಪೂ. ಭಕ್ತರಾಜ ಮಹಾರಾಜರಾ ಅಥವಾ ಪ.ಪೂ. ಧಾಂಡೇಶಾಸ್ತ್ರಿಗಳಾ ?’ ಏಕೆಂದರೆ ಪ.ಪೂ. ಧಾಂಡೇಶಾಸ್ತ್ರಿಗಳು ಯಾವ ಮಂತ್ರವನ್ನು ಹೇಳುತ್ತಿದ್ದರೋ, ಅದೇ ಮಂತ್ರವನ್ನು ಅವರು ನಮಗೆ ‘ಗುರುಮಂತ್ರ’ವಾಗಿ ನೀಡಿದ್ದರು. ಆ ಕ್ಷಣದಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ಜೋರಾಗಿ ಹೇಳಿದರು, ”ಕುಂದಾತಾಯಿ, ನಾನೂ ಮತ್ತು ಧಾಂಡೇಶಾಸ್ತ್ರಿಗಳು ಬೇರೆ ಅಲ್ಲ. ಗುರುತತ್ತ್ವ ಎಲ್ಲೆಡೆ ಒಂದೇ ಆಗಿರುತ್ತದೆ !” ನಾನು ಆಶ್ಚರ್ಯಚಕಿತಳಾಗಿ ನೋಡುತ್ತಲೇ ಇದ್ದೆ. ಅವರ ಅಗಾಧ ಶಕ್ತಿಯ ಪರಿಕಲ್ಪನೆ ನನಗೆ ಮೂಡಿತು. ಅವರು ‘ಕುಂದಾತಾಯಿ’ ಎಂದು ಕರೆದಾಗಿನಿಂದ ಎಲ್ಲರೂ ನನ್ನನ್ನು ‘ಕುಂದಾತಾಯಿ’ ಎಂದೇ ಕರೆಯಲು ಪ್ರಾರಂಭಿಸಿದರು. ಒಂದೇ ಸಲ ಭೇಟಿಯಾಗಿದ್ದರೂ ಪ.ಪೂ. ಭಕ್ತರಾಜ ಮಹಾರಾಜರಿಗೆ ನನ್ನ ಹೆಸರು ನೆನಪಿತ್ತು, ಇದೂ ಒಂದು ಆಶ್ಚರ್ಯವೇ !

೯ ಆ. ಪ.ಪೂ. ಅಣ್ಣಾ ಅವರೊಂದಿಗೆ ಕಾಂದಳಿಯ ಆಶ್ರಮಕ್ಕೆ ಹೋಗುವುದು, ಪ.ಪೂ. ಭಕ್ತರಾಜ ಮಹಾರಾಜರ ಭೇಟಿಯಾದಾಗ ಅವರು ‘ಇವರನ್ನು ಕರೆದುಕೊಂಡು ನಾನು ಶಿರಡಿಗೆ ಹೋಗುತ್ತೇನೆ’ ಎಂದು ಹೇಳಿದರು ಮತ್ತು ‘೨೨ ಎಕರೆ’ ಹೆಸರಿನ ಕೃಷಿ ಭೂಮಿಯನ್ನು ತೋರಿಸಲು ಹೇಳಿದರು : ನಂತರ ಹೋಳಿಯ ಕಾಲಾವಧಿಯಲ್ಲಿ ಪ.ಪೂ. ಕರಂದಿಕರರು ಪುಣೆಯಲ್ಲಿರುವಾಗ ‘ಬೇಗ ಬನ್ನಿ’ ಎಂದು ಅವರ ದೂರವಾಣಿ ಕರೆ ಬಂತು. ನಾವು ಅವರ ಬಳಿಗೆ ಹೋದೆವು. ಅವರು ನಮ್ಮನ್ನು ಕಾಂದಳಿಯ ಆಶ್ರಮಕ್ಕೆ ಕರೆದುಕೊಂಡು ಹೋದರು. ಕಾಂದಳಿ ಸಂಪೂರ್ಣ ಗ್ರಾಮೀಣ ಪ್ರದೇಶವಾಗಿತ್ತು. ಸುತ್ತಲೂ ಕೃಷಿ ಭೂಮಿ ಇತ್ತು. ಪ.ಪೂ. ಭಕ್ತರಾಜ ಮಹಾರಾಜರ ಜಾಗದಲ್ಲಿ ಅವರ ಕುಲದೇವತೆ ‘ಶ್ರೀರಾಮ ಮಂದಿರ’, ಅದರ ಹಿಂದೆ ಎರಡು ಕೋಣೆಗಳು, ಅದರ ಬಲಭಾಗದಲ್ಲಿ ಸಗಣಿಯಿಂದ ಸಾರಿಸಿದ ಅಡುಗೆಮನೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಎರಡು ಚಿಕ್ಕ ಕೋಣೆಗಳಿದ್ದವು. ಮಂದಿರದ ಮುಂದೆ ಅಂಗಳವಿತ್ತು. ಮಂದಿರದ ಎದುರಿಗೆ ಕಲ್ಲಿನಿಂದ ನಿರ್ಮಿಸಿದ ಕುಳಿತುಕೊಳ್ಳುವ ಜಾಗವಿತ್ತು. ಮಂದಿರದ ಮುಂದಿನ ಸಭಾಂಗಣದಲ್ಲಿ ಪ.ಪೂ. ಭಕ್ತರಾಜ ಮಹಾರಾಜರೊಂದಿಗೆ ನಮ್ಮ ಭೇಟಿಯಾಯಿತು. ಅವರು ಪ.ಪೂ. ಕರಂದಿಕರರಿಗೆ, ”ಇವರನ್ನು ಕರೆದುಕೊಂಡು ನಾನು ಶಿರಡಿಗೆ ಹೋಗುತ್ತೇನೆ” ಎಂದರು. ಆಗ ಪ.ಪೂ. ಕರಂದಿಕರರು ಏನೂ ಹೇಳಲಿಲ್ಲ. ಸ್ವಲ್ಪ ಸಮಯದ ನಂತರ ಪ.ಪೂ. ಭಕ್ತರಾಜ ಮಹಾರಾಜರು ಆಶ್ರಮದ ವ್ಯವಸ್ಥೆಯನ್ನು ನೋಡಿಕೊಳ್ಳುವ ಶ್ರೀ. ನಾನಾ ಘಳಸಾಸಿ ‘ಅವರಿಗೆ ನಮ್ಮ ‘೨೨ ಎಕರೆ’ ಹೆಸರಿನ ಕೃಷಿ ಭೂಮಿಯನ್ನು ತೋರಿಸು’ ಎಂದು ಹೇಳಿದರು. ನಾವು ಅಲ್ಲಿಗೆ ಹೋದೆವು. ಅಲ್ಲಿ ಸೌ. ಘಳಸಾಸಿ ಅವರೂ ಭೇಟಿಯಾದರು. ಒಂದು ಚಿಕ್ಕ ಗುಡಿಸಲಿನಲ್ಲಿ ಅವರ ಸಂಸಾರವಿತ್ತು. (ಮುಂದುವರಿಯುವುದು)
– ಡಾ. (ಸೌ.) ಕುಂದಾ ಜಯಂತ ಆಠವಲೆ (೨೩.೪.೨೦೨೫)
| ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ – https://sanatanprabhat.org/kannada/148171.html |
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !