ಭಾರತದಲ್ಲಿ ೭೦೦ ವರ್ಷಗಳ ಹಿಂದೆ, ಅಂದರೆ ಮೊಘಲರು, ಅರಬರು, ಹೂಣರು, ಕುಶಾಣರಂತಹ ವಿದೇಶಿ ಆಕ್ರಮಣಕಾರರ ಮೊದಲು ಹಿಂದೂ ಧರ್ಮದ ಅನೇಕ ಪದ್ಧತಿ-ಸಂಪ್ರದಾಯಗಳನ್ನು ಉತ್ತಮವಾಗಿ ಪಾಲಿಸಲಾಗುತ್ತಿತ್ತು. ಈ ಪದ್ಧತಿ-ಸಂಪ್ರದಾಯಗಳಿಂದ ಹಿಂದೂ ಧರ್ಮದ ವ್ಯವಸ್ಥೆ ಮತ್ತು ಒಟ್ಟಾರೆ ಸಮಾಜ ಜೀವನವು ಸರಾಗವಾಗಿ ನಡೆಯುತ್ತಿತ್ತು. ಸಾಮಾನ್ಯವಾಗಿ ಹಿಂದೂ ಧರ್ಮದ ಆಚಾರಗಳು ಮತ್ತು ಅದರಲ್ಲಿಯೂ ಮಹಿಳೆಯರ ಕುರಿತಾದ ವಿಷಯಗಳ ವಿಚಾರವನ್ನು ಬ್ರಿಟಿಷರ ಕಾಲದಲ್ಲಿಯೂ ಮತ್ತು ಈಗಿನ ಕಾಲದಲ್ಲಿಯೂ ಮಾಡಲಾಗುತ್ತದೆ. ವಿದೇಶಿ, ಯವನ ಆಕ್ರಮಣಕಾರರ ಮೊದಲು ಪರಿಸ್ಥಿತಿ ಹೇಗಿತ್ತು, ವಿದೇಶಿ ಆಕ್ರಮಣಗಳ ನಂತರ ಇಲ್ಲಿನ ಸಮಾಜ ವ್ಯವಸ್ಥೆ, ವ್ಯವಹಾರ, ರಾಜ್ಯ ಪದ್ಧತಿಗಳಲ್ಲಿ ಆಗಿರುವ ಬದಲಾವಣೆಗಳಂತೆಯೇ ಪದ್ಧತಿ-ಸಂಪ್ರದಾಯಗಳಲ್ಲಿಯೂ ಆಗಿವೆ. ಅದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ !
೧. ವಿವಾಹ ಸಾಯಂಕಾಲ ಮತ್ತು ರಾತ್ರಿ ನಡೆಯುವುದು !

ಉತ್ತರಭಾರತದಲ್ಲಿ ಮದುವೆಗಳು ಸಾಯಂಕಾಲ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ ನಡೆಯುತ್ತಿರುವುದು ಕಂಡುಬರುತ್ತದೆ. ಮದುವೆಯ ಮುಹೂರ್ತಗಳು ರಾತ್ರಿಯಲ್ಲಿ ಹೇಗೆ ಮತ್ತು ಏಕೆ ನಡೆಯುತ್ತವೆ ? ಇದರ ಜಾಡು ಹಿಡಿದರೆ ಮೊಘಲರ ದೌರ್ಜನ್ಯಗಳ ವರೆಗೆ ತಲುಪಬಹುದು. ಮೊಘಲರ ಆಳ್ವಿಕೆಯಲ್ಲಿ ಹಿಂದೂ ಮಹಿಳೆಯರು, ಹುಡುಗಿಯರ ಮೇಲೆ ಹಾಡುಹಗಲೇ ದೌರ್ಜನ್ಯಗಳು ನಡೆಯುತ್ತಿದ್ದವು. . ಯಾವ ರಾಜರು-ಸರದಾರರನ್ನು ಮೊಘಲರು ಗುಲಾಮರನ್ನಾಗಿ ಮಾಡಿಕೊಂಡಿದ್ದರೋ ಅಥವಾ ಗುಲಾಮರಾಗಬೇಕಾಗಿತ್ತೋ, ಅವರ ಹೆಣ್ಣುಮಕ್ಕಳು, ರಾಜಮನೆತನದ ಮಹಿಳೆಯರು ಕ್ರೂರ ಮತ್ತು ಕಾಮಪಿಪಾಸು ಮೊಘಲರ ದಾಸಿಯರಾಗಿ ಅವರ ಅಂತಃಪುರಕ್ಕೆ ಸೇರಲೇಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಹಿಂದೂ ಸ್ತ್ರೀಯರ ಪರಿಸ್ಥಿತಿ ಎಷ್ಟೊಂದು ಕಷ್ಟಕರವಾಗಿತ್ತೆಂದು ಊಹಿಸಬಹುದು. ಮೊಘಲರ ದೌರ್ಜನ್ಯದ ಆಳ್ವಿಕೆಯಲ್ಲಿ ಯಾವುದೇ ಹುಡುಗಿಯ ಮದುವೆ ನಿಶ್ಚಯವಾಗಿದೆ ಎಂದು ನವಾಬ್ ಅಥವಾ ಮೊಘಲ ಸರದಾರನಿಗೆ ತಿಳಿದರೆ, ಅವನು ವಧುವಿನ ಮನೆಗೆ ಸಂದೇಶ ಕಳುಹಿಸುತ್ತಿದ್ದನು. ಅದರ ಪ್ರಕಾರ ವಧು ಕನಿಷ್ಠ ೩-೪ ದಿನಗಳ ಕಾಲ ಸರದಾರ ಅಥವಾ ನವಾಬನೊಂದಿಗೆ ಇರಬೇಕಾಗುತ್ತಿತ್ತು. ನಂತರ ಸರದಾರ ಅಥವಾ ನವಾಬ್‌ನ ಇಚ್ಛೆಯ ಮೇರೆಗೆ ಅವರನ್ನು ಮದುವೆಗೆ ಕಳುಹಿಸಿಕೊಡಲಾಗುತ್ತಿತ್ತು. ಗೌರವ ಮತ್ತು ನೈತಿಕತೆಗೆ ಹಾನಿಕರವಾದ ಈ ಅತ್ಯಂತ ಕೆಟ್ಟ ಪದ್ಧತಿಯನ್ನು ಮೊಘಲರು ಪ್ರಾರಂಭಿಸಿದ್ದರು. ಯಾವುದೇ ಕುಟುಂಬವು ನವಾಬನಿಗೆ ಹುಡುಗಿಯನ್ನು ಕಳುಹಿಸದಿದ್ದರೆ, ಮದುವೆ ಮಂಟಪದಿಂದಲೇ ನವಾಬನ ಸೈನಿಕರು ವಧುವನ್ನು ಎತ್ತಿಕೊಂಡು ಹೋಗುತ್ತಿದ್ದರು. ಆದ್ದರಿಂದ ಹಿಂದೂ ಕುಟುಂಬಗಳು ಬಾಯಿ ಮುಚ್ಚಿಕೊಂಡು ಈ ದೌರ್ಜನ್ಯವನ್ನು ಸಹಿಸಿಕೊಳ್ಳಬೇಕಾಗಿತ್ತು. ತಮ್ಮ ಹೆಣ್ಣು ಮಕ್ಕಳ ಮಾನಹಾನಿಯನ್ನು ತಪ್ಪಿಸಲು ‘ಮಗಳ ಮದುವೆ ನಿಶ್ಚಯವಾಗಿದೆ’ ಎಂಬುದನ್ನು ರಹಸ್ಯವಾಗಿಡಲಾಗುತ್ತಿತ್ತು ಮತ್ತು ಮದುವೆ ಸಮಾರಂಭ ವನ್ನು ರಹಸ್ಯವಾಗಿ ನಡೆಸಲು ಅದನ್ನು ರಾತ್ರಿ ಮಾಡಲಾಗುತ್ತಿತ್ತು. ಪರಿಣಾಮವಾಗಿ ಹಿಂದೂಗಳು ತಮ್ಮ ಹೆಣ್ಣುಮಕ್ಕಳ ಮದುವೆಯನ್ನು ರಾತ್ರಿ ಮಾಡಬೇಕಾಯಿತು. ಈ ಪದ್ಧತಿ ಇಂದಿಗೂ ಉತ್ತರ ಭಾರತದಲ್ಲಿ ಮುಂದುವರೆದಿದೆ.
೨. ಹುಡುಗಿಯರು-ಮಹಿಳೆಯರು ತಮ್ಮ ಪಾದಗಳಿಗೆ ಆಲತಾ ಅಥವಾ ಮಹಾವರ (ಅಂಗಾಲು ಮತ್ತು ಕಾಲ್ಬೆರಳುಗಳಿಗೆ ಕೆಂಪು ಬಣ್ಣ ಹಚ್ಚುವುದು) ಹಚ್ಚಿಕೊಳ್ಳುವುದು !

ಸಾಮಾನ್ಯವಾಗಿ ಉತ್ತರಪ್ರದೇಶ, ಬಿಹಾರ, ಬಂಗಾಲ, ಜಾರ್ಖಂಡ ಮುಂತಾದ ಉತ್ತರದ ರಾಜ್ಯಗಳ ಹುಡುಗಿಯರು-ಮಹಿಳೆಯರು ಅಂಗಾಲುಗಳಿಗೆ ಮತ್ತು ಕಾಲ್ಬೆರಳು ಗಳಿಗೆ ಕೆಂಪು ಬಣ್ಣವನ್ನು ಹಚ್ಚಿಕೊಳ್ಳು ತ್ತಾರೆ. ಧಾರ್ಮಿಕ ವಿಧಿಗಳ ಸಮಯ ದಲ್ಲಿ ಅಥವಾ ಇತರ ಮಂಗಳಕರ ಸಂದರ್ಭಗಳಲ್ಲಿ ಪಾದಗಳಿಗೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಈ ಪದ್ಧತಿ ಇಲ್ಲಿ ಮಾತ್ರ ಇದೆ. ಕೆಲವು ಕಡೆ ಇದನ್ನು ಹಿಂದೂ ಧರ್ಮದ ೧೬ ಸಂಸ್ಕಾರ ಗಳೊಂದಿಗೆ ಜೋಡಿಸಲಾಗಿದೆ. ಆದರೂ ಈ ಬಗ್ಗೆ ಒಂದು ವಿಶಿಷ್ಟ ಪ್ರಸಂಗವಿದೆ. ಮೇಲೆ ತಿಳಿಸಿದಂತೆ ಉತ್ತರಭಾರತದಲ್ಲಿ ಮದುವೆ ನಿಶ್ಚಿತವಾದ ಹುಡುಗಿಯನ್ನು ನವಾಬನಿಗೆ ಕಳುಹಿಸುವುದು ಕಡ್ಡಾಯವಾಗಿತ್ತು. ಹಿಂದೂ ಹುಡುಗಿಯ ಪೋಷಕರಿಗೆ ಇದರಿಂದ ಬಹಳ ತೊಂದರೆಯಾಗುತ್ತಿತ್ತು, ಅದರಲ್ಲಿಯೂ ಅವರು ರಾತ್ರಿ ಮದುವೆಯನ್ನು ನಿಶ್ಚಿತಪಡಿಸಿ ಅದನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದರು. ಒಮ್ಮೆ ಇದೇ ರೀತಿ ಒಂದು ಹಿಂದೂ ಕುಟುಂಬದ ಹುಡುಗಿಯ ಮದುವೆ ನಿಶ್ಚಯವಾಗಿತ್ತು, ಅವರು ಅದನ್ನು ಬಹಳಷ್ಟು ಮರೆಮಾಚಿದರು. ಆದರೂ ನವಾಬನಿಗೆ ಅದರ ಸುಳಿವು ಸಿಕ್ಕಿತು. ಅವನು ಹುಡುಗಿಯ ಮನೆಯವರಿಗೆ ಕರೆ ಕಳುಹಿಸಿ ಹುಡುಗಿಯನ್ನು ತನ್ನ ಅರಮನೆಗೆ ಕರೆಸಿದನು. ಈ ಸಮಯದಲ್ಲಿ ಆ ಹುಡುಗಿಯ ತಂದೆಗೆ ಒಂದು ಉಪಾಯ ಹೊಳೆಯಿತು. ಅವರು ಒಂದು ಹಂದಿಯನ್ನು ಕತ್ತರಿಸಿ ಅದರ ರಕ್ತವನ್ನು ಹುಡುಗಿಯ ಕೈಗೆ ಹಚ್ಚಿದರು. ಅದೇ ಕೈಗಳಿಂದ ಹುಡುಗಿ ನವಾಬನ ಬಳಿಗೆ ಹೋದಾಗ, ನವಾಬನು ಕೈಗೆ ಹಚ್ಚಿರುವ ಕೆಂಪು ಬಣ್ಣವನ್ನು ನೋಡಿ ‘ಇದೇನು ?’ ಎಂದು ಕೇಳಿದನು. ಆಗ ಹುಡುಗಿಯು, ‘ಹಂದಿಯ ರಕ್ತ ತಗಲಿದೆ’ ಎಂದು ಹೇಳಿದಳು. ಆಗ ನವಾಬನು ಅವಳಿಗೆ ‘ನೀನು ಈಗ ಹರಾಮ್ (ನಿಷಿದ್ಧ) ಆಗಿದ್ದೀಯಾ, ನಾನು ನಿನ್ನನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಹೇಳಿ ಅವಳನ್ನು ಹಿಂದಕ್ಕೆ ಕಳುಹಿಸಿದನು. ಆಗ ಈ ಸುಂದರ ಉಪಾಯ ಹಿಂದೂ ಪೋಷಕರ ಗಮನಕ್ಕೆ ಬಂದಿತು. ಹಂದಿಯ ರಕ್ತವನ್ನು ಕೈಗೆ ಹಚ್ಚಿಕೊಂಡರೆ ಅದು ಮುಸಲ್ಮಾನ ಆಡಳಿತಗಾರರಿಗೆ ತ್ಯಾಜ್ಯವಾಗಿರುತ್ತದೆ. ನಂತರ ಮದುವೆಯಾಗಲಿರುವ ಪ್ರತಿಯೊಂದು ಹುಡುಗಿಯ ಕೈಗಳಿಗೆ ಕೆಂಪು ಬಣ್ಣ ಹಚ್ಚುವ ಪದ್ಧತಿಯೇ ರೂಢಿಗೆ ಬಂತು ಮತ್ತು ಈಗಲೂ ಪಾದಗಳಿಗೆ ಕೆಂಪು ಬಣ್ಣವನ್ನು ಹಚ್ಚಲಾಗುತ್ತದೆ. ಇದೇ ತಂತ್ರವನ್ನು ಬಳಸಿ, ಅಂದರೆ ಹಂದಿ ಯನ್ನು ಮನೆಯಲ್ಲಿ ಸಾಕುವ ಮೂಲಕ ಅಥವಾ ಮನೆಯ ಮೇಲೆ ದಾಳಿ ಮಾಡಲು ಬಂದ ಸೈನಿಕರ ಮೇಲೆ ಹಂದಿಗಳನ್ನು ಬಿಡುವ ಮೂಲಕ ಹಿಂದೂಗಳು ತಮ್ಮ ಮನೆಗಳು, ಗ್ರಾಮಗಳು, ಪ್ರದೇಶಗಳನ್ನು ಮೊಘಲರ ಆಕ್ರಮಣಗಳಿಂದ ರಕ್ಷಿಸಿಕೊಂಡಿದ್ದಾರೆ.
೩. ಸತಿ ಪದ್ಧತಿ

ಸತಿ ಪದ್ಧತಿಯಿಂದ ಹಿಂದೂ ಧರ್ಮವನ್ನು ‘ಕೊಳಕು’, ‘ಮಹಿಳೆಯರ ಮಹತ್ವವನ್ನು ನಿರಾಕರಿಸುವ’ ಎಂದು ಕರೆಯಲಾಗುತ್ತದೆ. ಪ್ರಸ್ತುತ ಆಗಿನ ಪರಿಸ್ಥಿತಿಗಳ ವಿಚಾರ ಮಾಡಿದರೆ ಯಾವ ಮಹಿಳೆ ಪತಿಯ ಮರಣದ ನಂತರ ವಿಧವೆ ಯಾಗಿದ್ದಳೋ, ಅಂದರೆ ಪತಿಯಿಲ್ಲದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಸಮರ್ಥಳಾಗಿದ್ದಳೋ, ಮೊಘಲರ ರಾಕ್ಷಸೀ ಆಳ್ವಿಕೆಯಲ್ಲಿ ಅವಳ ರಕ್ಷಣೆ ಹೇಗೆ ಸಾಧ್ಯ ? ಇದು ಅತ್ಯಂತ ಮಹತ್ವದ ಪ್ರಶ್ನೆಯಾಗಿತ್ತು; ಏಕೆಂದರೆ ವಿಧವಾ ವಿವಾಹವು ಸಮಾಜದಲ್ಲಿ ಅಷ್ಟೊಂದು ರೂಢಿಯಲ್ಲಿರಲಿಲ್ಲ. ಸಮಾಜವು ಸಂಪ್ರದಾಯವಾದಿ ಮನಸ್ಥಿತಿಯಲ್ಲಿದ್ದ ಕಾರಣ ವಿಧವೆ ಮಹಿಳೆಗೆ ಆತ್ಮರಕ್ಷಣೆಗಾಗಿ ಪತಿಯೊಂದಿಗೆ ಅಗ್ನಿಗೆ ಅರ್ಪಿಸಿ ಕೊಳ್ಳುವುದು ಸುಲಭ ಅನಿಸುತ್ತಿತ್ತು. ಇದು ಐಚ್ಛಿಕವಾಗಿತ್ತು, ಸಾರಾಸಗಟಾಗಿ ಎಲ್ಲ ಸ್ತ್ರೀಯರೂ ಸತಿ ಹೋದರು ಎಂಬ ಉಲ್ಲೇಖಗಳಿಲ್ಲ. ಆದ್ದರಿಂದ ಯಾರೋ ಸಮಾಜ ಸುಧಾರಕರು ಬಂದು ಈ ಅನ್ಯಾಯದ ಪದ್ಧತಿಯನ್ನು ನಿಲ್ಲಿಸಿದರು ಎನ್ನುವುದು ಹಾಸ್ಯಾಸ್ಪದವಾಗಿದೆ. ಮೂಲತಃ ಈ ಪದ್ಧತಿಯು ಯಾವ ಹಿನ್ನೆಲೆಯಲ್ಲಿ ಪ್ರಾರಂಭ ವಾಯಿತು ಎಂಬುದು ಮಹತ್ವದ್ದಾಗಿದೆ. ರಾಜಸ್ಥಾನದಲ್ಲಿ ಜೋಹಾರ ಎಂದರೇನು ? ಜೋಹಾರ ಎಂದರೆ ಸಾಮೂಹಿಕವಾಗಿ ಸತಿ ಹೋಗುವುದು. ಅಷ್ಟೇ ಅಲ್ಲ, ಯವನರ ಆಕ್ರಮಣದ ಸಮಯದಲ್ಲಿ ತಮ್ಮ ಶೀಲವನ್ನು ರಕ್ಷಿಸಿಕೊಳ್ಳಲು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಜೋಹಾರ ಮಾಡುತ್ತಿದ್ದರು ಮತ್ತು ಆಗ ಪುರುಷರು ಈಗ ತಮ್ಮ ಹಿಂದೆ ಪತ್ನಿಯರಿಲ್ಲ ಎಂಬ ಭಾವನೆಯಿಂದ ರಣರಂಗದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಲು ಮೊಘಲರೊಂದಿಗೆ ಉಗ್ರವಾಗಿ ಹೋರಾಡುತ್ತಿದ್ದರು.

೪. ವಿವಾಹದ ಸಂಪ್ರದಾಯದಲ್ಲಿ ವಧು ಮನೆಗೆ ಬಂದ ನಂತರ ಆಕೆಯ ಸಹೋದರರು ಆಕೆಯನ್ನು ರಕ್ಷಣೆಯೊಂದಿಗೆ ಗಂಡನ ಮನೆಗೆ ಕಳುಹಿಸುವುದು
‘ಪಗಫೇರಾ ರಸ್ಮ್ ದಲ್ಲಿ ವಿವಾಹದ ಸಂಪ್ರದಾಯದಂತೆ ವಧು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ, ವಧುವಿನ ತಂದೆ-ತಾಯಿ ಆಕೆಯನ್ನು ಮತ್ತೆ ಮನೆಗೆ ಕರೆಯುತ್ತಾರೆ ಮತ್ತು ನಂತರ ಮತ್ತೆ ಆಕೆಯನ್ನು ಗಂಡನ ಮನೆಗೆ ಕಳುಹಿಸುತ್ತಾರೆ. ಅಂತಹ ಸಮಯದಲ್ಲಿಯೂ ಮೊಘಲರಿಂದ ವಧುವಿಗೆ ಅಪಾಯವಿತ್ತು. ಅಂತಹ ಸಮಯದಲ್ಲಿ ಆಕೆಯ ಸಹೋದರರು, ಆಕೆಯ ಪುರುಷ ಸಂಬಂಧಿಕರು ಹುಡುಗಿಯ ತಲೆಯ ಮೇಲೆ ಆಯುಧ ಅಂದರೆ ಖಡ್ಗಗಳನ್ನು ಹಿಡಿಯುತ್ತಿದ್ದರು. ಇದರಲ್ಲಿ ಆಕೆಯ ಸಹೋದರರು ಆಕೆಗೆ ಭರವಸೆ ನೀಡುವ ಒಂದು ವಿಧವಾಗಿದೆ, ‘ನೀನು ಗಂಡನ ಮನೆಗೆ ಹೋಗುವ ವರೆಗೆ ಮತ್ತು ತವರುಮನೆಗೆ ಬಂದು ಮತ್ತೆ ಗಂಡನ ಮನೆಗೆ ಹೋಗುವವರೆಗೆ ನಿನ್ನನ್ನು ರಕ್ಷಿಸುತ್ತೇವೆ’ ಎಂದಾಗಿದೆ. ಆ ಸಮಯದಲ್ಲಿ ನಾವು ಅಹಿಂಸಾವಾದಿಗಳು ಎಂದು ಪರಿಗಣಿಸುವ ಜೈನ ಧರ್ಮೀಯರು ಸಹ, ತಮ್ಮ ಸಹೋದರಿಯ ರಕ್ಷಣೆಗಾಗಿ ಆಯುಧಗಳನ್ನು ಹಿಡಿದು ಸಿದ್ಧರಾಗಿರುತ್ತಿದ್ದರು, ಅಂದರೆ ಜೈನ ಸಮಾಜವೂ ಖಡ್ಗಗಳನ್ನು ಹಿಡಿದಿತ್ತು; ಏಕೆಂದರೆ ಆಗ ಮೊಘಲರ ಭಯವಿತ್ತು. ಈಗ ಈ ಪದ್ಧತಿಯಲ್ಲಿ ಖಡ್ಗಗಳನ್ನು ಹಿಡಿಯುವ ಬದಲು ವಧುವಿನ ತಲೆಯ ಮೇಲೆ ಬುಟ್ಟಿಯನ್ನು ಹಿಡಿಯಲಾಗುತ್ತದೆ.
೫. ತಲೆಯ ಮೇಲೆ ಸೆರಗು ಹೊದ್ದುಕೊಳ್ಳುವ ಮತ್ತು ಪರದಾ ಪದ್ಧತಿ ಏಕೆ ಬಂದಿತು ?

ಉತ್ತರಭಾರತದ ಪರದ ಪದ್ಧತಿಯ ಬಗ್ಗೆ ಹೇಳಲಾಗಿರುವುದು ಏನೆಂದರೆ, ಹಿಂದೂ ಧರ್ಮದಲ್ಲಿ ಸ್ತ್ರೀ ಯರಿಗೆ ಗೌರವ ನೀಡಲಾಗುತ್ತಿರಲಿಲ್ಲ, ಅವರಿಗೆ ಹೊಸ್ತಿಲು ದಾಟಿ ಹೊರಗೆ ಹೋಗುವುದು ನಿಷಿದ್ಧವಾಗಿತ್ತು ಮತ್ತು ಸದಾ ತಲೆಯ ಮೇಲೆ ಸೆರಗು ಹೊದ್ದುಕೊಳ್ಳಬೇಕಾಗಿತ್ತು. ಅವರಿಗೆ ಸ್ವಾತಂತ್ರ್ಯವಿರಲಿಲ್ಲ ಇತ್ಯಾದಿ ಇತ್ಯಾದಿ ! ಈಗ ಮೇಲಿನ ಸಂದರ್ಭದಿಂದ ಮೊಘಲರ ಆಳ್ವಿಕೆಯಲ್ಲಿ ಯಾವುದೇ ಮಹಿಳೆ ಅಥವಾ ಹುಡುಗಿ ತೆರೆದ ಮುಖದಿಂದ ತಿರುಗಾಡಲು ಧೈರ್ಯವಾಗುತ್ತಿತ್ತೇ ? ಎಂದು ಯೋಚಿಸಬಹುದು. ಏಕೆಂದರೆ ಕಾಮಪಿಪಾಸು ಸರದಾರರು ಮಾತ್ರವಲ್ಲ, ಅವರ ಸೈನಿಕರ ದೃಷ್ಟಿ ತಮ್ಮ ಮೇಲೆ ಬಿದ್ದು ಯಾವಾಗ ಮಾನಭಂಗ ಮತ್ತು ಅತ್ಯಾಚಾರ ನಡೆಯುತ್ತದೇ ಎಂದು ಖಾತ್ರಿ ಇರಲಿಲ್ಲ. ಅಂತಹ ಸಮಯದಲ್ಲಿ ಕನಿಷ್ಠ ತಮ್ಮ ಗುರುತನ್ನು ಈ ಜಿಹಾದಿಗಳಿಂದ ಮರೆಮಾಚಲು ಹಿಂದೂ ಮಹಿಳೆಯರು ತಲೆಯ ಮೇಲೆ ಸೆರಗು ಹೊದ್ದುಕೊಳ್ಳುವ, ಪರದಾ ಪದ್ಧತಿಯನ್ನು ಪ್ರಾರಂಭಿಸಿದರು, ಅಂದರೆ ಅವರು ಅದನ್ನು ಯಾವುದೇ ನಿರ್ಬಂಧವೆಂದು ಸ್ವೀಕರಿಸಿರಲಿಲ್ಲ, ಆದರೆ ತಮ್ಮನ್ನು ರಕ್ಷಿಸಿಕೊಳ್ಳಲು, ತಮ್ಮ ಶೀಲವನ್ನು ರಕ್ಷಿಸಿಕೊಳ್ಳಲು ಮಾಡಿದ ಪ್ರಯತ್ನಗಳ ಅದು ಭಾಗವಾಗಿತ್ತು. ಕಾಲಾಂತರದಲ್ಲಿ ಮನೆಯಲ್ಲಿಯೂ ಸೆರಗು ಹೊದ್ದುಕೊಳ್ಳುವುದು ಪ್ರಾರಂಭವಾಯಿತು; ಏಕೆಂದರೆ ಮೊಘಲ ಸೈನಿಕರು ಮನೆಗೆ ನುಗ್ಗಿ ತಪಾಸಣೆ ಮಾಡುತ್ತಿದ್ದರು, ಅತ್ಯಾಚಾರ ಎಸಗುತ್ತಿದ್ದರು. ಸೆರಗು ಹೊದ್ದುಕೊಳ್ಳುವುದು ಸಂಪ್ರದಾಯದ ಭಾಗವಾಯಿತು. ಈಗಲೂ ಅನೇಕ ಮಹಿಳೆಯರು ಗೌರವದ ಸಂಕೇತವೆಂದು ಸೆರಗು ಹೊದ್ದುಕೊಳ್ಳುತ್ತಾರೆ.
೬. ಹೆಣ್ಣುಮಕ್ಕಳ ಉಪನಯನ ಸಂಸ್ಕಾರ ರದ್ದಾಗುವುದು !
ಮೊಘಲ ಆಕ್ರಮಣವಾಗುವ ಮೊದಲು ಗಂಡು ಮಕ್ಕಳ ಹಾಗೆ ಹೆಣ್ಣುಮಕ್ಕಳಿಗೂ ಉಪನಯನ ಸಂಸ್ಕಾರ ಮಾಡಲಾಗುತ್ತಿತ್ತು; ಆದರೆ ಈ ಆಕ್ರಮಣಕಾರರ ಕಾಲದಲ್ಲಿ ಹುಡುಗಿಯರು-ಮಹಿಳೆಯರು ಸುರಕ್ಷಿತವಾಗಿರಲಿಲ್ಲ, ಉಪನಯನ ಮಾಡುವುದು ದೂರದ ಮಾತಾಗಿತ್ತು. ಅದು ಸಹ ಇದೇ ಸಮಯದಲ್ಲಿ ನಿಂತುಹೋಯಿತು ಎಂದು ತಿಳಿದುಬರುತ್ತದೆ.
೭. ಭಂಗಿ ಸಮಾಜದ ನಿರ್ಮಿತಿ
ನವಾಬ್ ಅಥವಾ ಮೊಘಲ ಸರದಾರರು ರಜಪೂತರ ರಾಜ್ಯವನ್ನು ಗೆದ್ದಾಗ ಅಥವಾ ಅವರ ಪ್ರದೇಶವನ್ನು ಗೆದ್ದಾಗ, ಅವರು ಗುಲಾಮರಾಗಿ ಅಥವಾ ನೌಕರರಾಗಿ ನವಾಬನ ಬಳಿ ಇರಬೇಕಾಗಿತ್ತು. ಅಂತಹ ಸಮಯದಲ್ಲಿ ನವಾಬರು ಅವರಿಂದ ಕೆಳಮಟ್ಟದ ಕೆಲಸಗಳನ್ನೂ ಮಾಡಿಸಿಕೊಳ್ಳುತ್ತಿದ್ದರು. ಇದರಲ್ಲಿ ನವಾಬರು ಶೌಚಕ್ಕೆ ಕುಳಿತ ಪಾತ್ರೆಯ ಹೊಲಸನ್ನು ತೆಗೆದುಕೊಂಡು ಹೋಗುವುದು, ಅದನ್ನು ಬೇರೆ ಕಡೆ ಎಸೆಯುವುದು ಮುಂತಾದ ಕೆಲಸಗಳನ್ನು ಮಾಡಬೇಕಾಗುತ್ತಿತ್ತು. ಆಗ ಹಿಂದೂ ಧರ್ಮೀಯರಲ್ಲಿ ಶೌಚ-ಅಶೌಚ ಪಾಲನೆ, ಶುದ್ಧತೆಗೆ ಬಹಳ ಮಹತ್ವ ನೀಡಲಾಗುತ್ತಿತ್ತು. ಈ ಸಂಪ್ರದಾಯವಾದಿ ಹಿಂದೂಗಳು ನವಾಬನ ಬಳಿ ಇಂತಹ ಕೆಳಮಟ್ಟದ ಕೆಲಸಗಳನ್ನು ಮಾಡುವ ತಮ್ಮ ಧರ್ಮಬಾಂಧವರಿಗೆ, ಜಾತಿಬಾಂಧವರಿಗೆ ತಮ್ಮಿಂದ ದೂರವಿರಲು ಹೇಳಿದರು, ಅಂದರೆ ಮೂಲ ಸಮಾಜದಿಂದ ಸ್ವಲ್ಪ ಅಂತರ ಕಾಯ್ದುಕೊಂಡು ಇರಲು ಹೇಳಿದರು. ಅಂದಿನಿಂದ ಅವರು ಬೇರೆಯಾದರು ಮತ್ತು ಅವರಿಂದ ಜನರೂ ದೂರವಾದರು. ಪರಿಣಾಮವಾಗಿ ಅನೇಕ ತಲೆಮಾರುಗಳು ಅದರಲ್ಲಿ ಕಳೆದುಹೋದವು. ಅವರನ್ನು ಭಂಗಿ ಎಂದು ಕರೆಯಲಾಯಿತು. ಇಲ್ಲಿ ಮುಖ್ಯವಾದ ವಿಷಯವೆಂದರೆ ಜನರು ಅವರನ್ನು ಮೂಲ ಸಮಾಜದಿಂದ ಬೇರ್ಪಡಿಸಿ ದೂರವಿಟ್ಟರೂ, ಅವರು ಮತಾಂತರಗೊಳ್ಳಲಿಲ್ಲ; ಆದರೆ ಈಗ ಅವರನ್ನು ಬೇರೆಯಾಗಿ ಪರಿಗಣಿಸಲಾಗುತ್ತದೆ ಮತ್ತು ಹಿಂದೂ ಸಮಾಜದಿಂದ ಈಗಲೂ ದೂರವಿಡಲಾಗುತ್ತದೆ.
೮. ಬ್ರಾಹ್ಮಣರು ಕೆಳಜಾತಿಗಳ ಮೇಲೆ ಅನ್ಯಾಯ ಮಾಡಿದ್ದಾರೆ ಎಂಬ ಸುಳ್ಳು ಕಥನ !
‘ಬ್ರಾಹ್ಮಣರು ನಮ್ಮ ಮೇಲೆ ೧ ಸಾವಿರ ವರ್ಷಗಳ ಕಾಲ ಅನ್ಯಾಯ ಮಾಡಿದ್ದಾರೆ ಎಂದು ಕೆಲವು ಜಾತಿಗಳಿಂದ ಒಂದು ವಾದ ಮಂಡಿಸಲಾಗುತ್ತದೆ. ಈ ಬಗ್ಗೆ ಸದ್ಗುರು ಡಾ. ಚಾರುದತ್ತ ಪಿಂಗಳೆಯವರಿಗೆ ಒಬ್ಬ ವ್ಯಕ್ತಿ ಅವರು ಧೋತಿ ಧರಿಸಿದ್ದರಿಂದ ಅವರು ಬ್ರಾಹ್ಮಣ ವರ್ಗದವರೆಂದು ತಿಳಿದು ‘ನಿಮ್ಮ ಪೂರ್ವಜರು ನಮ್ಮ ಮೇಲೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದನು. ಆಗ ಸದ್ಗುರು ಡಾ. ಪಿಂಗಳೆಯವರು ಅವನಿಗೆ ‘ಕಳೆದ ೧ ಸಾವಿರ ವರ್ಷಗಳಲ್ಲಿ ಭಾರತದ ಮೇಲೆ ಆಕ್ರಮಣಕಾರರ ಆಳ್ವಿಕೆ ಇತ್ತು. ಆಕ್ರಮಣಕಾರರ ದೌರ್ಜನ್ಯದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅಂತಹ ಸಮಯದಲ್ಲಿ ಬ್ರಾಹ್ಮಣವರ್ಗ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೋರಾಡುತ್ತಾರೆಯೇ ಅಥವಾ ನಾನು ಹೇಗೆ ಶ್ರೇಷ್ಠ ಮತ್ತು ನೀನು ಹೇಗೆ ಕೀಳು ಎಂದು ಹೇಳುತ್ತಾ ಕೆಳಜಾತಿಯ ಜನರ ಮೇಲೆ ಅನ್ಯಾಯ ಮಾಡುತ್ತಾ ಕುಳಿತುಕೊಳ್ಳುತ್ತಾರೆ ? ಎಂದು ಕೇಳಿದರು. ಅಂದರೆ ಇದರಿಂದ ಊಹಿಸಿದರೂ ಅಂತಹದ್ದೇನೂ ನಡೆದಿಲ್ಲ ಎಂದು ತಿಳಿಯುತ್ತದೆ, ಆದರೆ ಬ್ರಿಟಿಷರು ಈ ಷಡ್ಯಂತ್ರವನ್ನು ರಚಿಸಿ ಬ್ರಾಹ್ಮಣರು ೧ ಸಾವಿರ ವರ್ಷಗಳ ಕಾಲ ಅನ್ಯಾಯ ಮಾಡಿದ್ದಾರೆಂದು ಹಿಂದೂ ಧರ್ಮದ ಇತರ ಜಾತಿಗಳ ಮನಸ್ಸಿನಲ್ಲಿ ಉದ್ದೇಶಪೂರ್ವಕವಾಗಿ ಬಿಂಬಿಸಿರುವ ಸುಳ್ಳು ಪ್ರಚಾರವಾಗಿದೆ. ಅದು ಬ್ರಿಟಿಷರ ಒಡೆದು ಆಳುವ ನೀತಿಯ ವ್ಯಾಪಕ ಪಿತೂರಿಯಲ್ಲಿನ ಒಂದು ಭಾಗವಾಗಿತ್ತು.
| ಶ್ರೀ ಗುರುಚರಣಾರ್ಪಣಮಸ್ತು |
– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೨೬.೦೩.೨೦೨೫)
ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಉತ್ತರಭಾರತದಲ್ಲಿದ್ದಾಗ ಸ್ವತಃ ಗಮನಿಸಿದ ಅಂಶ![]() ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಸಮಿತಿಯ ಸಾಧಕರ ಸಂಬಂಧಿಕರೊಬ್ಬರ ಮನೆಗೆ ಹೋದಾಗ ಅವರು ಸಂತರೆಂದು ಗೊತ್ತಿದ್ದೂ ಮನೆಯ ಸ್ತ್ರೀಯರು ಸೆರಗನ್ನು ಹೊದ್ದುಕೊಳ್ಳಲಿಲ್ಲ. ಅವರ ದೃಷ್ಟಿಯಲ್ಲಿ ‘ಸಂತರು ನಮ್ಮ ಮನೆಯವರೇ ಆಗಿದ್ದಾರೆ. ಅವರ ಮುಂದೆ ಓಡಾಡುವಾಗ ಅವರಿಗೆ ಯಾವುದೇ ಮುಜುಗರವಾಗಲಿಲ್ಲ. ಇಂತಹ ಅನುಭವಗಳೂ ಬರುತ್ತವೆ. ಮುಖ್ಯವಾಗಿ ಈ ಪದ್ಧತಿಗಳ ಕುರಿತಾದ ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಷಯಗಳನ್ನು ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಉತ್ತರಭಾರತದಲ್ಲಿದ್ದಾಗ ಸ್ವತಃ ಗಮನಿಸಿದ್ದಾರೆ. |

ಆಲದ ಮರದ ಮಹಾತ್ಮೆ
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !