
ವಾಷಿಂಗ್ಟನ್ (ಅಮೆರಿಕ) – ಪಾಕಿಸ್ತಾನದ ನಂತರ ಇದೀಗ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಟ್ರಂಪ್ ಮಾಡಿದ ಪ್ರಯತ್ನಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
🕊️ Trump for Nobel Peace Prize?
After Pakistan’s surprise nomination, now Israel backs Trump for the 2026 Nobel! 🇺🇸🇮🇱
PM Netanyahu, during his U.S. visit, praised Trump’s role in Middle East peace efforts.
Pakistan had earlier credited him for defusing Indo-Pak tensions.
— Sanatan Prabhat (@SanatanPrabhat) July 9, 2025
1. ಟ್ರಂಪ್ ಅವರನ್ನು ಉದ್ದೇಶಿಸಿ ನೆತನ್ಯಾಹು ಅವರು, “ನಾನು ನಿಮಗೆ ನೊಬೆಲ್ ಪ್ರಶಸ್ತಿ ಸಮಿತಿಗೆ ಕಳುಹಿಸಿರುವ ಪತ್ರವನ್ನು ತೋರಿಸಲು ಬಯಸುತ್ತೇನೆ. ಇದರಲ್ಲಿ ನಿಮ್ಮನ್ನು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವೆ, ಅದಕ್ಕೆ ನೀವು ಸಂಪೂರ್ಣವಾಗಿ ಅರ್ಹರಾಗಿದ್ದೀರಿ ಮತ್ತು ಅದು ನಿಮಗೆ ಸಿಗಬೇಕು” ಎಂದಿದ್ದಾರೆ.
2. ಇಸ್ರೇಲ್‌ಗಿಂತ ಮೊದಲು ಪಾಕಿಸ್ತಾನ ಸರಕಾರವೂ 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಅವರನ್ನು ನಾಮನಿರ್ದೇಶನ ಮಾಡಿತ್ತು. ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಟ್ರಂಪ್ ಅವರ ರಾಜತಾಂತ್ರಿಕ ಉಪಕ್ರಮಗಳು ಮತ್ತು ಮಧ್ಯಸ್ಥಿಕೆಗಳಿಂದ ದೊಡ್ಡ ಯುದ್ಧವನ್ನು ತಪ್ಪಿಸಲಾಯಿತು ಎಂದು ಪಾಕಿಸ್ತಾನವು ಹೇಳಿದೆ.
3. 2026 ರ ನೊಬೆಲ್ ಪ್ರಶಸ್ತಿಗಾಗಿ ಅಧಿಕೃತ ನೋಂದಣಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಆದರೂ, ಅಂತಿಮ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. 2025 ರ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮನಿರ್ದೇಶನದ ಕೊನೆಯ ದಿನಾಂಕ ಜನವರಿ 31 ಆಗಿತ್ತು ಎನ್ನಲಾಗಿದೆ.
ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಲ್ಲಿ ಸ್ಫೋಟ : Hormuz Oil Tanker Explosion
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ಭಾರತಕ್ಕೆ ಹಿನ್ನಡೆ? ತೀಸ್ತಾ ಯೋಜನೆ ಚೀನಾದ ಪಾಲು : Teesta Project to China
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ