
1. 1994 ರಲ್ಲಿ ದಾರ್ಶನಿಕ ಪ.ಪೂ. ಡಾಕ್ಟರರು `ಠಾಣೆಯಲ್ಲಿ ನಮಗೆ ಒಬ್ಬ ವಕೀಲರು ಸಿಕ್ಕಿದರು, ಅವರು ಮುಂದೆ ಸನಾತನದ ನ್ಯಾಯಾಂಗ ಹೋರಾಟ ಮಾಡುವರು’, ಎಂದು ಮುಂಬಯಿಯ ಸಾಧಕರಿಗೆ ಹೇಳಿದ್ದರು
1994 ರಲ್ಲಿ ಠಾಣೆಯಲ್ಲಿ ಪ.ಪೂ. ಡಾಕ್ಟರರ ಮೊದಲ ಅಭ್ಯಾಸವರ್ಗ ಮುಗಿದ ನಂತರ ವರ್ಗ ದಲ್ಲಿ ಉಪಸ್ಥಿತರಿದ್ದ ಮುಂಬಯಿಯ ಸಾಧಕರಿಗೆ ಅವರು ಹೇಳಿದರು, “ನಮ್ಮ ಮಹಾರಾಷ್ಟ್ರದ ಠಾಣೆ ಎಂಬಲ್ಲಿನ ಅಭ್ಯಾಸವರ್ಗದ ಕೆಲಸ ಮುಗಿಯಿತು !” ಆ ದಿನ ನಾನು ಧರಿಸಿದ `ಬಿಳಿ ಅಂಗಿ ಮತ್ತು ಬಿಳಿ ಪೈಜಾಮಾ’ ಈ ಉಡುಪಿನ ವರ್ಣನೆ ಮಾಡುತ್ತಾ ಅವರು ಹೇಳಿದರು, “ಠಾಣೆಯಲ್ಲಿ ನಮಗೆ ಒಬ್ಬ ವಕೀಲರು ಸಿಕ್ಕಿದ್ದಾರೆ. ಅವರು ಮುಂದೆ ಸನಾತನದ ನ್ಯಾಯಾಂಗ ಹೋರಾಟ ಮಾಡುವರು !” ಮುಂಬಯಿಯ ಆ ಸಾಧಕರ ಪೈಕಿ ಶ್ರೀ. ಶಿವಾಜಿ ವಟಕರ ಇವರು ನನಗೆ ಒಂದು ವರ್ಷದ ನಂತರ ಈ ಪ್ರಸಂಗವನ್ನು ಹೇಳಿದರು ಹಾಗೂ ಮುಂದೆ ಹಾಗೆಯೆ ಆಯಿತು ! ಆ ಮೊದಲ ಅಭ್ಯಾಸವರ್ಗದ ನಂತರ ನಾನು ಮನೆಗೆ ಹೊರಟು ಬಂದರೂ ಪ.ಪೂ. ಡಾಕ್ಟರರು ತಮ್ಮ ದಾರ್ಶನಿಕತೆಯಿಂದ ಅದೇ ವೇಳೆ ಶ್ರೀ. ವಟಕರ ಹಾಗೂ ಇತರ ಸಾಧಕರಲ್ಲಿ ನನ್ನ ಬಗ್ಗೆ ಉಲ್ಲೇಖ ಮಾಡಿದ್ದರು.

2. `ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ವತಿಯಿಂದ ಅಕ್ಟೋಬರ್ 2000 ದಲ್ಲಿ ನ್ಯಾಯಾಲಯದಲ್ಲಿ ಮಾನಹಾನಿಗಾಗಿ ಮೊದಲ ದಿವಾಣಿ ದಾವೆ ಮತ್ತು ಮೊದಲ ಕ್ರಿಮಿನಲ್ ಖಟ್ಲೆ ದಾಖಲಿಸುವ ಸೇವೆ ಆರಂಭವಾಗಿ ಈ ಸೇವೆಯ ಆನಂದವನ್ನು ಅನುಭವಿಸುವುದು
1994 ರಲ್ಲಿ ನಾನು ಪ.ಪೂ. ಡಾಕ್ಟರರ ಕೃಪೆಯಿಂದ ಸಾಧನೆ ಆರಂಭಿಸಿದೆನು. ಸತ್ಸಂಗ ತೆಗೆದುಕೊಳ್ಳುವುದು, ಪ್ರವಚನ ಮಾಡುವುದು ಹಾಗೂ ಅಭ್ಯಾಸವರ್ಗ ತೆಗೆದುಕೊಳ್ಳುವುದು ಇತ್ಯಾದಿ ಪ್ರಸಾರದ ಸೇವೆಗಳನ್ನು ನಾನು ಮಾಡುತ್ತಿದ್ದೆನು. 1999 ರಲ್ಲಿ ನಾನು ವಕೀಲಿವೃತ್ತಿಯನ್ನು ನಿಲ್ಲಿಸಿರುವುದರಿಂದ ನಾನು ನ್ಯಾಯಾಲಯಕ್ಕೆ ಹೋಗುವುದು ಸಂಪೂರ್ಣ ನಿಂತು ಹೋಗಿತ್ತು. ಇಸವಿ 2000 ದಲ್ಲಿ ಸಾವಂತವಾಡಿಯಲ್ಲಿನ ಹಿರಿಯ ಸಂತ ಪೂ. ಭಾವೂ ಮಸೂರಕರರ ಅಮೃತ ಮಹೋತ್ಸವದ ಕಾರ್ಯಕ್ರಮ ನೆರವೇರಿತು. ಅದರ ಕುರಿತು ಮಾತನಾಡುವಾಗ ಸಿಂಧುದುರ್ಗ ಜಿಲ್ಲೆಯ ಅಂದಿನ ಉಸ್ತುವಾರಿ ಸಚಿವ ಹುಸೇನ ದಳವಾಯಿ ಇವರು ಪ.ಪೂ. ಡಾಕ್ಟರರು ಸ್ಥಾಪಿಸಿದ `ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ವಿರುದ್ಧ ಅವಮಾನಾಸ್ಪದ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಲೋಕಸತ್ತಾ, ಸಕಾಳ, ತರುಣ ಭಾರತ ಈ ಖ್ಯಾತ ದೈನಿಕಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿ ನೀಡಲಾಯಿತು. ಅದಕ್ಕೆ ಸಂಬಂಧಿಸಿ ಅಕ್ಟೋಬರ 2000 ದಲ್ಲಿ `ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ವತಿಯಿಂದ ಸಂಬಂಧಪಟ್ಟವರ ವಿರುದ್ಧ ನ್ಯಾಯಾಲಯದಲ್ಲಿ ನನಗೆ ಮೊದಲ ದಿವಾಣಿ ದಾವೆ ಮತ್ತು ಕ್ರಿಮಿನಲ್ ಖಟ್ಲೆಯನ್ನು ದಾಖಲಿಸುವ ಸೇವೆ ಸಿಕ್ಕಿತು. ಅಂದಿನಿಂದ ಸಂಸ್ಥೆಯ ಧರ್ಮದ್ರೋಹಿಗಳ ವಿರುದ್ಧ ನ್ಯಾಯಾಂಗ ಹೋರಾಟ ಆರಂಭವಾಯಿತು ಹಾಗೂ ಅದು ಇಂದು ಕೂಡ ನಡೆಯುತ್ತಿದೆ. ಆದ್ದರಿಂದ ಸಂಸ್ಥೆಯ ನ್ಯಾಯಾಂಗ ಸೇವೆಗಾಗಿ ನಾನು ಪುನಃ ನ್ಯಾಯಾಲಯದಲ್ಲಿ ವಕೀಲನೆಂದು ಹೋಗಲು ಆರಂಭಿಸಿದೆನು. `ಈ ಹಿಂದೆ ಉದ್ಯೋಗವೆಂದು ಸಾಕಷ್ಟು ಸೇವಾಶುಲ್ಕ ಪಡೆದರೂ ನ್ಯಾಯಾಂಗ ಸೇವೆ ಮಾಡುವಾಗ ನನಗೆ ಸಿಗದ ಆನಂದ ಈಗ ಸಂಸ್ಥೆಗಾಗಿ ಸಾಧನೆಯೆಂದು ಉಚಿತ ನ್ಯಾಯಾಂಗ ಸೇವೆ ಮಾಡುವಾಗ ಸಿಗುತ್ತಿದೆ’, ಎಂಬುದನ್ನು ನಾನು ಅನುಭವಿಸುತ್ತಿದ್ದೇನೆ.’ – ನ್ಯಾಯವಾದಿ ರಾಮದಾಸ ಕೇಸರಕರ, ಸನಾತನ ಸಂಸ್ಥೆಯ ಮಾನ್ಯ ಕಾನೂನು ಸಲಹೆಗಾರರು (6.10.2017)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !