ಜುಲೈ 7 ರಂದು ಪ.ಪೂ. ಭಕ್ತರಾಜ ಮಹಾರಾಜರ ಜನ್ಮೋತ್ಸವವಿದೆ ಆ ನಿಮಿತ್ತ…

ಅ. ಗುರುಗಳು ಕೊಟ್ಟ ಹೆಸರು : ಲಕ್ಷಣಗಳಿಂದ ಕೊಟ್ಟ ಹೆಸರುಗಳು ನಿರ್ಗುಣದ್ದಾಗಿದ್ದ್ತು ಉಳಿದ ಹೆಸರುಗಳು ಸಗುಣದ್ದಾಗಿರುತ್ತವೆ.
ಭಾವಾರ್ಥ : `ಲಕ್ಷಣಗಳಿಂದ ಕೊಟ್ಟ ಹೆಸರುಗಳು ನಿರ್ಗುಣದ ಹೆಸರುಗಳಾಗಿರುತ್ತವೆ’, ಇದರಲ್ಲಿನ ನಿರ್ಗುಣದ ಅಂದರೆ, ಆಧ್ಯಾತ್ಮಿಕ ಪ್ರಗತಿಯ ಲಕ್ಷಣಗಳಿಂದ ಅಥವಾ ಸಂಪ್ರದಾಯದಂತೆ ಗುರುಗಳು ಶಿಷ್ಯನಿಗೆ ಕೊಟ್ಟ ಹೆಸರು. ತದ್ವಿರುದ್ಧವಾಗಿ ತಂದೆ-ತಾಯಿಯರು ಸಗುಣ
ಲಕ್ಷಣಗಳಿಂದ ಅಥವಾ ಅವರ ಪ್ರಕೃತಿಗನುಸಾರ ಮಕ್ಕಳಿಗೆ ಹೆಸರಿಡುತ್ತಾರೆ.
ಆ. ಗುರುಗಳೆಂದರೆ ಶರೀರವಲ್ಲ : ಗುರುಗಳ ಶರೀರವನ್ನು ಪ್ರೀತಿಸು ವವನ ದೇಹಬುದ್ಧಿಯು ಸ್ವಂತದಲ್ಲಿ ಮತ್ತು ಸಂಸಾರದಲ್ಲಿರುತ್ತದೆ.
ಇ. ಗುರುಗಳು ಹೇಳಿದಂತೆ ಸಾಧನೆ ಮಾಡುವುದರ ಮಹತ್ವ
ಕುಛ ಬನನೆ ಕಾ ನಹೀ | ಬನನೆ ಜಾವೋಗೆ ತೊ ಬಿಗಡ ಜಾವೋಗೆ |
ಭಾವಾರ್ಥ : ತಾವಾಗಿ ಏನಾದರೂ ಆಗಲು ಪ್ರಯತ್ನಿಸಬೇಡಿರಿ. (ಸ್ವಂತ ಮನಸ್ಸಿನಿಂದ) ಪ್ರಯತ್ನಿಸಿದರೆ ಕೆಡುವಿರಿ. ಗುರುಗಳು ಹೇಳಿದಂತೆ ಮಾಡಿದರೆ ಪ್ರಗತಿಯಾಗುವುದು.
ಈ. ಗುರ್ವಾಜ್ಞಾಪಾಲನೆಯಿಂದ ಆಜ್ಞಾಚಕ್ರ ಭೇದವಾಗುತ್ತದೆ
ಭಾವಾರ್ಥ : ಯೋಗಮಾರ್ಗದಲ್ಲಿ ಬಹಳಷ್ಟು ಕಾಲ ಮಾಡಿದ ಉಗ್ರ ತಪಶ್ಚರ್ಯದ ನಂತರ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ ಮತ್ತು ವಿಶುದ್ಧ ಇಷ್ಟು ಚಕ್ರಗಳ ಭೇದದ ನಂತರ ಆಜ್ಞಾಚಕ್ರ ಭೇದವಾಗುತ್ತದೆ, ಆದರೆ ಗುರ್ವಾಜ್ಞಾಪಾಲನೆಯಿಂದ ನೇರವಾಗಿ ಆಜ್ಞಾಚಕ್ರದ ಭೇದವೇ ಆಗುತ್ತದೆ.
ಉ. ಗುರುಗಳಲ್ಲಿ ಏನನ್ನು ಬೇಡಬೇಕು ? : ನನ್ನಲ್ಲಿ ಸುಖ ಬೇಡಬೇಡಿರಿ, ದುಃಖವನ್ನು ಸಹಿಸುವ ಶಕ್ತಿಯನ್ನು ಬೇಡಿರಿ.
ಭಾವಾರ್ಥ : ಸುಖವು ಪ್ರಕೃತಿಯದ್ದಾಗಿದೆ, ಆದ್ದರಿಂದ ಅದು ಅಶಾಶ್ವತವಾಗಿದ್ದು, ಗುರುಗಳಲ್ಲಿ ಅದನ್ನು ಬೇಡಬಾರದು. ಹಾಗೆಯೇ ಶಾಶ್ವತ ಆನಂದವನ್ನು ನೀಡು ವುದೇ ಗುರುಗಳ ನಿಜವಾದ ಕಾರ್ಯವಾಗಿರುತ್ತದೆ ಎಂಬುದನ್ನೂ ಗಮನದಲ್ಲಿಡಬೇಕು. ಪ್ರಾರಬ್ಧ ದಿಂದಾಗಿ ದುಃಖವನ್ನು ಭೋಗಿಸಬೇಕಾದಲ್ಲಿ, ಆ ದುಃಖದಾಯಕ ಪ್ರಸಂಗದಲ್ಲಿ ಆಗುವ ದುಃಖವನ್ನು ಸಹಿಸಲು ಶಕ್ತಿಯನ್ನು ಮಾತ್ರ ಗುರುಗಳು ಖಂಡಿತ ಕೊಡುತ್ತಾರೆ; ಆದ್ದರಿಂದ ಅದನ್ನು ಬೇಡಬೇಕು.
ಉ. ಜಿಸನೇ ಪಾಯೋ ಉಸನೇ ಛಿಪಾಯೋ| ವೋ ನರ ಸಚ್ಚಾ, ವಹೀ ಗುರುಕಾ ಬಚ್ಚಾ |
ಭಾವಾರ್ಥ : `ಪಾಯೋ’ ಅಂದರೆ ಆತ್ಮಾನುಭೂತಿ ಯಾಯಿತು. `ಛಿಪಾಯೋ’ ಅಂದರೆ ಆತ್ಮಾನುಭೂತಿಯಾಗಿರುವುದನ್ನು ಯಾರಿಗೂ ಹೇಳಲಿಲ್ಲ. (ಅರ್ಥಾತ್ ಅದನ್ನು ಶಬ್ದಗಳಲ್ಲಿ ಹೇಳಲೂ ಬರುವುದಿಲ್ಲ.) `ಗುರುಕಾ ಬಚ್ಚಾ’ ಅಂದರೆ ಗುರುಗಳ ನಿಜವಾದ ಶಿಷ್ಯ. ಅತ್ಯಮೂಲ್ಯ ವಜ್ರವಿದ್ದವರು, ಅದು ತಮ್ಮಲ್ಲಿರುವ ಬಗ್ಗೆ ಎಲ್ಲರಿಗೂ ಹೇಳುವುದಿಲ್ಲ. ಹಾಗೆಯೇ ಅತ್ಯಮೂಲ್ಯ ಆತ್ಮಾನುಭೂತಿ ಬಂದವನು ಅದರ ಬಗ್ಗೆ ಯಾರಿಗೂ ಏನೂ ಹೇಳುವುದಿಲ್ಲ. ಅಹಂಭಾವ ಇಲ್ಲದ ಕಾರಣ ಅವನಿಗೆ ಅನುಭೂತಿ ಬಂದಿರುತ್ತದೆ ಮತ್ತು ಅದಕ್ಕಾಗಿ ಅವನು ಮಾತನಾಡುವುದಿಲ್ಲ.
ಊ. ಶೇಷ ಉಳಿಯುವವನೇ ಶಿಷ್ಯ
ಭಾವಾರ್ಥ : ಶೇಷವೆಂದರೆ ಎಷ್ಟೇ ಅಡಚಣೆಗಳು ಬಂದರೂ, ಸಾಧನೆಯನ್ನು ಬಿಟ್ಟುಹೋಗದೇ ಇರುವವನು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !