
‘೨೨.೧.೨೦೨೪ ಈ ದಿನ ಅಯೋಧ್ಯೆ ಯಲ್ಲಿ ಪ್ರಭು ಶ್ರೀರಾಮನ ಮಂದಿರ ಸ್ಥಾಪನೆಯಾಯಿತು. ಅನಂತರ ೧೩.೧.೨೦೨೫ ರಿಂದ ೨೬.೨.೨೦೨೫ ಈ ಅವಧಿಯಲ್ಲಿ ಪ್ರಯಾಗರಾಜ (ಉತ್ತರಪ್ರದೇಶ)ದಲ್ಲಿ ಮಹಾಕುಂಭಮೇಳ ನಡೆಯಿತು. ಇವೆರಡೂ ಪ್ರಸಂಗಗಳಲ್ಲಿ ಅಯೋಧ್ಯೆ ಮತ್ತು ಪ್ರಯಾಗದಲ್ಲಿ ಕೋಟ್ಯಂತರ ಜನರು ಉಪಸ್ಥಿತರಿದ್ದರು. ಅದೇ ರೀತಿ ಈಗ ೧೭ ರಿಂದ ೧೯ ಮೇ ೨೦೨೫ ಈ ಅವಧಿಯಲ್ಲಿ ಗೋವಾದ, ಫೋಂಡಾದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಜನ್ಮೋತ್ಸವದ ನಿಮಿತ್ತ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೂ ಸಾವಿರಾರು ಜನರು ಉಪಸ್ಥಿತರಿದ್ದರು. ಈ ಮೂರೂ ಘಟನೆಗಳು ದೈವಿಯಾಗಿವೆ. ಅಯೋಧ್ಯೆ, ಪ್ರಯಾಗ ಮತ್ತು ಗೋವಾ ಈ ಮೂರು ಸ್ಥಳಗಳಿಂದಾಗಿ ಭಾರತಭೂಮಿಯಲ್ಲಿ ಶ್ರೀ ಆದಿಶಕ್ತಿಯ ದೈವೀ ಶ್ರೀಯಂತ್ರವು ಸೂಕ್ಷ್ಮದಲ್ಲಿ ನಿರ್ಮಾಣವಾಗಿದೆ. ಅದೇ ರೀತಿ ಈ ಮೂರು ಸ್ಥಳಗಳಲ್ಲಿ ದೈವೀ ಊರ್ಜೆಯು ಕಾರ್ಯನಿರತವಾಗಿರುವುದರಿಂದ ಈ ಮೂರು ಸ್ಥಳಗಳು, ಅಂದರೆ ಸಮಷ್ಟಿ ಸ್ತರದ ಶಕ್ತಿಪೀಠಗಳಾಗಿವೆ.
೧. ಅಯೋಧ್ಯೆ, ಪ್ರಯಾಗ ಮತ್ತು ಗೋವಾ ಈ ಮೂರು ಸ್ಥಳಗಳಲ್ಲಿ ಸಮಷ್ಟಿ ಸ್ತರದ ಶಕ್ತಿಪೀಠಗಳು ಮತ್ತು ಶ್ರೀಯಂತ್ರದ ನಿರ್ಮಿತಿಯಾದುದರಿಂದ ಆಗಲಿರುವ ಸೂಕ್ಷ್ಮ ಸ್ತರದ ಲಾಭಗಳು
ಅ. ಈ ಭಾರತ ದೇಶದಲ್ಲಿ ಸುಪ್ತಾವಸ್ಥೆಯಲ್ಲಿರುವ ದೈವೀ ಶಕ್ತಿಯು ಜಾಗೃತವಾಗಿ ಭಾರತವು ಆಧ್ಯಾತ್ಮಿಕವಾಗಿ ಶಕ್ತಿಶಾಲಿಯಾಗಲಿದೆ.
ಆ. ಭಾರತಭೂಮಿಯ ಶುದ್ಧಿಯಾಗಿ ಇಲ್ಲಿ ಧರ್ಮಶಕ್ತಿಯ ಬೀಜವು ಬಿತ್ತಲ್ಪಡಲಿದೆ.
ಇ. ವಾಯುಮಂಡಲದಲ್ಲಿ ಸಮಷ್ಟಿ ಸ್ತರದ ಶ್ರೀಯಂತ್ರವು ನಿರ್ಮಾಣವಾಗಿ ಪೃಥ್ವಿಯ ಕಲುಷಿತ ವಾಯುಮಂಡಲ ಶುದ್ಧಿಯಾಗಿ, ಅದು ದೇವತೆಗಳ ತತ್ತ್ವವನ್ನು ಧಾರಣೆ ಮಾಡಲು ಪೂರಕ ಮತ್ತು ಪೋಷಕ ವಾಗಲಿದೆ.
ಈ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಜ್ಞಾನದಿಂದ ತುಂಬಿಕೊಂಡಿರುವ ಉಚ್ಚ ಸ್ತರದ ಧರ್ಮಶಕ್ತಿಯ ಅವಶ್ಯಕತೆ ಇದೆ. ಶ್ರೀಯಂತ್ರದಿಂದ ಜ್ಞಾನಮಯ ಶಕ್ತಿ ಮತ್ತು ಶಕ್ತಿಪೀಠಗಳಿಂದ ಧರ್ಮಶಕ್ತಿಯು ನಿರ್ಮಾಣವಾಗಿ ಅವು ಒಟ್ಟಾಗಿ ಕಾರ್ಯ ನಿರತವಾಗಲಿವೆ.
೨. ಇಡೀ ಜಗತ್ತಿಗೆ ಆಗಲಿರುವ ಸ್ಥೂಲದಲ್ಲಿನ ಸಮಷ್ಟಿ ಲಾಭಗಳು
ಅ. ಭಾರತಕ್ಕೆ ಶತ್ರುರಾಷ್ಟ್ರಗಳೊಂದಿಗೆ ಹೋರಾಡಲು ಧರ್ಮಶಕ್ತಿ ದೊರಕಲಿದೆ. ಆದುದರಿಂದ ಶತ್ರುರಾಷ್ಟ್ರಗಳೊಂದಿಗಿನ ಸ್ಥೂಲ ಯುದ್ಧದಲ್ಲಿ ವಿಜಯ ಭಾರತದ್ದೇ ಆಗಲಿದೆ.
ಆ. ಭಾರತದಲ್ಲಿ ಬರುವ ನೆರೆ, ಬರಗಾಲ ಇತ್ಯಾದಿ ವಿವಿಧ ನೈಸರ್ಗಿಕ ವಿಕೋಪಗಳು ಮತ್ತು ಸಾಮಾಜಿಕ ಒತ್ತಡ, ಕೋಮು ಗಲಭೆಗಳು ಇತ್ಯಾದಿ ಪ್ರಕೃತಿ ವಿಕೋಪಗಳಲ್ಲಿ ಸಾತ್ತ್ವಿಕ ಜನರಿಗೆ, ಅಧರ್ಮದ ವಿರುದ್ಧ ಹೋರಾಡಲು ಬಲ ಸಿಗಲಿದೆ.
ಇ. ಕರ್ಮಹಿಂದೂಗಳಿಗೆ ದೈವೀ ಬೆಂಬಲದಿಂದ ಆಪತ್ತುಗಳಲ್ಲಿ ಅವರ ರಕ್ಷಣೆಯಾಗಲಿದೆ.
ಈ. ಯುದ್ಧದ ನಂತರ ಭಾರತದ ಐಹಿಕ ಮತ್ತು ಪಾರಮಾರ್ಥಿಕ, ಹೀಗೆ ಎರಡೂ ಸ್ತರಗಳಲ್ಲಿ ಉತ್ಕರ್ಷವಾಗಲಿದೆ, ಹಾಗೆಯೇ ಭಾರತವು ಭೌತಿಕ ಸ್ತರದ ವಿಕಾಸ ಸಹಿತ ಮುಂಬರುವ ೧೦ ವರ್ಷಗಳಲ್ಲಿ ‘ವಿಶ್ವಗುರು’ವಾಗಿ ಜಗತ್ತಿನ ಬಲಿಷ್ಠರಾಷ್ಟ್ರವಾಗಲಿದೆ.
ಉ. ಮುಂಬರುವ ೧೫ ರಿಂದ ೨೦ ವರ್ಷಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಪ್ರಕ್ರಿಯೆಯು ಆರಂಭವಾಗಿ ಅದು ಸಂಪೂರ್ಣ ಜಗತ್ತಿನಲ್ಲಿ ನಡೆಯಲಿದೆ.
೩. ಭಗವಾನ ಶ್ರೀಕೃಷ್ಣನು ದ್ವಾಪರಯುಗದಲ್ಲಿ ಕುರುಕ್ಷೇತ್ರದಲ್ಲಿ ಶಂಖನಾದ ಮಾಡಿ ಧರ್ಮ ಮತ್ತು ಅಧರ್ಮದ ನಡುವಿನ ಮಹಾಭಾರತ ಯುದ್ಧ ಪ್ರಾರಂಭಿಸಿದ ರೀತಿ ಈಗ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ರೂಪಿ ಭಗವಾನ ಶ್ರೀಕೃಷ್ಣನು ಧರ್ಮದ ಪ್ರತೀಕವಾಗಿರುವ ಪಾಂಚಜನ್ಯ ಶಂಖನಾದದಿಂದ ಪೃಥ್ವಿಯಲ್ಲಿನ ಭಾರತ ಮತ್ತು ಭಾರತವಿರೋಧಿ ದೇಶಗಳ ನಡುವಿನ, ಅಂದರೆ ಧರ್ಮ ಮತ್ತು ಅಧರ್ಮದ ನಡುವಿನ ಸ್ಥೂಲದಲ್ಲಿನ ವೈಶ್ವಿಕ ಯುದ್ಧವನ್ನು ಪ್ರಾರಂಭಿಸುತ್ತಿದ್ದಾನೆ. ಆದುದರಿಂದ ಮುಂಬರುವ ಕೆಲವು ತಿಂಗಳುಗಳಲ್ಲಿ ಸಂಪೂರ್ಣ ಜಗತ್ತು ಧರ್ಮ ಮತ್ತು ಅಧರ್ಮ, ಅಂದರೆ ದೈವೀ ಮತ್ತು ಅಸುರೀ ಎಂಬ ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟು ಮೂರನೇ ಮಹಾಯುದ್ಧವು ಪ್ರಾರಂಭವಾಗಲಿದೆ.’
– ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೫.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !