ಪ್ರಧಾನಿ ಮೋದಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಸ್ಪಷ್ಟಪಡಿಸಿದರು!

ಒಟ್ಟಾವಾ (ಕೆನಡಾ) – ‘ಜಿ-7’ (ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕಾ ಈ 7 ಅಭಿವೃದ್ಧಿ ಹೊಂದಿದ ದೇಶಗಳ ಗುಂಪು) ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಕೆನಡಾ ತಲುಪಿದ ನಂತರ ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿದರು. ಪ್ರಧಾನಿ ಮೋದಿ ಹಿಂದಿರುಗುವಾಗ ಟ್ರಂಪ್ ಅವರು ಅಮೆರಿಕಾಕ್ಕೆ ಬರುವಂತೆ ಆಹ್ವಾನ ನೀಡಿದರು; ಆದರೆ ಮುಂದಿನ ಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ ಮೋದಿ ಅದನ್ನು ನಿರಾಕರಿಸಿದರು. ಅದೇ ಸಮಯದಲ್ಲಿ ಟ್ರಂಪ್ ಅವರು, ಭಾರತ-ಪಾಕ್ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು, ಅದನ್ನು ಪ್ರಧಾನಿ ಮೋದಿ ಸ್ಪಷ್ಟವಾಗಿ ನಿರಾಕರಿಸಿದರು. ‘ಆಪರೇಷನ್ ಸಿಂದೂರ್’ ಕದನ ವಿರಾಮದವರೆಗೂ ಹೋಯಿತು; ಆದರೆ ಅದರಲ್ಲಿ ಅಮೆರಿಕಾದ ಮಧ್ಯಸ್ಥಿಕೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ’ ಎಂದು ಮೋದಿ ಸ್ಪಷ್ಟಪಡಿಸಿದರು. ಸುಮಾರು 35 ನಿಮಿಷಗಳ ಕಾಲ ಇಬ್ಬರ ನಡುವೆ ಚರ್ಚೆ ನಡೆಯಿತು.
ಈ ಚರ್ಚೆಯ ಕುರಿತು ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಇವರು, “ಈ ಚರ್ಚೆಯಲ್ಲಿ ಭಾರತವು ‘ಆಪರೇಷನ್ ಸಿಂದೂರ್’ನಲ್ಲಿ ಅಮೆರಿಕಾದ ಮಧ್ಯಸ್ಥಿಕೆ ಇರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು” ಎಂದು ಹೇಳಿದರು. ಪ್ರಧಾನಿ ಮೋದಿ, “ಈಗ ಭಾರತವು ಭಯೋತ್ಪಾದಕ ಘಟನೆಗಳನ್ನು ರಹಸ್ಯ ಯುದ್ಧವೆಂದು ಪರಿಗಣಿಸುವುದಿಲ್ಲ, ಬದಲಿಗೆ ನೇರ ಯುದ್ಧವೆಂದು ಪರಿಗಣಿಸುತ್ತದೆ” ಎಂದು ಹೇಳಿದರು.
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ಸಭೆಯು ಜಿ-7 ಹಿನ್ನೆಲೆಯಲ್ಲಿ ನಡೆಯಬೇಕಿತ್ತು; ಆದರೆ ಟ್ರಂಪ್ ಮೇ 17 ರಂದು ಸಭೆಯನ್ನು ಅರ್ಧಕ್ಕೆ ಬಿಟ್ಟು ಅಮೆರಿಕಾಕ್ಕೆ ಮರಳಬೇಕಾಯಿತು. ಇದರಿಂದ ಈ ಸಭೆ ನಡೆಯಲು ಸಾಧ್ಯವಾಗಲಿಲ್ಲ. ನಂತರ ಟ್ರಂಪ್ ಅವರ ಕೋರಿಕೆಯ ಮೇರೆಗೆ ಇಬ್ಬರೂ ನಾಯಕರು ದೂರವಾಣಿಯಲ್ಲಿ ಚರ್ಚಿಸಿದರು.
13 ಬಾರಿ ತಾವು ಕದನ ವಿರಾಮವನ್ನು ಘೋಷಿಸಿರುವುದಾಗಿ ದಾವೆ ಮಾಡಿದ ಟ್ರಂಪ್ !
ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮವಾದ ನಂತರ, ಟ್ರಂಪ್ ತಮ್ಮ ಮಧ್ಯಸ್ಥಿಕೆಯಿಂದಲೇ ಈ ಯುದ್ಧವನ್ನು ನಿಲ್ಲಿಸಲಾಯಿತು ಎಂದು ನಿರಂತರವಾಗಿ ಹೇಳಿಕೊಂಡಿದ್ದಾರೆ. ಅವರು ಇದುವರೆಗೆ 13 ಬಾರಿ ಈ ಹೇಳಿಕೆಯನ್ನು ನೀಡಿದ್ದಾರೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump