ಆಧ್ಯಾತ್ಮಿಕ ವಸ್ತುಗಳ ರೂಪದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಸ್ವತಃ ಸಮರ್ಥ ರಾಮದಾಸ ಸ್ವಾಮಿಗಳೇ ವಿರಾಜಮಾನರು ! – ಪೂ. ರಾಮಚಂದ್ರ ಭೀಮರಾಜ ಗೋಸ್ವಾಮಿ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಿಗೆ ಸಮರ್ಥ ರಾಮದಾಸ ಸ್ವಾಮಿಗಳ ಯೋಗದಂಡವನ್ನು ಕೈಯಲ್ಲಿ ಹಿಡಿದು ತೋರಿಸುತ್ತಿರುವ ಮಠಾಧಿಪತಿ ಪೂ. ರಾಮಚಂದ್ರ ಭೀಮರಾಜ ಗೋಸ್ವಾಮಿಗಳು

ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯ ಸ್ಥಾಪನೆಯ ಕಾರ್ಯದಲ್ಲಿ ಯುವಕರು ಭಾಗವಹಿಸಬೇಕೆಂದು ಸಮರ್ಥ ರಾಮದಾಸ ಸ್ವಾಮಿಗಳು ಯುವಕರಿಗೆ ಬಲೋಪಾಸನೆಯನ್ನು ಕಲಿಸಿದರು. ಇದಕ್ಕಾಗಿ ಅವರು ಮಹಾರಾಷ್ಟ್ರದಲ್ಲಿ ಸ್ಥಾಪಿಸಿದ ೧೧ ಮಾರುತಿಗಳು ಪ್ರಸಿದ್ಧವಾಗಿವೆ; ಆದರೆ ಮಹಾರಾಷ್ಟ್ರದ ಹೊರಗೆ ತಂಜಾವೂರು (ತಮಿಳುನಾಡು) ಇಲ್ಲಿಯೂ ಮಠಗಳನ್ನು ಸ್ಥಾಪಿಸಿ ಶ್ರೀರಾಮಭಕ್ತಿಯ ಪ್ರಸಾರವನ್ನು ಮಾಡಲಾಯಿತು. ಸಮರ್ಥರು ಸ್ವತಃ ತಂಜಾವೂರಿಗೆ ಹೋಗಿ ಮನ್ನಾರಗುಡಿಯಲ್ಲಿ ಮಠವನ್ನು ಸ್ಥಾಪಿಸಿದರು. ವಿಶೇಷ ಅಂದರೆ ಸಮರ್ಥ ಸಂಪ್ರದಾಯದ ಹೊರಗಿನ ಸಮಾರಂಭಕ್ಕಾಗಿ ಪ್ರಥಮ ಬಾರಿಗೆ ಈ ಮಠದ ಆಧ್ಯಾತ್ಮಿಕ ವಸ್ತುಗಳೊಂದಿಗೆ ತಂಜಾವೂರಿನ ಶ್ರೀ ಭೀಮಾಸ್ವಾಮಿ ಮಠದ ೯ ನೇ ಮಠಾಧಿಪತಿ ಪೂ. ರಾಮಚಂದ್ರ ಭೀಮರಾಜ ಗೋಸ್ವಾಮಿಗಳು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ತಂಜಾವೂರಿನ ಆಶ್ರಮದಿಂದ ಸಮರ್ಥ ಸಂಪ್ರದಾಯದ ಆಧ್ಯಾತ್ಮಿಕ ವಸ್ತುಗಳನ್ನು ತರುವ ಕುರಿತು ಶ್ರೀ ಭೀಮಾಸ್ವಾಮಿ ಮಠದ ೯ ನೆಯ ಮಠಾಧಿಪತಿ ಪೂ. ರಾಮಚಂದ್ರ ಭೀಮರಾಜ ಗೋಸ್ವಾಮಿಗಳು ಹೇಳಿದರು, ”ಸಮರ್ಥ ರಾಮದಾಸ ಸ್ವಾಮಿಗಳ ಪ್ರೇರಣೆಯಿಂದಲೇ ಈ ಆಧ್ಯಾತ್ಮಿಕ ವಸ್ತುಗಳನ್ನು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ತರಲಾಗಿದೆ. ಇಲ್ಲಿಯವರೆಗೆ ಪೂಜೆಯಲ್ಲಿರುವ ಈ ಅಮೂಲ್ಯ ವಸ್ತು ಗಳನ್ನು ಹೊರಗೆ ಕೊಂಡೊಯ್ಯುವುದು ಸರಿಯಲ್ಲದ ಕಾರಣ ಆಶ್ರಮದ ಹೊರಗೆ ತೆಗೆದುಕೊಂಡು ಹೋಗಿರಲಿಲ್ಲ; ಆದರೆ ಸನಾತನ ಸಂಸ್ಥೆಯ ಕಾರ್ಯ ಅಂದರೆ ಸಮರ್ಥರ ಕಾರ್ಯವೇ ಆಗಿದೆ. ಆದ್ದರಿಂದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದಲ್ಲಿ ಈ ಅಮೂಲ್ಯ ನಿಧಿಯನ್ನು ತಂದಿದ್ದರಿಂದ ಅದಕ್ಕೆ ದೋಷವಿಲ್ಲ. ಈ ಆಧ್ಯಾತ್ಮಿಕ ವಸ್ತುಗಳ ರೂಪದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಸ್ವತಃ ಸಮರ್ಥ ರಾಮದಾಸ ಸ್ವಾಮಿಗಳೇ ವಿರಾಜಮಾನರಾದರು. ಇದರಲ್ಲಿ ಏನಾದರೂ ತೊಂದರೆ ಬಂದರೆ ಸಮರ್ಥರು ದೂರ ಮಾಡುತ್ತಾರೆ. ಈ ಆಧ್ಯಾತ್ಮಿಕ ವಸ್ತುಗಳನ್ನು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ತರುವ ಕುರಿತು ನನಗೆ ಸಮರ್ಥರೇ ಸೂಚಿಸಿದರು.”

ಅದೇ ರೀತಿ ಪ.ಪೂ. ಗಗನಗಿರಿ ಮಹಾರಾಜರ ಪವಿತ್ರ ವಸ್ತ್ರ (ಕಫನಿ) ಮತ್ತು ಕಾಲುಚೀಲ, ಹಾಗೆಯೇ ತಾಕಪೀಠೆ ವಿಠೋಬಾ ಕಲ್ಲಿನ ಪಾತ್ರೆ (‘ಯಾವ ಪಾತ್ರೆಗೆ ಪ್ರತ್ಯಕ್ಷ ವಿಠೋಬನ ಸ್ಪರ್ಶವಾಗಿದೆಯೋ) ಅಂತಹ ದಿವ್ಯ ವಸ್ತುಗಳು ದರ್ಶನಕ್ಕಾಗಿ ಲಭ್ಯವಾಗಿದ್ದು ಅದ್ಭುತ ಯೋಗವಾಗಿತ್ತು.

ಸಮರ್ಥ ರಾಮದಾಸಸ್ವಾಮಿಗಳು ಸ್ವತಃ ನೋಡಿದ ಚಿತ್ರದ ಅಮೂಲ್ಯ ಕೊಡುಗೆ !

ತಂಜಾವೂರಿನ ಮಠಾಧಿಪತಿ ಸಂತ ಶ್ರೀ ಭೀಮಾಸ್ವಾಮಿಗಳು ಆ ಕಾಲದಲ್ಲಿ ಸಮರ್ಥ ರಾಮದಾಸ ಸ್ವಾಮಿಗಳ ಚಿತ್ರವನ್ನು ಬಿಡಿಸಿದರು. ಈ ಚಿತ್ರವನ್ನು ಸಮರ್ಥ ರಾಮದಾಸ ಸ್ವಾಮಿಗಳಿಗೆ ತೋರಿಸಿದಾಗ ಸ್ವತಃ ಸಮರ್ಥರೇ ಚಿತ್ರಕ್ಕೆ ಅನುಮೋದನೆ ನೀಡಿದರು. ಸಮರ್ಥರು ನೋಡಿದ ಮತ್ತು ಅವರ ಅನುಮೋದನೆ ಪಡೆದ ಚಿತ್ರವು ಎಲ್ಲ ಸಮರ್ಥ ಭಕ್ತರಿಗೆ ಅಮೂಲ್ಯ ನಿಧಿಯಾಗಿದೆ. ತಂಜಾವೂರಿನ ಆಶ್ರಮದಲ್ಲಿ ಸಮರ್ಥರ ಈ ಚಿತ್ರವನ್ನು ಪೂಜೆಗಾಗಿ ಇಡಲಾಗಿದೆ.