
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ೮೩ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ಹಾಲುಜೇನಿನಂತಹ ಶುಭ ಸಂದರ್ಭದಲ್ಲಿ, ಮೇ ೧೭ ರಿಂದ ೧೯ ರ ವರೆಗೆ ‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವ ನಡೆಯಿತು. ಸಂತರು, ೨೩ ದೇಶಗಳಿಂದ ಬಂದ ಹಿಂದೂ ಕಾರ್ಯಕರ್ತರು ಸೇರಿದಂತೆ ೩೦ ಸಾವಿರಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಈ ಭವ್ಯ ಮತ್ತು ಅದ್ಭುತ ಸಮಾರಂಭವು ನೆರವೇರಿತು. ಈ ಸಮಾರಂಭವು ಕೇವಲ ಒಂದು ಸಮ್ಮೇಳನ ಮಾತ್ರವಲ್ಲ, ಸನಾತನ ಧರ್ಮಶಕ್ತಿಯ ದರ್ಶನವಾಗಿತ್ತು. ಶ್ರೀಗುರುಗಳ ದರ್ಶನದ ಸೆಳೆತದಿಂದ ಭಾರತದಿಂದ ಮಾತ್ರವಲ್ಲ, ವಿಶ್ವದ ನಾನಾ ಮೂಲೆಗಳಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರನ್ನು ಮಾರ್ಗದರ್ಶಕರೆಂದು ಸ್ವೀಕರಿಸಿದವರು ಒಗ್ಗೂಡಿದ್ದನ್ನು ನೋಡಿ ಅನೇಕರು ಗೌರವೋದ್ಗಾರ ತೆಗೆದರು.
ಸದ್ಗುರುಗಳ ಆರತಿಯಲ್ಲಿ ‘ಜ್ಯೋತ ಸೇ ಜ್ಯೋತ ಜಗಾವೋ’ ಎಂಬ ಒಂದು ಸಾಲು ಇದೆ. ಆ ಆರತಿಯ ಸಾಲುಗಳಂತೆ, ಮುಂಬಯಿ ಯಲ್ಲಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಚಿಕಿತ್ಸಾಲಯದಿಂದ ಕೆಲವು ಸಾಧಕರೊಂದಿಗೆ ಪ್ರಾರಂಭವಾದ ಈ ಪಯಣ ಈಗ ವಿಶಾಲವಾದ ಹಂತಕ್ಕೆ ತಲುಪಿದೆ. ೩೦ ಸಾವಿರ ಜನರು ಮಹೋತ್ಸವ ದಲ್ಲಿ ನೇರವಾಗಿ ಭಾಗವಹಿಸಿದ್ದು, ಆರೋಗ್ಯ ಮತ್ತು ಇತರ ಕಾರಣಗಳಿಂದ ನೇರವಾಗಿ ಭಾಗವಹಿಸಲು ಸಾಧ್ಯವಾಗದ ಸಾವಿರಾರು ಭಕ್ತರು ‘ಯೂಟ್ಯೂಬ್’ ಮೂಲಕ ಈ ಸಮಾರಂಭವನ್ನು ವೀಕ್ಷಿಸಿದರು. ವಿವಿಧ ಪ್ರಾಂತ್ಯಗಳಂತೆ, ಇವರೆಲ್ಲರ ಸಾಮಾಜಿಕ ಮತ್ತು ಕೌಟುಂಬಿಕ ಸ್ಥಿತಿಗಳು ವಿಭಿನ್ನವಾಗಿವೆ. ಅವರು ಕಾರ್ಯನಿರ್ವಹಿಸುವ ಕ್ಷೇತ್ರಗಳೂ ವಿಭಿನ್ನವಾಗಿವೆ. ಕೆಲವರು ಆರ್ಥಿಕವಾಗಿ ಶ್ರೀಮಂತರಾಗಿದ್ದರೆ, ಕೆಲವರಿಗೆ ಸಂಸಾರ ನಡೆಸುವುದು ಕಷ್ಟವಾಗಿದೆ. ಕೆಲವರು ಮನೆ-ಮಾರು ಮತ್ತು ಎಲ್ಲವನ್ನೂ ಅರ್ಪಿಸಿ ಪೂರ್ಣ ಸಮಯ ಸೇವೆ ಮಾಡುತ್ತಿದ್ದಾರೆ, ಇನ್ನೂ ಕೆಲವರು ಕೆಲಸ-ವ್ಯವಹಾರಗಳನ್ನು ನಿಭಾಯಿಸಿಕೊಂಡು ಅಧ್ಯಾತ್ಮ ಪ್ರಚಾರದ ಸೇವೆ ಮಾಡುತ್ತಿದ್ದಾರೆ. ಕೆಲವರಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ನಿರ್ವಹಿಸುವ ತೀವ್ರ ತಳಮಳವಿದ್ದರೆ, ಇನ್ನೂ ಕೆಲವರಲ್ಲಿ ಭಕ್ತಿಭಾವ ಹೆಚ್ಚಾಗಿದೆ. ಹೀಗಿದ್ದರೂ, ಇವರೆಲ್ಲರೂ ಒಂದು ಸುಂದರ ಮಾಲೆಯಲ್ಲಿ ಪೋಣಿಸಲ್ಪಟ್ಟಿದ್ದಾರೆ ಮತ್ತು ಆ ಮಾಲೆಯ ಮೆರುಮಣಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಆಗಿದ್ದಾರೆ. ಪ್ರಕೃತಿಗನುಗುಣವಾಗಿ ಕರ್ಮಯೋಗಿ, ಜ್ಞಾನಯೋಗಿ, ಭಕ್ತಿಯೋಗಿ, ಧ್ಯಾನಯೋಗಿ ಹೀಗೆ ವಿವಿಧ ಯೋಗಮಾರ್ಗಗಳಿಂದ ಸಾಧನೆ ಮಾಡುವ ಈ ಸಾಧಕರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸರ್ವಯೋಗಗಳ ಸಂಗಮವಾಗಿರುವ ಗುರುಕೃಪಾಯೋಗದ ಪ್ರಕಾರ ಸಾಧನೆಯಲ್ಲಿ ತೊಡಗಿದ್ದಾರೆ. ಗುರುದೇವರು ತಮ್ಮ ಪ್ರೀತಿಯಿಂದ ಎಲ್ಲರನ್ನು ಒಗ್ಗೂಡಿಸಿದ್ದಾರೆ.
ವಿದೇಶಗಳಲ್ಲೂ ಸನಾತನ ಧರ್ಮಶಕ್ತಿ ಅಸ್ತಿತ್ವ ಭಾರತದಿಂದ ಮಾತ್ರವಲ್ಲ, ೨೩ ದೇಶ ಗಳಿಂದ ಹಿಂದೂ ಕಾರ್ಯಕರ್ತರು ಮತ್ತು ಸಾಧಕರು ಬಂದಿದ್ದರು. ಇಷ್ಟು ದೇಶಗಳ ಸಾಧಕರು ಗುರುಕೃಪಾಯೋಗಕ್ಕನುಸಾರದ ಸಾಧನೆಯನ್ನು ಸ್ವೀಕರಿಸಿದ್ದಾರೆ. ಹಿಂದೆ ಭಾರತದಲ್ಲಿ ಸಂತ ಮನೆತನಗಳ ಪರಂಪರೆಯಿತ್ತು. ಈಗ ಸನಾತನದಲ್ಲೂ ಈ ಪರಂಪರೆ ಬೆಳೆದಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿನ ಸಾಧಕರ ಕುಟುಂಬಗಳಲ್ಲೂ ಈ ಪರಂಪರೆ ಬೇರೂರಿದೆ. ವಿದೇಶಗಳಲ್ಲಿ ಉಳಿದು ಸಾಧನೆ ಮಾಡುವ ಕೆಲವು ಸಾಧಕ ಕುಟುಂಬಗಳನ್ನು ಈ ಸಮಯದಲ್ಲಿ ಎಲ್ಲರಿಗೂ ಪರಿಚಯಿಸಲಾಯಿತು. ಇವರಲ್ಲಿ ಕೆಲವರು ಸಾಧನೆ ಮಾಡಿ ಸಂತ ಪದವಿಯನ್ನು ಪಡೆದಿದ್ದರೆ, ಒಂದೇ ಕುಟುಂಬದ ಮೂವರು ಸಂತ ಪದವಿಯಲ್ಲಿದ್ದಾರೆ.
ಸನಾತನ ಸಂಸ್ಥೆಯ ವ್ಯಾಪಕತೆ !
ಆರಂಭಿಕ ಕಾಲದಿಂದಲೂ ‘ಸನಾತನ ಸಂಸ್ಥೆಯು ಯಾವುದೇ ಸಂಪ್ರದಾಯವಲ್ಲ, ಆದರೆ ಆಧ್ಯಾತ್ಮಿಕ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡುವ ಸಂಸ್ಥೆಯಾಗಿದೆ,’ ಎಂದು ನಾವು ಎಲ್ಲರಿಗೂ ಹೇಳುತ್ತಿದ್ದೆವು. ಇದರ ಅಕ್ಷರಶಃ ಅನುಭವ ಕಳೆದ ಕೆಲವು ವರ್ಷಗಳಿಂದ ಆಗುತ್ತಿದೆ. ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ಗಳಲ್ಲಿ ಅನೇಕ ಹಿಂದೂ ಕಾರ್ಯಕರ್ತ ಸಂಘಟನೆಗಳು ‘ಸನಾತನ ಸಂಸ್ಥೆಯು ನಮ್ಮ ಮಾತೃಸಂಸ್ಥೆ’ ಎಂದು ಆತ್ಮೀಯವಾಗಿ ಹೇಳುತ್ತಾರೆ. ಅನೇಕ ಹಿಂದುತ್ವನಿಷ್ಠ ಸಂಘಟನೆಗಳ ಮುಖ್ಯಸ್ಥರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರನ್ನು ಗುರುಸ್ಥಾನದಲ್ಲಿಟ್ಟು ಗೌರವಿಸುತ್ತಾರೆ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸಿದ ಹಿಂದುತ್ವನಿಷ್ಠರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರೊಂದಿಗೆ ಕೃತಜ್ಞತಾಭಾವದಿಂದ ಮತ್ತು ವಿನಮ್ರತೆಯಿಂದ ಸಂವಾದ ನಡೆಸುತ್ತಿದ್ದ ರೀತಿಗೆ ಅವರ ಬಗ್ಗೆ ಇರುವ ಭಕ್ತಿಭಾವವನ್ನು ತೋರಿಸುತ್ತದೆ. ಹಿಂದುತ್ವನಿಷ್ಠರ ವಲಯದಲ್ಲಿ ಸನಾತನ ಸಂಸ್ಥೆಯ ಬಗ್ಗೆ ಕಂಡುಬರುವ ಆತ್ಮೀಯತೆ, ಪ್ರೀತಿಯು ಶಂಖನಾದ ಮಹೋತ್ಸವದ ನಿಮಿತ್ತ ಹೆಚ್ಚು ವ್ಯಾಪಕ ಮಟ್ಟ ದಲ್ಲಿ ಕಂಡುಬಂದಿತು.
ಅನೇಕ ಹಿಂದುತ್ವನಿಷ್ಠ ಸಂಘಟನೆಗಳು, ಸಂಪ್ರದಾಯಗಳು ಮತ್ತು ರಾಜಕೀಯ ನಾಯಕರನ್ನು ಒಂದೇ ವೇದಿಕೆಯ ಮೇಲೆ ತರುವುದು ಮತ್ತು ಹಿಂದೂ ರಾಷ್ಟ್ರದ ವಿಷಯದ ಬಗ್ಗೆ ಮಾತನಾಡಲು ಪ್ರೋತ್ಸಾಹಿಸುವುದು ನಿಜಕ್ಕೂ ಒಂದು ಸವಾಲಾಗಿತ್ತು. ಅದನ್ನು ಗೋಮಂತಕದ ವಿವಿಧ ಸಂಘಟನೆಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹಾಗೂ ಸನಾತನದ ಹಿತೈಷಿಗಳು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಲೋಕೋತ್ಸವದಿಂದ ವಿಶ್ವರೂಪ ದರ್ಶನ !
ಒಟ್ಟಾರೆಯಾಗಿ, ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಕೇವಲ ಸನಾತನದ ಸಾಧಕರಿಗೆ ಮಾತ್ರ ಸೀಮಿತವಾಗದೆ, ಸಮಾಜದ ಎಲ್ಲ ವರ್ಗದವರನ್ನೂ ಒಳಗೊಂಡಿತ್ತು. ಅಷ್ಟು ಅಲ್ಲದೆ, ಅವರ ಸಹಕಾರದಿಂದ ನಡೆದ ಈ ಮಹೋತ್ಸವವು ನಿಜವಾದ ಅರ್ಥದಲ್ಲಿ ಲೋಕೋತ್ಸವವಾಗಿ ಮಾರ್ಪಟ್ಟಿತು. ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಅವರು ಸನಾತನದ ಸಾಧಕರಿಗೆ ಪ್ರತಿಯೊಬ್ಬರಲ್ಲಿ ‘ಬ್ರಹ್ಮ’ನನ್ನು ನೋಡಲು ಕಲಿಸಿದರು ಮತ್ತು ಎಲ್ಲರ ಸಹಭಾಗಿತ್ವದಿಂದ ಅವರಿಗೆ ವಿಶ್ವರೂಪ ದರ್ಶನವನ್ನೇ ಮಾಡಿಸಿದರು. ಇಂತಹ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರನ್ನು ಕೆಲವರು ಧರ್ಮಗುರು, ಕೆಲವರು ಮೋಕ್ಷಗುರು, ಕೆಲವರು ಜ್ಞಾನಗುರು, ಕೆಲವರು ರಾಷ್ಟ್ರಗುರು, ಇನ್ನೂ ಕೆಲವರು ಜಗದ್ಗುರು ಎಂದು ಸಂಬೋಧಿಸುತ್ತಾರೆ. ಅವರ ಚರಣಗಳಿಗೆ ಕೋಟಿ ಕೋಟಿ ಪ್ರಣಾಮಗಳು !
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ಥರು, ಸನಾತನ ಸಂಸ್ಥೆ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು