
೧. ನಯನಮನೋಹರ ಶ್ರೀಕೃಷ್ಣನ ತೇಜಸ್ವಿ ವಿಶ್ವರೂಪ
ಭಗವಾನ ಶ್ರೀಕೃಷ್ಣನ ರೂಪವು ನಯನ ಮನೋಹರವಾಗಿದೆ. ಅವನ ಬಾಲಕೃಷ್ಣನ ರೂಪವು ಇನ್ನೂ ಸುಂದರವಾಗಿದೆ; ಆದರೆ ಅದೇ ಶ್ರೀಕೃಷ್ಣನು ಮನುಷ್ಯ ರೂಪದಲ್ಲಿದ್ದಾಗ ತನ್ನ ವಿಶ್ವರೂಪವನ್ನು ಪ್ರಕಟಪಡಿಸಿದಾಗ, ಕೆಲವೇ ಕ್ಷಣಗಳ ನಂತರ ಅರ್ಜುನನಿಗೆ ಅದನ್ನು ಸಹಿಸಲು ಆಗಲಿಲ್ಲ. ಶ್ರೀಕೃಷ್ಣನ ವಿಶ್ವರೂಪದರ್ಶನವು ಅಪರಿಮಿತ ತೇಜಸ್ಸಿಯಾಗಿತ್ತು.
೨. ಶ್ರೀಕೃಷ್ಣನ ವಿಶ್ವರೂಪದರ್ಶನದ ಸಮಯ ಸಮೀಪಿಸಿದೆ
ಯಾರ ಐದು ಕೈಬೆರಳುಗಳ ಮೇಲೆ ಯಾವಾಗಲೂ ಪಂಚಮಹಾಭೂತಗಳು ಸ್ಥಿರವಾಗಿರುತ್ತವೆಯೋ, ‘ಜಲ (ಕ್ಷೀರಸಾಗರ)’ವು ಯಾರ ವಾಸಸ್ಥಾನವಾಗಿದೆಯೋ, ‘ಅಗ್ನಿ’ ಯಾರ ಶರೀರವಾಗಿದೆಯೋ, ಯಾರ ಪ್ರತಿಯೊಂದು ರೋಮ (ಶರೀರದ ಮೇಲಿನ ರಂಧ್ರ) ವೆಂದರೆ ‘ದೇವತೆಗಳು, ಋಷಿಗಳು ಮತ್ತು ದೈವೀಗಣಗಳಾಗಿದ್ದಾರೆಯೋ’, ಯಾರ ಕೋಪವೆಂದರೆ ‘ಸೂರ್ಯ’ನಾಗಿದ್ದಾನೆಯೋ, ಯಾರ ಶಾಂತತೆ ಎಂದರೆ ‘ಚಂದ್ರ’ನಾಗಿದ್ದಾನೆಯೋ, ಯಾರ ಎರಡು ಕಿವಿಗಳೆಂದರೆ ‘ಅಶ್ವಿನಿಕುಮಾರ’ರಾಗಿದ್ದಾರೆಯೊ, ಯಾರ ಉಸಿರು ‘ವಾಯು’ ಆಗಿದೆಯೋ, ಯಾರ ಆಜ್ಞೆಯನ್ನು ಪಾಲಿಸಲು ‘ಯೋಗಮಾಯಾ, ಕುಬೇರ, ಯಮ’ ಮುಂತಾದ ದೇವತೆಗಳು ಯಾವಾಗಲೂ ಸಿದ್ಧರಾಗಿರುತ್ತಾರೆಯೊ, ಯಾರ ಕಣ್ಣುಗಳ ರೆಪ್ಪೆಗಳು ಮುಚ್ಚುವುದು ಎಂದರೆ ‘ರಾತ್ರಿ’ ಮತ್ತು ರೆಪ್ಪೆಗಳು ತೆರೆಯುವುದು ಎಂದರೆ ‘ಹಗಲು’ ಆಗಿದೆಯೋ ಅಂತಹ ಭಗವಾನ ಶ್ರೀಕೃಷ್ಣನ ವಿಶ್ವರೂಪ ದರ್ಶನವು ಪ್ರಕೃತಿ ಮತ್ತು ಯುದ್ಧ ಇವುಗಳ ಮಾಧ್ಯಮಗಳಿಂದ ಪ್ರಕಟವಾಗುವ ಸಮಯ ಬಂದಿದೆ.
೩. ಶಂಖನಾದ ಮಹೋತ್ಸವರೂಪಿ ರಥದ ಮೇಲೆ ಸನಾತನ ರಾಷ್ಟ್ರದ ಧ್ವಜಾರೋಹಣ !
‘ಮಹೋತ್ಸವದ ಮೂಲಕ ಯುದ್ಧದ ಶಂಖನಾದವಾಗುವುದು ಮತ್ತು ಶಂಖನಾದ ಮಹೋತ್ಸವರೂಪಿ ರಥದ ಮೇಲೆ ಸನಾತನ ರಾಷ್ಟ್ರದ ಧ್ವಜಾರೋಹಣವಾಗುವುದು’, ಇವು ಶ್ರೀಕೃಷ್ಣನ ವಿಶ್ವರೂಪ ದರ್ಶನದ ಸಮಯ ಸಮೀಪಿಸಿದ್ದರ ಸಂಕೇತವಾಗಿವೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು