ಪಾಕಿಸ್ತಾನದಿಂದ ಚೀನಾ ಮೇಲೆ ದೊಡ್ಡ ಆರೋಪ

ಇಸ್ಲಾಮಾಬಾದ್ (ಪಾಕಿಸ್ತಾನ) – ಆಪರೇಷನ್ ಸಿಂದೂರ್ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ನೀಡಿದ್ದ ವಾಯು ರಕ್ಷಣಾ ವ್ಯವಸ್ಥೆಗಳು, ಹಾಗೆಯೇ ಕ್ಷಿಪಣಿಗಳನ್ನು ಭಾರತ ನಾಶಪಡಿಸಿತು. “ಬ್ರಹ್ಮೋಸ್‌ನಂತಹ ಕಡಿಮೆ ಎತ್ತರದಲ್ಲಿ ಹಾರುವ ಕ್ಷಿಪಣಿಗಳು ನಮ್ಮ ವ್ಯವಸ್ಥೆಯ ವ್ಯಾಪ್ತಿಯಿಂದ ಹೊರಗಿವೆ” ಎಂದು ಚೀನಾ ಸ್ಪಷ್ಟಪಡಿಸಿದೆ. ಈ ಕುರಿತು ಪಾಕಿಸ್ತಾನಿ ಅಧಿಕಾರಿಗಳು, “ಈ ವ್ಯವಸ್ಥೆಗಳ ಸಾಮರ್ಥ್ಯದ ಬಗ್ಗೆ ಚೀನಾ ಮೊದಲು ಮಾಹಿತಿ ನೀಡಿರಲಿಲ್ಲ. ಚೀನಾದಿಂದ ನಮಗೆ ಮೋಸ ಆಗಿದೆ. ಇದರಿಂದಾಗಿ ಆಪರೇಷನ್ ಸಿಂದೂರ್‌ನಲ್ಲಿ ನಾವು ಸೋಲಬೇಕಾಯಿತು” ಎಂದು ಆರೋಪಿಸಿದ್ದಾರೆ.
🇵🇰Pakistan’s Allegation against China: "We were defeated during ‘Operation Sindoor’ because China deceived us"
A major accusation by #Pakistan against #China 🇨🇳#OperationSindoor pic.twitter.com/EeLAQRP26x
— Sanatan Prabhat (@SanatanPrabhat) June 7, 2025
“ಪಾಕಿಸ್ತಾನದಲ್ಲಿ ಚೀನಾ ಒದಗಿಸಿದ ‘HQ-9B’ ಮತ್ತು ‘HQ-16’ ವಾಯು ರಕ್ಷಣಾ ವ್ಯವಸ್ಥೆಗಳ ಬಗ್ಗೆ ದೊಡ್ಡ ಅಸಮಾಧಾನವಿದೆ” ಎಂದು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

“ಈ ವ್ಯವಸ್ಥೆಗಳನ್ನು ಭಾರತದ ‘ಬ್ರಹ್ಮೋಸ್’ ನಂತಹ ಕ್ಷಿಪಣಿಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿಲ್ಲ” ಎಂದು ಚೀನಾ ಒಪ್ಪಿಕೊಂಡ ನಂತರ, ಪಾಕಿಸ್ತಾನದಲ್ಲಿ ಚೀನಾ ವಿರೋಧಿ ಅಸಮಾಧಾನ ಇನ್ನಷ್ಟು ಹೆಚ್ಚಿದೆ.
ಪಾಕಿಸ್ತಾನ ಈಗ ಪರ್ಯಾಯಗಳ ಬಗ್ಗೆ ಚಿಂತಿಸುತ್ತಿದೆ. ಮೂಲಗಳ ಪ್ರಕಾರ, ಪಾಕಿಸ್ತಾನ ಈಗ ಟರ್ಕಿಯ ವಾಯು ರಕ್ಷಣಾ ವ್ಯವಸ್ಥೆಗಳ ಬಗ್ಗೆ ವಿಚಾರ ಮಾಡುತ್ತಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು