ಹಿಂದೂ ದೇವಸ್ಥಾನಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲು ಹೋರಾಡುತ್ತಿರುವ ತಮಿಳುನಾಡಿನ ಟಿ.ಆರ್. ರಮೇಶ್!

ಶ್ರೀ ಟಿ.ಆರ್. ರಮೇಶ್ ಅವರು ‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ ಮತ್ತು ‘ಟೆಂಪಲ್ ವರ್ಶಿಪರ್ಸ್ ಸೊಸೈಟಿ’ ಸಂಸ್ಥೆಗಳ ಅಧ್ಯಕ್ಷರು. ನವೀಕರಣ ಮತ್ತು ಹೆಚ್ಚುವರಿ ಕಾಮಗಾರಿಯ ಕಾರಣದಿಂದ ಅನೇಕ ಪ್ರಾಚೀನ ದೇವಾಲಯಗಳ ಪರಂಪರೆ ಮತ್ತು ವಾಸ್ತುಶಿಲ್ಪ ನಾಶವಾಗುತ್ತಿದೆ. ಇದನ್ನು ತಡೆಯಲು ಅವರು ತಮಿಳುನಾಡಿನ ದೇವಸ್ಥಾನಗಳ ಆಡಳಿತವನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ (ಹಿಂದೂ ರಿಲಿಜಿಯನ್ ಅಂಡ್ ಚಾರಿಟಿ ಎಂಡೋವ್ಮೆಂಟ್) ಇಲಾಖೆಯೊಂದಿಗೆ ಸುದೀರ್ಘ ಹೋರಾಟ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಶ್ರೀ ರಮೇಶ್ ಅವರು ತಮಿಳುನಾಡಿನ ಲಕ್ಷ್ಮಿ ನರಸಿಂಹ, ಪೆರುಮಾಳ್ ದೇವಸ್ಥಾನ, ಕ್ರೋಮಪೇಟ, ಕಂದಸ್ವಾಮಿ ದೇವಸ್ಥಾನ, ಕಂದಾಕೊಟ್ಟಂ ದೇವಸ್ಥಾನ, ಅಯ್ಯಪ್ಪ ದೇವಸ್ಥಾನ, ಕೊಡೂನಂಗೈಯೂರು ದೇವಸ್ಥಾನ ಸೇರಿದಂತೆ 5 ಪ್ರಾಚೀನ ದೇವಸ್ಥಾನಗಳು ಸರಕಾರಿ ನಿಯಂತ್ರಣದಡಿ ಹೋಗದಂತೆ ಯಶಸ್ವಿಯಾಗಿ ತಡೆದಿದ್ದಾರೆ. ಸಾಮಾನ್ಯವಾಗಿ ಜನರು ಸಂಪತ್ತನ್ನು ಗಳಿಸಲು ಪ್ರಯತ್ನಿಸುತ್ತಿರುವ ಈಗಿನ ಕಾಲದಲ್ಲಿ, ದೇವಸ್ಥಾನಗಳ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ತಡೆಯುವುದಕ್ಕಾಗಿ ಹೋರಾಡಲು ಶ್ರೀ. ರಮೇಶ್ ಅವರಂತಹ ಸಮರ್ಪಿತ, ಬದ್ಧ ಮತ್ತು ನಿಸ್ವಾರ್ಥ ವ್ಯಕ್ತಿಯನ್ನು ಕಂಡುಹಿಡಿಯುವುದು ಅಪರೂಪವಾಗಿದೆ. 2012 ರಿಂದ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸುವ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಅವರು ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ.


ವಿಶೇಷ ಮಾಲಿಕೆ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ಪಳನಿ ಅರುಳಮಿಗು ದಂಡಾಯುಧಪಾಣಿ ಸ್ವಾಮಿ ದೇವಸ್ಥಾನದ ಉಸ್ತುವಾರಿಗಾಗಿ ಟೆಂಡರ್ ಪ್ರಕರಣದ ಅರ್ಜಿಗೆ ಯಶಸ್ಸು

ಪಳನಿ ಅರುಳಮಿಗು ದಂಡಾಯುಧಪಾಣಿ ಸ್ವಾಮಿ ದೇವಸ್ಥಾನದ ಉಸ್ತುವಾರಿ ವ್ಯವಸ್ಥೆಗಾಗಿ (ಹೌಸ್ಕೀಪಿಂಗ್)ಗಾಗಿ ಟೆಂಡರ್ ಕರೆದಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಟಿ.ಆರ್. ರಮೇಶ್ ಅವರು ಕಾರ್ಯನಿರ್ವಾಹಕ ಅಧಿಕಾರಿಯ ವಿರುದ್ಧ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತು ತೀರ್ಪು ನೀಡಿದ ಮದ್ರಾಸ ಉಚ್ಚ ನ್ಯಾಯಾಲಯವು, ದೇವಸ್ಥಾನಗಳ ಆಡಳಿತವನ್ನು ಅಧಿಕಾರಿಗಳಿಗೆ ಒಪ್ಪಿಸುವ ತಮಿಳುನಾಡು ಸರಕಾರದ ನೀತಿಯನ್ನು ಕೆಂದು ಪ್ರಶ್ನಿಸಿತು ಮತ್ತು ರಾಜ್ಯದ ದೇವಸ್ಥಾನಗಳ ನಿರ್ವಹಣೆಯನ್ನು ಅವುಗಳ ಟ್ರಸ್ಟಿ ಮಂಡಳಿಯೇ ನಿರ್ವಹಿಸಬೇಕೆಂದು ಒತ್ತಿಹೇಳಿತು.

2. ತಿರುವಣ್ಣಾಮಲೈನಲ್ಲಿರುವ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಭೂಮಿಯಲ್ಲಿ ಅನಧಿಕೃತ ನಿರ್ಮಾಣವನ್ನು ತಡೆಯುವಲ್ಲಿ ಯಶಸ್ಸು!

‘ತಿರುವಣ್ಣಾಮಲೈನಲ್ಲಿರುವ ಶ್ರೀ ಅರುಣಾಚಲೇಶ್ವರ ದೇವಾಲಯದ ರಾಜಗೋಪುರಂ (ಮುಖ್ಯ ಗೋಪುರ) ಎದುರು ದೇವಸ್ಥಾನದ ಭೂಮಿಯಲ್ಲಿ 150 ಅಂಗಡಿಗಳ ಅನಧಿಕೃತ ನಿರ್ಮಾಣ ಮಾಡಲಾಗಿತ್ತು. ಇದರ ವಿರುದ್ಧ ಶ್ರೀ ರಮೇಶ್ ಅವರು ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ವಿಶೇಷ ಪೀಠದ ಮುಂದೆ ತ್ವರಿತ ವಿಚಾರಣೆ ನಡೆಯಿತು. ನಂತರ, ಪೀಠವು ದೇವಸ್ಥಾನದ ಜಾಗದಲ್ಲಿರುವ ಎಲ್ಲಾ ನಿರ್ಮಾಣಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶಿಸಿತು.

3. ಕಪಾಲೇಶ್ವರ ದೇವಸ್ಥಾನದ ನಿಧಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಸಾಂಸ್ಕೃತಿಕ ಕೇಂದ್ರದ ನಿರ್ಮಾಣಕ್ಕೆ ತಡೆಯಾಜ್ಞೆ

ಚೆನ್ನೈನ ಕಪಾಲೇಶ್ವರ ದೇವಸ್ಥಾನದ ನಿಧಿಯನ್ನು ಬಳಸಿ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಇಂತಹ ನಿರ್ಮಾಣವು ನಿಯಮಬಾಹಿರ ಎಂದು ಶ್ರೀ. ಟಿ.ಆರ್. ರಮೇಶ್ ಅವರು ತಿಳಿಸಿದರು. ಮೇ 2024 ರಲ್ಲಿ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ ಈ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು.

4. ದೇವಸ್ಥಾನಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕಾತಿಗಾಗಿ ನಿಯಮಗಳನ್ನು ರೂಪಿಸುವ ಬೇಡಿಕೆಗೆ ಒಪ್ಪಿಗೆ

2015 ರಲ್ಲಿ ಶ್ರೀ. ರಮೇಶ್ ಅವರು 5 ಪ್ರಮುಖ ದೇವಸ್ಥಾನಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸುವುದರ ವಿರುದ್ಧ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ 5 ರಿಟ್ ಅರ್ಜಿಗಳನ್ನು ಸಲ್ಲಿಸಿದರು, ಹಾಗೂ ದೇವಸ್ಥಾನಗಳಲ್ಲಿ ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ವಿಭಾಗದ ನೌಕರರ ನೇಮಕಾತಿಯನ್ನು ಪ್ರಶ್ನಿಸಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು. ಕೆಲವು ತಿಂಗಳ ಹಿಂದೆ ಅವರು ದತ್ತಿ ಆಯುಕ್ತರಿಗೆ 17 ದೇವಸ್ಥಾನಗಳ ಕುರಿತು ನೋಟಿಸ್ ಗಳನ್ನು ನೀಡಿದ್ದರು. ಅಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸುವ ಆದೇಶ ಇರಲಿಲ್ಲ. ಅವರ ಅರ್ಜಿಯ ನಂತರವೇ ವಿಭಾಗವು 55 ವರ್ಷಗಳಲ್ಲಿ ಮೊದಲ ಬಾರಿಗೆ ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ಕಾಯಿದೆಯಡಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕಾತಿಗಾಗಿ ನಿಯಮಗಳನ್ನು ರೂಪಿಸಿತು.

5. ಚಿದಂಬರಂ ದೇವಾಲಯದಲ್ಲಿ ದೀಕ್ಷಿತರ ವಂಶಪಾರಂಪರಿಕ ಹಕ್ಕುಗಳನ್ನು ಪಡೆಯುವ ನ್ಯಾಯಾಂಗ ಹೋರಾಟಕ್ಕೆ ಯಶಸ್ಸು

2009 ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಚಿದಂಬರಂ ದೇವಾಲಯವನ್ನು ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ಇಲಾಖೆಗೆ ಹಸ್ತಾಂತರಿಸಲು ಆದೇಶ ನೀಡಿತು. ನಂತರ ತಕ್ಷಣವೇ ಚಿದಂಬರಂ ದೇವಸ್ಥಾನದ ಅನೇಕ ಸ್ಥಳಗಳಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ತೆರೆಯಲಾಯಿತು. ಈ ದೇವಾಲಯದಲ್ಲಿ ಅನ್ಯ ವರ್ಗದವರನ್ನು ಅರ್ಚಕರಾಗಿ ನೇಮಿಸುವ ಸರಕಾರದ ಕುತಂತ್ರವಿತ್ತು. ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ಇಲಾಖೆಯು ಎಲ್ಲಾ ದೀಕ್ಷಿತರಿಗೆ (ಅರ್ಚಕರಿಗೆ) ನೋಟಿಸ್ ಗಳನ್ನು ಕಳುಹಿಸಿತು. ಇದರ ನೇರ ಪರಿಣಾಮ ದೀಕ್ಷಿತರ ಜೀವನೋಪಾಯದ ಮೇಲಾಯಿತು. ಆಗ ಶ್ರೀ. ರಮೇಶ್ ಅವರು ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿ ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ಯಿಂದ ಆಡಳಿತ ನಡೆಸಲ್ಪಡುವ ದೇವಸ್ಥಾನಗಳ ಮಾಹಿತಿಯನ್ನು ಪಡೆದು 700 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು. ಈ ಪ್ರಕರಣದಲ್ಲಿ ಶ್ರೀ ರಮೇಶ್ ಅವರು ಡಾ. ಸುಬ್ರಮಣಿಯನ್ ಸ್ವಾಮಿ ಅವರಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ಪ್ಯಾರಾಗ್ರಾಫ್ ವಾರು ವಿಭಾಗಗಳೊಂದಿಗೆ ಸಂಪೂರ್ಣ ಸಂಶೋಧನಾ ಸಾಮಗ್ರಿಯನ್ನು ಸಿದ್ಧಪಡಿಸುವ ಕೆಲಸ ಮಾಡಿದರು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಒಂದು ಗಂಟೆಯೊಳಗೆ ಮದ್ರಾಸ್ ಉಚ್ಚ ನ್ಯಾಯಾಲಯವು ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ಇಲಾಖೆಯ ಚಿದಂಬರಂ ದೇವಾಲಯವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳಿಗೆ ತಡೆಯಾಜ್ಞೆ ನೀಡಿತು. ಇದಕ್ಕಾಗಿ ಶ್ರೀ ರಮೇಶ್ ಅವರು 5 ವರ್ಷಗಳ ಕಾಲ ಹೋರಾಟ ನಡೆಸಿದರು.

6. ಶ್ರೀ. ಟಿ.ಆರ್.ರಮೇಶ್ ಅವರ ಮೇಲಿನ ಕ್ರಿಮಿನಲ್ ಮೊಕದ್ದಮೆ ಮದ್ರಾಸ್ ಉಚ್ಚ ನ್ಯಾಯಾಲಯದಿಂದ ರದ್ದು

ದೇವಸ್ಥಾನದಲ್ಲಿ ಭಕ್ತರನ್ನು ಪ್ರಚೋದಿಸಿದ್ದಕ್ಕಾಗಿ ಚೆನ್ನೈನ ಕಪಾಲೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳು ಶ್ರೀ. ರಮೇಶ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. 31.08.2022 ರಂದು ಈ ಮೊಕದ್ದಮೆಯನ್ನು ಮದ್ರಾಸ ಉಚ್ಚ ನ್ಯಾಯಾಲಯ ರದ್ದುಗೊಳಿಸಿತು, ಇದು ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ಇಲಾಖೆಯ ಆದೇಶದ ಮೇರೆಗೆ ದಾಖಲಿಸಲಾಗಿತ್ತು.

7. ಶ್ರೀ. ಟಿ.ಆರ್. ರಮೇಶ್ ಅವರು ದಕ್ಷಿಣದ ದೇವಸ್ಥಾನಗಳ ಟ್ರಸ್ಟಿಗಳಲ್ಲಿ ಜನಪ್ರಿಯರಾಗಿದ್ದಾರೆ. ಅನೇಕ ದೇವಸ್ಥಾನಗಳ ಟ್ರಸ್ಟಿಗಳು ಅವರ ಸಲಹೆ ಪಡೆಯುತ್ತಾರೆ.

8. ದೇವಸ್ಥಾನಗಳ ಮೇಲಿನ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಡುವ ಟಿ.ಆರ್. ರಮೇಶ್ ಅವರ ದೃಢ ಸಂಕಲ್ಪ

40 ಸಾವಿರ ದೇವಸ್ಥಾನಗಳನ್ನು ನಿರ್ವಹಿಸುವ ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ಇಲಾಖೆಯ ವಿರುದ್ಧದ ಹೋರಾಟವು ದೀರ್ಘಕಾಲೀನವಾದುದು ಎಂದು ಶ್ರೀ ಟಿ.ಆರ್. ರಮೇಶ್ ಅವರಿಗೆ ತಿಳಿದಿದ್ದರೂ ಸಹ ಅವರು ಪ್ರಾಚೀನ ದೇವಾಲಯಗಳ ರಕ್ಷಣೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ‘ದೇವಸ್ಥಾನಗಳ ಆಸ್ತಿಯನ್ನು ನೋಡಿಕೊಳ್ಳಬೇಕು ಮತ್ತು ಅದರಿಂದ ಸರಿಯಾದ ಆದಾಯ ಬರಬೇಕು’ ಎಂದು ಅವರು ಬಯಸುತ್ತಾರೆ. ಧಾರ್ಮಿಕ ವಿಷಯಗಳಲ್ಲಿ ಸರಕಾರಿ ಇಲಾಖೆಯ ಹಸ್ತಕ್ಷೇಪ, ದೇವಸ್ಥಾನಗಳ ಆದಾಯ ಸಂಗ್ರಹಿಸದಿರುವುದು, ಪ್ರಸಾದ ವಿತರಣಾ ಕೇಂದ್ರಗಳ ಹರಾಜು ಮಾಡುವುದು, ದೇವಸ್ಥಾನದ ನಿಧಿಯನ್ನು ಇತರ ಕೆಲಸಕ್ಕಾಗಿ ಬಳಸದಿರುವುದು, ನವೀಕರಣದ ಹೆಸರಿನಲ್ಲಿ ಪ್ರಾಚೀನ ಮೂರ್ತಿಗಳು ಮತ್ತು ಪರಂಪರೆಯನ್ನು ನಾಶಪಡಿಸುವುದು ಇತ್ಯಾದಿ ಕುತಂತ್ರದ ವಿರುದ್ಧ ಕ್ರಮ ಕೈಗೊಳ್ಳಲು ನಿರಂತರವಾಗಿ ಶ್ರಮಿಸಲು ಅವರು ದೃಢ ಸಂಕಲ್ಪ ಮಾಡಿದ್ದಾರೆ. ‘ದೇವಸ್ಥಾನಗಳ ಮೇಲಿನ ಅನ್ಯಾಯದ ವಿರುದ್ಧದ ಹೋರಾಟವು ಈಗ ವೇಗವನ್ನು ಪಡೆದುಕೊಂಡಿದ್ದು, ಶೀಘ್ರದಲ್ಲೇ ಅದು ದೊಡ್ಡ ಬಿರುಗಾಳಿಯಾಗುತ್ತದೆ ಮತ್ತು ಅಂತಿಮವಾಗಿ ನ್ಯಾಯಕ್ಕೆ ಜಯ ಸಿಗುತ್ತದೆ’ ಎಂದು ಅವರಿಗೆ ವಿಶ್ವಾಸವಿದೆ.

 

(ಸೌಜನ್ಯ – Sangam Talks)

ಟಿ.ಆರ್. ರಮೇಶ್ ಅವರ ದೇವಸ್ಥಾನಗಳ ಕುರಿತಾದ ಹೋರಾಟದ ಕೆಲ ಉದಾಹರಣೆಗಳು:

ಟಿ.ಆರ್. ರಮೇಶ್ ಅವರು ದೇವಸ್ಥಾನಗಳ ಸಂರಕ್ಷಣೆಗಾಗಿ ನಡೆಸಿದ ಚಳವಳಿಯ ಪ್ರತಿನಿಧಿಕ ಛಾಯಾಚಿತ್ರ.

1. ಹಿಂದೂ ದೇವಸ್ಥಾನಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವುದು ‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ನ ಗುರಿಯಾಗಿದೆ. ಈ ಗುರಿಯನ್ನು ಸಾಧಿಸಲು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಗಳನ್ನು ದಾಖಲಿಸಲಾಗಿದೆ.

2. ದೇವಸ್ಥಾನಗಳ ಭೂಮಿಯನ್ನು ಅತಿಕ್ರಮಿಸಿದವರಿಗೇ ಹಸ್ತಾಂತರಿಸುವ ತಮಿಳುನಾಡು ಸರಕಾರದ ಆದೇಶಕ್ಕೆ ಶ್ರೀ. ಟಿ.ಆರ್. ರಮೇಶ್ ಅವರು ತಡೆಯಾಜ್ಞೆ ತಂದಿದ್ದಾರೆ.

3. ತಂಜಾವೂರಿನ ದೇವಸ್ಥಾನದ ಅಭಿಷೇಕ ಪ್ರಕರಣದಲ್ಲಿ ‘ಇಂಡಿಕ್ ಕಲೆಕ್ಟಿವ್‘ನ ಹಸ್ತಕ್ಷೇಪದಿಂದಾಗಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ವಿಧಿಗಳನ್ನು ನೆರವೇರಿಸಲು ಸಹಾಯವಾಯಿತು.

4. ಇತ್ತೀಚೆಗೆ ಶ್ರೀ. ರಮೇಶ್ ಅವರು ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ನಂತರ, ಅಲ್ಲಿನ ಸರಕಾರವು 47 ದೇವಸ್ಥಾನಗಳಿಂದ 10 ಕೋಟಿ ರೂಪಾಯಿಗಳನ್ನು ಸರಕಾರಿ ನಿಧಿಗೆ ವರ್ಗಾಯಿಸುವ ಸುತ್ತೋಲೆಯನ್ನು ಹಿಂಪಡೆಯಬೇಕಾಯಿತು.

TR Ramesh on “How Governments and Courts alienated Temples from Hindus” at Kshetrayanam 2020

(ಸೌಜನ್ಯ – Pragyata)

table style=”border-collapse: collapse; width: 0%; height: 1487px;”>

Madras HC halts TN government’s plan to open colleges from Temple funds.

 

Padmanabhaswamy Temple Financial Crisis – Kerala HC in
People For Dharma’s PIL, ask the State government for a response on pending annuities.

Madras HC took suo motu cognizance of a news article and issued various reforming directions to preserve Tamil Nadu Temples’ heritage and property. Read the order https://buff.ly/3BmYnSE

DMK orders Temples to deposit gold in government banks under the gold loot scheme. Can an institution be forcibly deprived of its property, that too a religious institution in a ‘secular’ state? #freehindutemples
Must read: https://www.financialexpress.com/…/temple-gold…/1961488/

ಆಧಾರ : https://www.facebook.com/indiccollective/

T R Ramesh President Indic Collective challenges TTD auction decision, to move the Court for a stay

(ಸೌಜನ್ಯ – PGurus)

ಭೇಟಿ ನೀಡಿ – Indic Collective, Author at Standing Up for …

5. ಡಿಸೆಂಬರ್ 2019 ರಲ್ಲಿ, ‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿವರವಾದ ಅರ್ಜಿಯನ್ನು ಸಲ್ಲಿಸಿತು. ಈ ಅರ್ಜಿಯಲ್ಲಿ ತಿರುಚೆಂದೂರಿನ ಶ್ರೀ ಸುಬ್ರಹ್ಮಣ್ಯಂಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸರಕಾರದ ಉಪಸ್ಥಿತಿಯನ್ನು ‘ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ ಕಾಯಿದೆ 1959’ರ ಕಠಿಣ ನಿಬಂಧನೆಗಳು ಮತ್ತು ನಿಯಮಗಳೊಂದಿಗೆ ಪ್ರಶ್ನಿಸಲಾಯಿತು.

6. ದೇವಸ್ಥಾನದಲ್ಲಿ ದುರಸ್ತಿ ಹೆಸರಿನಲ್ಲಿ ನಡೆಯುತ್ತಿದ್ದ ಅಸಮರ್ಪಕ ನಾಗರಿಕ ಕಾಮಗಾರಿಗಳ ಕುರಿತ ದಾವೆಯನ್ನು ಈಗ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪರಂಪರೆ ದಾವೆಯೊಂದಿಗೆ ಜೋಡಿಸಲಾಗಿದೆ.

7. ಅನೇಕ ದೇವಸ್ಥಾನಗಳಲ್ಲಿ ‘ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿ’ ವಿಭಾಗದ ಸ್ವಾಧೀನ ಬಿಡ್ ಗಳನ್ನು ತಡೆಗಟ್ಟುವುದು, ಅನೇಕ ದೇವಸ್ಥಾನಗಳಲ್ಲಿ ಅನಿಯಂತ್ರಿತವಾಗಿ ನಡೆಯುತ್ತಿದ್ದ ನಾಗರಿಕ ಕಾರ್ಯಗಳನ್ನು ನಿಲ್ಲಿಸುವುದು, ಉತ್ಸವಗಳ ಆದರ್ಶ ಆಯೋಜನೆಗೆ ಸಹಾಯ ಮಾಡುವುದು ಮುಂತಾದ ಕಾರ್ಯಗಳನ್ನು ಶ್ರೀ. ರಮೇಶ್ ಅವರು ಮಾಡಿದ್ದಾರೆ.