‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವೆಂದರೆ ರಾಮರಾಜ್ಯದತ್ತ ಒಂದು ಹೆಜ್ಜೆ !

ವೈಶ್ವಿಕ ಇತಿಹಾಸದಲ್ಲಿ ಅನೇಕ ಸಂಸ್ಕೃತಿಗಳು ಉದಯವಾಗಿ ಲೋಪವಾಗಿವೆ. ಉದಾ. ಈಜಿಪ್ತಿಯನ್, ಗ್ರೀಕ್, ರೋಮನ್, ಸಂಸ್ಕೃತಿ ಇತ್ಯಾದಿ; ಆದರೆ ರಾಜಕೀಯ ಸಂಘರ್ಷ, ಪರಕೀಯ ಆಕ್ರಮಣಗಳು, ನೈಸರ್ಗಿಕ ಆಪತ್ತುಗಳು ಇತ್ಯಾದಿ ಸಂಕಷ್ಟಗಳನ್ನು ಎದುರಿಸುತ್ತಾ ಶಾಶ್ವತವಾಗಿ ಉಳಿದಿರುವ ಏಕೈಕ ಸಂಸ್ಕೃತಿಯೆಂದರೆ, ಅದು ‘ಸನಾತನ ಸಂಸ್ಕೃತಿ’ ! ಸನಾತನ ಧರ್ಮ ಯಾವಾಗಲೂ ವಿಶ್ವಕಲ್ಯಾಣದ ಸಂಕಲ್ಪ ಮಾಡುತ್ತಾ ಬಂದಿದೆ. ಸನಾತನ ಧರ್ಮವೆ ಭಾರತದ ಪ್ರಾಣವಾಗಿದೆ. ಎಷ್ಟರವರೆಗೆ ಸನಾತನ ಧರ್ಮದ ಅನುಕರಣೆಯಾಗುತ್ತಿತ್ತೊ, ಅಷ್ಟರ ವರೆಗೆ ಭಾರತ ವೈಭವಶಾಲಿಯಾಗಿತ್ತು; ಆದರೆ ಕಳೆದ ಕೆಲವೇ ವರ್ಷಗಳಲ್ಲಿ ಸನಾತನ ಧರ್ಮವನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಲಾಯಿತು. ಅದರ ಪರಿಣಾಮವೆಂದು ಅನೇಕ ಕೌಟುಂಬಿಕ, ಮಾನಸಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಷ್ಟ್ರೀಯ ಸಂಕಷ್ಟಗಳು ನಿರ್ಮಾಣವಾದವು. ಈ ಹಿನ್ನೆಲೆಯಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ದೇವರು, ದೇಶ ಹಾಗೂ ಧರ್ಮದ ಸೇವೆ ಮಾಡುವ ವ್ಯಕ್ತಿ, ಸಂಸ್ಥೆ ಹಾಗೂ ಸಂಘಟನೆಗಳು ಜಾಗೃತರಾಗುವ ಅವಶ್ಯಕತೆಯಿದೆ. ಸನಾತನ ಧರ್ಮವು ಸುದೃಢವಾದರೆ ಮಾತ್ರ ರಾಮರಾಜ್ಯದಂತಹ ತೇಜಸ್ವೀ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ. ಅದಕ್ಕಾಗಿಯೇ ಗೋವಾದಲ್ಲಿ ೧೭ ರಿಂದ ೧೯ ಮೇ ಈ ಅವಧಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವವನ್ನು ಆಯೋಜಿಸಲಾಗಿದೆ.

೧. ‘ಸನಾತನ ರಾಷ್ಟ್ರ’ದ ಸಂಕಲ್ಪನೆ ಸನಾತನ ಸಿದ್ಧಾಂತವು ಮೂಲತಃ ಕಲ್ಯಾಣಕಾರಿ, ವ್ಯಕ್ತಿಯ ಐಹಿಕ

ಪಾರಮಾರ್ಥಿಕ ಉನ್ನತಿ ಮಾಡುವ ಹಾಗೂ ಸರ್ವಸಮಾವೇಶಕ ವಾಗಿದೆ. ಅದು ಯಾವುದೇ ವ್ಯಕ್ತಿಸಮೂಹಕ್ಕಾಗಿ ಸಂಕುಚಿತವಾಗಿರದೆ ಅಖಿಲ ಮನುಕುಲಕ್ಕೆ ಅನ್ವಯವಾಗುತ್ತದೆ. ಸನಾತನ ತತ್ತ್ವಗಳು ನ್ಯಾಯ, ಸಮಾನತೆ, ನೀತಿ, ಯೋಗ, ಸಾಧನೆ ಇತ್ಯಾದಿಗಳನ್ನು ಆಧರಿಸಿದೆ. ವೇದ, ಉಪನಿಷತ್ತುಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಜ್ಞಾನೇಶ್ವರಿ ಇತ್ಯಾದಿ ಸನಾತನ ಧರ್ಮಗ್ರಂಥಗಳಲ್ಲಿ ಈ ವಿಷಯದ ತತ್ತ್ವಜ್ಞಾನವಿದೆ. ಸನಾತನ ರಾಷ್ಟ್ರವು ಈ ತತ್ತ್ವಗಳ ಆಧಾರದಲ್ಲಿ ನಡೆಯುವ ಒಂದು ಆದರ್ಶ ಕಲ್ಯಾಣಕಾರಿ ರಾಷ್ಟ್ರ ವಾಗಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ‘ತ್ರೇತಾಯುಗದಲ್ಲಿನ ರಾಮ ರಾಜ್ಯದ ಕಲಿಯುಗದ ರೂಪವೇ ‘ಸನಾತನ ರಾಷ್ಟ್ರ’ ಎನ್ನಬಹುದು.

೨. ಪ್ರಸ್ತುತ ಸ್ಥಿತಿ ಮತ್ತು ಧರ್ಮದ ಅಧಿಷ್ಠಾನವಿರುವುದರ ಮಹತ್ವ

ಪ್ರಸ್ತುತ ಧರ್ಮನಿರಪೇಕ್ಷ ವ್ಯವಸ್ಥೆಯಲ್ಲಿ ಗೋವು (ಗೋ ಮಾತಾ), ಗಂಗಾ, ಗೀತಾ, ತುಳಸಿ, ಮಠ-ಮಂದಿರಗಳು ಇತ್ಯಾದಿ ಸನಾತನದ ಕೇಂದ್ರಬಿಂದುಗಳ ಮೇಲೆ ನಿರಂತರವಾಗಿ ಆಘಾತಗಳು ಆಗುತ್ತಿರುತ್ತವೆ. ಆಧುನಿಕತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸನಾತನದ ಶ್ರದ್ಧಾಸ್ಥಾನಗಳ ಹನನಗೊಳಿಸಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಪರಂಪರೆ, ಆಚಾರ-ವಿಚಾರಗಳಿಗೆ ಮೂಢನಂಬಿಕೆಯ ‘ಲೇಬಲ್’ ಹಚ್ಚಲಾಗುತ್ತಿದೆ. ವೈದಿಕ ವಿಜ್ಞಾನವನ್ನು ‘ಛದ್ಮ ವಿಜ್ಞಾನ’ವೆಂದು ಹೀಯಾಳಿಸಲಾಗುತ್ತಿದೆ. ಕೌಟುಂಬಿಕ ಸ್ತರದಲ್ಲಿ ನೋಡಿದರೆ, ದೇವೀಸ್ವರೂಪಿಯೆಂದು ಪರಿಗಣಿಸಲ್ಪಡುವ ಮಹಿಳೆ ಸುರಕ್ಷಿತವಾಗಿಲ್ಲ. ಕುಟುಂಬದಲ್ಲಿ ಕೂಡ ಪರಸ್ಪರರಲ್ಲಿನ ಆತ್ಮೀಯತೆ, ಪ್ರೀತಿವಾತ್ಸಲ್ಯ ಕಡಿಮೆಯಾಗಿದ್ದು ವ್ಯಕ್ತಿ ಭೌತಿಕವಾಗಿ ಸಂಪನ್ನವಾಗಿದ್ದರೂ, ಮಾನಸಿಕವಾಗಿ ದುರ್ಬಲನಾಗಿದ್ದಾನೆ; ಮನುಷ್ಯನಲ್ಲಿ ಸಂಕಷ್ಟಗಳನ್ನು ಎದುರಿಸುವ ಕ್ಷಮತೆ ಕಡಿಮೆಯಾಗಿರುವುದು ಕಾಣಿಸುತ್ತದೆ. ಇವೆಲ್ಲ ಪರಿಸ್ಥಿತಿಗೆ ಮುಖ್ಯ ಕಾರಣವೆಂದರೆ, ಧರ್ಮಾಚರಣೆ, ಸಾಧನೆ-ಉಪಾಸನೆಯಿಂದ ದೊರೆಯುವ ಶಕ್ತಿಯ ಅಭಾವ ! ಧರ್ಮದ ಅಧಿಷ್ಠಾನವಿದ್ದರೆ ಮಾತ್ರ ವ್ಯಕ್ತಿ ಸಹಿತ ಸಮಾಜ ಹಾಗೂ ರಾಷ್ಟ್ರದ ಉನ್ನತಿಯಾಗುತ್ತದೆ. ಭಾರತದ ಗೌರವಶಾಲಿ ಇತಿಹಾಸದ ಪರಂಪರೆಯನ್ನು ಭವಿಷ್ಯದಲ್ಲಿ ಮುಂದುವರಿಸಲಿಕ್ಕಿದ್ದರೆ, ಧರ್ಮದ ರಕ್ಷಣೆಯಾಗಬೇಕಾಗಿದೆ.

ಶ್ರೀ. ಚೇತನ ರಾಜಹಂಸ

೩. ಸನಾತನ ರಾಷ್ಟ್ರದ ಅವಶ್ಯಕತೆ

ಇಂದು ಧರ್ಮದ ಮೇಲಿನ ಆಘಾತಗಳ ವಿರುದ್ಧ ಜಾಗೃತವಾಗಿ ಧರ್ಮರಕ್ಷಣೆಗಾಗಿ ಚಳುವಳಿ ನಡೆಯುತ್ತಿದ್ದರೂ, ಹಿಂದುತ್ವದ ಮೇಲಾಗುತ್ತಿರುವ ಆಘಾತಗಳು ಸಂಪೂರ್ಣವಾಗಿ ನಿಂತಿಲ್ಲ. ಇತ್ತೀಚೆಗಷ್ಟೆ ಸಮ್ಮತವಾಗಿರುವ ಸುಧಾರಿತ ವಕ್ಫ್ ಕಾನೂನಿನಿಂದ ವಕ್ಫ್ ಬೋರ್ಡ್‌ನ ಸ್ವೇಚ್ಛಾಚಾರಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿದೆಯೆಂದು ಹೇಳಬಹುದು. ಆದರೂ ಈ ಕಾನೂನು ಪ್ರತ್ಯಕ್ಷ ಅನುಷ್ಠಾನವಾಗಿ ಮತಾಂಧರು ಅನಧಿಕೃತವಾಗಿ ಕಬಳಿಸಿದ ಭೂಮಿ ಯಾವಾಗ ತೆರವಾಗುವುದು ಎಂಬುದನ್ನು ಕಾದು ನೋಡಬೇಕು. ಇಂದು ನುಸುಳುಕೋರರ ಗಂಭೀರ ಸಂಕಷ್ಟದಿಂದ ಅನೇಕ ಪ್ರದೇಶಗಳು ಭಾರತದಿಂದ ವಿಭಜನೆಯಾಗುವ ಮಾರ್ಗದಲ್ಲಿವೆ. ಪ್ರಸ್ತುತ ಆಡಳಿತ ವ್ಯವಸ್ಥೆ ಧರ್ಮ ಹಾಗೂ ರಾಷ್ಟ್ರದ ಮೇಲಿನ ಆಘಾತಗಳನ್ನು ಸಕ್ಷಮವಾಗಿ ತಡೆಗಟ್ಟದ ಕಾರಣ ಸನಾತನ ರಾಷ್ಟ್ರದ ಅವಶ್ಯಕತೆಯಿದೆ. ದೇಶದ ವಿಕಾಸ ಕೇವಲ ‘ಜಿಡಿಪಿ’ (ಒಟ್ಟು ದೇಶೀಯ ಉತ್ಪನ್ನ) ಅಥವಾ ‘ಟೆಕ್ನಾಲಾಜಿ’ (ತಂತ್ರಜ್ಞಾನ) ಯಿಂದ ಆಗುವುದಿಲ್ಲ, ಅದು ಧರ್ಮದಿಂದ ಆಗುತ್ತದೆ. (ಧರ್ಮೇಣ ಜಯತಿ ರಾಷ್ಟ್ರಮ್‌); ಆದ್ದರಿಂದಲೆ ಭಾರತೀಯ ಸಂಸ್ಕೃತಿಯಲ್ಲಿ ಸುವರ್ಣನಗರ ಲಂಕೆಯದ್ದಲ್ಲ, ಶ್ರೀರಾಮರ ರಾಮರಾಜ್ಯವನ್ನು ಪೂಜಿಸಲಾಗುತ್ತದೆ.

೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೂರದೃಷ್ಟಿ !

ಇಂದು ‘ಸನಾತನ’ದ ವಿಷಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚಿಸಲ್ಪಡುತ್ತಿದ್ದು ಹಿಂದೂ ರಾಷ್ಟ್ರದ ಬೇಡಿಕೆಯ ಧ್ವನಿ ಕೇಳಿಸುತ್ತಿದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇವಲ ೨೭ ವರ್ಷಗಳ ಹಿಂದೆ ಅಂದರೆ ಆ ಕಾಲದಲ್ಲಿ ಯಾರಿಗಾದರೂ ‘ಸನಾತನ’ ಈ ಶಬ್ದವಿರಲಿ, ಕೇವಲ ‘ಹಿಂದೂ’ ಈ ಶಬ್ದವನ್ನು ಉಚ್ಚರಿಸು ವುದು ಧೈರ್ಯದ ವಿಷಯವಾಗಿತ್ತು, ಇಂತಹ ವಾತಾವರಣದಲ್ಲಿ ‘ಈಶ್ವರೀ ರಾಜ್ಯದ ಸ್ಥಾಪನೆ’ ಈ ಗ್ರಂಥವನ್ನು ಬರೆದು ಅಧ್ಯಾತ್ಮ ಆಧಾರಿತ ರಾಷ್ಟ್ರ ರಚನೆಯ ಸಂಕಲ್ಪ ಮಾಡಿದ್ದರು. ಇದರಿಂದ ಸಂತರ ದೂರದೃಷ್ಟಿಯ ಅರಿವಾಗುತ್ತದೆ. ಇಷ್ಟರವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಧರ್ಮ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳಲ್ಲಿ ೩೮೦ ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ಸಂಕಲನ ಮಾಡಿದ್ದು ಭಾರತೀಯ ಸಂಸ್ಕೃತಿಯಲ್ಲಿನ ಕಲೆ-ವಿದ್ಯೆಯನ್ನು ಪುನರುಜ್ಜೀವನಗೊಳಿಸಲು ಅನೇಕ ಉಪಕ್ರಮಗಳನ್ನು ಆರಂಭಿಸಿದ್ದಾರೆ. ಹಿಂದುತ್ವದ ಮೇಲಿನ ಆಘಾತಗಳ ವಾರ್ತೆಗಳನ್ನು ದೂರ ದೂರದ ವರೆಗೆ ತಲುಪಿಸಲು ಅವರು ‘ಸನಾತನ ಪ್ರಭಾತ’ ಪ್ರಖರ ಹಿಂದುತ್ವನಿಷ್ಠ ನಿಯತಕಾಲಿಕೆಯನ್ನು ಆರಂಭಿಸಿದರು.

೫. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ

ಸನಾತನ ಸಂಸ್ಥೆಯ ರಜತ ಮಹೋತ್ಸವ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತದಲ್ಲಿ ಆಯೋಜಿಸಿದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಕೇವಲ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ ಅದು ಧರ್ಮ-ರಾಷ್ಟ್ರ ರಕ್ಷಣೆಯ ಒಂದು ಮಹತ್ವದ ಹಂತವಾಗಿದೆ. ಭಾರತದ ಉಜ್ಜಲ ಭವಿಷ್ಯದ ಶಂಖನಾದವಾಗಿದೆ.

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.