


‘ನಾವು ದಿನನಿತ್ಯದ ಆಹಾರದಲ್ಲಿ ವಿವಿಧ ಪ್ರಕಾರದ ಧಾನ್ಯಗಳನ್ನು, ಉದಾ. ಜೋಳ, ಸಜ್ಜೆ ಇತ್ಯಾದಿ; ದ್ವಿದಳ ಧಾನ್ಯಗಳನ್ನು, ಉದಾ. ಮಡಿಕೆ, ಅಲಸಂದೆ ಇತ್ಯಾದಿ ಮತ್ತು ಬೇಳೆಕಾಳುಗಳನ್ನು ಉದಾ. ತೊಗರಿಬೇಳೆ, ಹೆಸರುಬೇಳೆ ಇತ್ಯಾದಿಗಳನ್ನು ಉಪಯೋಗಿಸುತ್ತೇವೆ. ಕೆಲವು ಖಾದ್ಯಗಳಲ್ಲಿ, ಉದಾ. ಇಡ್ಲಿ ಮತ್ತು ದೋಸೆಗಳಲ್ಲಿ ಉದ್ದಿನ ಬೇಳೆಯನ್ನು ಉಪಯೋಗಿಸುತ್ತೇವೆ. ಕೆಲವು ಸಿಹಿತಿಂಡಿಗಳಲ್ಲಿ, ಉದಾ. ಹೋಳಿಗೆ ಇತ್ಯಾದಿಗಳಲ್ಲಿ ಕಡಲೆಬೇಳೆಯನ್ನು ಉಪಯೋಗಿಸುತ್ತೇವೆ. ಯಾವ ಋತುಗಳಲ್ಲಿ ಯಾವ ಆಹಾರವನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು, ಎನ್ನುವ ವಿಷಯದಲ್ಲಿ ಆಹಾರ ತಜ್ಞರು ಮಾರ್ಗದರ್ಶನ ಮಾಡುತ್ತಾರೆ. ಹಾಗೆಯೇ ಯಾವ ಋತುವಿನಲ್ಲಿ ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ಸಹ ಅವರು ತಿಳಿಸುತ್ತಾರೆ. ವೈದ್ಯರು ರೋಗಿಗಳಿಗೆ ಇರುವ ಕಾಯಿಲೆಗಳ ಪ್ರಕಾರ (ಕಫ, ವಾತ ಮತ್ತು ಪಿತ್ತ ಎಂಬ ತ್ರಿದೋಷಗಳ ಹೆಚ್ಚಳದಿಂದ ಉಂಟಾಗುವ ವಿವಿಧ ರೀತಿಯ ಕಾಯಿಲೆಗಳು), ಅವರು ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ? ಈ ವಿಷಯದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ವಿವಿಧ ರೀತಿಯ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳಿಂದ ಪ್ರಕ್ರೇಪಿಸುವ ಸ್ಪಂದನಗಳನ್ನು ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಕೆಲವು ಸಂಶೋಧನೆಗಳನ್ನು ಮಾಡಲಾಯಿತು. ಈ ಪರೀಕ್ಷೆಗಳಿಗೆ ಲೋಲಕವನ್ನು ಬಳಸಲಾಯಿತು. ಲೋಲಕದಿಂದ ವಸ್ತುಗಳ, ಕಟ್ಟಡಗಳ ಮತ್ತು ಜನರ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಬಹುದು. ಈ ಸಂಶೋಧನೆಯನ್ನು ಕೆಳಗೆ ನೀಡಲಾಗಿದೆ.

೧. ವಿವಿಧ ರೀತಿಯ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳ ನೊಂದಣಿ
ಈ ಪ್ರಯೋಗದಲ್ಲಿ, ಕೆಲವು ಆಯ್ದ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳ ಮೇಲೆ ಲೋಲಕ ಪರೀಕ್ಷೆಗಳನ್ನು ನಡೆಸಲಾಯಿತು. ಅವರ ದಾಖಲೆಗಳನ್ನು ಕೆಳಗೆ ನೀಡಲಾಗಿದೆ.

ಮೇಲಿನ ಅಂಕಿಅಂಶಗಳಿಂದ ಈ ಕೆಳಗಿನ ವಿಷಯಗಳು ಗಮನಕ್ಕೆ ಬರುತ್ತವೆ.
ಅ. ಸಜ್ಜೆ ಮತ್ತು ಜೋಳ ಎರಡರಲ್ಲೂ ಯಾವುದೇ ನಕಾರಾತ್ಮಕ ಶಕ್ತಿ ಕಂಡುಬರಲಿಲ್ಲ. ಸಜ್ಜೆಗಿಂತ ಜೋಳವು ಹೆಚ್ಚು ಸಕಾರಾತ್ಮಕ ಊರ್ಜೆಯನ್ನು ಹೊಂದಿದೆ.
ಆ. ಚೆನ್ನಂಗಿ ಕಾಳು ನಕಾರಾತ್ಮಕ ಮತ್ತು ಸಕಾರಾತ್ಮಕ ಈ ಎರಡೂ ಊರ್ಜೆಗಳನ್ನು ಹೊಂದಿದೆ. ಮಡಿಕೆ ಕಾಳು ಮತ್ತು ಅಲಸಂದೆ ಈ ದ್ವಿದಳ ಧಾನ್ಯಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿಲ್ಲ. ಚನ್ನಂಗಿ ಕಾಳು ಮತ್ತು ಮಡಿಕೆಕಾಳಿಗಿಂತ ಅಲಸಂದೆಯಲ್ಲಿ ಸಕಾರಾತ್ಮಕ ಅಧಿಕ ಊರ್ಜೆ ಇದೆ.

ಇ. ಚನ್ನಂಗಿ ಮತ್ತು ಕಡಲೆ ಬೇಳೆಗಳು ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಊರ್ಜೆಗಳನ್ನು ಹೊಂದಿವೆ. ತೊಗರಿಬೇಳೆ, ಕಡಲೆಬೇಳೆ ಮತ್ತು ಹೆಸರುಬೇಳೆಗಳಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಕಂಡುಬರಲಿಲ್ಲ. ತೊಗರಿಬೇಳೆಯಲ್ಲಿ ಅತಿ ಕನಿಷ್ಠ ಪ್ರಮಾಣದ ಸಕಾರಾತ್ಮಕ ಊರ್ಜೆ ಇದೆ. ಹೆಸರುಬೇಳೆ ಅತ್ಯಧಿಕ ಪ್ರಮಾಣದ ಸಕಾರಾತ್ಮಕ ಊರ್ಜೆಯೈನ್ನು ಹೊಂದಿದೆ.
ಈ ಸಂಶೋಧನೆಯಿಂದ ವಿವಿಧ ರೀತಿಯ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳು ಸಕಾರಾತ್ಮಕ ಸ್ಪಂದನಗಳನ್ನು ಹೊಂದಿವೆ; ಆದರೆ ಅವುಗಳ ಪ್ರಮಾಣ ವಿಭಿನ್ನವಾಗಿದೆ.
– ಸೌ. ಮಧುರ ಧನಂಜಯ ಕರ್ವೆ, ಮಹರ್ಷಿ ಆಧ್ಯಾತ್ಮಿಕ ವಿಶ್ವವಿದ್ಯಾಲಯ, ಗೋವಾ. (೧೨.೦೨.೨೦೨೫)
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನಲ್ಲಿ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಈಶ್ವರಪ್ರಾಪ್ತಿಗಾಗಿ ಸಂಗೀತ-ಸಾಧನಾ ಶಿಬಿರ’ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ