೧. ಕಳೆದ ೩೮ ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ತಮಿಳು ಮಹಿಳೆಯಿಂದ ಪೌರತ್ವಕ್ಕಾಗಿ ಅರ್ಜಿ
೧೯೮೪ ರಲ್ಲಿ ಸರ್ವನಮುತ್ತು ಮತ್ತು ತಮಿಳ ಸೆಲ್ವಿ ಈ ದಂಪತಿಯರು ಶ್ರೀಲಂಕಾದಿಂದ ಭಾರತಕ್ಕೆ ನೆಲೆಸಲು ಬಂದರು. ಸರ್ವನಮುತ್ತು ಅವರ ತಂದೆ ಪಳನಿವೇಲ ಭಾರತೀಯರಾಗಿದ್ದು, ಅವರು ಪುದುಕೊಟ್ಟೈ ನಿವಾಸಿಯರಾಗಿದ್ದಾರೆ. ಶ್ರೀಲಂಕಾದಲ್ಲಿ ‘ಸಿಂಹಳೀಯರ ವಿರುದ್ಧ ತಮಿಳರು’ ಎಂಬ ಸಂಘರ್ಷವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಆಗ ಭಯದಿಂದ ಅವರು ಭಾರತಕ್ಕೆ ಬಂದರು ಮತ್ತು ಅವರಿಗೆ ‘ಇಲ್ಲಿ ನಿರಾಶ್ರಿತರ ಸ್ಥಾನಮಾನ ಸಿಕ್ಕಿತ್ತು’ ಎಂದು ಈ ದಂಪತಿ ಹೇಳಿದ್ದಾರೆ.
೨೪.೧೨.೧೯೮೭ ರಂದು ಅವರಿಗೆ ಎಸ್. ರಾಮ್ಯಾ ಎಂಬ ಮಗಳು ಜನಿಸಿದಳು. ಕೊಯಂಬತ್ತೂರು ಮಹಾನಗರ ಪಾಲಿಕೆಯು ಆಕೆಯ ಜನನ ಪ್ರಮಾಣಪತ್ರವನ್ನು ನೀಡಿದೆ. ಆಕೆಗೆ ಭಾರತೀಯ ಪೌರತ್ವ ಸಿಗಬೇಕು ಎಂದು ಅವರು ಚೆನ್ನೈನ ‘ವಿದೇಶಿಯರ ಪ್ರಾದೇಶಿಕ ಕಚೇರಿ’ಗೆ (ವಿದೇಶಿ ನೋಂದಣಿ ಕಚೇರಿಗೆ) ಭಾರತೀಯ ಪೌರತ್ವ ಕಾಯ್ದೆ ಕಲಂ ೫ (೧) (ಸಿ) ಮತ್ತು ೬ ರ ಪ್ರಕಾರ ಅರ್ಜಿ ಸಲ್ಲಿಸಿದರು.
೨. ಪೌರತ್ವಕ್ಕಾಗಿ ತಮಿಳುನಾಡು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ
ಮುಂದೆ ಅವರು ತಮಿಳುನಾಡು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಅದರಲ್ಲಿ ಅವರು ಎಸ್. ರಾಮ್ಯಾ ಅವರ ತಾಯಿಗೆ ಚುನಾವಣಾ ಪತ್ರದೊಂದಿಗೆ ಇತರ ಗುರುತಿನ ಚೀಟಿಗಳು ಲಭಿಸಿವೆ ಎಂದು ಹೇಳಿದ್ದಾರೆ. ರಾಮ್ಯಾ ಇವಳು ಕೊಯಂಬತ್ತೂರು ಮಹಿಳಾ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾಳೆ. ಅವಳು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ಕೊಯಂಬತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳ ವಿವಾಹವು ೧೨.೨.೨೦೧೪ ರಂದು ನಡೆದಿದ್ದು, ಅವಳಿಗೆ ಪಿ.ಆರ್. ರುದ್ರನ್ ಹೆಸರಿನ ಮಗನಿದ್ದಾನೆ. ಪ್ರಸ್ತುತ ಅವನು ೯ ವರ್ಷ ವಯಸ್ಸಿನವನಾಗಿದ್ದು, ಕೊಯಂಬತ್ತೂರಿನ ಶಾಲೆಯಲ್ಲಿ ಓದುತ್ತಿದ್ದಾನೆ.

ರುದ್ರನ್ ಇವನಿಗೆ ಭಾರತೀಯ ಪೌರತ್ವ ಸಿಕ್ಕಿಲ್ಲ. ‘೧.೭.೧೯೮೭ ರ ನಂತರ ಜನಿಸಿದ ವ್ಯಕ್ತಿಗಳಿಗೆ ಭಾರತೀಯ ಪೌರತ್ವ ಪಡೆಯಬೇಕಾದರೆ, ಅವರ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿರಬೇಕು’, ಹೀಗಿದ್ದಲ್ಲಿ ಆ ಅರ್ಜಿಯನ್ನು ಪರಿಗಣಿಸಬಹುದು. ಈ ಪ್ರಕರಣದಲ್ಲಿ ಅಧಿಕಾರಿಗಳು ‘ಅರ್ಜಿದಾರರು ತಮ್ಮ ಮಗನೊಂದಿಗೆ ಶ್ರೀಲಂಕಾಕ್ಕೆ ಹೋಗಬೇಕು. ಅಲ್ಲಿಂದ ಭಾರತೀಯ ‘ವೀಸಾ’ ಪಡೆದುಕೊಂಡು ಭಾರತಕ್ಕೆ ಬರಬೇಕು. ನಂತರ ಅವರ ಪೌರತ್ವ ಕಾನೂನಿನ ಬಗ್ಗೆ ವಿಚಾರ ಮಾಡಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಪೌರತ್ವ ಕಾಯ್ದೆ’ ಕಲಂ ೫ ರ ಪ್ರಕಾರ, ಯಾರು ಅಧಿಕೃತವಾಗಿ ಭಾರತಕ್ಕೆ ಬಂದಿದ್ದು, ಭಾರತದಲ್ಲಿ ವಾಸಿಸಲು ‘ವೀಸಾ’ ಪಡೆದಿದ್ದಾರೋ, ಅಂತಹ ನಾಗರಿಕರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಉಚ್ಚ ನ್ಯಾಯಾಲಯದ ಅರ್ಜಿಯಲ್ಲಿ, ಅರ್ಜಿದಾರಳು ೨೪.೧೨.೧೯೮೭ ರಂದು ಜನಿಸಿದಳು ಎಂದು ಹೇಳಲಾಗಿದೆ. ಆದ್ದರಿಂದ ಈಗ ಶ್ರೀಲಂಕಾ ಸರಕಾರವೂ ಅವಳನ್ನು ಸ್ವೀಕರಿಸುವು ದಿಲ್ಲ ಅಥವಾ ಪೌರತ್ವವನ್ನು ನೀಡುವುದಿಲ್ಲ. ಕಳೆದ ೩೭ ವರ್ಷಗಳಿಂದ ಅವಳು ಭಾರತದಲ್ಲಿ ವಾಸಿಸುತ್ತಿದ್ದಾಳೆ. ಅವಳು ಭಾರತೀಯ ಯುವಕನನ್ನು ವಿವಾಹವಾಗಿದ್ದಾಳೆ. ಅವನಿಂದ ಅವಳಿಗೆ ೯ ವರ್ಷದ ಮಗನಿದ್ದಾನೆ. ಅವಳು ಕಾನೂನುಬದ್ಧವಾಗಿ ಇಲ್ಲಿ ಶಿಕ್ಷಣ ಪಡೆದು ಉದ್ಯೋಗವನ್ನೂ ಮಾಡಿದ್ದಾಳೆ. ಇದನ್ನು ಗಮನದಲ್ಲಿಟ್ಟುಕೊಂಡು ಅವಳ ಅರ್ಜಿಯನ್ನು ಪರಿಗಣಿಸುವುದು ಸೂಕ್ತವಾಗಿದೆ.
೩. ಪೌರತ್ವದ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಸರಕಾರದ ಆಧೀನ
ಉಚ್ಚ ನ್ಯಾಯಾಲಯವು ಪೌರತ್ವದ ನಿರ್ಣಯ ತೆಗೆದುಕೊಳ್ಳಲು ಈ ಅರ್ಜಿಯನ್ನು ಸರಕಾರಕ್ಕೆ ಕಳುಹಿಸಿದೆ. ಉಚ್ಚ ನ್ಯಾಯಾಲಯವು ನೀಡಿದ ಆದೇಶವು ಸದ್‌ಸದ್ವಿವೇಕ ಬುದ್ಧಿಯಿಂದ ತೆಗೆದುಕೊಂಡ ದ್ದಾಗಿದೆ. ಕೊನೆಗೆ ಪ್ರಕರಣವನ್ನು ಸರಕಾರಕ್ಕೆ ವರ್ಗಾಯಿಸಲಾಗಿದೆ. ಇದರಲ್ಲಿ ಅಸಮರ್ಪಕವಾದದ್ದೇನೂ ಇಲ್ಲ; ಆದರೆ ಈ ವಿಷಯದ ಮೇಲೆ ಇತರ ನ್ಯಾಯಾಲಯಗಳ ತೀರ್ಪುಗಳು ದುಃಖ ದಾಯಕವಾಗಿವೆ. ಆದ್ದ ರಿಂದ ಸೂಕ್ತ ತೀರ್ಪು ನಿರೀಕ್ಷಿಸಲಾಗಿದೆ.
೪. ಭಾರತದಲ್ಲಿ ಅನಧಿಕೃತವಾಗಿ ವಾಸಿಸುವ ನುಸುಳುಕೋರರ ಮೇಲೆ ನ್ಯಾಯಾಲಯದ ಕೃಪಾದೃಷ್ಟಿ
ಈ ಪ್ರಕರಣದಲ್ಲಿನ ಅರ್ಜಿದಾರರು ಹಿಂದೂ ಆಗಿದ್ದು, ಅವರು ಭಾರತದಲ್ಲಿ ಪ್ರವೇಶಿಸುವಾಗ ಸುಳ್ಳು ಹೇಳಿಲ್ಲ. ಅವರ ತಂದೆಯೂ ಭಾರತೀಯ ನಾಗರಿಕರಾಗಿದ್ದಾರೆ. ತದ್ವಿರುದ್ಧವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್‌ನಿಂದ ಕೋಟ್ಯಂತರ ನುಸುಳುಕೋರ ಮುಸಲ್ಮಾನರು ಭಾರತಕ್ಕೆ ಅನಧಿಕೃತವಾಗಿ ಪ್ರವೇಶ ಪಡೆದು ಎಲ್ಲಾ ರೀತಿಯ ಗುರುತಿನ ಚೀಟಿಗಳನ್ನು ಪಡೆದುಕೊಂಡು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳು ಸಿಗಬೇಕು, ಅವರಿಗೆ ಶಾಲೆಯಲ್ಲಿ ಪ್ರವೇಶ ಸಿಗಬೇಕು ಎಂದು ಇಲ್ಲಿನ ಪ್ರಗತಿಪರ ಉಚ್ಚ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ವರೆಗೆ ಅರ್ಜಿ ಸಲ್ಲಿಸುತ್ತಾರೆ. ನಂತರ ‘ಅಲ್ಪಸಂಖ್ಯಾತ ಮಕ್ಕಳ ಪೋಷಕರು ಭಾರತದಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದರೂ, ಅವರ ಮಕ್ಕಳ ಭವಿಷ್ಯವನ್ನು ನ್ಯಾಯಾಲಯವು ನಿರ್ಲಕ್ಷಿಸಲಾರದು’, ಎಂಬ ವಿಶಾಲ ದೃಷ್ಟಿಕೋನದಿಂದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅಂತಹ ಅನಧಿಕೃತವಾಗಿ ಭಾರತದಲ್ಲಿ ವಾಸಿಸುವ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ದೇಶದಿಂದ ಹೊರಹಾಕಬೇಕು ಹಾಗೂ ಅವರಿಗೆ ಭಾರತದ ಗುರುತಿನ ಚೀಟಿಗಳನ್ನು ಕೊಡಿಸುವವರ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು.’
ಶ್ರೀಕೃಷ್ಣಾರ್ಪಣಮಸ್ತು
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೩.೪.೨೦೨೫)

ಮಾಲೆಗಾಂವ್ ನಲ್ಲಿ ಬಕ್ರೀದ್ ಸಂದರ್ಭದಲ್ಲಿ 906 ಗೋವುಗಳಿಗೆ ಜೀವದಾನ : 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲು !
ರಾಜ್ಯ ಸರಕಾರದ ‘ದ್ವೇಷಪೂರಿತ ಭಾಷಣ ಪ್ರತಿಬಂಧಕ ಮಸೂದೆ’ಗೆ ಒಪ್ಪಿಗೆ ನೀಡಲು ಕೇಂದ್ರ ಗೃಹ ಸಚಿವಾಲಯದ ನಿರಾಕರಣೆ
ಪ್ರಾಣಿಗಳ ಬಲಿಯ ಮೇಲಿನ ನಿಷೇಧಕ್ಕೆ ಆಕ್ಷೇಪವಿದ್ದರೆ, ಇಸ್ಲಾಮಿಕ್ ದೇಶಕ್ಕೆ ಹೊರಟು ಹೋಗು!
Bengal Bakri Eid : ಬಂಗಾಳದಲ್ಲಿ ಈ ಬಾರಿ ಬಕ್ರೀದ್ ಹಬ್ಬಕ್ಕೆ ಕೇವಲ ಒಂದು ದಿನದ ರಜೆ!
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಹಿಂದೂ ದೇವಸ್ಥಾನಗಳ ಅಸ್ತಿತ್ವಕ್ಕೆ ಧಕ್ಕೆ ತರುವ ‘ಇನಾಂ ನಿರ್ಮೂಲನೆ ಕಾಯ್ದೆ’ಯನ್ನು ಕೂಡಲೇ ಹಿಂಪಡೆಯಿರಿ, ಇಲ್ಲದಿದ್ದರೆ ಜನಾಂದೋಲನ ಮಾಡಲಾಗುವುದು!