ಚಳಿಗಾಲದ ಅಧಿವೇಶನದಲ್ಲಿ ‘ಏಕರೂಪ ನಾಗರೀಕ ಸಂಹಿತೆ’ಯ ಮಸೂದೆ ತರಲಿದ್ದೇವೆ ! – CM Devendra Fadnavis

ಮುಂಬಯಿ, ಜುಲೈ ೯ (ವಾರ್ತೆ.) – ನಾಗಪುರದಲ್ಲಿ ಬರಲಿರುವ ಚಳಿಗಾಲದ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆಯ ವಿಧೇಯಕವನ್ನು ತರಲು ಪ್ರಯತ್ನಿಸುತ್ತೇವೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ ರವರು ಜುಲೈ ೯ ರಂದು ವಿಧಾನಸಭೆಯಲ್ಲಿ ನೀಡಿದರು. ಈ ಕಾನೂನಿನ ಮಸೂದೆಯನ್ನು ಸಿದ್ಧಪಡಿಸಲು ನೇಮಕ ಮಾಡಲಾದ ಸಮಿತಿಯ ವಿವರಗಳನ್ನು ಮುಖ್ಯಮಂತ್ರಿಗಳು ನೀಡಿದರು.

ಸಂವಿಧಾನದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ನಿರ್ದೇಶನಗಳನ್ನು ನೀಡಲಾಗಿದೆ. ೨೦೨೬ ರ ಬಜೆಟ್ ಅಧಿವೇಶನದಲ್ಲಿ ಈ ಕಾನೂನಿಗಾಗಿ ಸಮಿತಿಯನ್ನು ರಚಿಸುವುದಾಗಿ ಘೋಷಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ರವರ ಅಧ್ಯಕ್ಷತೆಯಲ್ಲಿ ೭ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಮುಂಬಯಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಆರ್.ಸಿ. ಚವ್ಹಾಣ, ಮುಂಬಯಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್.ಜಿ. ಮೆಹೆರೆ, ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಡಿ.ಕೆ. ಜೈನ್, ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್ ವೀರೇಂದ್ರ ಸರಾಫ್, ಸಂವಿಧಾನ ತಜ್ಞ ಪದ್ಮಶ್ರೀ ರಮೇಶ ಪತಂಗೆ, ಶಿಕ್ಷಣ ತಜ್ಞೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾದ ಡಾ. ಸುವರ್ಣ ರಾವಲ ರವರು ಸೇರಿದ್ದಾರೆ ಎಂದು ದೇವೇಂದ್ರ ಫಡ್ನವಿಸರವರು ಈ ಸಂದರ್ಭದಲ್ಲಿ ಹೇಳಿದರು.