|
ಕೊಲಕಾತಾ (ಬಂಗಾಳ) – ಬಂಗಾಳ ಪೊಲೀಸರು ಅಂಜನಿ ಪುತ್ರ ಸೇನಾ, ವಿಶ್ವ ಹಿಂದೂ ಪರಿಷತ ಮತ್ತು ದುರ್ಗಾವಾಹಿನಿ ಈ ಹಿಂದೂ ಸಂಘಟನೆಗಳಿಗೆ ಹಾವಡಾದಲ್ಲಿ ಶ್ರೀರಾಮನವಮಿ ನಿಮಿತ್ತ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿದ ನಂತರ, ಈ ಸಂಘಟನೆಗಳು ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದವು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಮೆರವಣಿಗೆಗೆ ಷರತ್ತುಬದ್ಧ ಅನುಮತಿ ನೀಡಿದೆ.
1. ನ್ಯಾಯಾಲಯವು ಅನುಮತಿ ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ. ಇದರಲ್ಲಿ ಹಾವಡಾದ ಹಳೆಯ ಮಾರ್ಗದಲ್ಲಿ ಶ್ರೀರಾಮನವಮಿ ಮೆರವಣಿಗೆ ನಡೆಸಬಹುದು; ಆದರೆ ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶವಿರುವುದಿಲ್ಲ. ಇದರೊಂದಿಗೆ ದ್ವಿಚಕ್ರ ವಾಹನ ಜಾಥಾ ಆಯೋಜಿಸಲು ಸಾಧ್ಯವಿಲ್ಲ, ಮತ್ತು ಮೆರವಣಿಗೆ ನಡೆಸುವವರು ಪೊಲೀಸರ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.
2. ಹಾವಡಾದಲ್ಲಿ ಕಳೆದ 15 ವರ್ಷಗಳಿಂದ ಶ್ರೀರಾಮನವಮಿಗೆ ಮೆರವಣಿಗೆ ನಡೆಸುವ ಸಂಪ್ರದಾಯವಿದೆ; ಆದರೆ ಕಳೆದ 2 ವರ್ಷಗಳಿಂದ ಈ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದ್ದರಿಂದ ಸುರಕ್ಷತೆಯ ಕಾರಣಗಳಿಗಾಗಿ ಪೊಲೀಸರು ಜಿ.ಟಿ. ಮಾರ್ಗದಲ್ಲಿ ಮೆರವಣಿಗೆಗೆ ಅನುಮತಿ ನೀಡಲು ನಿರಾಕರಿಸಿದರು.
3. ಹಿಂದೂ ಸಂಘಟನೆಗಳ ಕಾರ್ಯಕರ್ತರ ಪ್ರಕಾರ, ಆಡಳಿತವು ಸತತ ಎರಡನೇ ವರ್ಷ ಮೆರವಣಿಗೆಯನ್ನು ನಿಷೇಧಿಸಿದೆ. ರಾಜ್ಯ ಸರಕಾರಕ್ಕೆ ‘ಜೈ ಶ್ರೀರಾಮ್’ ಘೋಷಣೆಯ ಬಗ್ಗೆ ಏನಾದರೂ ತೊಂದರೆ ಇದೆಯೇ?
4. ಆದಾಗ್ಯೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶ್ರೀರಾಮನವಮಿ ಸಮಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಎಲ್ಲರಿಗೂ ಪೂಜೆ ಮಾಡುವ ಹಕ್ಕಿದೆ; ಆದರೆ ಗಲಭೆಗಳು ಸಂಭವಿಸಬಾರದು ಎಂದು ಅವರು ಹೇಳಿದ್ದಾರೆ.
ಸಂಪಾದಕೀಯ ನಿಲುವು
|