
ಸತಿಪದ್ದತಿ (ಸಹಗಮನ ಪದ್ಧತಿ)ಯನ್ನು ಹೇಳಿದಾಗ ಹೆಚ್ಚಿನ ಜನರು, ಸತಿ ಸಹಗಮನ ಎಂದರೆ ಪತಿಯ ಮೃತ್ಯುವಿನ ನಂತರ ತಾವಾಗಿ ಅಥವಾ ಸಮಾಜದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪದ್ಧತಿ ! ಎಂದು ಹೇಳುತ್ತಾರೆ. ಈ ಪದ್ಧತಿಯು ಯಾವಾಗ ಪ್ರಾರಂಭವಾಯಿತು ಮತ್ತು ಏಕಾಯಿತು ? ಎಂಬುದರ ಬಗ್ಗೆ ವಿಚಾರ ಮಾಡುವುದು ಆವಶ್ಯಕವಾಗಿದೆ. ಇಂದಿನ ಲೇಖನದ ಮಾಧ್ಯಮದಿಂದ ಸತಿ ಪದ್ಧತಿಯ ಬಗ್ಗೆ ಬ್ರಿಟಿಷರು ಹೇಗೆ ಅಪಪ್ರಚಾರ ಮಾಡಿದರು ಮತ್ತು ವಸ್ತುಸ್ಥಿತಿ ಏನಿದೆ ? ಎಂಬುದನ್ನು ತಿಳಿದುಕೊಳ್ಳಲಿದ್ದೇವೆ.
೧. ಬ್ರಿಟಿಷರು ಮಾಡಿದ ಇತಿಹಾಸದ ವಿಕೃತೀಕರಣ
ಸದ್ಯದ ಶಿಕ್ಷಣಪದ್ಧತಿಯನ್ನು ಭಾರತೀಯರು ರಚಿಸಲಿಲ್ಲ, ಅದನ್ನು ಬ್ರಿಟಿಷರು ರಚಿಸಿದ್ದಾರೆ. ನಾವು ನಮ್ಮ ಇತಿಹಾಸದಿಂದ ದೂರವಾಗಬೇಕು, ಎಂದು ಅವರು ಅಷ್ಟೊಂದು ಜಾಣ್ಮೆಯಿಂದ ಈ ಶಿಕ್ಷಣಪದ್ಧತಿಯನ್ನು ರಚಿಸಿದ್ದಾರೆ. ತಮ್ಮ ಶಿಕ್ಷಣಪದ್ಧತಿಯ ಬಗ್ಗೆ ಅವರಿಗೆ ಎಷ್ಟೊಂದು ನಂಬಿಕೆ ಇತ್ತೆಂದರೆ, ಮ್ಯಾಕ್ಸ್‌ಮುಲ್ಲರ್ ಇವನು ಅತ್ಯಂತ ನಂಬಿಕೆಯಿಂದ, ಭಾರತವನ್ನು ಒಮ್ಮೆ ಗೆದ್ದುಕೊಂಡೆವು; ಆದರೆ ಈಗ ಎರಡನೇ ಬಾರಿ ಶಿಕ್ಷಣದ ಮಾಧ್ಯಮದಿಂದ ಭಾರತವನ್ನು ಗೆಲ್ಲಬೇಕು’ ಎಂದು ಹೇಳಿದ್ದನು. ನಮ್ಮಲ್ಲಿ ನಮ್ಮ ಇತಿಹಾಸ ಅಥವಾ ನಮ್ಮ ಸಂಸ್ಕೃತಿಯ ಬಗ್ಗೆ ಇಷ್ಟೊಂದು ಅಜ್ಞಾನ ಏಕಿದೆ ? ಈ ರೀತಿ ಇತಿಹಾಸದ ವಿಕೃತೀಕರಣ ಮಾಡಿದ ಒಂದು ಉದಾಹರಣೆ ಎಂದರೆ ಸತಿ ಪದ್ಧತಿ !
೨. ಸತಿ ಪದ್ಧತಿಯ ಬಗ್ಗೆ ಬ್ರಿಟಿಷರು ಮಾಡಿದ ವಿಶ್ಲೇಷಣೆ
ಬ್ರಿಟಿಷರ ಪ್ರಕಾರ, ಸತಿ ಪದ್ಧತಿಯು ಒಂದು ಬೇರೆಯೇ ಪದ್ದತಿಯಾಗಿದೆ, ಪತಿಯ ಮೃತ್ಯುವಿನ ನಂತರ ವಿಧವೆಗೆ ಬದುಕುವ ಹಕ್ಕು ಇಲ್ಲವೆಂದು ಅವರನ್ನು ಬೆಂಕಿಯಲ್ಲಿ ನೂಕಿ ಆತ್ಮಹತ್ಯೆ ಮಾಡಿಕೊಳ್ಳಲು ಒತ್ತಾಯಿಸಲಾಗುತ್ತಿತ್ತು. ಇದರ ವಿರುದ್ಧ ವಿಲಿಯಮ್ ಕ್ಯಾರಿ ಮತ್ತು ರಾಮಮೋಹನ ರೈ ಇದ್ದರು. ಬ್ರಿಟಿಷರ ಪ್ರಕಾರ ಸತಿ ಈ ಪದ್ಧತಿಯು ಹೆಚ್ಚಾಗಿ ಬಂಗಾಳದಲ್ಲಿತ್ತು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಬಂಗಾಳದ ಸಂಸ್ಕೃತಿಯಲ್ಲಿ ಸತಿ ಈ ಪದ್ಧತಿಯು ಅಸ್ತಿತ್ವದಲ್ಲಿಯೇ ಇರಲಿಲ್ಲ. ಸತಿ ಪದ್ಧತಿಯು ರಾಜಸ್ಥಾನದಲ್ಲಿ ಕಂಡುಬರುತ್ತಿತ್ತು. ಭಾರತೀಯ ಇತಿಹಾಸ ಸಂಶೋಧಕಿ ಮೀನಾಕ್ಷಿ ಜಂಜಿ ಇವರು ಬ್ರಿಟಿಷರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಈ ವಿಷಯದ ಬಗ್ಗೆ ಕೇವಲ ವಿಶ್ಲೇಷಣೆ ಮಾಡದೇ, ಯೋಗ್ಯ ಸಂಶೋಧನೆಯನ್ನು ಮಾಡಿ ತಮ್ಮ ತೀರ್ಮಾನವನ್ನು ಮಂಡಿಸಿದ್ದಾರೆ.
೩. ಬ್ರಿಟಿಷರಿಂದ ಸತಿ ಪದ್ಧತಿಯ ಬಗೆಗಿನ ಅಪಪ್ರಚಾರ
ಆ ಸಮಯದಲ್ಲಿ ಯುರೋಪಿನಿಂದ ಭಾರತಕ್ಕೆ ಬಂದ ಪ್ರವಾಸಿಗರು, ಭಾರತದಲ್ಲಿ ಸತಿ ಇದೊಂದು ವಿಶಿಷ್ಟ ಆಚರಣೆಯಾಗಿದೆ ಎಂದು ಬರೆದರು. ಹೆಚ್ಚಿನ ಪ್ರವಾಸಿಗರು ಇದೇ ಅಂಶವನ್ನು ಪುನಃ ಪುನಃ ಬರೆದರು. ಆದ್ದರಿಂದ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ತ್ರೀಯರು ಸತಿ ಹೋಗುತ್ತಾರೆ, ಎಂಬ ನಂಬಿಕೆಯು ಸಮಾಜದಲ್ಲಿ ನಿರ್ಮಾಣವಾಯಿತು. ಇದರ ಹಿಂದೆ ಬ್ರಿಟಿಷ್ ಮಿಷನರಿಗಳು ತಮ್ಮ ಆಡತಳಿತಗಾರರಿಗೆ ‘ಭಾರತವು ಅಯೋಗ್ಯ ಪದ್ಧತಿಗಳನ್ನು ಹೊಂದಿದ ದೇಶವಾಗಿದೆ ಮತ್ತು ಇಲ್ಲಿ ಮಿಷನರಿಗಳ ಅಗತ್ಯವಿದೆ,’ ಎಂದು ತೋರಿಸಲು ಪ್ರಯತ್ನಿಸಿದರು. ಆದ್ದರಿಂದ ಅವರು ಸತಿ ಸಹಗಮನ ಸಂಖ್ಯೆಯು ೫೦ ಸಾವಿರ ಅಥವಾ ಒಂದು ಲಕ್ಷದಷ್ಟಿದೆ, ಎಂದು ಮಂಡಿಸಿದರು. ವಾಸ್ತವದಲ್ಲಿ ಭಾರತದಲ್ಲಿ ಸತಿ ಸಹಗಮನದ ಸಂಖ್ಯೆಯು ತುಂಬಾ ಕಡಿಮೆ ಇದೆ. ಈ ಅಂಕಿಅಂಶವು ಬಂಗಾಳದಲ್ಲಿದೆ, ಎಂದು ಹೇಳಲಾಗಿದೆ. ಆದರೆ ಬಂಗಾಳದಲ್ಲಿ ಸತಿ ಸಹಗಮನ ಪದ್ಧತಿ ಇಲ್ಲ. ಸತಿ ಮತ್ತು ಜೋಹಾರ ಇವು ಮೂಲತಃ ರಾಜಸ್ಥಾನದಲ್ಲಿವೆ. ಸ್ವಾತಂತ್ರ್ಯದ ನಂತರ ಸಂಪೂರ್ಣ ಭಾರತದಲ್ಲಿ ಸತಿ ಸಹಗಮನದ ಸಂಖ್ಯೆಯು ೪೦ ರಷ್ಟಿತ್ತು ಮತ್ತು ಅದರಲ್ಲಿ ಮೂರನೇ ಎರಡರಷ್ಟು ಸಂಖ್ಯೆಯು ರಾಜಸ್ಥಾನದಲ್ಲಿತ್ತು. ಆದ್ದರಿಂದ ‘ಬಂಗಾಳದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಲಾಗಿದೆ’, ಎಂದು ಯಾವಾಗ ಬೆಂಟಿಕ್ ಆದೇಶ ಹೊರಡಿಸಿದನೋ, ಮರುದಿನದಿಂದಲೇ ಬಂಗಾಳದಲ್ಲಿ ಸತಿಯ ಪದ್ಧತಿಯನ್ನು ನಿಲ್ಲಿಸಲಾಯಿತು.
೪. ಮಹಿಳೆಯರು ಸತಿ ಸಹಗಮನ ಏಕೆ ಹೋಗುತ್ತಿದ್ದರು ?
ಮೊಘಲರು ಅಥವಾ ಬ್ರಿಟಿಷರು ನಮ್ಮ ಮೇಲೆ ಯಾವಾಗ ದಾಳಿ ಮಾಡುತ್ತಿದ್ದರೋ, ಆಗ ರಾಜ್ಯದಲ್ಲಿನ ರಾಜನನ್ನು ಕೊಂದ ನಂತರ ಅವನ ಪತ್ನಿಯರ ಮೇಲೆ ಅತ್ಯಾಚಾರ ಮಾಡಿ ಅವರನ್ನು ಹೊಡೆಯುತ್ತಿದ್ದರು ಅಥವಾ ಅವರನ್ನು ಮಾರಾಟ ಮಾಡಲಾಗುತ್ತಿತ್ತು. ಈ ರೀತಿಯಲ್ಲಿ ಆ ಕಾಲದ ರಾಜ್ಯದಲ್ಲಿ, ಯುದ್ಧದಲ್ಲಿ ರಾಜನು ಸತ್ತರೆ, ಅವನ ಪತ್ನಿಯು ಮೊಗಲರ ವಶಕ್ಕೆ ಹೋಗುವುದಕ್ಕಿಂತ ಭಾವಿಗೆ ಹಾರಿ ಅಥವಾ ತನ್ನನ್ನು ಅಗ್ನಿಯಲ್ಲಿ ಸುಟ್ಟುಕೊಂಡು ತನ್ನ ಜೀವನವನ್ನು ಮುಗಿಸಬೇಕು ಎಂಬ ವಿಚಾರ ಮಾಡಿದರು. ಈ ರೀತಿ ಸಾಯುವವರಿಗೆ ಒಂದು ರೀತಿಯಲ್ಲಿ ಗೌರವಾನ್ವಿತರು ಎಂದು ನಂಬಲಾಗುತ್ತಿತ್ತು. ರಾಜಸ್ಥಾನದಲ್ಲಿ ಬೆಂಕಿಯಲ್ಲಿ ಸುಟ್ಟುಕೊಳ್ಳುವುದಕ್ಕೆ ‘ಜೋಹಾರ್’ ಎಂದು ಕರೆಯುತ್ತಿದ್ದರು. ಇತಿಹಾಸದಲ್ಲಿ ಇದರ ಬಗ್ಗೆ ತುಂಬಾ ಉದಾಹರಣೆಗಳಿವೆ. ರಾಣಿ ಪದ್ಮಾವತಿಯು ಮಾಡಿದ ‘ಜೋಹಾರ’ ಪ್ರಸಿದ್ಧವಾಗಿದೆ. ಸಿಕ್ಖ್ ಪಂಥದಲ್ಲಿಯೂ ಇಂತಹ ಉದಾಹರಣೆಗಳಿವೆ. ಮಹಾರಾಜ ರಣಜಿತಸಿಂಹನು ಸಾವನ್ನಪ್ಪಿದಾಗ ಅವನ ಪತ್ನಿಯರು ಸತಿ ಹೋದರು. ವಾಸ್ತವದಲ್ಲಿ ಸಿಕ್ಖ್ ಪಂಥದ ಸತಿಯರಿಗೆ ಈ ಪದ್ಧತಿಯ ಯಾವುದೇ ಸಂಬಂಧವಿರಲಿಲ್ಲ. ಪಂಜಾಬದಲ್ಲಿಯೂ ಸತಿಯ ದೇವಸ್ಥಾನಗಳಿವೆ.
೫. ಸತಿ ಪದ್ಧತಿಯ ಬಗ್ಗೆ ಬ್ರಿಟಿಷರ ಷಡ್ಯಂತ್ರ !
ಈ ರೀತಿ ಕೇವಲ ಭಾರತದಲ್ಲಿಯೇ ಅಲ್ಲ, ಇತರ ದೇಶಗಳಲ್ಲಿಯೂ ನಡೆಯುತ್ತಿತ್ತು. ಜಪಾನಿನಲ್ಲಿ ಸಾಮುರಾಯೀ ಸಂಸ್ಕೃತಿಯಲ್ಲಿ ‘ಸೆಬುಕು’ ಎಂಬ ಒಂದು ಪದ್ಧತಿ ಇದೆ, ಅದನ್ನು ಪ್ರತಿಯೊಬ್ಬರಿಗೂ ಕಲಿಸಲಾಗುತ್ತಿತ್ತು. ಅದಕ್ಕನುಸಾರ ಕೇವಲ ಮಹಿಳೆಯರೇ ಅಲ್ಲ, ಪುರುಷರೂ ಸಮಯ ಬಂದಾಗ ತಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಯಾವಾಗ ವಿಲಿಯಮ್ ಬೆಂಟಿಕ್ ಇವನು ‘ಸತಿಯ ಪದ್ಧತಿಯು ಒಂದು ವಿಶಿಷ್ಟ ಪದ್ದತಿ ಮತ್ತು ಕೆಟ್ಟ ಪದ್ಧತಿ’, ಎಂದು ಹೇಳುತ್ತಿದ್ದನೋ, ಆ ಸಮಯದಲ್ಲಿ ಅವರ ದೇಶದಲ್ಲಿ ಸುಮಾರು ೨ ಸಾವಿರ ೫೦೦ ಮಹಿಳೆಯರನ್ನು ಹುಡುಕಿ ಕೊಲ್ಲಲಾಯಿತು. ಯುರೋಪಿನಲ್ಲಿ ೨ ಸಾವಿರ ೫೦೦ ವರ್ಷಗಳ ಹಿಂದೆ ‘ವಿಚ್ ಹಂಟಿಂಗ್’ (ಮಾಟಗಾರ್ತಿಯ ಬೇಟೆ) ಎಂಬ ಒಂದು ಪರಂಪರೆ ಜಾರಿಯಲ್ಲಿತ್ತು. ಜರ್ಮನಿ, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ಯುರೋಪನಲ್ಲಿನ ಎಲ್ಲ ದೇಶಗಳಲ್ಲಿ ಈ ಪದ್ಧತಿ ಇತ್ತು. ಯಾರ ಪತಿಯ ಮೃತ್ಯು ಆಗಿರುತ್ತದೆಯೋ, ಅಂತಹ ಮಹಿಳೆಯರನ್ನು ಊರಲ್ಲಿ ಹುಡುಕಿ ಹುಡುಕಿ ‘ಮಾಟಗಾರ್ತಿಯರು’ ಎಂದು ಕೊಲ್ಲಲಾಗುತ್ತಿತ್ತು. ಅವರನ್ನು ಜೀವಂತ ಸುಡುವುದು, ನೆಲದಲ್ಲಿ ತಗ್ಗು ತೋಡಿ ಹೂಳುವುದು, ಕೂದಲು ಹಿಡಿದು ಅವರನ್ನು ಎಳೆಯುತ್ತ ಒಯ್ಯುವುದು ಈ ರೀತಿ ಅವರ ಮೇಲೆ ಅತ್ಯಾಚಾರವಾಗುತ್ತಿತ್ತು. ಇದರ ಮೇಲೆ ವಿಲಿಯಮ್ ಬೆಂಟಿಕನ್‌ನು ಚರ್ಚೆ ಮಾಡಲಿಲ್ಲ, ಬದಲಾಗಿ ಭಾರತದಲ್ಲಿ ಯಾವುದಾದರೊಬ್ಬ ಮಹಿಳೆಯರ ಮೇಲೆ ಅತ್ಯಾಚಾರವಾದರೆ, ಅದನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಲಾಯಿತು. ಭಾರತದಲ್ಲಿನ ಮಹಿಳೆಯರಿಗೆ, ಅವರು ತಮ್ಮ ಸಂಸ್ಕೃತಿಯ ವಿರುದ್ಧ ಹೋಗುವವರು, ಇಂತಹ ಪದ್ಧತಿಯು ಜಗತ್ತಿನಲ್ಲಿ ಇನ್ನೆಲ್ಲೂ ಇಲ್ಲ, ಕೇವಲ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಇದೆ, ಎಂದು ತೋರಿಸಿಕೊಟ್ಟರು. ಇದರಿಂದ ಇದು ಬ್ರಿಟಿಷರು ಬೇಕಂತಲೇ ಮಾಡಿದ ಷಡ್ಯಂತ್ರವಾಗಿತ್ತು, ಎಂಬುದು ಖಚಿತವಾಗುತ್ತದೆ.
೬. ಹಿಂದೂಗಳು ಹಿಂದೂ ಸಂಸ್ಕೃತಿಯಿಂದ ದೂರ ಹೋಗಬೇಕು, ಎಂದು ಬ್ರಿಟಿಷರು ಅಪಪ್ರಚಾರ ಮಾಡುವುದು
ಸತಿ ಸಹಗಮನ ಪದ್ಧತಿಯು (ರೂಢಿಯು) ಅತ್ಯಾಚಾರದಿಂದ ಪಾರಾಗುವುದಕ್ಕಾಗಿ ಇತ್ತು; ಆದರೆ ಭಾರತವನ್ನು ವಿಭಜಿಸಲು ಈ ಪದ್ಧತಿಯನ್ನು ಪ್ರಚಾರ ಮಾಡಲಾಯಿತು. ಆದ್ದರಿಂದ ಭಾರತದ ಸಂಸ್ಕೃತಿಯು ನಾಶವಾಗಿ ಭಾರತದ ಮೇಲೆ ರಾಜ್ಯವಾಳಬಹುದು. ಸತಿ ಪದ್ಧತಿಯನ್ನು ಹೆಚ್ಚಾಗಿ ರಾಜಸ್ಥಾನಕ್ಕೆ ಜೋಡಿಸಲಾಗಿದೆ; ಏಕೆಂದರೆ ಅವರ ಮೇಲೆ ಮೊಗಲರಿಂದ ದಾಳಿ ಆಗುತ್ತಿತ್ತು; ಆದರೆ ದೇಶದಲ್ಲಿ ಬೇರೆಲ್ಲೂ ಇಂತಹ ಪದ್ಧತಿ ಇರಲಿಲ್ಲ. ಬ್ರಿಟಿಷರು ಭಾರತೀಯರ ಮನಸ್ಸಿನಲ್ಲಿ, ಇದು ವೈದಿಕ ಸಂಸ್ಕೃತಿಯಾಗಿದೆ. ಎಂದು ತೋರಿಸಿಕೊಟ್ಟರು. ವೇದಗಳಲ್ಲಿ ಈ ರೀತಿಯ ಪದ್ಧತಿಯ ಬಗ್ಗೆ ಯಾವ ಉಲ್ಲೇಖವಿಲ್ಲ. ಬದಲಾಗಿ ವಿಧವಾ ಸ್ತ್ರೀಯರನ್ನು ಗೌರವಿಸುತ್ತಿದ್ದರು. ಉದಾ. ಮಹಾಭಾರತದಲ್ಲಿನ ಕುಂತಿಯು ಸತಿಸಹಗಮನ ಮಾಡಲಿಲ್ಲ. ಮಾದ್ರಿಯು ಸತಿಸಹಗಮನ ಮಾಡಿದಳು; ಏಕೆಂದರೆ ಅವಳು ತನ್ನ ಪತಿಯ ಸಾವಿಗೆ ತಾನೇ ಕಾರಣವೆಂದು ತಿಳಿದಿದ್ದಳು. ಇದರಿಂದ ಗಮನಕ್ಕೆ ಬರುವುದೇನೆಂದರೆ, ನಾವು ನಮ್ಮ ಸಂಸ್ಕೃತಿಯನ್ನೇ ದ್ವೇಷಿಸಿ ಸಂಸ್ಕೃತಿಯಿಂದ ದೂರ ಹೋಗಬೇಕು, ಎಂಬುದು ಬ್ರಿಟಿಷರ ಉದ್ದೇಶವಾಗಿತ್ತು. ಬಹುಮಟ್ಟಿಗೆ ಅವರು ಇದನ್ನು ಸಾಧಿಸಿದ್ದಾರೆ.
೭. ಬ್ರಿಟಿಷರು ಸತಿಯ ಪದ್ಧತಿಯನ್ನು ನಿಲ್ಲಿಸಿದರು, ಎಂಬ ಗಾಳಿಸುದ್ದಿಯನ್ನು ಹಬ್ಬಿಸುವುದು
ಇತಿಹಾಸದಿಂದ ಗಮನಕ್ಕೆ ಬರುವುದೇನೆಂದರೆ, ಸತಿ ಸಹಗಮನದ ಪದ್ಧತಿಯು ಕೇವಲ ಕ್ಷತ್ರಿಯರಲ್ಲಿ ನಡೆಯುತ್ತಿತ್ತು. ಕ್ಷತ್ರಿಯರೆಂದರೆ ಅವರಿಗೆ ಯುದ್ಧಕ್ಕೆ ಹೋಗಬೇಕಾಗುತ್ತಿತ್ತು. ಈ ಪದ್ಧತಿಯು ಇಸ್ಲಾಂ ಆಕ್ರಮಣದ ನಂತರ ಪ್ರಾರಂಭವಾಯಿತು. ಜನರು, ಬ್ರಿಟಿಷರು ಈ ಪದ್ಧತಿಯನ್ನು ನಿಲ್ಲಿಸಿದರು ಮತ್ತು ಕೂಡಲೇ ಅದು ನಿಂತಿತು ಎಂದು ಹೇಳುತ್ತಾರೆ. ಯಾವಾಗ ನಮಗೆ ಸ್ವಾತಂತ್ರ್ಯ ಸಿಕ್ಕಿತು, ಆಗ ಜಾತಿಭೇದವನ್ನು ಕಾನೂನುಬಾಹಿರಗೊಳಿಸಲಾಗಿತ್ತು; ಆದರೆ ಇದರ ಪ್ರಮಾಣ ಕಡಿಮೆ ಆಗಿದೆಯೇ ? ಇನ್ನೂ ಎಷ್ಟೋ ಸ್ಥಳಗಳಲ್ಲಿ ಜಾತಿಯಿಂದಾಗಿ ಭೇದಭಾವ ಮಾಡಲಾಗುತ್ತದೆ. ಬ್ರಿಟಿಷರಿಂದ ಈ ಪದ್ಧತಿಯು ಪ್ರಚಾರವಾಯಿತು ಮತ್ತು ಬ್ರಿಟಿಷರ ಒಂದು ಆದೇಶದಿಂದ ಈ ಪದ್ಧತಿಯನ್ನು ನಿಲ್ಲಿಸಲಾಯಿತು, ಎಂದು ತೋರಿಸಲಾಯಿತು. ವಾಸ್ತವದಲ್ಲಿ ಇಂತಹದೇನೂ ಘಟಿಸಲೇ ಇಲ್ಲ, ಆದರೆ ಅದು ಘಟಿಸಿತು ಎಂದು ತೋರಿಸಲಾಯಿತು. ಆ ಸಮಯದಲ್ಲಿ ಜನರಿಗೆ ಹೇಳುವವರು ಯಾರೂ ಇರಲಿಲ್ಲ; ಆದರೆ ಇಂದು ನಾವು ವಿಶ್ಲೇಷಣೆ ಮಾಡಿ ಯಾವುದು ಯೋಗ್ಯವಾಗಿದೆ ಮತ್ತು ಯಾವುದು ಅಯೋಗ್ಯವಾಗಿದೆ, ಎಂಬುದನ್ನು ಖಚಿತ ಪಡಿಸಬಹುದು. ಆದ್ದರಿಂದ ಯಾವುದೇ ವಿಷಯವನ್ನು ಕುರುಡತನದಿಂದ ನಂಬಬೇಡಿ. ನೀವು ಸ್ವತಃ ಸಂಶೋಧನೆ ಮಾಡಿ. ನಮ್ಮ ದೇಶದಲ್ಲಿ, ನಮ್ಮ ಜನರೇ ನಮ್ಮ ಸಂಸ್ಕೃತಿಯ ವಿರುದ್ಧ ಇದ್ದಾರೆ; ಆದರೆ ನಾವು ಸಂಶೋಧನೆ ಮಾಡಿದರೆ ಇದೆಲ್ಲ ಗಮನಕ್ಕೆ ಬರುತ್ತದೆ.
(ಆಧಾರ : ವಿವಿಧ ಜಾಲತಾಣಗಳು)
ಜಿಹಾದ್, ಮತಾಂತರ ಮತ್ತು ಗೋಹತ್ಯೆಯಿಂದ ಗೋವಾವನ್ನು ಮುಕ್ತಗೊಳಿಸಿ ! – ಶಾಸಕ ಟಿ. ರಾಜಾಸಿಂಗ್
ರಾಯಗಡ ಕೋಟೆಯಲ್ಲಿ ೫೦ ಕ್ಕೂ ಅಧಿಕ ಮದ್ಯದ ಖಾಲಿ ಬಾಟಲಿಗಳ ರಾಶಿ !: Raigad Fort
ಸಮರ್ಥ ರಾಮದಾಸ ಸ್ವಾಮಿಗಳು ಬಯಸಿದ ಭಾರತದಲ್ಲಿನ ಅದ್ವಿತೀಯ ದೇವಸ್ಥಾನಗಳ ಸಂಸ್ಕೃತಿ !
ಪ್ರಾಚೀನ ದೇವಸ್ಥಾನಗಳನ್ನು ನಿರ್ಮಿಸಿದ ರಾಜರಹಿರಿಮೆಯನ್ನು ಹಾಡಿಹೊಗಳಿದ ವಿದೇಶಿ ಲೇಖಕರು
ಪ್ರಾಚೀನ ದೇವಾಲಯಗಳ ಸಂಶೋಧನೆ, ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ಒಡಿಶಾದ ಶ್ರೀ. ಅನಿಲ ಧೀರ್ ಅವರ ಅಪಾರ ಕೊಡುಗೆ !
ಆಂಧ್ರಪ್ರದೇಶದ ಕಡಪ್ಪಾ ನಗರದ ವೃತ್ತಕ್ಕೆ ‘ಟಿಪ್ಪು ಸುಲ್ತಾನ್’ ಹೆಸರಿಡಲು ಹಿಂದೂಗಳ ವಿರೋಧ