ಜಿಹಾದ್, ಮತಾಂತರ ಮತ್ತು ಗೋಹತ್ಯೆಯಿಂದ ಗೋವಾವನ್ನು ಮುಕ್ತಗೊಳಿಸಿ ! – ಶಾಸಕ ಟಿ. ರಾಜಾಸಿಂಗ್

ಹಿಂದೂ ಜನಜಾಗೃತಿ ಸಮಿತಿಯ ಫೋಂಡಾದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ೩ ಸಾವಿರಕ್ಕೂ ಅಧಿಕ ಹಿಂದೂಗಳ ಉತ್ಸಾಹ ಭರಿತ ಪ್ರತಿಕ್ರಿಯೆ !

ಸಭೆಯಲ್ಲಿ ಮಾತನಾಡುತ್ತಿರುವ ಶ್ರೀ ಟಿ. ರಾಜಾಸಿಂಗ್

ಫೋಂಡಾ, ೨೪ ಮೇ (ವಾರ್ತೆ.) – ಜಿಹಾದ್, ಮತಾಂತರ ಮತ್ತು ಗೋಹತ್ಯೆಯಿಂದ ಗೋವಾವನ್ನು ಮುಕ್ತಗೊಳಿಸಿ. ಗೋವಾದಲ್ಲಿ ಮತಾಂತರವನ್ನು ವಿರೋಧಿಸುವ ಪೂರ್ವಜರು ಜನಿಸಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ, ಎಂದು ಭಾಗ್ಯನಗರದ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಶ್ರೀ. ಟಿ. ರಾಜಾಸಿಂಗ್ ಅವರು ಫೋಂಡಾದಲ್ಲಿ ೨೪ ಮೇ ದಿನದಂದು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಪ್ರಮುಖ ವಕ್ತಾರರಾಗಿ ಮಾತನಾಡುತ್ತಿದ್ದರು. ರಾಜ್ಯದ ಕೆಲವು ಹಿಂದುತ್ವದ್ವೇಷಿಗಳು ಸಾಮಾಜಿಕ ಜಾಲತಾಣಗಳು ಮತ್ತು ಪ್ರಸಾರಮಾಧ್ಯಮಗಳ ಮೂಲಕ ಸಭೆ ಮತ್ತು ಶ್ರೀ. ಟಿ. ರಾಜಾಸಿಂಗ್ ಅವರ ಕುರಿತು ಅಪಪ್ರಚಾರ ಮಾಡಿದರೂ, ಅದಕ್ಕೆ ಸೊಪ್ಪುಹಾಕದೆ ಫೋಂಡಾ ಮತ್ತು ಸುತ್ತಮುತ್ತಲಿನ ೩ ಸಾವಿರಕ್ಕೂ ಅಧಿಕ ಹಿಂದೂಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಸಕ ಟಿ. ರಾಜಾಸಿಂಗ್ ಅವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕುರಿತು ಗೌರವದ್ಗಾರ

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಧ್ಯೇಯವು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದೇ ಆಗಿದೆ. ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎಂಬ ಬೇಡಿಕೆಯನ್ನು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಮೊಟ್ಟಮೊದಲು ಗೋವಾದಿಂದಲೇ ಮಾಡಿದೆ, ಎಂದು ಹೇಳಿದರು.

ಟಿ. ರಾಜಾಸಿಂಗ್ ಅವರು ಮುಂದೆ ಮಾತನಾಡುತ್ತಾ, “ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜರ ಗೋವಾದಲ್ಲಿನ ಕಾರ್ಯವು ಉಲ್ಲೇಖನೀಯವಾಗಿದೆ. ಗೋವಾದಲ್ಲಿನ ‘ಹಾತ್ ಕಾತರೋ ಖಾಂಬ್’ ಮುಂತಾದ ಗೋವಾದ ಹೋರಾಟದ ಇತಿಹಾಸದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಬೇಕು. ಗೋವಾದಲ್ಲಿ ಕೇವಲ ಕಡಲತೀರಗಳಿವೆ, ಎಂಬ ದೃಷ್ಟಿಕೋನವನ್ನು ನಾವು ಬದಲಾಯಿಸಬೇಕು. ಗೋವಾದಲ್ಲಿ ಪವಿತ್ರ ಪ್ರಾಚೀನ ಮಠಗಳು ಮತ್ತು ದೇವಸ್ಥಾನಗಳಿವೆ. ಗೋವಾದ ಸಂಸ್ಕೃತಿಯು ಪ್ರಾಚೀನವಾಗಿದೆ. ಇದರ ಕಡೆಗೆ ಎಲ್ಲರ ಗಮನ ಸೆಳೆಯಬೇಕು. ಗೋವಾದಲ್ಲಿ ಈಗ ಜಿಹಾದಿಗಳ ಪ್ರವೇಶವಾಗಿದೆ. ಗೋವಾದ ಹಿಂದೂಗಳು ಜಾಗೃತರಾಗುತ್ತಿದ್ದಾರೆ; ಆದ್ದರಿಂದ ಮರ್ದನಗಡವನ್ನು ಅಧಿಸೂಚಿತಗೊಳಿಸಲಾಗುತ್ತಿದೆ. ಗೋವಾದಲ್ಲಿ ನಿದ್ರಿಸುತ್ತಿರುವ ಇತರ ಹಿಂದೂಗಳನ್ನು ಎಚ್ಚರಿಸಬೇಕು. ನಿದ್ರಿಸುತ್ತಿರುವ ಹಿಂದೂಗಳು ಎಚ್ಚರಗೊಳ್ಳದಿದ್ದರೆ ಅವರ ಮುಂದಿನ ಪೀಳಿಗೆಯು ನಾಶವಾಗುವುದು, ಎಂಬುದನ್ನು ಅವರು ಗಮನದಲ್ಲಿಡಬೇಕು. ನಾವು ಛತ್ರಪತಿ ಸಂಭಾಜಿ ಮಹಾರಾಜರ ವಂಶಸ್ಥರಾಗಿದ್ದೇವೆ. ಆದ್ದರಿಂದ ವಿನಾಕಾರಣ ನಮ್ಮ ತಂಟೆಗೆ ಬರಬಾರದು. ಗೋವಾ ಎಂಬ ಈ ಭೂಮಿಯನ್ನು ಜಿಹಾದಿಗಳ ಅಡ್ಡೆಯಾಗಲು ಬಿಡಬಾರದು. ಗೋವಾದಲ್ಲಿ ಬಾಂಗ್ಲಾದೇಶಿ ರೋಹಿಂಗ್ಯಾಗಳು ನುಗ್ಗಿದ್ದಾರೆ. ಜಿಹಾದಿಗಳಿಗೆ ನಡುಕ ಹುಟ್ಟುವಂತಹ ಕೃತಿಯಾಗಬೇಕು. ಇಂದು ಮೌಲ್ವಿಗಳೂ ಸಹ ಹಸುವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ನೀಡಲು ಬೇಡಿಕೆ ಇಡುತ್ತಿದ್ದಾರೆ ಮತ್ತು ಇದೊಂದು ಒಳ್ಳೆಯ ವಿಷಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಸುವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು ಮತ್ತು ಇದರಿಂದ ದೇಶಾದ್ಯಂತ ಗೋಹತ್ಯೆ ನಿಲ್ಲಬಹುದು. ಹಿಂದೂಗಳ ರಕ್ಷಣೆಯನ್ನು ಕೇವಲ ಕೇಸರಿಯು ಮಾತ್ರ ಮಾಡಬಲ್ಲದು. ಹಿಂದೂಗಳು ಜಾಗೃತರಾದರೆ ಇತಿಹಾಸವು ಬದಲಾಗಬಹುದು, ಎಂಬುದು ಬಂಗಾಲದ ಚುನಾವಣಾ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಬೇಕು. ಪ್ರತಿಯೊಬ್ಬ ಹಿಂದೂವು ವಾರದಲ್ಲಿ ೨ ಗಂಟೆಗಳನ್ನು ಹಿಂದೂ ಧರ್ಮದ ಪ್ರಚಾರಕ್ಕಾಗಿ ನೀಡಬೇಕು. ಹಿಂದೂ ಜನಜಾಗೃತಿ ಸಮಿತಿಯು ಉಚಿತವಾಗಿ ಕಲಿಸುತ್ತಿರುವ ಸ್ವರಕ್ಷಣಾ ತರಬೇತಿಯ ಪಾಠಗಳನ್ನು ಕಲಿಯಬೇಕು” ಎಂದು ಹೇಳಿದರು.

ಭಗವಾನ್ ಪರಶುರಾಮನೇ ನಿಜವಾದ ‘ಗೊಯಂಚೊ ಸಾಯಬ’ (ಗೋವಾದ ಸಾಹೇಬ) ! – ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ

ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ

ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಸಭೆಯ ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ; ಆದರೆ ಅವರ ಮಾತನ್ನು ಎಷ್ಟು ಜನರು ಕೇಳುತ್ತಾರೆ ? ಎಂಬುದು ಪ್ರಶ್ನೆಯಾಗಿದೆ. ‘ಫೋಂಡಾದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಾದರೆ, ಇಲ್ಲಿ ಕೋಮು ಪ್ರಶ್ನೆ ನಿರ್ಮಾಣವಾಗುವುದು’, ಎಂದು ಅಪಪ್ರಚಾರ ಮಾಡಿದರು. ನಡೆದ ಸತ್ಯ ಇತಿಹಾಸವನ್ನು ಮಂಡಿಸಿದರೆ, ನಾವು ಮತಾಂಧರು ಹೇಗೆ ? ಇತಿಹಾಸವು ಅಪ್ರಿಯವಾಗಿದ್ದರೆ, ನಡೆದದ್ದನ್ನು ಹಾಗೆಯೇ ಹೇಳಬೇಕು. ಗೋಮಾಂತಕವನ್ನು ನಿರ್ಮಿಸಿದ ಭಗವಾನ್ ಪರಶುರಾಮನೇ ನಿಜವಾದ ‘ಗೊಯಂಚೊ ಸಾಯಬ’ ಆಗಿದ್ದಾರೆ.

ಹಿಂದೂಗಳ ಮೇಲಾದ ಅನ್ಯಾಯಕ್ಕೆ ಧ್ವನಿ ಎತ್ತಲು ಇಂದು ನಿಷೇಧವಿದ್ದರೆ, ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೇ ? ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ, ಆದ್ದರಿಂದ ಇಲ್ಲಿ ಶಾಂತಿಯಿದೆ. ಕಾಶ್ಮೀರ ಮತ್ತು ನಾಗಾಲ್ಯಾಂಡ್‌ನಲ್ಲಿ ಶಾಂತಿಯಿದೆಯೇ ? ‘ಹಾತ್ ಕಾತರೋ ಖಾಂಬ್’ ಮತ್ತು ಫೋಂಡಾದಲ್ಲಿನ ಮರ್ದನಗಡವನ್ನು ಗೋವಾ ಸರಕಾರವು ಅಧಿಸೂಚಿತಗೊಳಿಸಿರುವುದರಿಂದ ಫೋಂಡಾದಲ್ಲಿನ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಒಂದು ವಿಜಯೀ ಸಭೆಯಾಗಿದೆ. ದೇಶವು ಸ್ವತಂತ್ರವಾದ ನಂತರ ಗೋವಾವು ಸ್ವತಂತ್ರವಾಗಲು ೧೪ ವರ್ಷಗಳು ಏಕೆ ಬೇಕಾದವು ? ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌ಗೆ ಕೇಳಬೇಕು.

ಗೋವಾದಲ್ಲಿ ಮರಾಠಿಗೆ ರಾಜ್ಯಭಾಷೆಯ ಸ್ಥಾನಮಾನ ನೀಡಬೇಕು

ಸಭೆಯಲ್ಲಿ ಮರಾಠಿಗೆ ರಾಜ್ಯಭಾಷೆಯ ಸ್ಥಾನಮಾನ ನೀಡುವ ಬೇಡಿಕೆಗಾಗಿ ಶ್ರಮಿಸುತ್ತಿರುವ ‘ಮರಾಠಿ ರಾಜ್ಯಭಾಷಾ ನಿರ್ಧಾರ ಸಮಿತಿ’ಯ ಪ್ರಾ. ಸುಭಾಷ ವೆಲಿಂಗಕರ ಉಪಸ್ಥಿತರಿದ್ದಾರೆ. ಗೋವಾದಲ್ಲಿ ಮರಾಠಿಗೆ ರಾಜ್ಯಭಾಷೆಯ ಸ್ಥಾನಮಾನ ನೀಡುವ ‘ಮರಾಠಿ ರಾಜ್ಯಭಾಷಾ ನಿರ್ಧಾರ ಸಮಿತಿ’ಯ ಬೇಡಿಕೆಯು ಯೋಗ್ಯವಾಗಿದೆ. ಮರಾಠಿಯು ನಮ್ಮ ಮಾತೃಭಾಷೆಯಾಗಿದೆ ಮತ್ತು ನಮಗೆ ವಿದೇಶಿ ಭಾಷೆಗಳು ಬೇಡ.

ಫೋಂಡಾದಲ್ಲಿನ ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಘಟನಾವಳಿಗಳು

೧. ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ವಿಘ್ನಹರ್ತ ಶ್ರೀ ಗಣೇಶನ ಶ್ಲೋಕವನ್ನು ಸಾಮೂಹಿಕವಾಗಿ ಹೇಳಿ ಮತ್ತು ಶಂಖನಾದ ಮಾಡುವ ಮೂಲಕ ಪ್ರಾರಂಭವಾಯಿತು.

೨. ಭಾಗ್ಯನಗರದ ಶಾಸಕ ಶ್ರೀ. ಟಿ. ರಾಜಾಸಿಂಗ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಮತ್ತು ಇತರ ಗಣ್ಯರ ಹಸ್ತದಿಂದ ದೀಪಪ್ರಜ್ವಲನೆ ಮಾಡಲಾಯಿತು. ವ್ಯಾಸಪೀಠದ ಮೇಲೆ ‘ಮರ್ದನಗಡ ಸಂವರ್ಧನಾ ಸಮಿತಿ’ಯ ಸರ್ವಶ್ರೀ ರಾಜೇಂದ್ರ ದೇಸಾಯಿ, ಮನೋಜ ಗಾವಕರ ಮತ್ತು ಸುಚೇಂದ್ರ ಅಗ್ನಿಯವರು ಉಪಸ್ಥಿತರಿದ್ದರು.

೩. ಶಾಸಕ ಟಿ. ರಾಜಾಸಿಂಗ್ ಅವರ ಹಸ್ತದಿಂದ ವ್ಯಾಸಪೀಠದ ಮೇಲಿದ್ದ ಶಿವಪ್ರತಿಮೆಗೆ ಪುಷ್ಪಹಾರವನ್ನು ಅರ್ಪಿಸಲಾಯಿತು.

೪. ಸನಾತನ ವೇದಪಾಠಶಾಲೆಯ ಪುರೋಹಿತ ಶ್ರೀ. ದಾಮೋದರ ವಝೆಗುರೂಜಿ ಮತ್ತು ಶ್ರೀ. ಸಿದ್ಧೇಶ ಕರಂದೀಕರ ಅವರು ಭಾವಪೂರ್ಣವಾಗಿ ವೇದಮಂತ್ರಪಠಣ ಮಾಡಿದರು. ವೇದಮಂತ್ರಪಠಣ ಮಾಡಿದ ಪುರೋಹಿತರನ್ನು ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶ್ರೀಪಾದ ಅರಗಡೆಯವರು ಸನ್ಮಾನಿಸಿದರು.

 

೫. ಶಾಸಕ ಶ್ರೀ. ಟಿ. ರಾಜಾಸಿಂಗ್ ಅವರನ್ನು ಬೋರಿ ಪಂಚಾಯತಿಯ ಹಾಲಿ ಪಂಚಸದಸ್ಯ ಶ್ರೀ. ಸತೀಶ ಬೋರಕರ ಅವರು ಸನ್ಮಾನಿಸಿದರು, ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರನ್ನು ಫೋಂಡಾದ ಹಿಂದುತ್ವನಿಷ್ಠ ಉದ್ಯಮಿ ಶ್ರೀ. ಮಯೂರ ಕನ್ನಾವರ ಅವರು ಸನ್ಮಾನಿಸಿದರು.

೬. ಗೋವಾದಲ್ಲಿ ದೇವ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಕ್ರಿಯಾಶೀಲವಾಗಿರುವ ‘ಹಿಂದೂ ಯುವ ಶಕ್ತಿ, ಗೋವಾ’ ಎಂಬ ಸಂಘಟನೆಯ ಸದಸ್ಯರು ಶಾಸಕ ಶ್ರೀ. ರಾಜಾಸಿಂಗ್ ಅವರನ್ನು ಈ ಸಮಯದಲ್ಲಿ ಸನ್ಮಾನಿಸಿದರು.

೭. ಹಿಂದೂ ಜನಜಾಗೃತಿ ಸಮಿತಿಯ ಗೋವಾ ರಾಜ್ಯ ಸಂಘಟಕ ಶ್ರೀ. ಸತ್ಯವಿಜಯ ನಾಯ್ಕ ಅವರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಮಾಹಿತಿ ನೀಡಿದರು. ತದನಂತರ ವಕ್ತಾರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

೮. ಸಭೆಯ ನಿರೂಪಣೆಯನ್ನು ಸೌ. ಗೌರಿ ನಾಯಕ ಮತ್ತು ಶ್ರೀ. ರಾಹುಲ ವಝೆ ಅವರು ಮಾಡಿದರು.

ಸಭೆಯ ಕ್ಷಣಚಿತ್ರಗಳು

೧. ಭಾಗ್ಯನಗರದ ಶಾಸಕ ಶ್ರೀ. ಟಿ. ರಾಜಾಸಿಂಗ್ ಅವರ ಗೋವಾದಲ್ಲಿನ ಎರಡನೇ ಸಾರ್ವಜನಿಕ ಸಭೆ ಇದಾಗಿದೆ. ಇದಕ್ಕೂ ಮೊದಲು ಸಾವರ್ಡೆಯಲ್ಲಿ ಅವರ ಭವ್ಯ ಸಾರ್ವಜನಿಕ ಸಭೆ ನಡೆದಿತ್ತು.

೨. ವ್ಯಾಸಪೀಠದ ಹಿಂದೆ ಕೋಟೆಯ ಚಿತ್ರವನ್ನು ಹಾಕಲಾಗಿತ್ತು.

ಶಾಸಕ ಶ್ರೀ. ಟಿ. ರಾಜಾಸಿಂಗ್ ಅವರ ಹಸ್ತದಿಂದ ‘ಮರ್ದನಗಡ ಸಂವರ್ಧನಾ ಸಮಿತಿ’ಯ ಸದಸ್ಯರ ವಿಶೇಷ ಸನ್ಮಾನ

ಛತ್ರಪತಿ ಸಂಭಾಜಿ ಮಹಾರಾಜರು ಕಟ್ಟಿಸಿದ ಗೋವಾದಲ್ಲಿನ ಏಕೈಕ ಫೋಂಡಾದ ಮರ್ದನಗಡ

ಛತ್ರಪತಿ ಸಂಭಾಜಿ ಮಹಾರಾಜರು ಕಟ್ಟಿಸಿದ ಗೋವಾದಲ್ಲಿನ ಏಕೈಕ ಫೋಂಡಾದ ಮರ್ದನಗಡವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸುವ ಪ್ರಕ್ರಿಯೆಯನ್ನು ಗೋವಾ ಸರಕಾರವು ಪ್ರಾರಂಭಿಸಿದೆ. ಇದು ಮರ್ದನಗಡ ಸಂವರ್ಧನಾ ಸಮಿತಿಯ ಕಾರ್ಯದ ಯಶಸ್ಸಾಗಿದೆ. ಈ ಹಿನ್ನೆಲೆಯಲ್ಲಿ ಫೋಂಡಾದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಶಾಸಕ ಟಿ. ರಾಜಾಸಿಂಗ್ ಅವರ ಹಸ್ತದಿಂದ ಮರ್ದನಗಡ ಸಂವರ್ಧನಾ ಸಮಿತಿಯ ಸರ್ವಶ್ರೀ ಮೋಹನ ನಾಯ್ಕ, ನೀಲೇಶ ನಾಯ್ಕ, ದಾಮೋದರ ನಾಯ್ಕ, ಸೌ. ಸುಪ್ರಿಯಾ ಕೇತಕರ, ಸರ್ವಶ್ರೀ ಪ್ರದೀಪ ಬಖಲೆ, ರಾಜೇಂದ್ರ ದೇಸಾಯಿ, ಸುಚೇಂದ್ರ ಅಗ್ನಿ, ಮನೋಜ ಗಾವಕರ ಮತ್ತು ಸ್ವಪ್ನಿಲ ನಾಯ್ಕ ಅವರನ್ನು ಉಡುಗೊರೆ ನೀಡಿ ಸನ್ಮಾನಿಸಲಾಯಿತು.

ಶ್ರೀ. ಮೋಹನ ನಾಯಿಕ್ ಇವರ ಸನ್ಮಾನ ಶ್ರೀ. ನಿಲೇಶ ನಾಯಿಕ್ ಇವರ ಸನ್ಮಾನ
ಶ್ರೀ. ದಾಮೊದರ ನಾಯಿಕ್ ಇವರ ಸನ್ಮಾನ ಸೌ. ಸುಪ್ರಿಯಾ ಕೇತಕರ್ ಇವರ ಸನ್ಮಾನ
ಶ್ರೀ. ಪ್ರದೀಪ ಬಖಲೆ ಇವರ ಸನ್ಮಾನ ಶ್ರೀ. ರಾಜೇಂದ್ರ ದೆಸಾಯಿ ಇವರ ಸನ್ಮಾನ
ಶ್ರೀ. ಸುಚೇಂದ್ರ ಅಗ್ನಿ ಇವರ ಸನ್ಮಾನ ಶ್ರೀ. ಮನೋಜ ಗಾವಕರ ಇವರ ಸನ್ಮಾನ
ಶ್ರೀ. ಸ್ವಪ್ನಿಲ್ ನಾಯಿಕ್ ಇವರ ಸನ್ಮಾನ