ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರಕ್ಕೆ ಲಜ್ಜಾಸ್ಪದ ಘಟನೆ...
ಪ್ರವಾಸಿಗರು ಕೋಟೆಯ ಮೇಲೆ ಮದ್ಯಪಾನದ ಔತಣಕೂಟ ಮಾಡುತ್ತಿರುವುದು ಬಹಿರಂಗ

ಮಹಾಡ (ರಾಯಗಡ ಜಿಲ್ಲೆ) – ರಾಯಗಡ ಕೋಟೆಯ ಮೇಲೆ ಪ್ರವಾಸಿಗರು ಮದ್ಯಪಾನದ ಔತಣಕೂಟಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೋಟೆಯ ಆವರಣದಲ್ಲಿ ಮದ್ಯದ ೫೦ ಕ್ಕೂ ಅಧಿಕ ಖಾಲಿ ಬಾಟಲಿಗಳ ರಾಶಿ ಬಿದ್ದಿರುವುದು ಕಂಡುಬಂದಿದೆ. ಇದರ ವಿರುದ್ಧ ಕೋಟೆ ಪ್ರೇಮಿಗಳು, ಸ್ಥಳೀಯ ನಾಗರಿಕರು ಮತ್ತು ಶಿವ(ಛತ್ರಪತಿ ಶಿವಾಜಿ ಮಹಾರಾಜ)ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯದ ಬಾಟಲಿಗಳೊಂದಿಗೆ ಪ್ಲಾಸ್ಟಿಕ್ ಕಸ ಮತ್ತು ದೊಡ್ಡ ಪ್ರಮಾಣದಲ್ಲಿ ಅಸ್ವಚ್ಛತೆಯೂ ಕಂಡುಬಂದಿದೆ.
ಕೋಟೆಯ ಮುಖ್ಯ ಪ್ರವೇಶದ್ವಾರಗಳಲ್ಲಿ ಪ್ರವಾಸಿಗರು ಮತ್ತು ಅವರ ಸಾಮಗ್ರಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡದೇ ಇದ್ದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಶಿವ(ಛತ್ರಪತಿ ಶಿವಾಜಿ ಮಹಾರಾಜ)ಪ್ರೇಮಿಗಳು ಆರೋಪಿಸಿದ್ದಾರೆ. ‘ಕೋಟೆಗೆ ಹೋಗುವ ಪ್ರತಿಯೊಬ್ಬ ಪ್ರವಾಸಿಗನನ್ನು ಪ್ರವೇಶದ್ವಾರದಲ್ಲಿ ಕೂಲಂಕಷವಾಗಿ ತಪಾಸಣೆ ನಡೆಸಬೇಕು. ಕೋಟೆಯ ಮೇಲಿರುವ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ತಕ್ಷಣವೇ ಹೆಚ್ಚಿಸಬೇಕು. ಕೋಟೆಯ ಆವರಣದಲ್ಲಿ ಮತ್ತು ಮುಖ್ಯ ಐತಿಹಾಸಿಕ ವಾಸ್ತುಗಳ ಹಿಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕೋಟೆಯ ಮೇಲೆ ಮದ್ಯಪಾನ ನಿಷೇಧದ ಫಲಕಗಳನ್ನು ಅಳವಡಿಸಿ, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು’, ಎಂದು ಶಿವಭಕ್ತರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಕೋಟೆ-ದುರ್ಗಗಳ ಮೇಲೆ ಅವ್ಯವಸ್ಥೆ ನಡೆದಿರುವ ಕಳೆದ ೨ ವರ್ಷಗಳ ಕೆಲವು ಉದಾಹರಣೆಗಳು !
ಡಿಸೆಂಬರ್ ೨೦೨೫ : ಸಿಂಹಗಡ ಕೋಟೆಗೆ ಹೋಗುತ್ತಿದ್ದ ಒಂದು ಕಾರಿನಿಂದ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿತ್ತು.
ಅಕ್ಟೋಬರ್ ೨೦೨೫ : ಭೋರ (ಪುಣೆ ಜಿಲ್ಲೆ) ಇಲ್ಲಿನ ರಾಯರೇಶ್ವರ ಕೋಟೆಯ ಬಳಿ ಕೆಲವು ಜನರು ಮದ್ಯಪಾನ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.
ಜುಲೈ ೨೦೨೪ : ವಿಶಾಲಗಡ ಕೋಟೆಯ ಮೇಲೆ ಭಾರಿ ಪ್ರಮಾಣದಲ್ಲಿ ಕಸ ಪತ್ತೆಯಾಗಿದ್ದರಿಂದ ವ್ಯಾಪಕ ಆಂದೋಲನ ನಡೆಸಲಾಗಿತ್ತು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ