ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ, ಜನವರಿ 30 (ಸುದ್ದಿ) – ಹಿಂದೂ ಜನಜಾಗೃತಿ ಸಮಿತಿಯ ಕಕ್ಷೆಗೆ ಪಾಕಿಸ್ತಾನಿ ಹಿಂದೂಗಳ ಪರವಾಗಿ ಹೋರಾಡುವ ‘ನಿಮಿತ್ತೇಕಮ’ ಸಂಸ್ಥೆಯ ಡಾ. ಓಮೇಂದ್ರ ರತ್ನು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಹಿಂದೂ ಸಾಧು-ಸಂತರು ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಬಗೆಗಿನ ಫಲಕ ಪ್ರದರ್ಶನವನ್ನು ನೋಡಿದ ನಂತರ, ಅವರಿಗೆ ಪ್ರದರ್ಶನವು ಬಹಳ ಇಷ್ಟವಾಯಿತು. ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನ ಪರಿಪೂರ್ಣ ಮತ್ತು ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದರು. ಅವರು ಪ್ರದರ್ಶನದ ವೀಡಿಯೊವನ್ನು ಮಾಡಿ ತಮ್ಮ ಪರಿಚಯಸ್ಥರಿಗೆ ಕಳುಹಿಸಿದರು. ಹಾಗೆಯೇ ಅದರಲ್ಲಿ ಈ ಕಕ್ಷೆಗೆ ಭೇಟಿ ನೀಡುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ, ಅವರ ಸಹೋದರ ಶ್ರೀ. ಅಂಬಿಕೇಶ ರತ್ನು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ, ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯ ಸಮನ್ವಯಕರಾದ ಶ್ರೀ. ಶಂಭು ಗವಾರೆ ಉಪಸ್ಥಿತರಿದ್ದರು. ಡಾ. ಓಮೇಂದ್ರ ರತ್ನು ನಿರಾಶ್ರಿತ ಹಿಂದೂಗಳು ಮತ್ತು ಸಿಖ್ಖರು ಕುಂಭನಗರಕ್ಕೆ ಪ್ರಯಾಣಿಸಲು ಸಹಾಯ ಮಾಡಲು ಬಂದಿದ್ದಾರೆ.
पाकिस्तान, बांग्लादेश व कश्मीर के हिंदुओं के नरसंहार पर बहुत ही सुन्दर व ज्ञानवर्धक प्रदर्शनी देखी ।
कुंभ स्नान करने आए सभी हिंदू समाज से आग्रहपूर्वक निवेदन है कि सैक्टर 6 में हिन्दू जनजागृति समिति के पांडाल में जाएँ ।
अपने मित्रों व परिजनों के साथ कम से कम दृष्टि तो डालें कि… pic.twitter.com/9xhFmwRLav
— Dr Omendra Ratnu Sanatani (@satyanveshan) January 30, 2025
‘ನಿಮಿತ್ತೇಕಮ’ ಈ ಅವರ ಸಂಸ್ಥೆಯ ಹೆಸರಿನ ಬಗ್ಗೆ ಡಾ. ಓಮೇಂದ್ರ ರತ್ನು ಮಾತನಾಡಿ, ನಾನು ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ನಿಮಿತ್ತ ಮಾತ್ರವೆಂದು ಪ್ರಯತ್ನಿಸುತ್ತಿದ್ದೇನೆ. ದೇವರೇ ನನ್ನಿಂದ ಈ ಕಾರ್ಯವನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಇದಕ್ಕಾಗಿಯೇ ನಾನು ಈ ಸಂಸ್ಥೆಯ ಹೆಸರನ್ನು ‘ನಿಮಿತ್ತೇಕಮ’ ಎಂದು ಇಟ್ಟಿದ್ದೇನೆ.’ ಎಂದು ಹೇಳಿದರು.