ಇಂದಿನ ಕಾಲದಲ್ಲಿ ಮಾನವನ ಸರ್ವತೋಮುಖ ಉದ್ಧಾರದ ಜೊತೆಗೆ ರಾಷ್ಟ್ರೋದ್ಧಾರಕ್ಕಾಗಿ ಅತ್ಯಂತ ತತ್ತ್ವನಿಷ್ಠೆಯಿಂದ ಪತ್ರಿಕೋದ್ಯಮವನ್ನು ನಡೆಸುವ ‘ಸನಾತನ ಪ್ರಭಾತ’ವನ್ನು ಬಿಟ್ಟರೆ ಬೇರೆ ಉದಾಹರಣೆ ಅಪರೂಪ ಎನ್ನಬಹುದು ! ಲೋಕಮಾನ್ಯ ತಿಲಕರ ಪತ್ರಿಕೋದ್ಯಮದ ಆದರ್ಶ ಪಡೆದು ಆರಂಭವಾದ ‘ಸನಾತನ ಪ್ರಭಾತ’ ದಿನಪತ್ರಿಕೆ ದೇಶದ ಶತ್ರುಗಳಾಗಿರುವ ತಥಾಕಥಿತ ಜಾತ್ಯತೀತವಾದಿಗಳು, ಸಾಮ್ಯವಾದಿಗಳು, ಪ್ರಗತಿಪರರು, ಧರ್ಮದ್ರೋಹಿಗಳು ಮತ್ತು ರಾಷ್ಟ್ರದ್ರೋಹಿ ಮುಂತಾದವರ ವಿರುದ್ಧ ‘ಅಸಮಾಧಾನದ ಪಿತಾಮಹ’ ಅನಿಸಿಕೊಂಡಿದೆ ! ಧರ್ಮನಿಷ್ಠೆ, ದೃಢ ದೇಶಭಕ್ತಿ, ದೃಢಶ್ರದ್ಧೆಯಿಂದ ಹಿಂದುತ್ವದ ಸಮರ್ಥನೆ ಈ ವೈಶಿಷ್ಟ್ಯಗಳಲ್ಲೂ ಸ್ವಲ್ಪವೂ ರಾಜಿ ಮಾಡಿಕೊಳ್ಳದಿದ್ದ ಕಾರಣ ‘ಸನಾತನ ಪ್ರಭಾತ’ನ ಲೇಖನಿಯು ಇಂದು ತನ್ನ ಮೂಲಭೂತ ತೇಜದಿಂದ ಪ್ರಜ್ವಲಿಸುತ್ತಿದೆ ! ವ್ಯಾವಹಾರಿಕ ಹೊಂದಾಣಿಕೆಗಾಗಿ ಬರುವ ಜಾಹೀರಾತುಗಳು ಮತ್ತು ಲೇಖನಗಳು ಮತ್ತು ಜನರಿಗೆ ಇಷ್ಟವಾಗುವ ಮನೋರಂಜನೆಗಳನ್ನು ಸಂಪೂರ್ಣ ದೂರವಿಟ್ಟು ರಾಷ್ಟ್ರವು ಹೊತ್ತಿ ಉರಿಯುತ್ತಿರುವಾಗ ಅದಕ್ಕೆ ನಿರ್ಣಾಯಕ ಮಾರ್ಗದರ್ಶನ ನೀಡಲು, ಆತ್ಮಬಲವನ್ನು ಹೆಚ್ಚಿಸಿ, ರಾಷ್ಟ್ರಬಲವನ್ನು ಹೆಚ್ಚಿಸಲು ‘ಹಿಂದೂ ರಾಷ್ಟ್ರದ ಸ್ಥಾಪನೆ’ಯ ಧ್ಯೇಯವನ್ನಿಟ್ಟು ‘ಸನಾತನ ಪ್ರಭಾತ’ದ ಲೇಖನಿಯ ಕಾರಂಜಿಯು ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಚಿಮ್ಮುತ್ತಿದೆ…!
ಸಾತ್ತ್ವಿಕತೆಯ ಪ್ರಸಾರ !
‘ಔದ್ಯೋಗಿಕ’ ಎಂಬ ಉದ್ದೇಶವೇ ಇಲ್ಲದ ಕಾರಣ ಇತರ ವರ್ತಮಾನಪತ್ರಿಕೆಗಳು ಮತ್ತು ‘ಸನಾತನ ಪ್ರಭಾತ’ದಲ್ಲಿ ಮೊದಲಿನಿಂದಲೂ ವ್ಯತ್ಯಾಸವಿದೆ. ಕೇವಲ ರಾಷ್ಟ್ರ ಮತ್ತು ಧರ್ಮ ಈ ವಿಷಯಗಳಿಗೆ ಆದ್ಯತೆ ನೀಡುವ ಈ ದಿ£ಪತ್ರಿಕೆ ಒಂದು ಚಿಕ್ಕ ಜಾಗವನ್ನೂ ವ್ಯಯವಾಗದಂತೆ ಕಾಳಜಿ ವಹಿಸುತ್ತದೆ. ಸಾತ್ತ್ವಿಕತೆ ಮೂಡಿಸಲು ಮತ್ತು ಸಂರಕ್ಷಿಸಲು ಪರಾಕಾಷ್ಠೆಯಿಂದ ಪ್ರಯತ್ನಿಸುವುದು ‘ಸನಾತನ ಪ್ರಭಾತ’ದ ಮುಖ್ಯ ವೈಶಿಷ್ಟ್ಯವಾಗಿದೆ. ‘ಎಷ್ಟು ಸಾತ್ತ್ವಿಕವೋ ಅಷ್ಟು ಪರಿಣಾಮಕಾರಿ’, ಎಷ್ಟು ಶುದ್ಧವೋ ಅಷ್ಟು ಸಾತ್ತ್ವಿಕ ! ಎಂಬ ವಾಕ್ಯದಂತಹ ಶುದ್ಧತೆ ಮತ್ತು ಸಾತ್ತ್ವಿಕತೆಯನ್ನು ಹೆಚ್ಚಿಸಲು ದಿನಪತ್ರಿಕೆಯಲ್ಲಿ ಕನ್ನಡ ಶಬ್ದಗಳ ಬಳಕೆ, ಶುದ್ಧ ಲೇಖನ, ವ್ಯಾಕರಣ ಇವುಗಳಿಗನುಸಾರ ಒಳ್ಳೆಯ ರೀತಿಯಲ್ಲಿ ಪರಿಶೀಲನೆ, ಪುನರಾವರ್ತನೆಯನ್ನು ತಪ್ಪಿಸುವುದು, ಸಾತ್ತ್ವಿಕ ರಚನೆ, ರಜ-ತಮಾತ್ಮಕ ಛಾಯಾಚಿತ್ರಗಳನ್ನು ಅಥವಾ ಚಿತ್ರಗಳನ್ನು ಬಳಸದಿರುವುದು, ಪ್ರತಿಯೊಂದು ಛಾಯಾಚಿತ್ರ, ರಚನೆ, ಬರವಣಿಗೆಯನ್ನು ಹೆಚ್ಚೆಚ್ಚು ಸಾತ್ತ್ವಿಕ ಮಾಡಲಾಗುತ್ತದೆ. ವೈಯಕ್ತಿಕ ಜೀವನದ ಅಧ್ಯಾತ್ಮಿಕೀಕರಣಗೊಳಿಸಿ ಅದನ್ನು ಸಾತ್ತ್ವಿಕ ಮತ್ತು ಬದಲಾಗಿ ನೈತಿಕ ಮಾಡಿದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನವು ತಾನಾಗಿಯೇ ಆದರ್ಶವಾಗುತ್ತದೆ. ಇದುವೇ ‘ಸನಾತನ ಪ್ರಭಾತ’ದ ಸಾತ್ತ್ವಿಕೀಕರಣದ ತಿರುಳು ಮತ್ತು ಉದ್ದೇಶವಾಗಿದೆ.
‘ಈ ರಾಜ್ಯವಾಗಬೇಕು ಎಂಬುದು ಶ್ರೀಗಳ ಇಚ್ಛೆಯಾಗಿದೆ’ ಎಂಬ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಆಡಳಿತದ ಸಾರಾಂಶವನ್ನು ಅಳವಡಿಸಿ ಕಾರ್ಯನಿರತವಾಗಿರುವ, ‘ದೇಹದಿಂದ ದೇವರತ್ತ ಹೋಗುವಾಗ ಮಾರ್ಗದಲ್ಲಿ ದೇಶ ಬರುತ್ತದೆ ಮತ್ತು ಈ ದೇಶಕ್ಕೆ ನಾವು ನೀಡಬೇಕಾಗುತ್ತದೆ’ ಎಂಬ ಸ್ವಾತಂತ್ರ್ಯವೀರರ ವಿಚಾರಗಳಿಂದ ಪ್ರೇರಣೆ ಪಡೆದು ಮಾರ್ಗಕ್ರಮಣ ಮಾಡುವ ‘ಸನಾತನ ಪ್ರಭಾತ’ದ ಆದರ್ಶ ರಾಮರಾಜ್ಯದ, ಅಂದರೆ ಹಿಂದೂ ರಾಷ್ಟ್ರದ ಧ್ಯೇಯವು ಎಷ್ಟು ಶುದ್ಧವಿರಬಹುದು, ಎಂಬುದರ ಕಲ್ಪನೆ ಬರುತ್ತದೆ. ‘ಸನಾತನ ಪ್ರಭಾತ’ವು ಕಳೆದ ೨೫ ವರ್ಷ ಗಳಿಂದ ಅತ್ಯಂತ ನಿಸ್ವಾರ್ಥವಾಗಿ ರಾಷ್ಟ್ರ ಮತ್ತು ಧರ್ಮದ ಸ್ಫೂರ್ತಿಯೊಂದಿಗೆ ಕೇವಲ ಸಮಾಜಜಾಗೃತಿಯ ಉದ್ದೇಶದಿಂದ ತನ್ನ ಗುರಿಯತ್ತ ದಾಪುಗಾಲಿಡುತ್ತಿದೆ. ಇದು ಹಣ, ಕೆಲಸ ಮತ್ತು ಜಾತ್ಯತೀತತೆಯಿಂದ ಬಹಿರ್ಮುಖವಾಗಿರುವ ಸಮಾಜವನ್ನು ಅಂತರ್ಮುಖಿಯಾಗಿಸಲು, ಅಂದರೆ ಧರ್ಮ ಮತ್ತು ರಾಷ್ಟ್ರದ ಅಧಿಷ್ಠಾನವಿರಿಸುವಂತೆ ಪ್ರೇರೇಪಿಸಲು ಕಾರ್ಯನಿರತವಾಗಿದೆ.
ಹಿಂದುತ್ವನಿಷ್ಠರ ಕೊರಳಿನ ತಾಯಿತ(ಮಂತ್ರಿಸಿದ ಯಂತ್ರ) !
ಕಳೆದ ೨೫ ವರ್ಷಗಳ ಕಾಲ ಹಿಂದುತ್ವದ ಮೇಲಾಗುವ ಆಘಾತಗಳನ್ನು ಬಹಿರಂಗಪಡಿಸುವ ಮಹತ್ಕಾರ್ಯವೇ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ‘ಸನಾತನ ಪ್ರಭಾತ’ದ ಅತ್ಯಂತ ಮಹತ್ವದ ಕೊಡುಗೆಯಾಗಿದೆ. ಇಂದು ‘ಹಿಂದೂ ರಾಷ್ಟ್ರ ಬರಬೇಕು’, ಎಂದು ಬಹುಸಂಖ್ಯಾತರಿಗೆ ಅನಿಸುತ್ತದೆ ಮತ್ತು ಅದನ್ನು ಪದೇಪದೇ ಉಚ್ಚರಿಸಲಾಗುತ್ತಿದೆ. ೨೫ ವರ್ಷಗಳ ಹಿಂದೆ ಈ ಶಬ್ದವನ್ನು ಉಚ್ಚರಿಸಲು ಬಹಳ ಧೈರ್ಯ ಬೇಕಿದ್ದಂತಹ ಕಾಂಗ್ರೆಸ್‌ನ ರಾಜ್ಯ ದಲ್ಲಿ ‘ಈಶ್ವರೀ ರಾಜ್ಯ’ದ ಸ್ಥಾಪನೆಯ ಅಂದರೆ ರಾಮರಾಜ್ಯದ ಧ್ಯೇಯವನ್ನಿಟ್ಟುಕೊಂಡು ಈ ವಾರ್ತಾಪತ್ರಿಕೆಯ ಸ್ಥಾಪನೆಯಾಯಿತು. ಜಾತ್ಯತೀತ ಸರಕಾರದ ಕಾಲದಲ್ಲಿ ‘ಸನಾತನ ಪ್ರಭಾತ’ದ ಮೇಲೆ ಅನೇಕರು ವಕ್ರದೃಷ್ಟಿಯನ್ನು ಬೀರಿದರು. ಅದು ಎಲ್ಲ ಬಗೆಯ ಕಷ್ಟನಷ್ಟಗಳನ್ನು ಸಹಿಸಿ ಗೆದ್ದಿತು. ಅಸಂಖ್ಯಾತ ವಾರ್ತಾವಾಹಿನಿ ಗಳಲ್ಲಿ ಒಂದೇಒಂದು ವಾಹಿನಿಯು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರಲಿಲ್ಲ, ಅದಕ್ಕೂ ಮೊದಲೇ ಅಂದರೆ ೧೮ ವರ್ಷ ಗಳಿಂದ ‘ಸನಾತನ ಪ್ರಭಾತ’ ಪ್ರತೀವಾರ ಲವ್ ಜಿಹಾದ್‌ನ ವಾರ್ತೆಗಳನ್ನು ನೀಡುತ್ತಾ ಬಂದಿದೆ. ‘ಎರಡು ಕೋಮುಗಳಲ್ಲಿ’ ಎಂಬ ಶಬ್ದವನ್ನು ‘ಸನಾತನ ಪ್ರಭಾತ’ ಎಂದಿಗೂ ಬಳಸಿಲ್ಲ. ‘ಸನಾತನ ಪ್ರಭಾತ’ದ ಮಿರಜ್‌ನ ಕಚೇರಿಯ ಮೇಲೆ ಮತಾಂಧರು ದಾಳಿ ಮಾಡಿದರೂ ‘ಹಿಂದೂ ಮತ್ತು ಮತಾಂಧರ ನಡುವೆ ಗಲಭೆ’ ಎಂದು ಬರೆಯಲು ‘ಸನಾತನ ಪ್ರಭಾತ’ ಹಿಂಜರಿದಿಲ್ಲ; ಏಕೆಂದರೆ ಅದು ಈಶ್ವರನಿಷ್ಠ ಆಗಿದೆ; ಅದಕ್ಕೆ ಇತರ ಯಾರದ್ದೂ ಭಯವಿಲ್ಲ !
ಮುಚ್ಚುಮರೆಯಿಲ್ಲದ, ಹಿಂದೂಹಿತಾಸಕ್ತಿಯ ದೃಢವಾದ ಮತ್ತು ಅತ್ಯಂತ ಸ್ಪಷ್ಟವಾದ ದಿಶೆ, ಇದು ಕೇವಲ ‘ಸನಾತನ ಪ್ರಭಾತ’ದ ವೈಶಿಷ್ಟ್ಯ ಮಾತ್ರವಲ್ಲ, ಆದರೆ ದ್ವಂದ್ವದಲ್ಲಿ, ಗೊಂದಲದಲ್ಲಿ ಅಥವಾ ಅನುತ್ತರಿತಗೊಳಿಸದೇ ‘ದೃಢ ಪರಿಹಾರಾತ್ಮಕ ಮಾರ್ಗದರ್ಶನ’ ಇವು ‘ಸನಾತನ ಪ್ರಭಾತ’ದ ವಾರ್ತೆಗಳಲ್ಲಿನ ಸಂಪಾದಕೀಯ ಟಿಪ್ಪಣಿ ಅಥವಾ ಪ್ರಧಾನ ಲೇಖನಗಳ ಮುಖ್ಯ ವೈಶಿಷ್ಟ್ಯಗಳಾಗಿವೆ.
ಹಿಂದೂ ರಾಷ್ಟ್ರದ ಧ್ಯೇಯ ಹೇಗೆ ಸಾಧ್ಯವಾಗಲಿದೆ ?
ಮತಾಂತರ, ಗೋಹತ್ಯೆ, ಭ್ರಷ್ಟಾಚಾರ, ಬಲಾತ್ಕಾರ, ಕೊಲೆ, ದರೋಡೆ, ಎಲ್ಲ ರೀತಿಯ ಜಿಹಾದ್, ಭಯೋತ್ಪಾದನೆ, ನಕ್ಸಲವಾದ, ಬಡತನ, ಜನಸಂಖ್ಯೆಯಲ್ಲಿ ಹೆಚ್ಚಳ, ಸಂರಕ್ಷಣೆ ಮುಂತಾದ ರಾಷ್ಟ್ರವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಒಂದೇ ಉತ್ತರ ಎಂದರೆ ‘ಹಿಂದೂ ರಾಷ್ಟ್ರ !’ ಹಿಂದೂ ರಾಷ್ಟ್ರವು ಧರ್ಮಾಧಿಷ್ಠಿತದ ಜೊತೆಗೆ ಸಾತ್ತ್ವಿಕ ಮತ್ತು ನೀತಿವಂತ ಪ್ರಜೆಗಳ ರಾಷ್ಟ್ರವಾಗಿರುವುದರಿಂದ ಇಂತಹ ಸಮಸ್ಯೆಗಳು ಅಲ್ಲಿ ಬಹಳ ಕಡಿಮೆ ಇರುವವು ಮತ್ತು ಅದು ಒಂದು ವೇಳೆ ಇದ್ದರೂ ಕರ್ತವ್ಯದಕ್ಷ ಆಡಳಿತದಿಂದ ತತ್ಪರತೆಯಿಂದ ಶಿಕ್ಷಿಸಲ್ಪಡುವುದರಿಂದ ಅದು ನಿಯಂತ್ರಣದಲ್ಲಿರುವುದು. ಅದಕ್ಕಾಗಿ ರಾಜ ಮತ್ತು ಪ್ರಜೆಗಳು ಸಾಧನಾನಿರತರಾಗಿರಬೇಕು. ಅದರಿಂದ ಸಂಪೂರ್ಣ ರಾಷ್ಟ್ರದಲ್ಲಿ ಉತ್ಪನ್ನವಾಗುವ ಆಂತರಿಕ ಶಕ್ತಿಯ, ಜ್ಞಾನದ, ದೈವೀ ಕೃಪೆಯ, ಚೈತನ್ಯದ ಊರ್ಜಿತಾವಸ್ಥೆ ಇದುವೇ ರಾಷ್ಟ್ರದ ನಿಜವಾದ ವಿಕಾಸ ಮತ್ತು ಸಮೃದ್ಧಿಯಾಗಿದೆ. ಇದನ್ನು ಸಾಧಿಸಲು ಹಿಂದೂ ರಾಷ್ಟ್ರವೇ ಬೇಕು ಎಂಬ ತತ್ತ್ವವನ್ನು ‘ಸನಾತನ ಪ್ರಭಾತ’ ಇಂದು ಸಮಾಜದ ಮನಸ್ಸಿನ ಮೇಲೆ ಬಿಂಬಿಸುತ್ತಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಂತಹ ಉನ್ನತ ಅವತಾರಿ ಸಂತರು ‘ಸನಾತನ ಪ್ರಭಾತ’ದ ಸಂಸ್ಥಾಪಕ ಸಂಪಾದಕರೆಂದು ಲಭಿಸುವುದು, ಧರ್ಮದ ಪುನರುತ್ಥಾನದ ಕಾರ್ಯಕ್ಕಾಗಿ ‘ಸನಾತನ ಪ್ರಭಾತ ಕಾರ್ಯನಿರತವಾಗಿರುವುದು, ಎಂದರೆ ಹಿಂದೂ ರಾಷ್ಟ್ರಕ್ಕಾಗಿ ಅದು ಸಮಾಜಮನಸ್ಸನ್ನು ರೂಪಿಸು ವುದು, ಇದು ಪ್ರಸಾರ ಮಾಧ್ಯಮಗಳ ಇತಿಹಾಸದಲ್ಲಿನ ಏಕೈಕ ಘಟನೆಯಾಗಿದೆ. ‘ಸನಾತನ ಪ್ರಭಾತ’ ಈ ಕಾರ್ಯವನ್ನು ರಾಷ್ಟ್ರ ಮತ್ತು ಧರ್ಮ ಕರ್ತವ್ಯವೆಂದು ತಿಳಿದು ಮಾಡುತ್ತಿದೆ. ಹಿಂದೂ ಧರ್ಮ ಮತ್ತು ರಾಷ್ಟ್ರ ಇವುಗಳಿಗಾಗಿ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ನಂತರವೂ ಅದರ ಯಶಸ್ಸಿಗಾಗಿ ‘ಸನಾತನ ಪ್ರಭಾತ’ಕ್ಕೆ ಇದೇ ರೀತಿ ಸಂಪೂರ್ಣವಾಗಿ ಸಮರ್ಪಿತವಾಗಲು ಸಾಧ್ಯವಾಗಲಿ, ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.