Bangladesh Cricketer Liton Das: ಹಿಂದೂ ಆಗಿದ್ದರಿಂದ, ಬಾಂಗ್ಲಾದೇಶದಲ್ಲಿ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಅವರನ್ನು ತಂಡದಿಂದ ಹೊರಗಿಡಲಾಯಿತು !

ಪಾಕಿಸ್ತಾನದ ಮುಸ್ಲಿಂ ಮಾಜಿ ಕ್ರಿಕೆಟ್ ಆಟಗಾರನಿಂದ ಟೀಕೆ

ಢಾಕಾ (ಬಾಂಗ್ಲಾದೇಶ) – 2025ರ ‘ಚಾಂಪಿಯನ್ಸ್ ಟ್ರೋಫಿ’ ಸ್ಪರ್ಧೆಗಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಪ್ರಕಟಿಸಿರುವ 15 ಸದಸ್ಯರ ತಂಡದಿಂದ ಅನುಭವಿ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರನ್ನು ಹೊರಗಿಟ್ಟಿರುವ ಕುರಿತು ವಿವಾದಗಳು ಹುಟ್ಟಿಕೊಂಡಿವೆ. ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಬಾಸಿತ್ ಅಲಿ ಇದನ್ನು ಲಿಟನ್ ವಿರುದ್ಧ ‘ಧಾರ್ಮಿಕ ತಾರತಮ್ಯ’ ಆಗಿದೆ ಎಂದು ಹೇಳಿದ್ದಾರೆ. ಬಾಸಿತ್ ಮಾತನಾಡಿ, ‘ಯಾವ ಆಧಾರದ ಮೇಲೆ ಲಿಟನ್ ಅವರನ್ನು ಹೊರಗಿಡಲಾಗಿದೆ ? ಅವರು ಇತ್ತೀಚೆಗೆ ಶತಕ ಬಾರಿಸಿದ್ದರು; ಆದರೆ ಅವನನ್ನು ಕೇವಲ ಮುಸ್ಲಿಮನಲ್ಲ ಎಂಬ ಕಾರಣಕ್ಕೆ ಹೊರಗಿಡಲಾಗಿದೆ. ಇದರಿಂದ ಲಿಟನ್ ಗೆ ದೊಡ್ಡ ಅನ್ಯಾಯವಾಗಿದೆ. ‘ಲಿಟನ್ ದಾಸ್ ಇಲ್ಲದೆ ಬಾಂಗ್ಲಾದೇಶ ತಂಡ ಅಪೂರ್ಣವಾಗಿದೆ’, ಎಂದು ಹೇಳಿದ್ದಾರೆ.

ಬಾಸಿತ್ ಇವರ ಆರೋಪದಿಂದಾಗಿ ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಧಾರ್ಮಿಕ ತಾರತಮ್ಯದ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಲಿಟನ್ ದಾಸ್ ಅವರು ಈ ಘಟನೆಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಆಯ್ಕೆಗಾರರನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಹೇಳುತ್ತಾ “ಭವಿಷ್ಯದಲ್ಲಿ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಯಾವೊಬ್ಬ ಹಿಂದೂ ಆಟಗಾರನೂ ಇದರ ಬಗ್ಗೆ ಬಾಯಿ ತೆರೆಯುವುದಿಲ್ಲ, ಇದನ್ನು ಗಮನದಲ್ಲಿಡಿ !