Bangladesh Power Struggle : ಬಾಂಗ್ಲಾದೇಶದ ಸೇನೆಯಲ್ಲಿ ಅಧಿಕಾರಕ್ಕಾಗಿ ಹೋರಾಟ ಮುಂದುವರಿಕೆ

ಸೇನಾ ಮುಖ್ಯಸ್ಥ ವಕಾರ-ಉಜ್-ಜಮಾನ

ಢಾಕಾ (ಬಾಂಗ್ಲಾದೇಶ) – ಶೇಖ ಹಸೀನಾ ಅವರ ನಿರ್ಗಮನದ ನಂತರ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ದೇಶವು ಅರಾಜಕತೆಯತ್ತ ಹೋಗುವುದರಿಂದ ತಡೆಯಲು ಸೈನ್ಯದೆಡೆಗೆ ಭರವಸೆಯಿಂದ ನೋಡಲಾಗುತ್ತಿದೆ; ಆದರೆ ಸೇನೆಯಲ್ಲಿ ಬಿರುಕು ಮೂಡುತ್ತಿದೆ ಮತ್ತು 3 ಶಕ್ತಿ ಕೇಂದ್ರಗಳು ಹೊರಹೊಮ್ಮುತ್ತಿವೆ. ಈ ಪ್ರತಿಯೊಂದು ಕೇಂದ್ರದ ನೇತೃತ್ವವನ್ನು ಒಬ್ಬ ಜನರಲ್ ಹತ್ತಿರ ಇರಬಹುದು. ಬಾಂಗ್ಲಾದೇಶದ ಸೇನೆಯಲ್ಲಿ ಅಧಿಕಾರ ಉರುಳಿಸುವುದು ಹೊಸದೇನಲ್ಲ. 1970 ರ ದಶಕದಿಂದ 1980 ರ ದಶಕದ ಆರಂಭದವರೆಗೆ ಸೇನೆಯು 20 ಕ್ಕೂ ಹೆಚ್ಚು ಅಧಿಕಾರ ಉರುಳಿಸುವ ಇತಿಹಾಸವನ್ನು ಹೊಂದಿದೆ.

1. ಸಧ್ಯದ ಸೇನಾ ಮುಖ್ಯಸ್ಥ ವಕಾರ-ಉಜ್-ಜಮಾನ ಒಬ್ಬ ಮಧ್ಯಮಾರ್ಗಿಯಾಗಿದ್ದು ಮತ್ತು ಇನ್ನೂ ಮಿಲಿಟರಿಯ ಮೇಲೆ ಅವರ ನಿಯಂತ್ರಣವಿದೆ. ಆದರೆ ಸೇನೆಯಲ್ಲಿ ಇನ್ನೂ ಎರಡು ಶಕ್ತಿ ಕೇಂದ್ರಗಳು ಹುಟ್ಟಿಕೊಂಡಿವೆ. ಪರಿಸ್ಥಿತಿಯ ಬಗ್ಗೆ ತಿಳಿದಿರುವ ಜನರ ಅಭಿಪ್ರಾಯದಂತೆ, ಒಂದು ಶಕ್ತಿ ಕೇಂದ್ರವನ್ನು ಲೆಫ್ಟಿನೆಂಟ್ ಜನರಲ್ ಮಹಮ್ಮದ್ ಶಾಹಿನುಲ್ ಹಕ್ ನೇತೃತ್ವ ವಹಿಸಿದ್ದಾರೆ. ಅವರಿಗೆ ಬಾಂಗ್ಲಾದೇಶ ಸೇನೆಯ 9 ನೇ ವಿಭಾಗದ ಅವಾಮಿ ಲೀಗ್ ಬೆಂಬಲಿತ ಮೇಜರ್ ಜನರಲ್ ಮಹಮ್ಮದ್ ಮೊಯಿನ್ ಖಾನ್ ಬೆಂಬಲ ನೀಡಿದ್ದಾರೆ. ಇದನ್ನು ಅತ್ಯಂತ ಶಕ್ತಿಶಾಲಿ ವಿಭಾಗವೆಂದು ಪರಿಗಣಿಸಲಾಗಿದೆ.

2. ಸೇನೆಯ ಎರಡನೇ ಗುಂಪಿನ ನೇತೃತ್ವವನ್ನು ಲೆಫ್ಟಿನೆಂಟ್ ಜನರಲ್ ಮಹಮ್ಮದ್ ಫೈಜುರ್ ರೆಹಮಾನ್ ವಹಿಸಿದ್ದಾರೆ. ಅವರು ಈ ಹಿಂದೆ ಮಿಲಿಟರಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.